ನಿಮ್ಮ ಕೂದಲನ್ನು ಬಾಚದೇ ಹಾಗೇ ಬಿಟ್ಟಿದ್ದರಿಂದಲೇ ನೀವು ಸ್ಟೈಲಿಶ್‌ ಆಗಿ ಕಾಣುವುದಿಲ್ಲ. ಕೂದಲಿಗೆ ಡಿಫರೆಂಟ್‌ ಸ್ಟೈಲ್ ಮಾಡಿಯೂ ನೀವು ಸ್ಮಾರ್ಟ್‌ ಹಾಗೂ ಸುಂದರವಾಗಿ ಕಾಣಬಹುದು.

net-jooda-_1_

ನೆಟ್ಜಡೆ : ಕೂದಲನ್ನು ಚೆನ್ನಾಗಿ ಬಾಚಿ ಮುಂದಿನಿಂದ ಸೈಡ್‌ ಪಾರ್ಟಿಂಗ್‌ ಮಾಡಿ ಇಯರ್‌ ಟು ಇಯರ್‌ ಕೂದಲಿನ ಒಂದು ಸೆಕ್ಷನ್‌ ಮಾಡಿ. ಹಿಂದೆ ಮಧ್ಯದಿಂದ ಬೈತಲೆ ತೆಗೆದು ಅಕ್ಕಪಕ್ಕ 1-1 ಎತ್ತರದ ಪೋನಿ ಮಾಡಿ. ನಂತರ ಪೋನಿಯ ಕೂದಲಿನಿಂದ 1-1 ಕುಚ್ಚು ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡುತ್ತಾ ಹೋಗಿ ಮತ್ತು ಇದರಲ್ಲಿ ದೂರದಿಂದಲೇ ಸ್ಪ್ರೇ ಮಾಡಿ. ನಂತರ ಎರಡೂ ಪೋನಿಗಳ ಮೇಲೆ ನೆಟ್‌ ಹಾಕಿ. ಪೋನಿ ಮಾಡಲು ರಬ್ಬರ್‌ ಬ್ಯಾಂಡ್‌ ಹಾಕಿರುವ ಕಡೆ ಕೆಳಗಿನಿಂದ ಹಿಡಿದು ಸೆಟ್‌ನ್ನು ಬಾಬ್‌ ಪಿನ್‌ನಿಂದ ಲಾಕ್‌ ಮಾಡಿ. ಈಗ ಪೋನಿಯ ಕೂದಲನ್ನು ನೆಟ್‌ನ ಒಳಗೆ ಇಡಿ. ನಂತರ ಅದರ ಮೇಲೆ ಸ್ಪ್ರೇ ಮಾಡಿ. ಈಗ ನೆಟ್‌ ಇರುವ ಪೋನಿಯನ್ನು ರೋಲ್ ಮಾಡಿ ಮೇಲಿದ್ದ ರಬ್ಬರ್‌ಬ್ಯಾಂಡ್‌ ಬಳಿ ಪಿನ್‌ನಿಂದ ಸೆಟ್‌ ಮಾಡಿ. ಹೀಗೆಯೇ ಇನ್ನೊಂದು ಪೋನಿ ಮಾಡಿ.

ಈಗ ಮುಂದಿನ ಕೆಲವು ಕೂದಲನ್ನು ತೆಗೆದುಕೊಂಡು ಮೃದುವಾಗಿ ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಬ್ಯಾಕ್‌ ಕೂಂಬಿಂಗ್‌ನ ಕೂದಲನ್ನು ಕೈಗಳಿಂದ ಹರಡಿ. ನಂತರ ಕೆಳಗಿನಿಂದ ಸ್ಪ್ರೇ ಮಾಡಿ. ಈಗ ಬ್ಯಾಕ್‌ ಕೂಂಬಿಂಗ್‌ನ ಕೂದಲನ್ನು ಕೈಗಳಿಂದ ಹಗುರವಾಗಿ ಬ್ರಶ್‌ ಮಾಡಿ ಮತ್ತು ನೀಡ್‌ ಲುಕ್‌ ಕೊಡಿ. ನಂತರ ಇದನ್ನು ರೋಲ್ ‌ಪೋನಿಯ ಜಡೆಗೆ ಫಿಕ್ಸ್ ಮಾಡಿ. ಈಗ ನಾಝಲ್ ಪಿನ್‌ನಿಂದ ಎರಡೂ ರೋಲ್ ಜಡೆಯನ್ನು ಲಾಕ್‌ ಮಾಡಿ ಸೇರಿಸಿ. ಎರಡರ ಮಧ್ಯೆ 1 ಜಡೆ ಆಗುತ್ತದೆ.

ಈಗ ಮುಂದೆ ಉಳಿದಿರುವ ಕೂದಲನ್ನು ಸೈಡ್‌ ವಿ ಪಾರ್ಟಿಂಗ್‌ ಮಾಡಿ ಮತ್ತು ಹಗುರವಾಗಿ ಬ್ಯಾಕ್‌ ಕೂಂಬಿಂಗ್‌ ಮಾಡಿ ಸ್ಪ್ರೇ ಮಾಡಿ ಬ್ರಶ್‌ನಿಂದ ನೀಡಲ್ ಮಾಡಿ. ನಂತರ ಒಂದು ಕಡೆಯ ಕೂದಲನ್ನು ಬೆರಳುಗಳಿಂದ ರೋಲ್ ಮಾಡಿ ಟ್ವಿಸ್ಟ್ ಮಾಡುತ್ತಾ ಕಿವಿಯ ಮೇಲೆ ಪಿನ್‌ನಿಂದ ಸೆಟ್‌ ಮಾಡಿ. ಈಗ ಇನ್ನೊಂದು ಸೈಡಿನ ಕೂದಲಿನ 1-1 ಲೇಯರ್‌ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ ಸ್ಪ್ರೇ ಮಾಡಿ. ಈಗ ನೀಡಲ್ ಕೊಡಲು ಈ ಕೂದಲನ್ನು ಬ್ರಶ್‌ ಮಾಡಿ ಸ್ಪ್ರೇ ಮಾಡಿ. ಮತ್ತೆ ಇದನ್ನು ಕಿವಿಯ ಮೇಲೆ ಸೆಟ್‌ ಮಾಡಿ. ಉಳಿದ ಕೂದಲನ್ನು ಟ್ವಿಸ್ಟ್ ಮಾಡಿ ಅದೇ ಕಿವಿಯ ಬಳಿಯಲ್ಲೇ ಸೆಟ್‌ ಮಾಡಿ.

ಈಗ ಕೂದಲನ್ನು ಡೆಕೋರೇಟ್‌ ಮಾಡಲು ಅದರ ಮೇಲೆ ಡ್ರೆಸ್‌ಗೆ ಮ್ಯಾಚ್‌ ಆಗುವ ಆ್ಯಕ್ಸೆಸರೀಸ್‌ ಸಿಕ್ಕಿಸಿ. ಫ್ಲವರ್‌ ಆ್ಯಕ್ಸೆಸರೀಸ್‌ಗಳನ್ನು ಒಂದೇ ಸೈಡ್‌ನಲ್ಲಿ ಸಿಕ್ಕಿಸಿ.

short-hair-style-_7_

ಶಾರ್ಟ್ಹೇರ್ಸ್ಟೈಲ್ ‌: ಕೂದಲನ್ನು ಬಾಚಿ ಇಯರ್‌ ಟು ಇಯರ್‌ ಸೆಕ್ಷನ್‌ ಬೇರೆ ಮಾಡಿ. ಟಾಪ್‌ ಕೂದಲನ್ನು ಬಿಟ್ಟು ನಂತರದ ಕೂದಲನ್ನು ಒಂದು ಕಡೆ ಪೋನಿ ಮಾಡಿ ಮತ್ತು ಅದೇ ಸೈಡ್‌ ಪೋನಿಯ ಮೇಲೆ ಆರ್ಟಿಫಿಶಿಯಲ್ ಹೇರ್‌ಪಿನ್‌ನಿಂದ ಸೆಟ್‌ ಮಾಡಿ. ಈಗ ಮಧ್ಯದಿಂದ ಕೂದಲು ತೆಗೆದುಕೊಂಡು ಲೆಯರ್ಸ್‌ನಲ್ಲಿ ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಹಗುರವಾಗಿ ಸ್ಪ್ರೇ ಮಾಡಿ. ಈ ಸ್ಪ್ರೇ ಕೂದಲನ್ನು ಹೋಲ್ಡ್ ಮಾಡುತ್ತದೆ. ಈಗ ಇಡೀ ಬ್ಯಾಕ್‌ ಕೂಂಬಿಂಗ್‌ನ ಕೂದಲನ್ನು ಪೋನಿಯ ಕಡೆ ತನ್ನಿ. ಅವಕ್ಕೆ ಬಾಚಣಿಗೆಯಿಂದ ನೀಡ್‌ ಲುಕ್‌ ಕೊಡಿ. ನಂತರ ಈ ಕೂದಲನ್ನು ಪೋನಿಯ ಮೇಲೆ ಸೆಟ್‌ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ