ಹದಿಹರೆಯದವರಿಗೆ, ಯುವತಿಯರಿಗೆ ಹೊರಗೆ ಸುತ್ತಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ. ಅವರಿಗೆ ಸಾಕಷ್ಟು ಜನ ಸ್ನೇಹಿತರಿದ್ದರಂತೂ ಸುತ್ತಾಡುವ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಹೊರಗೆ ಹೋಗುವಾಗ ಯಾವ ಡ್ರೆಸ್‌ ಧರಿಸಬೇಕು, ಎಂತಹ ಚಪ್ಪಲಿ, ಶೂ ಹಾಕಿಕೊಳ್ಳಬೇಕು ಎಂಬುದು ನೆನಪಾಗುತ್ತದೆ.

ಯಾವ ಡ್ರೆಸ್‌ಗೆ ಯಾವ ಚಪ್ಪಲಿ/ಶೂ ಒಪ್ಪುತ್ತವೆ? ಎಂಬ ಸಂದೇಹ ನಿಮ್ಮ ಮನಸ್ಸಿನಲ್ಲಿ ಏಳುತ್ತಿದ್ದರೆ, ನೀವು ಗಲಿಬಿಲಿಗೊಳ್ಳುವ ಅಗತ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿ ಬಗೆಬಗೆಯ ಬ್ರ್ಯಾಂಡಿನ ಫುಟ್‌ವೇರ್‌ಗಳು ಲಭ್ಯವಿದ್ದು, ನಿಮಗೆ ಸೂಕ್ತ ಎನಿಸುವ ಬಣ್ಣ ಬಣ್ಣದ ಚಪ್ಪಲಿ ಶೂಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ.

ಪ್ರಸಕ್ತ ಮಾರುಕಟ್ಟೆಯಲ್ಲಿ ಜೋಲಾ, ಕ್ಯಾಟ್‌ವಾಕ್‌, ಜೆಡ್‌ಕಿಕ್ಶನ್‌, ಸ್ಟೆಪಿಂಗ್ಸ್ ಮುಂತಾದ ಕಂಪನಿಗಳ ಶೂಗಳು ಎಲ್ಲೆಡೆ ದೊರೆಯುತ್ತವೆ. ಈ ಕಂಪನಿಗಳ ಬ್ಯಾಲಾರಿನಾ, ಗ್ಲ್ಯಾಡಿಯೇಟರ್ಸ್‌, ಪಂಪ್‌ ಶ್ಯೂಸ್‌, ಸ್ಯಾಂಡಲ್ಸ್, ಸ್ಲೀಪರ್ಸ್‌, ಪ್ಲ್ಯಾಟ್‌ ಫಾರ್ಮ್,  ಫ್ಲಿಪ್‌ ಫ್ಲಾಪ್‌ ಬೂಟ್ಸ್, ಸ್ನಿಕರ್ಸ್‌, ಸ್ಪೋರ್ಟ್ಸ್ ಶೂಸ್‌, ಪ್ಲೇಟರ್ಸ್‌ನಂತಹ ಹಲವು ಪರ್ಯಾಯಗಳಿರುವಾಗ ಟೆನ್ಶನ್‌ನ ಮಾತೇಕೆ?

ಬಗೆ ಬಗೆಯ ಪ್ರಕಾರಗಳು

ಬ್ಯಾಲರಿನಾ ಅಥವಾ ಬ್ಯಾಲಾ ಶೂಸ್‌ ಒಂದು ಬಗೆಯ ಫ್ಲ್ಯಾಟ್‌ ಶೂ ಆಗಿದ್ದು, ಅದು ಕೆಂಪು, ಕಪ್ಪು, ಗುಲಾಬಿ, ಹಸಿರು ಮುಂತಾದ ಬಣ್ಣಗಳಲ್ಲಿ ಲಭಿಸುತ್ತದೆ. ಈ ತೆರನಾದ ಚಪ್ಪಲಿಗಳನ್ನು ಬಹಳ ಮುಂಚಿನಿಂದಲೇ ಬ್ಯಾಲೆ ಡ್ಯಾನ್ಸ್ ನಲ್ಲಿ ಬಳಸಲಾಗುತ್ತಿತ್ತು. ಬಹುಶಃ ಅದೇ ಕಾರಣದಿಂದ ಇವುಗಳ ಹೆಸರು ಬ್ಯಾಲಾ ಎಂದಾಗಿರಬಹುದು. ಈಚೆಗೆ ಬ್ಯಾಲರಿನಾ ಶೂಸ್‌ಗಳು ಬೇರೆ ಬೇರೆ ಗಾತ್ರದ ಹೀಲ್‌ಗಳಲ್ಲಿ ದೊರೆಯುತ್ತಿವೆ.

ಇವು ಫ್ಲ್ಯಾಟ್‌ ಮತ್ತು 2 ಇಂಚ್‌ನಿಂದ ಹಿಡಿದು 4 ಇಂಚಿನತನಕ ಬೇರೆ ಬೇರೆ ಡಿಸೈನುಗಳಲ್ಲಿ, ಬೇರೆ ಬೇರೆ ಬಣ್ಣಗಳ ಕಾಂಬಿನೇಶನ್‌ನಲ್ಲಿ ದೊರೆಯುತ್ತವೆ.

ಫ್ಲ್ಯಾಟ್‌ ಶೂಗಳನ್ನು ನೀವು ಸ್ಕಿನ್‌ ಫಿಟ್‌ ಜೀನ್ಸ್ ಜೊತೆಗೆ, ಥ್ರೀಪೋರ್ಥ್‌ ಜೊತೆಗೆ ಹಾಗೂ ಕ್ಯಾಶ್ಯುಯಲ್ ವೇರ್ಸ್ ಜೊತೆಗೂ ಧರಿಸಬಹುದು. ಒಂದುವೇಳೆ ನೀವು ಧರಿಸುವ ಶೂಗಳು ಲೆದರ್‌ ಅಥವಾ ಫಾರ್ಮಲ್ ಆಗಿದ್ದರೆ, ಅವು ಫಾರ್ಮಲ್ ಡ್ರೆಸ್‌ ಜೊತೆಗೆ ಹೆಚ್ಚು ಒಪ್ಪುತ್ತವೆ.

ಗ್ಲ್ಯಾಡಿಯೇಟರ್ಸ್ ಶೂಗಳು ಪಾದದ ಜೊತೆಗೆ, ಪಾದದ ಹಿಂಭಾಗಕ್ಕೂ ಹೆಚ್ಚು ಸಪೋರ್ಟ್‌ ಕೊಡುತ್ತವೆ.

ಇವುಗಳ ವಿಶೇಷತೆಯೆಂದರೆ, ಇವುಗಳ ಹಿಂಭಾಗದಲ್ಲಿ 2 ಲೇಸ್‌ಗಳಿರುತ್ತವೆ. ಅವನ್ನು ಮೊಣಕಾಲಿನ ತನಕ ಕಟ್ಟಬಹುದು. ಕೆಲವು ಶೂಗಳಲ್ಲಿ ಪಟ್ಟಿಗಳು ಅಳವಡಿಸಲ್ಪಟ್ಟಿರುತ್ತವೆ. ಅವು ವಿವಿಧ ಆಕಾರಗಳಲ್ಲಿ ದೊರೆಯುತ್ತವೆ.

ಗ್ಲ್ಯಾಡಿಯೇಟರ್ಸ್ ನ್ನು ನಾವು ಬೇರೆ ಬೇರೆ ತೆರನಾದ ಡ್ರೆಸ್‌ಗಳ ಜೊತೆಯೂ ಧರಿಸಬಹುದು. ಮಿನಿ ಡ್ರೆಸ್‌ ಅಥವಾ ಹಾಟ್‌ ಪ್ಯಾಂಟ್ಸ್ ಇದ್ದರೆ ಮೊಣಕಾಲಿನ ತನಕ ಉದ್ದನೆಯ ಲೇಸ್‌ ಅಥವಾ ಸ್ಟೆನ್ಸ್ ಇರುವ ಗ್ಲ್ಯಾಡಿಯೇಟರ್ಸ್ ಬಹಳ ಚೆನ್ನಾಗಿ ಕಾಣುತ್ತವೆ. ಒಂದು ವೇಳೆ ನಿಮ್ಮ ಡ್ರೆಸ್‌ ಪಾದದ ತನಕ ಅಥವಾ ಥ್ರಿಪೋರ್ಥ್‌ ಮಾತ್ರ ಇದ್ದರೆ ಕಡಿಮೆ ಉದ್ದದ ಲೇಸ್‌ ಅಥವಾ ಪಟ್ಟಿ ಇರುವ ಗ್ಲ್ಯಾಡಿಯೇಟರ್ಸ್ ಧರಿಸಿ.

ಅಂದಹಾಗೆ ಲೇಸ್‌ ಕಟ್ಟಲು ಕೂಡ ಒಂದು ವಿಭಿನ್ನ ಸ್ಟೈಲ್ ‌ಇರುತ್ತದೆ. ಅಂದರೆ ನೀವು ಲೇಸ್‌ನ್ನು ಕ್ರಾಸ್‌ ಮಾಡಿ ಮುಂಭಾಗದತ್ತ ತೆಗೆದುಕೊಂಡು ಬನ್ನಿ ಮತ್ತು ಗಂಟು ಹಾಕಿ.ಪಂಪ್‌ ಶೂಸ್‌, ವಲ್ಯಾಡೋಸ್‌ ಪ್ಯಾಟರ್ನ್‌ ಅಷ್ಟಿಷ್ಟು ಒಂದೇ ರೀತಿಯಾಗಿರುವಂತೆ ಗೋಚರಿಸುತ್ತವೆ. ಪಂಪ್‌ ಶೂಸ್‌ ಸಾಮಾನ್ಯವಾಗಿ ಫ್ಲ್ಯಾಟ್‌ ಆಗಿರುತ್ತವೆ. ಆದರೆ ಇವು ಬೇರೆ ಬೇರೆ ಗಾತ್ರದ ಹೀಲ್‌ಗಳಲ್ಲಿ ಲಭಿಸುತ್ತವೆ. ಇವು ಕೆಂಪು, ಬಿಳಿ ಮತ್ತು ಹಳದಿ ವರ್ಣಗಳಲ್ಲಿ ದೊರೆಯುತ್ತವೆ. ಹೀಲ್ ‌ಇರುವ ಅಥವಾ ಫ್ಲ್ಯಾಟ್‌ ಇರುವ ಎರಡೂ ಪ್ರಕಾರದ ಶೂಗಳು ಜೀನ್ಸ್ ಅಥವಾ ಡೆನಿಮ್ ಸ್ಕರ್ಟ್‌ಗೆ ಚೆನ್ನಾಗಿ ಒಪ್ಪುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ