ಚುರುಗುಟ್ಟುವ ಬಿಸಿಲು ಹೋಗಿ ಇದೀಗ ಹನಿ ಹನಿ ಮಳೆಯ ದಿನಗಳು ಬಂದಿವೆ, ಬಹಳ ಸಂತಸ ಎನಿಸುತ್ತದೆ. ಆದರೆ ಈ ಕಾಲದಲ್ಲಿ ಹಲವಾರು ಸಮಸ್ಯೆಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಈ ಕಾಲದಲ್ಲಿ ಚರ್ಮ ಮತ್ತು ಕೂದಲಿನ ಸೌಂದರ್ಯ ಸಂರಕ್ಷಣೆ ನಿಜಕ್ಕೂ ಒಂದು ಸಾವೇ ಸರಿ. ಬನ್ನಿ, ಸೌಂದರ್ಯ ತಜ್ಞೆಯರು ಇದಕ್ಕಾಗಿ ಹೇಳಿರುವ ಪರಿಹಾರ ಗಮನಿಸೋಣವೇ :

ಈ ಆಹ್ಲಾದಕರ ವಾತಾವರಣದಲ್ಲಿ ನಮ್ಮ ಮನಸ್ಸಿನ ಜೊತೆ ಜೊತೆಗೆ ಚರ್ಮ ಸಹ ಖುಷಿಯಾಗಿರಬೇಕು. ಅಂದರೆ ನಮ್ಮ ದೈನಂದಿನ ಮೇಕಪ್‌ಪ್ರಕ್ರಿಯೆಯಲ್ಲಿ ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌, ಸನ್‌ಪ್ರೊಟೆಕ್ಷನ್‌ನ್ನು 4 ಪ್ರಮುಖ ಹಂತಗಳಾಗಿ ಮರೆಯದೆ ಪಾಲಿಸಬೇಕು. ಪ್ರತಿದಿನ ಕನಿಷ್ಠ 2-3 ಸಲ ಮುಖವನ್ನು ಆ್ಯಂಟಿಸೆಪ್ಟಿಕ್‌ ಲೋಶನ್‌, ಆ್ಯಸ್ಟ್ರಿಂಜೆಂಟ್‌ಗಳಿಂದ ಸ್ವಚ್ಛಗೊಳಿಸಬೇಕು. ಆಗ ನಮ್ಮ ತೆರೆದ ಚರ್ಮ ಸೋಂಕಿನಿಂದ ದೂರಾಗುತ್ತದೆ. ಇದಾದ ನಂತರ ತುಸು ಸ್ಕಿನ್‌ ಟೋನರ್‌ನ್ನು ಹತ್ತಿ ಮೇಲೆ ಹಾಕಿಕೊಂಡು ಮುಖವಿಡೀ ಸವರಬೇಕು, ಹಾಗೇ ಕುತ್ತಿಗೆ, ಕೈಗಳಿಗೂ ಸಹ. ಇದರಿಂದ ಓಪನ್‌ ಪೋರ್ಸ್‌ ಕ್ಲೋಸ್‌ಆಗುತ್ತವೆ. ಹೀಗಾಗಿ ಅನಗತ್ಯ ಬೆರುವಿಕೆ ನಿಂತು ಋತುವಿಗೆ ತಕ್ಕಂತೆ ನಮ್ಮ ಚರ್ಮ ನಳನಳಿಸುತ್ತಾ ಇರುತ್ತದೆ.

ಓಪನ್‌ ಪೋರ್ಸ್‌ನ್ನು ಕ್ಲೋಸ್‌ ಮಾಡಲು ಹಾಗೂ ಮುಖದಲ್ಲಿ ಹೊಸ ಕಾಂತಿ ಚಿಮ್ಮಿಸಲು, ಮುಖದ ಮೇಲೆ 1-2 ನಿಮಿಷ ಐಸ್ ಕ್ಯೂಬ್‌ನಿಂದ ಸವರಬೇಕು. ಈ ಐಸ್‌ ಫೇಶಿಯಲ್ ಎಷ್ಟೋ ತಾಜಾತನ ನೀಡುತ್ತದೆ ಅಥವಾ ಐಸ್‌ ವಾಟರ್‌ಗೆ ಗುಲಾಬಿ ಜಲ ಬೆರೆಸಿ, ಕಾಟನ್‌ ಪ್ಯಾಡ್‌ನ್ನು ಅದರಲ್ಲಿ ಅದ್ದಿ, ಮುಖ, ಕುತ್ತಿಗೆಗಳಿಗೆ ಸವರಬೇಕು.

ಸೂರ್ಯನ ಹಾನಿಕಾರಕ  UV ಕಿರಣಗಳು ಬೇಸಿಗೆ, ಮಳೆ ಅಥವಾ ಚಳಿಗಾಲ ಯಾವಾಗ ಬೇಕಾದರೂ ಹಿಂಸೆ ನೀಡುತ್ತವೆ. ಇದರಿಂದ ಸ್ಕಿನ್‌ ಕ್ಯಾನ್ಸರ್‌ ಆಗುವ ಸಂಭವ ಇದೆ. ಆದ್ದರಿಂದ ನೀವು ಮನೆಯಿಂದ ಹೊರಗೆ ಹೊರಡುವಾಗ ಬಿಸಿಲಿರಲಿ ಬಿಡಲಿ, ಅಗತ್ಯವಾಗಿ ಮುಖ, ಕುತ್ತಿಗೆ ಕೈಗಳಿಗೆ SPF ಹೊಂದಿರುವ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಕೊಂಡು, ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ.

ಈ ಕಾಲದಲ್ಲಿ ಚರ್ಮದ ಜೊತೆಗೆ ತಲೆಗೂದಲು ಸಹ ಬೇಗ ಬೇಗ ಅಂಟಂಟಾಗುತ್ತದೆ. ಕೂದಲನ್ನು ಸದಾ ಫ್ರೆಶ್‌ ಆಗಿಟ್ಟುಕೊಳ್ಳಲು, ದಿನ ಬಿಟ್ಟು ದಿನ, ಸುಗಂಧಯುಕ್ತ ಶ್ಯಾಂಪೂನಿಂದ ಕೂದಲು ತೊಳೆಯಿರಿ. ಈ ಋತುಮಾನದಲ್ಲಿ ಆರ್ದ್ರತೆ (ಹ್ಯುಮಿಡಿಟಿ) ಹೆಚ್ಚುವುದರಿಂದ, ಕೂದಲಿನ ಸೆಟಿಂಗ್‌ ಕಷ್ಟವಾಗುತ್ತದೆ, ಕೂದಲು ಬೇಗ ಒಣಗಿ ಒರಟಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಕೂದಲಿಗೆ ಹೆಚ್ಚಾಗಿ ಆ್ಯಂಟಿ ಹ್ಯುಮಿಡಿಟಿ ಪ್ರಾಡಕ್ಟ್ಸ್ ಬಳಸಬೇಕು.

ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆಯೂ ಅಧಿಕ. ಇದರ ನಿವಾರಣೆಗಾಗಿ, ಮನೆಮದ್ದಾಗಿ ನೆನೆಹಾಕಿದ್ದ ಮೆಂತ್ಯವನ್ನು ಬೇವಿನ ಸೊಪ್ಪಿನ ಜೊತೆ ನುಣ್ಣಗೆ ಅರೆದು, ಅದಕ್ಕೆ ಈರುಳ್ಳಿ ಪೇಸ್ಟ್ ಬೆರೆಸಿ ಕೂದಲಿಗೆ ಹಚ್ಚಬೇಕು. ಅದಾದ ನಂತರ ಸುಗಂಧಭರಿತ ಹರ್ಬಲ್ ಶ್ಯಾಂಪೂನಿಂದ ತಲೆ ತೊಳೆಯಬೇಕು. ಜೊತೆಗೆ ನಿಮ್ಮ ಬಾಚಣಿಗೆ, ಟವೆಲ್‌, ತಲೆದಿಂಬು ಇತ್ಯಾದಿಗಳನ್ನು ಸದಾ ಬೇರೆಯಾಗಿಟ್ಟುಕೊಳ್ಳಿ. ಬಾಚಣಿಗೆ, ಟವೆಲ್‌ಗಳನ್ನು ಆ್ಯಂಟಿಸೆಪ್ಟಿಕ್‌ ಲೋಶನ್‌ನಲ್ಲಿ ಅರ್ಧ ಗಂಟೆ ನೆನೆಸಿ, ತಲೆದಿಂಬಿನ ಮೇಲೆ ಚಿಮುಕಿಸಿ, ಒಣಗಿಸಿ, ನಂತರ ಬಳಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ