ನಿಮ್ಮ ಕೂದಲನ್ನು ಬಾಚದೇ ಹಾಗೇ ಬಿಟ್ಟಿದ್ದರಿಂದಲೇ ನೀವು ಸ್ಟೈಲಿಶ್ ಆಗಿ ಕಾಣುವುದಿಲ್ಲ. ಕೂದಲಿಗೆ ಡಿಫರೆಂಟ್ ಸ್ಟೈಲ್ ಮಾಡಿಯೂ ನೀವು ಸ್ಮಾರ್ಟ್ ಹಾಗೂ ಸುಂದರವಾಗಿ ಕಾಣಬಹುದು.
ನೆಟ್ ಜಡೆ : ಕೂದಲನ್ನು ಚೆನ್ನಾಗಿ ಬಾಚಿ ಮುಂದಿನಿಂದ ಸೈಡ್ ಪಾರ್ಟಿಂಗ್ ಮಾಡಿ ಇಯರ್ ಟು ಇಯರ್ ಕೂದಲಿನ ಒಂದು ಸೆಕ್ಷನ್ ಮಾಡಿ. ಹಿಂದೆ ಮಧ್ಯದಿಂದ ಬೈತಲೆ ತೆಗೆದು ಅಕ್ಕಪಕ್ಕ 1-1 ಎತ್ತರದ ಪೋನಿ ಮಾಡಿ. ನಂತರ ಪೋನಿಯ ಕೂದಲಿನಿಂದ 1-1 ಕುಚ್ಚು ತೆಗೆದುಕೊಂಡು ಬ್ಯಾಕ್ ಕೂಂಬಿಂಗ್ ಮಾಡುತ್ತಾ ಹೋಗಿ ಮತ್ತು ಇದರಲ್ಲಿ ದೂರದಿಂದಲೇ ಸ್ಪ್ರೇ ಮಾಡಿ. ನಂತರ ಎರಡೂ ಪೋನಿಗಳ ಮೇಲೆ ನೆಟ್ ಹಾಕಿ. ಪೋನಿ ಮಾಡಲು ರಬ್ಬರ್ ಬ್ಯಾಂಡ್ ಹಾಕಿರುವ ಕಡೆ ಕೆಳಗಿನಿಂದ ಹಿಡಿದು ಸೆಟ್‌ನ್ನು ಬಾಬ್ ಪಿನ್‌ನಿಂದ ಲಾಕ್ ಮಾಡಿ. ಈಗ ಪೋನಿಯ ಕೂದಲನ್ನು ನೆಟ್‌ನ ಒಳಗೆ ಇಡಿ. ನಂತರ ಅದರ ಮೇಲೆ ಸ್ಪ್ರೇ ಮಾಡಿ. ಈಗ ನೆಟ್ ಇರುವ ಪೋನಿಯನ್ನು ರೋಲ್ ಮಾಡಿ ಮೇಲಿದ್ದ ರಬ್ಬರ್‌ಬ್ಯಾಂಡ್ ಬಳಿ ಪಿನ್‌ನಿಂದ ಸೆಟ್ ಮಾಡಿ. ಹೀಗೆಯೇ ಇನ್ನೊಂದು ಪೋನಿ ಮಾಡಿ.
ಈಗ ಮುಂದಿನ ಕೆಲವು ಕೂದಲನ್ನು ತೆಗೆದುಕೊಂಡು ಮೃದುವಾಗಿ ಬ್ಯಾಕ್ ಕೂಂಬಿಂಗ್ ಮಾಡಿ ಮತ್ತು ಬ್ಯಾಕ್ ಕೂಂಬಿಂಗ್‌ನ ಕೂದಲನ್ನು ಕೈಗಳಿಂದ ಹರಡಿ. ನಂತರ ಕೆಳಗಿನಿಂದ ಸ್ಪ್ರೇ ಮಾಡಿ. ಈಗ ಬ್ಯಾಕ್ ಕೂಂಬಿಂಗ್‌ನ ಕೂದಲನ್ನು ಕೈಗಳಿಂದ ಹಗುರವಾಗಿ ಬ್ರಶ್ ಮಾಡಿ ಮತ್ತು ನೀಡ್ ಲುಕ್ ಕೊಡಿ. ನಂತರ ಇದನ್ನು ರೋಲ್ ಪೋನಿಯ ಜಡೆಗೆ ಫಿಕ್ಸ್ ಮಾಡಿ. ಈಗ ನಾಝಲ್ ಪಿನ್‌ನಿಂದ ಎರಡೂ ರೋಲ್ ಜಡೆಯನ್ನು ಲಾಕ್ ಮಾಡಿ ಸೇರಿಸಿ. ಎರಡರ ಮಧ್ಯೆ 1 ಜಡೆ ಆಗುತ್ತದೆ.
ಈಗ ಮುಂದೆ ಉಳಿದಿರುವ ಕೂದಲನ್ನು ಸೈಡ್ ವಿ ಪಾರ್ಟಿಂಗ್ ಮಾಡಿ ಮತ್ತು ಹಗುರವಾಗಿ ಬ್ಯಾಕ್ ಕೂಂಬಿಂಗ್ ಮಾಡಿ ಸ್ಪ್ರೇ ಮಾಡಿ ಬ್ರಶ್‌ನಿಂದ ನೀಡಲ್ ಮಾಡಿ. ನಂತರ ಒಂದು ಕಡೆಯ ಕೂದಲನ್ನು ಬೆರಳುಗಳಿಂದ ರೋಲ್ ಮಾಡಿ ಟ್ವಿಸ್ಟ್ ಮಾಡುತ್ತಾ ಕಿವಿಯ ಮೇಲೆ ಪಿನ್‌ನಿಂದ ಸೆಟ್ ಮಾಡಿ. ಈಗ ಇನ್ನೊಂದು ಸೈಡಿನ ಕೂದಲಿನ 1-1 ಲೇಯರ್‌ತೆಗೆದುಕೊಂಡು ಬ್ಯಾಕ್ ಕೂಂಬಿಂಗ್ ಮಾಡಿ ಸ್ಪ್ರೇ ಮಾಡಿ. ಈಗ ನೀಡಲ್ ಕೊಡಲು ಈ ಕೂದಲನ್ನು ಬ್ರಶ್ ಮಾಡಿ ಸ್ಪ್ರೇ ಮಾಡಿ. ಮತ್ತೆ ಇದನ್ನು ಕಿವಿಯ ಮೇಲೆ ಸೆಟ್ ಮಾಡಿ. ಉಳಿದ ಕೂದಲನ್ನು ಟ್ವಿಸ್ಟ್ ಮಾಡಿ ಅದೇ ಕಿವಿಯ ಬಳಿಯಲ್ಲೇ ಸೆಟ್ ಮಾಡಿ.
ಈಗ ಕೂದಲನ್ನು ಡೆಕೋರೇಟ್ ಮಾಡಲು ಅದರ ಮೇಲೆ ಡ್ರೆಸ್‌ಗೆ ಮ್ಯಾಚ್ ಆಗುವ ಆ್ಯಕ್ಸೆಸರೀಸ್ ಸಿಕ್ಕಿಸಿ. ಫ್ಲವರ್ ಆ್ಯಕ್ಸೆಸರೀಸ್‌ಗಳನ್ನು ಒಂದೇ ಸೈಡ್‌ನಲ್ಲಿ ಸಿಕ್ಕಿಸಿ.
ಶಾರ್ಟ್ ಹೇರ್ ಸ್ಟೈಲ್ : ಕೂದಲನ್ನು ಬಾಚಿ ಇಯರ್ ಟು ಇಯರ್ ಸೆಕ್ಷನ್ ಬೇರೆ ಮಾಡಿ. ಟಾಪ್ ಕೂದಲನ್ನು ಬಿಟ್ಟು ನಂತರದ ಕೂದಲನ್ನು ಒಂದು ಕಡೆ ಪೋನಿ ಮಾಡಿ ಮತ್ತು ಅದೇ ಸೈಡ್ ಪೋನಿಯ ಮೇಲೆ ಆರ್ಟಿಫಿಶಿಯಲ್ ಹೇರ್‌ಪಿನ್‌ನಿಂದ ಸೆಟ್ ಮಾಡಿ. ಈಗ ಮಧ್ಯದಿಂದ ಕೂದಲು ತೆಗೆದುಕೊಂಡು ಲೆಯರ್ಸ್‌ನಲ್ಲಿ ಬ್ಯಾಕ್ ಕೂಂಬಿಂಗ್ ಮಾಡಿ ಮತ್ತು ಹಗುರವಾಗಿ ಸ್ಪ್ರೇ ಮಾಡಿ. ಈ ಸ್ಪ್ರೇ ಕೂದಲನ್ನು ಹೋಲ್ಡ್ ಮಾಡುತ್ತದೆ. ಈಗ ಇಡೀ ಬ್ಯಾಕ್ ಕೂಂಬಿಂಗ್‌ನ ಕೂದಲನ್ನು ಪೋನಿಯ ಕಡೆ ತನ್ನಿ. ಅವಕ್ಕೆ ಬಾಚಣಿಗೆಯಿಂದ ನೀಡ್ ಲುಕ್ ಕೊಡಿ. ನಂತರ ಈ ಕೂದಲನ್ನು ಪೋನಿಯ ಮೇಲೆ ಸೆಟ್ ಮಾಡಿ.
ಈಗ ಮುಂದಿನಿಂದ ಸೈಡ್‌ನ ಬೈತಲೆ ತೆಗೆದು ಮುಂದಿನ ಕಡೆಗೆ ಬಾಚಿ ಜೆಲ್ ಸ್ಪ್ರೇ ಮಾಡಿ ಟ್ವಿಸ್ಟ್ ಮಾಡುತ್ತಾ ಅನ್ ಟೈಡಿ ಲುಕ್ ಕೊಡಿ. ನಂತರ ಅದನ್ನು ಪಿನ್‌ನಿಂದ ಸೆಟ್ ಮಾಡಿ. ಈಗ ಅದಕ್ಕೆ ಜೆಲ್ ಹಚ್ಚಿ ಟ್ವಿಸ್ಟ್ ಮಾಡಿ. ಈಗ ಮುಂದಿನ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ. ನಂತರ ನೀಡಲ್ ಮಾಡುತ್ತಾ ಒಂದು ಸೈಡ್‌ನಿಂದ ಕೂದಲನ್ನು ಪ್ಲೇನ್ ಮಾಡಿ ಪೋನಿಯಲ್ಲೇ ಸೆಟ್ ಮಾಡಿ ಮತ್ತು ಸ್ಪ್ರೇ ಮಾಡಿ. ಈಗ ಪೋನಿಯನ್ನು ಫ್ಲವರ್ ಆ್ಯಕ್ಸೆಸರೀಸ್‌ಗಳಿಂದ ಅಲಂಕರಿಸಿ.
ಡೋನೆಟ್ ಹೇರ್ ಸ್ಟೈಲ್ : ಕೂದಲನ್ನು ಬಾಚಿ ಹಿಂದಿನವರೆಗೆ ಸೆಂಟರ್ ಪಾರ್ಟಿಂಗ್ ಮಾಡಿ. ಈಗ ಎರಡೂ ಕಡೆಯ ಕೂದಲಿನಿಂದ 1-1 ಸೆಕ್ಷನ್ ತೆಗೆದುಕೊಂಡು ಬ್ಯಾಕ್ ಕೂಂಬಿಂಗ್ ಮಾಡುತ್ತಾ ಹೋಗಿ. ಪ್ರತಿ ಬ್ಯಾಕ್ ಕೂಂಬಿಂಗ್ ನಂತರ ಕೂದಲಿಗೆ ಸ್ಪ್ರೇ ಮಾಡುತ್ತಾ ಹೋಗಿ. ಈಗ ಎರಡೂ ಕಿವಿಗಳ ಮೇಲೆ 1-1 ಪೋನಿ ಮಾಡಿ ಮತ್ತು ಪೋನಿ ಮೇಲೆ ಸ್ಪ್ರೇ ಮಾಡಿ. ಈಗ ಪೋನಿಯ ಮೇಲೆಯೇ ಡೋನೆಟ್ ಸಿಕ್ಕಿಸಿ (ಇದು ಕೂದಲಿನಿಂದ ತಯಾರಾದ ಬ್ಯಾಂಡ್ ಆಗಿದ್ದು ಅದರ ಮೇಲೆ ನೆಟ್ ಇರುತ್ತದೆ.) ಡೋನೆಟ್‌ನ್ನು ಬ್ಯಾಂಡ್ ಬಳಿ ಪಿನ್‌ನಿಂದ ಟೈಟ್ ಸೆಟ್ ಮಾಡಿ. ಈಗ ಪೋನಿಯ ಕೂದಲನ್ನು ಡೋನೆಟ್ ಮೇಲೆಯೇ ರೋಲ್ ಮಾಡಿ. ಹೀಗೆಯೇ ಇನ್ನೊಂದು ಕಡೆಯೂ ಮಾಡಿ. ಎರಡೂ ಕಡೆ 2 ಸುಂದರ ಕುಚ್ಚುಗಳಾಗುತ್ತವೆ. ಈಗ ಇದರ ಮೇಲೆ ನೆಟ್ ಹರಡಿ ಪಿನ್‌ನಿಂದ ಸೆಟ್ ಮಾಡಿ.
ಲೇಡಿ ಗಾಗಾ ಮೇಕಪ್ : ಎಲ್ಲಕ್ಕೂ ಮೊದಲು ಮುಖವನ್ನು ಸ್ವಚ್ಛಗೊಳಿಸಿ. ಈಗ ಸಿಲ್ವರ್ ಕಲರ್‌ನ ಗ್ಲಿಟರ್ ಇರುವ ಐ ಶ್ಯಾಡೋವನ್ನು ಇಡೀ ಐ ಬಾಲ್ ಮೇಲೆ ಹಚ್ಚಿ. ನಂತರ ಐ ಬ್ರೋಸ್‌ಗೆ ಬೋಲ್ಡ್ ಲುಕ್ ಕೊಡಲು ಬ್ಲ್ಯಾಕ್ ಆ್ಯಕ್ವಾ ಕಲರ್‌ನಿಂದ ಅಗಲವಾದ ಲೈನರ್ ಮೇಲಿನಿಂದ ಕೆಳಗೆ ಹಚ್ಚಿ. ಈಗ ಕಣ್ಣುಗಳಲ್ಲಿ ವಾಟರ್ ಲೈನ್ ಏರಿಯಾ ಮೇಲೆ ಕಾಜಲ್ ಜಾಗದಲ್ಲಿ ಲೈಟ್ ಪೆನ್ಸಿಲ್‌ನಿಂದ ಲೈನರ್ ಹಚ್ಚಿ. ನಂತರ ಕಲರ್‌ಫುಲ್ ಐ ಲ್ಯಾಶಸ್‌ನ್ನು ಗ್ಲೂ ಸಹಾಯದಿಂದ ಹಚ್ಚಿ. ನಂತರ ಮುಖಕ್ಕೆ ಬೇಸ್ ಹಚ್ಚಿ. ಅದನ್ನು ಬ್ರಶ್ ಅಥವಾ ಸ್ಪಾಂಜ್‌ನಿಂದ ಹಚ್ಚಿ. ಆಮೇಲೆ ಮುಖಕ್ಕೆ ಶಾರ್ಪ್ ಲುಕ್ ಕೊಡಲು ಫೇಸ್ ಕಟ್, ನೋಸ್‌ಕಟ್, ಫೋರ್ ಹೆಡ್ ಮತ್ತು ಚೀಕ್ಸ್ ಕಟ್ ಮಾಡಿ. ಮೇಕಪ್‌ನ್ನು ಸೆಟ್ ಮಾಡಲು ಮೇಕಪ್ ಫಿಕ್ಸರ್ ಸ್ಪ್ರೇ ಮಾಡಿ. ಔಟ್‌ಲೈನ್ ಮಾಡಿ ಲಿಪ್‌ಸ್ಟಿಕ್‌ಹಚ್ಚಿ.
ಲೇಡಿ ಗಾಗಾ ಹೇರ್ ಸ್ಟೈಲ್ : ಕೂದಲನ್ನು ಚೆನ್ನಾಗಿ ಬಾಚಿ ವಾಟರ್ ಸ್ಪ್ರೇ ಮಾಡಿ. ಎಲ್ಲ ಕೂದಲನ್ನೂ ಟಾಪ್ ಮೇಲೆ ತೆಗೆದುಕೊಂಡು ಪೋನಿ ಮಾಡಿ. ಅದನ್ನು ರೋಲ್ ಮಾಡುತ್ತಾ ಟಾಪ್ ಜಡೆ ಹಾಕಿ. ಈಗ ಕೆಲವು ಕ್ಯೂಬ್‌ಗಳನ್ನು ತೆಗೆದುಕೊಂಡು ನೆಟ್ ಜೊತೆ ಅವನ್ನು ಜೋಡಿಸುತ್ತಾ ಒಂದು ಉದ್ದವಾದ ಕ್ಯೂಬ್ ಚೇನ್ ತಯಾರಿಸಿ. ಅದನ್ನು ಟಾಪ್ ಜಡೆಯ ಮೇಲೆ ಸಿಕ್ಕಿಸಿ. ಇದು ಹೈ ಜಡೆಯಾಗುತ್ತದೆ. ನಂತರ ಇದರಲ್ಲಿ ಕಲರ್‌ಫುಲ್ ಮಲ್ಟಿಫಂಕಿ ಆ್ಯಕ್ಸೆಸರೀಸ್‌ಗಳಿಂದ ಅಲಂಕರಿಸಿ.
– ಪಿ. ಶೃತಿ