ಕೆಲವೊಮ್ಮೆ ಯುವಕರಂತೆ ಹೊಳೆಯುವ ಉಡುಪುಗಳನ್ನು ತೊಟ್ಟು ಅವರಂತೆ ವರ್ತಿಸುವ 40-45 ವಯಸ್ಸಿನವರನ್ನು ಕಾಣುತ್ತೇವೆ. ಕೆಲವರು ಇನ್ನೂ ಮುಂದೆ ಹೋಗಿ ತಮಗಿಂತ ಚಿಕ್ಕ ವಯಸ್ಸಿನವರತ್ತ ಆಕರ್ಷಿತರಾಗುತ್ತಾರೆ ಮತ್ತು ಅವರನ್ನೂ ತಮ್ಮತ್ತ ಆಕರ್ಷಿಸಲು ವಿಧವಿಧವಾದ ಉಪಾಯಗಳನ್ನು ಅನುಸರಿಸುತ್ತಾರೆ.

ಸಹಜತೆಯ ಸೀಮೆ ಉಲ್ಲಂಘಿಸುವ ಇಂತಹ ಮನಸ್ಥಿತಿಗಳನ್ನು ಮಿಡ್‌ ಲೈಫ್‌ ಕ್ರೈಸಿಸ್‌ ಮಿಡ್‌ ಲೈಫ್‌ ಸಿಂಡ್ರೋಮ್ ಅಥವಾ  ಮಿಡ್‌ಏಜ್‌ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆಗಳು ಆಗಿವೆ.

ಏನಾಗುತ್ತದೆ?

40-45 ವಯಸ್ಸಾಗುತ್ತಲೇ ವ್ಯಕ್ತಿ ಕೆರಿಯರ್‌, ಸಂಸಾರ ಇತ್ಯಾದಿಗಳಲ್ಲಿ ಒಂದು ಹಂತದವರೆಗೆ ಸೆಟಲ್ ಆಗುತ್ತಾನೆ. ಆಗ ಅವನಿಗೆ ತನ್ನ ಬಗ್ಗೆ ಯೋಚಿಸಲು, ವಿಚಾರ ಮಾಡಲು ಸಮಯ ಇರುತ್ತದೆ. ಹೀಗಿರುವಾಗ ಒಮ್ಮೊಮ್ಮೆ ತನ್ನ ತಾರುಣ್ಯ ಜಾರಿಹೋಗುತ್ತಿದೆ ಎಂದು ಅನ್ನಿಸುತ್ತದೆ. ದಿನನಿತ್ಯದ ಜಂಜಾಟದಲ್ಲಿ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆದ್ದರಿಂದ ಅದನ್ನು ವಿವಿಧ ರೀತಿಯಲ್ಲಿ ತಡೆದು ನಿಲ್ಲಿಸಲು ಹಾಗೂ ತುಂಬು ಜೀವನವನ್ನು ನಡೆಸಲು ಬಯಸುತ್ತಾನೆ. ಹೀಗಿರುವಾಗ ಸಮಾಜದ ಮಾನ್ಯತೆಗಳು, ಆಲೋಚನೆಗಳು, ಮಿತಿಗಳು ಅವನ ಈ ಮನಸ್ಥಿತಿಗೆ ಅಡ್ಡಿಯುಂಟು ಮಾಡುತ್ತವೆ. ಅವನ ಅಂತರ್ಮನಸ್ಸು ಮತ್ತು ಬಾಹ್ಯ ಮನಸ್ಸಿನಲ್ಲಿ ದ್ವಂದ್ವ ಉಂಟಾಗುತ್ತದೆ. ಅದನ್ನು ಮಿಡ್‌ ಲೈಫ್‌ ಕ್ರೈಸಿಸ್‌ ಎನ್ನುತ್ತಾರೆ.

ಪುರುಷರಲ್ಲಿ ಹೆಚ್ಚು ಕ್ರೈಸಿಸ್

ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಇದ್ದರೂ, ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಕಡಿಮೆ ಹಾಗೂ ತಡವಾಗಿ ಉಂಟಾಗುತ್ತದೆ ಮತ್ತು ಕಡಿಮೆ ಸಮಯ ಇರುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಪರಿಸ್ಥಿತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಅವರು ತಮ್ಮ ಮರ್ಜಿಯಂತೆ ಬದುಕಲು ಬಯಸುತ್ತಾರೆ. ವಯಸ್ಸು ಹೆಚ್ಚುತ್ತಿದ್ದಂತೆ ಅವರ ಇಚ್ಛೆಗಳನ್ನೂ ಹೆಚ್ಚಿಸುತ್ತದೆ.

ಮನೋವೈದ್ಯ ಡಾ. ಸಂಜಯ್‌ ಪ್ರಕಾರ, ಈ ಕ್ರೈಸಿಸ್‌ನಲ್ಲಿ ವ್ಯಕ್ತಿಗೆ ತನ್ನ ಅರ್ಧ ಆಯುಸ್ಸು ಕಳೆದುಹೋಗಿದೆಯೆಂದು ಅನ್ನಿಸುತ್ತದೆ. ಉಳಿದಿರುವ ಬದುಕಿನಲ್ಲಿ ಅವನು ತನ್ನ ಮರ್ಜಿಯಂತೆ ಬದುಕಬಹುದು. ಅವನು ತನ್ನ ಉಡುಗೆ ತೊಡುಗೆ, ಫಿಟ್ನೆಸ್‌ ಇತ್ಯಾದಿಗಳಿಗೆ ವಿಶೇಷ ಗಮನ ಕೊಡಲು ತೊಡಗುತ್ತಾನೆ ಜೊತೆಗೆ ಯುವಕನಂತೆ ಕಾಣಿಸಲು ಸಾಕಷ್ಟು ಪ್ರಯತ್ನಿಸುತ್ತಾನೆ. ತನ್ನ ಬದುಕಿನಲ್ಲಿ ಬಂದ ಶೂನ್ಯವನ್ನು ತುಂಬಲು ಅದರಲ್ಲಿ ಎಗ್ಸೈಟ್‌ಮೆಂಟ್‌ ತರಲು ಬಯಸುತ್ತಾನೆ. ಆ ನಿಟ್ಟಿನಲ್ಲಿ ಅವನು ರೊಮ್ಯಾನ್ಸ್ ಮತ್ತು ಫ್ಲರ್ಟಿಂಗ್‌ ಮಾಡಲು ತೊಡಗುತ್ತಾನೆ. ಅವನ ವರ್ತನೆ ಕಿಶೋರಾವಸ್ಥೆಯಲ್ಲಿನ ವರ್ತನೆಯಂತಿರುತ್ತದೆ.

ಬರೀ ಮನೋವೈಜ್ಞಾನಿಕ ಕಾರಣಗಳಷ್ಟೇ ಅಲ್ಲ, ಹಾರ್ಮೋನ್‌ ಬದಲಾವಣೆಯೂ ಅದಕ್ಕೆ ಕಾರಣವಾಗಿರುತ್ತದೆ. ಸ್ತ್ರೀಯರಲ್ಲಿ ಕಡಿಮೆಯೇಕೆ? ಮನೋವೈದ್ಯರ ಪ್ರಕಾರ ಮಹಿಳೆಯರು ಜೀವನದ ಒತ್ತಡಗಳು, ಸಂಘರ್ಷಗಳು ಮತ್ತು ಹಾರ್ಮೋನ್‌ಬದಲಾವಣೆಗಳನ್ನು ಸಹಜ ಮತ್ತು ಪ್ರಾಕೃತಿಕ ರೂಪದಲ್ಲಿ ಎದುರಿಸುತ್ತಾರೆ. ಅನೇಕ ಕೆಲಸಗಳಲ್ಲಿ ಕಾರ್ಯ ವಿಧಾನಗಳಲ್ಲಿ ಬದುಕನ್ನು ವ್ಯಸ್ತಗೊಳಿಸುತ್ತಾರೆ. ಏಕಾಕಿತನ ಅವರನ್ನು ಕಾಡುವುದಿಲ್ಲ. ಅದನ್ನು ಹೇಗಾದರೂ ತುಂಬಿಕೊಳ್ಳುತ್ತಾರೆ. ಈ ವಿಷಯವಾಗಿ ಹಲವು ಮಹಿಳೆಯರೊಂದಿಗೆ ಮಾತಾಡಿದಾಗ ಅವರು ಹೀಗೆ ಹೇಳಿದರು.

ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ ವಿಜ್ಞಾನ ಬೋಧಿಸುವ ಡಾ. ಸುನಂದಾ, “ನಾವು ಆ ವಯಸ್ಸನ್ನು ದಾಟಿ ಬಿಟ್ಟಿದ್ದೇವೆ. ನಮಗೆ ಈ ಕ್ರೈಸಿಸ್‌ನ ಅನುಭವ ಏಕೆ ಆಗಲಿಲ್ಲವೆಂದರೆ ನಮಗೆ ಮಕ್ಕಳ ಕೆರಿಯರ್‌ ಮತ್ತು ಜೀವನದ ಇತರ ಗುರಿಗಳೂ ಮಹತ್ವಪೂರ್ಣವಾಗಿವೆ,” ಎನ್ನುತ್ತಾರೆ.

ಸೌಂದರ್ಯ ತಜ್ಞೆ ಆಶಾ, “ನನ್ನ ಬಳಿ ಎಲ್ಲ ವಯಸ್ಸಿನ ಮಹಿಳೆಯರೂ ಬರುತ್ತಾರೆ. ಅವರು ಎಲ್ಲ ವಯಸ್ಸಿನಲ್ಲೂ ಸುಂದರವಾಗಿ ಕಾಣಲು ಇಚ್ಛಿಸುತ್ತಾರೆ. 44-45ರ ವಯಸ್ಸಿನಲ್ಲೂ ಅವರಲ್ಲಿ ನಾನು ಏಜ್‌ ಕ್ರೈಸಿಸ್‌ ನೋಡಲಿಲ್ಲ. ಅವರು ಯಾವಾಗಲೂ ತಾರುಣ್ಯದಿಂದ ತುಂಬಿ ಸುಂದರವಾಗಿ ಕಾಣಲು ಬಯಸುತ್ತಾರೆ,” ಎಂದರು.

ಡಾ. ವೀರೇಂದ್ರ ಸಕ್ಸೇನಾ ಹೀಗೆ ಹೇಳುತ್ತಾರೆ, “ನಾನು ಫಿಲ್ಮ್ ಪತ್ರಿಕೆ `ಮಾಧುರಿ’ಯ ಸಂಪಾದಕ. ಮಹಿಳೆಯರ ಬಗ್ಗೆ ಸಮೀಕ್ಷೆ ಮಾಡಿದಾಗ ತಿಳಿದದ್ದು ಅವರು ಬದುಕಿನಲ್ಲಿ ದೊರೆತ ಬಿಡುವಿನ ಸಮಯವನ್ನು ಸಾರ್ಥಕವಾಗಿ ಕಳೆಯುತ್ತಾರೆ.”

ಲಕ್ಷಣಗಳೇನು?

ಕೂದಲು ಉದುರುವುದು, ಬೊಜ್ಜು ಬರುವುದು ಮತ್ತು ಕೂದಲು ಬೆಳ್ಳಗಾಗುವುದು ಇತ್ಯಾದಿಗಳ ಬಗ್ಗೆ ಚಿಂತೆ.ಈ ಕ್ರೈಸಿಸ್‌ಗೆ ಪರಿಹಾರವಿದೆಯೇ?

ಜೀವನದ ಪರಿಸ್ಥಿತಿಗಳನ್ನು ಸಹಜತೆಯಿಂದ ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಳ್ಳುವವರಿಗೆ ಕ್ರೈಸಿಸ್‌ನ ಅನುಭವವೇ ಉಂಟಾಗುವುದಿಲ್ಲ.

ಜೀವನವನ್ನು ಗುರಿಯೊಂದಿಗೆ ಹೊಂದಿಸುವುದು ಉತ್ತಮ. ಪ್ರೊಫೆಶನ್‌ ಜೀವನದ ಹೊರತಾಗಿ ಇತರ ಸಣ್ಣಪುಟ್ಟ ಗುರಿಗಳನ್ನೂ ಇಟ್ಟುಕೊಂಡಿರಬೇಕು.

ಅಭಿರುಚಿಗಳಿಗೆ ಹಾಗೂ ಅಪೂರ್ಣ ಬಯಕೆಗಳಿಗೆ ಸಮಯ ಕೊಡಬೇಕು.

ವಯಸ್ಸಿನ ಎಲ್ಲ ಹಂತ ಚಾರ್ಮಿಂಗ್

ಪ್ರತಿ ವಯಸ್ಸಿಗೂ ತನ್ನದೇ ಆದ ಮಜಾ ಇದೆ. ಚಾರ್ಮ್ ಇದೆ. ಬಾಲ್ಯ ಅಥವಾ ಯೌವನವನ್ನು ಈ ವಯಸ್ಸಿನ ಕ್ರೈಸಿಸ್‌ನಲ್ಲಿ ನೆನಪಿಸಿಕೊಂಡರೆ, ವಯಸ್ಸಿನ ಆ ಹಂತದಲ್ಲೂ ಕ್ರೈಸಿಸ್‌ ಕಡಿಮೆಯೇನಿರಲಿಲ್ಲ. ತಮ್ಮನ್ನು ತಾವು ಸಾಬೀತುಪಡಿಸಲು, ಅಧ್ಯಯನ ಹಾಗೂ ಇತರ ಹಾರ್ಮೋನ್‌ ಒತ್ತಡಗಳು ಮತ್ತು ಆಕರ್ಷಣೆಗಳೂ ಸಹ ಅಡ್ಡಿಯಾಗಿದ್ದವು.

ವಯಸ್ಸಿಗೆ ಅನುಗುಣವಾಗಿ ವರ್ತನೆ, ರೀತಿ ನೀತಿ ಮತ್ತು ಹಾವಭಾವ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಮಕ್ಕಳು ಅಪ್ಪನಿಗೆ ಏನಾಯ್ತು? ಅಪ್ಪ ಕೆಟ್ಟದಾಗಿ ನಡೆದುಕೊಳ್ತಿದ್ದಾರೆ…. ಎಂದೆಲ್ಲಾ ಮಾತನಾಡತೊಡಗುತ್ತಾರೆ. ಚಳಿಗಾಲ, ಮಳೆಗಾಲ, ಬೇಸಿಗೆಕಾಲಗಳಂತೆ ಪ್ರತಿ ವಯಸ್ಸಿನಲ್ಲೂ ಅದರದೇ ಆದ ಫ್ಲೇವರ್‌ ಇರುತ್ತದೆ.

ಲೈಫ್ಬಿಗಿನ್ಸ್ ಆಫ್ಟರ್ಫಾರ್ಟಿ

40ರ ನಂತರ ಸರಿಯಾದ ಆನಂದಮಯ ಜೀವನದ ಚಾರ್ಮ್ ನ್ನು ಈ ಹೇಳಿಕೆಯ ಮೂಲಕ ತೋರಿಸಲಾಗಿದೆ. ಈ ಸಮಯದಲ್ಲಿ ಹಣದಿಂದ ಹಿಡಿದು ಕೆರಿಯರ್‌ವರೆಗೆ ನೋಡಿಕೊಳ್ಳಬೇಕಾಗುತ್ತದೆ. ಇದರ ಆನಂದ ಪಡೆಯಲು ಸುತ್ತಮುತ್ತಲಿನ ಜನರಿಂದ ಕಲಿಯಬಹುದು. ವಿಶ್ವದೆಲ್ಲೆಡೆ ಅನೇಕ ಪ್ರಸಿದ್ಧ ದಿಗ್ಗಜರು 40ರ ನಂತರವೇ ಸಾಧನೆಯ ಹಂತ ತಲುಪಿದ್ದಾರೆ.

ನಿಯಂತ್ರಿಸದಿದ್ದರೆ ಕಿರಿಕಿರಿ

ಈ ವಯಸ್ಸಿನ ಕ್ರೈಸಿಸ್‌ನ್ನು ಸರಿಯಾಗಿ ನಿರ್ವಹಿಸದಿದ್ದರೆ ಬಹಳ ಕಿರಿಕಿರಿಯಾಗುತ್ತದೆ. ಪುರುಷರಲ್ಲಿ 60-70 ವರ್ಷದವರೆಗೆ ಈ ಸಿಂಡ್ರೋಮ್ ಇರಬಹುದು. ಅದರಿಂದಲೇ ಬಿಲ್ ‌ಕ್ಲಿಂಟನ್‌, ಬಲುಸ್ಕಿ, ಮತ್ತು ವಿಶ್ವದ ಅನೇಕ ಹೆಸರಾಂತ ವ್ಯಕ್ತಿಗಳಿಗೆ ಬಹಳ ಕಿರಿಕಿರಿಯಾಯಿತು.

ನಿರ್ವಹಿಸಲಾಗದಿದ್ದಾಗ ಈ ಒತ್ತಡ ‘ದಮನಕಾರಿ’ ರೂಪ ಪಡೆದುಕೊಂಡು ಸಫಲತೆಯನ್ನು ಅಸಫಲತೆಯಾಗಿಯೂ, ಚಾರಿತ್ರ್ಯವನ್ನು ಚಾರಿತ್ರ್ಯಹೀನವಾಗಿಯೂ, ಗುಣವನ್ನು ಅವಗುಣನ್ನಾಗಿಯೂ ಬದಲಿಸುತ್ತದೆ.

ಜಾಗರೂಕತೆ ಈ ಕ್ರೈಸಿಸ್‌ ಬಗ್ಗೆ ವಿಶ್ವದೆಲ್ಲೆಡೆ ಜಾಗರೂಕತೆ ವ್ಯಕ್ತವಾಗುತ್ತಿದೆ. ಹಿಂದಿನ ಕಾಲದಲ್ಲಿ ಇಂತಹ ಮನೋವೃತ್ತಿಯನ್ನು ಗಾದೆಗಳು, ನಾಣ್ಣುಡಿಗಳ ಮೂಲಕ ಹೇಳಲಾಗುತ್ತಿತ್ತು.

ಬಾಲಿವುಡ್‌ನಲ್ಲೂ `ಬೀವೀ ನಂ.1,’ `ಗ್ರ್ಯಾಂಡ್‌ ಮಸ್ತಿ,’ `ನೋ ಎಂಟ್ರಿ’ ಯಂತಹ ಚಿತ್ರಗಳು ತಯಾರಾಗಿದ್ದು, ಅವು ಈ ಏಜ್‌ ಕ್ರೈಸಿಸ್‌ ಕಡೆಗೆ ಗಮನಕೊಡಿಸಿ ರಕ್ಷಣೆಯ ಸಂದೇಶಗಳನ್ನು ಕೊಡುತ್ತವೆ.

ಪಾರಾಗುವುದೇ ಸರಿ

ದಾಂಪತ್ಯದಲ್ಲಿ ನೀರಸತೆ, ಉಪೇಕ್ಷೆ ಬರದಂತೆ ನೋಡಿಕೊಳ್ಳಿ. ಸಂಗಾತಿಯ ಜೀವನದಲ್ಲಿನ ಶೂನ್ಯವನ್ನು ತುಂಬಿ. ನಾವೀನ್ಯತೆ ಮತ್ತು ಬದಲಾವಣೆಯ ಇಚ್ಛೆಯನ್ನು ಸಂಗಾತಿಯೊಂದಿಗೆ ಸೆಕ್ಸ್, ರೀತಿ ನೀತಿ ಮತ್ತು ಲೈಫ್‌ ಸ್ಟೈ‌ಲ್ ನ ಹೊಸ ಹೊಸ ಟೆಕ್ನಿಕ್‌ಗಳನ್ನೂ ನಮ್ಮದಾಗಿಸಿಕೊಂಡು ಟ್ಯಾಕ್‌ ಮಾಡಬಹುದು.

ಇಂತಹ ಏ ಜ್‌ಸಿಂಡ್ರೋವ್‌ ತಲೆ ಎತ್ತಿದಾಗ ಅದಕ್ಕೆ ಸಕಾರಾತ್ಮಕ ಹಾಗೂ ಸರಿಯಾದ ದಿಕ್ಕು ಕೊಟ್ಟು ಬದುಕಿನಲ್ಲಿ ಹೆಚ್ಚು ಆನಂದ ಪಡೆಯಬಹುದು. ಕೆಲವರು ಬದುಕಿನಲ್ಲಿ ಹೊಸ ಗುರಿ ಇಟ್ಟುಕೊಂಡು ಉತ್ಸುಕರಾಗಿ ಕೆಲಸ ಕಲಿಯಲು ಸಿದ್ಧರಾಗಿರುವಂತೆ ಕಂಡುಬರುತ್ತಾರೆ.

– ಡಾ. ವಿಮಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ