ಸಾದಾ ಸ್ಲೇಟ್‌ ಬಣ್ಣದ ದಟ್ಟ ಒಡಲಿನ ಈ ಸೀರೆ, ತನ್ನ ಅತ್ಯಾಕರ್ಷಕ ಕಸೂತಿಯುಳ್ಳ ಬಾರ್ಡರ್‌ ಹಾಗೂ ನವ ನವೀನ ಆಧುನಿಕ ವಿನ್ಯಾಸದ ಸೆರಗಿನಿಂದಾಗಿ ಟೋಟಲಿ ರಿಚ್‌ ಗ್ರ್ಯಾಂಡ್‌ ಎನಿಸಿದೆ. ಸೆರಗಿನ ವಿನ್ಯಾಸಕ್ಕೆ ಹೊಂದುವ ಬಣ್ಣದ ಬ್ಲೌಸ್‌, ಮ್ಯಾಚಿಂಗ್ ಆ್ಯಕ್ಸೆಸರೀಸ್‌ ಹಬ್ಬದ ಸ್ವಾಗತಕ್ಕೆ ಸಜ್ಜಾಗಿರುವಂತಿದೆ.

 

ಮಾಡರ್ನ್‌ ಡಿಸೈನಿನ ಪ್ರಿಂಟ್ಸ್ ವುಳ್ಳ ಈ ಬಿಸ್ಕತ್‌ ಬಣ್ಣದ ರೇಷ್ಮೆ ಸೀರೆ, ತನ್ನ ವರ್ಣಮಯ ಅಂಚು ಹಾಗೂ ಅತ್ಯಾಕರ್ಷಕ ಸೆರಗಿನ ವಿನ್ಯಾಸದಿಂದಾಗಿ ಪರವಶಗೊಳಿಸುವಂತಿದೆ. ಅಂಚಿಗೆ ಹೊಂದುವ ಕಂದುಬಣ್ಣದ ಬ್ಲೌಸ್‌, ಪೂರಕ ಆ್ಯಕ್ಸೆಸರೀಸ್‌ ಯುಗಾದಿ ಹಬ್ಬಕ್ಕೆ ವಿಶಿಷ್ಟ ಕಳೆ ತಂದುಕೊಟ್ಟಿದೆ.

 

ಈ ಕ್ರೀಮ್ ಸಿಲ್ಕ್ ಸೀರೆಯ ಒಡಲು ಸಾದಾ ಎನಿಸಿದರೂ, ಅದರ ಗೋಲ್ಡನ್‌ ಬಣ್ಣದ ಬಾರ್ಡರ್‌ ವೆರಿ ಗ್ರ್ಯಾಂಡ್‌ ಎನಿಸುತ್ತದೆ. ಬಾರ್ಡರ್‌ನದೇ ಬಣ್ಣದ ಗೋಲ್ಡನ್‌ ಬ್ಲೌಸ್‌ ಸ್ಪೆಷಲ್ ಎಫೆಕ್ಟ್ ನೀಡಿದರೆ, ಸೆರಗಿನಲ್ಲಿರುವ ಅಡ್ಡಗೆರೆಗಳ ಜ್ಯಾಮಿತಿಯ ವಿನ್ಯಾಸ ಮನಸೆಳೆಯುತ್ತದೆ. ಸರಳ ಮೇಕಪ್‌ ಈ ರೇಷ್ಮೆ ಸೀರೆಗೆ ಅಚ್ಚುಕಟ್ಟಾಗಿ ಹೊಂದುತ್ತದೆ.

 

ಈ ಆಕಾಶ ನೀಲಿ ಒಡಲಿನ ಸೀರೆಯಲ್ಲಿ ಅಲ್ಲಲ್ಲಿ ಮೂಡಿರುವ ಗೋಲ್ಡನ್‌ ಪ್ರಿಂಟ್ಸ್, ಅದ್ಭುತ ಗೆಟಪ್‌ ತಂದುಕೊಟ್ಟಿದೆ. ಅಂಚಿನಲ್ಲಿ ಮೂಡಿರುವ ವಿಶಿಷ್ಟ ಪಟ್ಟಿಗಳ ಜರಿ ಬಾರ್ಡರ್‌ ಹಾಗೂ ಕಲರ್‌ ಕಾಂಬಿನೇಷನ್‌ ಅದ್ಭುತ ಎನಿಸುತ್ತದೆ. ಕಾಂಟ್ರಾಸ್ಟ್ ಬ್ಲೌಸ್‌ ಆಗಿ ಮೆರೂನ್‌ ಬಣ್ಣದ ಆಯ್ಕೆ ಸೊಗಸಾಗಿದೆ. ಸೀರೆಗೆ ಹೊಂದುವ ಚಿನ್ನದ ಆಭರಣಗಳ ಟಚ್‌, ಹಬ್ಬದ ಸೊಬಗು ಹೆಚ್ಚಿಸುವಲ್ಲಿ ಪೂರಕ.

 

ಈ ದಟ್ಟ ನೀಲಿ ಬಣ್ಣದ ಪ್ಲೇನ್‌ ಒಡಲಲ್ಲಿ ಮೂಡಿದೆ, ಸುವರ್ಣಮಯ ಪ್ರಿಂಟ್‌ಗಳ ರೇಷ್ಮೆ ವಲ್ಲರಿ! ಈ ಚಿತ್ತಾಕರ್ಷಕ ಡಿಸೈನಿಗೆ ಮನಸೋಲದವರಾರು? ಇದಕ್ಕೆ ಪೂರಕವಾಗಿ ಅಂಚಿನ ಸುವರ್ಣ ಹೊಳಪು ಹಾಗೂ ಸೆರಗಿನ ಅಚ್ಚುಕಟ್ಟಾದ ಗೋಲ್ಡನ್‌ ವಿನ್ಯಾಸ, ಕಾಂಟ್ರಾಸ್ಟ್ ಪಿಸ್ತಾ ಗ್ರೀನ್‌ ಬ್ಲೌಸ್‌ ಈಕೆಗೆ ಅಪ್ಪಟ ಗೃಹಿಣಿ ಕಳೆ ತಂದುಕೊಟ್ಟಿದೆ. ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಮನಸೆಳೆಯುವಂತಿದೆ, ಹ್ಯಾಪಿ ಯುಗಾದಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ