ಮದುವೆಗೆ ಮುಂಚೆ ವಧುವಿನ ರೂಪ ಸಂಪೂರ್ಣವಾಗಿ ಹೊಳೆಯಲು, ಅವಳ ಮುಖ ಕಲೆಗಳಿಲ್ಲದೆ ಸುಂದರವಾಗಿ ಕಾಣಲು ಭಾರತೀಯ ಪರಂಪರೆಯಲ್ಲಿ ಆರಂಭದಿಂದಲೇ ತೈಲ ಲೇಪನ ಮಾಡುವ ಪದ್ಧತಿ ಇತ್ತು. ತ್ವಚೆಯ ಡೆಡ್‌ ಸ್ಕಿನ್‌ ತೆಗೆದುಹಾಕಿ ತ್ವಚೆಗೆ ಕಾಂತಿ ಹಾಗೂ ಹೊಸ ರೂಪ ಕೊಡುವ ಕೆಲಸವನ್ನು ಲೇಪನ ಮಾಡುತ್ತಿತ್ತು. ಇದು ಅದರ ಜಾಗವನ್ನು ಆಧುನಿಕ ಟೆಕ್ನಿಕ್ ಡರ್ಮಾಪೀಲ್ ತೆಗೆದುಕೊಂಡಿದೆ.

ಡರ್ಮಾಪೀಲ್ ಟೆಕ್ನಿಕ್ಹೇಗೆ?

ಡ್ಯಾಮೇಜ್ಡ್ ಸ್ಕಿನ್‌ ನ್ನು ದೂರ ಮಾಡಿ ಸ್ಕಿನ್‌ ನ್ನು ರೀಜನರೇಟ್‌ ಮಾಡುತ್ತದೆ ಎಂಬ ಬಗ್ಗೆ ವಿವರ ಮಾಹಿತಿ ಕೊಡುತ್ತಾ ಪ್ರಸಿದ್ಧ ಕಾಸ್ಮೆಟಾಲಜಿಸ್ಟ್ ಸಂಗೀತಾ, ಹೇಗೆ ಮನೆಯ ಗೋಡೆಗಳಿಗೆ ಹೊಸ ಬಣ್ಣ ಬಳಿಯುವ ಮೊದಲು ಅದರ ಕೊಳೆಯನ್ನು ತೆಗೆದು ಸ್ಮೂಥ್‌ ಮಾಡಲಾಗುತ್ತದೆಯೋ ಹಾಗೆಯೇ ಡರ್ಮಾಪೀಲ್ ‌ಚರ್ಮದ ಹಳೆಯ ಸೆಲ್ಸ್ ಗಳನ್ನು ದೂರ ಮಾಡಿ ಹೊಸ ಸೆಲ್ಸ್ ಬೆಳೆಯುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ ಎನ್ನುತ್ತಾರೆ.

ಡರ್ಮಾಪೀಲಿಂಗ್‌ 2 ರೀತಿ ಇರುತ್ತದೆ. ಒಂದು ಕೆಮಿಕಲ್ ಪೀಲಿಂಗ್‌ ಮತ್ತು ಎರಡನೇಯದು ಹರ್ಬಲ್ ಪೀಲಿಂಗ್‌. ಕೆಮಿಕಲ್ ಪೀಲಿಂಗ್‌ನಿಂದ ಬರೀ ಮೇಲಿನ ತ್ವಚೆ ಸ್ವಚ್ಛವಾಗುತ್ತದೆ. ಒಮ್ಮೊಮ್ಮೆ ಇದು ಹಿಲ್ದಿ ಸ್ಕಿನ್‌ನ್ನೂ ತೆಗೆದುಬಿಡುತ್ತದೆ. ಹರ್ಬಲ್ ಪೀಲಿಂಗ್ ಸಂಪೂರ್ಣವಾಗಿ ಆರ್ಗ್ಯಾನಿಕ್‌ ಆಗಿದ್ದರಿಂದ ತ್ವಚೆಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.

ಡರ್ಮಾಪೀಲಿಂಗ್ ಪ್ರಕ್ರಿಯೆ : ಎಲ್ಲಕ್ಕೂ ಮೊದಲು ಕತ್ತು ಹಾಗೂ ಮುಖವನ್ನು ಸ್ಕಿನ್‌ ಟಾನಿಕ್‌ನಿಂದ ಕ್ಲೀನ್‌ ಮಾಡಿ. ಸ್ಕಿನ್‌ ಟಾನಿಕ್‌ ತ್ವಚೆಯ ಪಿಎಚ್‌ನ್ನು ಬ್ಯಾಲೆನ್ಸ್ ಮಾಡುವ ಕೆಲಸ ಮಾಡುತ್ತದೆ. ಇದರ ನಂತರ ತ್ವಚೆಯ ಮೇಲೆ ಸ್ಕ್ರಬ್‌ ಹಚ್ಚಿ ಮತ್ತು 45 ನಿಮಿಷಗಳವರೆಗೆ ಸರ್ಕ್ಯುಲರ್‌ ಮೋಷನ್‌ನಲ್ಲಿ ಅಪ್‌ವರ್ಡ್‌ ಮಸಾಜ್‌ ಮಾಡಿ. ಸ್ಕ್ಕಬಿಂಗ್‌ನಿಂದ ಡೆಡ್‌ ಸೆಲ್ಸ್ ದೂರಾಗುತ್ತವೆ ಮತ್ತು ಮುಚ್ಚಿದ ರೋಮ ರಂಧ್ರಗಳು ತೆರೆಯುತ್ತವೆ. ಸ್ವಲ್ಪ ಸಮಯದ ನಂತರ ನಮಗೆ ಕಾರಿನ ಸರ್ವೀಸಿಂಗ್‌ ಅಗತ್ಯವಿರುವಂತೆ ಅದೇ ರೀತಿ ತ್ವಚೆಯ ಮೇಂಟೆನೆನ್ಸ್ ಗಾಗಿ ಸರ್ವೀಸಿಂಗ್‌ ಅಗತ್ಯವಿದೆ. ಡರ್ಮಾಪೀಲ್ ‌ಪ್ರಕ್ರಿಯೆ ಇದೇ ಕೆಲಸ ಮಾಡುತ್ತದೆ.

ಪರಂಗಿ ಹಣ್ಣು ಮತ್ತು ಗ್ರೇಪ್‌ ಸೀಡ್‌ನ ಎಕ್ಸ್ ಟ್ರಾಕ್ಟ್ ನಿಂದ ತಯಾರಾದ ಸ್ಕ್ಕಬ್‌ ತ್ವಚೆಯನ್ನು ರಿಜುವೇನೇಟ್‌ ಮಾಡುತ್ತದೆ.

ಸ್ಕ್ರಬಿಂಗ್‌ ನಂತರ ತ್ವಚೆಯನ್ನು ಸ್ಕಿನ್‌ ಟಾನಿಕ್‌ನಿಂದ ಸ್ವಚ್ಛಗೊಳಿಸಿ. ಪೀಲಿಂಗ್‌ಗೆ ಕ್ರೀಂನಲ್ಲಿ ಆ್ಯಂಪ್ಯೂವ್ ‌ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದು ಚರ್ಮದಲ್ಲಿ ಚೆನ್ನಾಗಿ ಹೊಂದಿಕೊಳ್ಳುವವರೆಗೆ ಹಚ್ಚುತ್ತಿರಿ. ನಂತರ ಹಗುರಾಗಿ ಮಸಾಜ್‌ ಮಾಡಿ. ಆಮೇಲೆ ಮುಖದ ಮೇಲೆ ಸ್ಕಿನ್‌ ಟಾನಿಕ್‌ ಸ್ಪ್ರೇ ಮಾಡಿ.ಈಗ ಕೋರ್‌ ಪೌಡರ್‌ನಿಂದ ತಯಾರಿಸಿದ ಹರ್ಬಲ್ ಮಾಸ್ಕ್ ನ್ನು ಮುಖಕ್ಕೆ ಹಚ್ಚಿ. ಕೂದಲಿಗೆ ಹಚ್ಚಬೇಡಿ. ಅದರಲ್ಲಿ ಆ್ಯಂಪ್ಯೂವ್ ಬೆರೆಸಲು ಮರೆಯಬೇಡಿ.

10 ನಿಮಿಷಗಳವರೆಗೆ ಮುಖಕ್ಕೆ ಹಚ್ಚುತ್ತಿರಿ. ಸಿಕ್ಕ ಆ್ಯಂಫ್ಯೂವ್ ‌ತ್ವಚೆಗೆ ನರಿಶ್‌ಮೆಂಟ್‌ ಕೊಡುತ್ತದೆ. 10 ನಿಮಿಷಗಳ ನಂತರ ಮಾಸ್ಕ್ ನ್ನು ನಿಧಾನವಾಗಿ ತೆಗೆಯಿರಿ. ಕೊನೆಯಲ್ಲಿ ತ್ವಚೆಗೆ ನ್ಯೂಟ್ರೈಸರ್‌ ಹಚ್ಚಿ ಮತ್ತು ಸ್ಕಿನ್‌ ಟಾನಿಕ್‌ನಿಂದ ಟ್ಯಾಪ್‌ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ