ಮಳೆಗಾಲ ಕೂದಲಿನ ಮೇಲೆ ಗಂಡಾಂತರಕಾರಿಯಾಗಿ ಪರಿಣಮಿಸುತ್ತದೆ. ಈ ಹವಾಮಾನದಲ್ಲಿ ಕೂದಲು ಉದುರುವ ಸಮಸ್ಯೆ ದ್ವಿಗುಣಗೊಳ್ಳುತ್ತದೆ. ತಲೆಯಲ್ಲಿ ಸೋಂಕು ಕೂಡ ಉಂಟಾಗಬಹುದು. ಕೂದಲು ನಿರ್ಜೀವ ಎಂಬಂತೆ ಭಾಸವಾಗಬಹುದು. ಅದರಲ್ಲಿ ಅನವಶ್ಯಕವಾಗಿ ಶುಷ್ಕತನ ಉಂಟಾಗುತ್ತದೆ. ಹೀಗಾಗಿ ಮಾನ್‌ಸೂನ್‌ ಸಂದರ್ಭದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ.

ಮೈಲ್ಡ್ ಶ್ಯಾಂಪೂ ಬಳಸಿ

ಮಳೆಗಾಲದಲ್ಲಿ ಹೆಚ್ಚು ಸಲ ಕೂದಲನ್ನು ಸ್ವಚ್ಛಗೊಳಿಸಬೇಕಾದ ಅನಿವಾರ್ಯ ಸಂದರ್ಭ ಬರುತ್ತದೆ. ನೀವು ಕೂದಲನ್ನು ಸ್ವಚ್ಛಗೊಳಿಸುವಾಗಿಲ್ಲ ಮೈಲ್ಡ್ ಅಥವಾ ಸೌಮ್ಯ ಶ್ಯಾಂಪೂವನ್ನೇ ಬಳಸಿ. ಬೇಸಿಗೆ ಹಾಗೂ ಉಷ್ಣತೆ ಅಧಿಕ ಇರುವ ದಿನಗಳಲ್ಲಿ ನಮ್ಮ ದೇಹದಿಂದ ಬೆವರು ಕಿತ್ತುಕೊಂಡು ಬರುತ್ತದೆ. ಇದರಿಂದ ಜಿಡ್ಡುತನ ಧೂಳು ಮತ್ತು ಮಾಲಿನ್ಯದಿಂದ ನಮ್ಮ ಕೂದಲುಗಳು ನಿರ್ಜೀವ ಎಂಬಂತೆ ಭಾಸವಾಗುತ್ತವೆ. ಬೆವರಿನ ಜೊತೆಗೆ ಉಪ್ಪಿನಂಶ  ಹೊರಹೊಮ್ಮುತ್ತದೆ. ಅದು ನಮ್ಮ ತಲೆಗೆ ಸಾಕಷ್ಟು ಪರಿಣಾಮ ಬೀರುತ್ತದೆ.

ಹೀಗಾಗಿ ಈ ಹವಾಮಾನದಲ್ಲಿ ನಮ್ಮ ತಲೆಯನ್ನು ಸ್ವಚ್ಛ ಮತ್ತು ಶುಷ್ಕವಾಗಿಟ್ಟು ಕೊಳ್ಳುವುದು ಅತ್ಯವಶ್ಯ. ದಿನ ಬಿಟ್ಟು ದಿನ ತಲೆಯನ್ನು ಸ್ವಚ್ಛಗೊಳಿಸಿಕೊಳ್ಳಿ.

ಹೊಟ್ಟಿನಿಂದ ಮುಕ್ತಿ ಕಂಡುಕೊಳ್ಳಿ

ಈ ತಿಂಗಳಲ್ಲಿ ತೇವಾಂಶ ಜಾಸ್ತಿ ಇರುವ ಕಾರಣದಿಂದ ಫಂಗಲ್ ಸೋಂಕಿನ ಅಪಾಯ ಹೆಚ್ಚುತ್ತದೆ. ಮಳೆಗಾಲದಲ್ಲಿ ತಲೆಯಲ್ಲಿ ಹೆಚ್ಚು ಹೊತ್ತು ತೇವಾಂಶ ಇರುವ ಕಾರಣದಿಂದ ಅಲ್ಲಿ ಸೋಂಕು ಹಾಗೂ ಡ್ಯಾಂಡ್ರಫ್‌ ಆಗುತ್ತದೆ. ಇದರಿಂದ ಬಚಾವಾಗಲು ನಿಮ್ಮ ತಲೆಯನ್ನು ಒಣಗಿಸಿಕೊಳ್ಳಿ. ಕೂದಲು ಒದ್ದೆಯಿದ್ದಾಗ ಅದನ್ನು ಕಟ್ಟಬೇಡಿ. ಮೊದಲು ಚೆನ್ನಾಗಿ ಒಣಗಿಸಿ. ಬಳಿಕ ಯಾವುದಾದರೂ ಆ್ಯಂಟಿ ಡ್ಯಾಂಡ್ರಫ್‌ ಶ್ಯಾಂಪೂವಿನಿಂದ ತಲೆಯನ್ನು ಸ್ವಚ್ಛಗೊಳಿಸಿಕೊಳ್ಳಿ. ಬ್ಯಾಕ್ಟೀರಿಯಾ ಸೋಂಕಿನಿಂದ ಪಾರಾಗಲು ವಾರದಲ್ಲಿ 1 ದಿನ ತಲೆಗೆ ನಿಂಬೆರಸ ಲೇಪಿಸಿ.

ಸ್ಟೈಲಿಂಗ್ಉತ್ಪನ್ನಗಳನ್ನು ಬಳಸದಿರಿ

ಹೆಚ್ಚು ಬಿಸಿ ಹಾಗೂ ತೇವಾಂಶದ ವಾತಾವರಣ ಕೂದಲಿನ ಮೇಲೆ ಹೆಚ್ಚು ಮಾರಕ ಪರಿಣಾಮ ಉಂಟು ಮಾಡುತ್ತದೆ. ಅವು ಮೇಲಿಂದ ಮೇಲೆ ರಾಸಾಯನಿಕ ಅಂಶಗಳನ್ನು ಎದುರಿಸಬೇಕಾಗಿ ಬರುತ್ತದೆ. ಈ ಎಲ್ಲ ಸಂಗತಿಗಳು ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಇದರಿಂದಾಗಿ ಕೂದಲು ದುರ್ಬಲವಾಗುತ್ತವೆ. ಕೂದಲನ್ನು ಒಣಗಿಸುವ ಹಾಗೂ ಇತರೆ ಉಪಕರಣಗಳನ್ನು ಆದಷ್ಟು ಕಡಿಮೆ ಬಳಸಿ. ಇವುಗಳಿಂದ ಕೂದಲು ದುರ್ಬಲಗೊಳ್ಳುತ್ತವೆ.

ಕೂದಲಿಗೆ ಎಣ್ಣೆ ಹಚ್ಚಿ ಕಂಡೀಶನಿಂಗ್‌ ಮಾಡಿ. ನಿಮ್ಮ ಕೂದಲಿಗೆ ವಾರಕ್ಕೊಮ್ಮೆ ತೈಲ ಮಸಾಜ್‌ ಮಾಡಿಕೊಳ್ಳಿ. ಇದರಿಂದ ನಿಮಗೆ ಶುಷ್ಕ ನೆತ್ತಿ ಹೈಡ್ರೇಟ್‌ ಆಗುತ್ತದೆ. ಅದರ ಜೊತೆಗೆ ರಕ್ತ ಸಂಚಾರ ಕೂಡ ಹೆಚ್ಚುತ್ತದೆ. ಕೂದಲಿನ ಆರೋಗ್ಯಕ್ಕೆ ತೈಲ ಮಸಾಜ್ ತುಂಬಾ ಉಪಯುಕ್ತ. ಇದಕ್ಕಾಗಿ ಕೂದಲನ್ನು ಮೃದು ಹಾಗೂ ವ್ಯವಸ್ಥಿತವಾಗಿಡಲು ಕಂಡೀಷನರ್‌ನ್ನು ನಿಯಮಿತವಾಗಿ ಉಪಯೋಗ ಮಾಡುತ್ತಾ ಇರಿ. ಏಕೆಂದರೆ ಈ ಹವಾಮಾನದಲ್ಲಿ ಕೂದಲು ಬಹಳ ಅಸ್ತವ್ಯಸ್ತವಾಗುತ್ತವೆ.

ಆಹಾರದ ಬಗೆಗೂ ಇರಲಿ ಕಾಳಜಿ

ದೇಹವನ್ನು ಆಂತರಿಕವಾಗಿ ಆರೋಗ್ಯದಿಂದಿಡಲು ಇದಕ್ಕಿಂತ ಒಳ್ಳೆಯ ಉಪಾಯ ಇರಲಾರದು. ಯಾರು ಪರಿಪೂರ್ಣವಾಗಿ ಆರೋಗ್ಯದಿಂದಿರುತ್ತಾರೊ, ಅವರು ಸುಂದರ ಹಾಗೂ ಆರೋಗ್ಯಕರ ಕೂದಲನ್ನು ಹೊಂದಿರುತ್ತಾರೆ. ಹಗಲು ಹೊತ್ತು ಸಾಕಷ್ಟು ಹೆಚ್ಚು ನೀರು ಕುಡಿಯಿರಿ. ಪ್ರೋಟೀನ್‌ ಯುಕ್ತ ಆಹಾರಪದಾರ್ಥಗಳ ಸೇವನೆ ಮಾಡಿ. ಏಕೆಂದರೆ ಪ್ರೋಟೀನ್‌ ಕೂದಲಿಗೆ ಆಂತರಿಕವಾಗಿ ಗಟ್ಟಿತನ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ