ಗ್ಲಾಮರಸ್‌ ಲುಕ್‌ ಪಡೆಯಲು ಈ ದಿನಗಳಲ್ಲಿ ಯುವತಿಯರು ಮತ್ತು ವಯಸ್ಕರು ಇಬ್ಬರಲ್ಲೂ ಬಹಳ ಕ್ರೇಝ್ ಇದೆ. ಅವರು ಬಣ್ಣ ಹಾಗೂ ರೂಪ ಪಡೆಯಲು ದಿನದಿನ ಹೊಸ ಹೊಸ ಸ್ಟೈಲ್ ‌ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಕೂದಲಿಗೆ ಗಾರ್ಜಿಯಸ್‌ ಲುಕ್‌ ಕೊಡಲು ಹೇರ್‌ ಕಲರಿಂಗ್‌ ಒಂದು ಉತ್ತಮ ಆಯ್ಕೆ. ಇಂದು ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಹೇರ್‌ ಕಲರ್‌ಗಳು ಲಭ್ಯವಿವೆ. ಆದರೆ ಎಲ್ಲ ಕಲರ್‌ಗಳೂ ಎಲ್ಲರಿಗೂ ಸೂಟ್‌ ಆಗಬೇಕೆಂದೇನಿಲ್ಲ. ಆದ್ದರಿಂದ ಹೇರ್‌ ಕಲರ್‌ ಮಾಡಿಸುವ ಮೊದಲು ಕೆಲವು ವಿಷಯಗಳನ್ನು ಗಮನಿಸಿ.

ಅಕಾರ್ಡಿಂಗ್‌ ಟು ಸ್ಕಿನ್‌ ಟೋನ್‌ ಹೇರ್‌ ಕಲರ್‌ ಮಾಡಿಸುವ ಮೊದಲು ನಿಮ್ಮ ಸ್ಕಿನ್‌ ಟೋನ್‌ ಮತ್ತು ಕಣ್ಣುಗಳ ಬಣ್ಣ ತಿಳಿದುಕೊಳ್ಳಿ. ನಂತರ ಅದಕ್ಕೆ ತಕ್ಕಂತೆ ಹೇರ್‌ ಸ್ಟೈಲಿಸ್ಟ್ ನ್ನು ಕನ್ಸಲ್ಟ್ ಮಾಡಿ ಹೇರ್‌ ಕಲರ್‌ ಆರಿಸಿಕೊಳ್ಳಿ. ನಿಮ್ಮ ಸ್ಕಿನ್‌ ಟೋನ್‌ಗೆ ಅನುಸಾರ ಹೇರ್‌ ಕಲರ್‌ ಮಾಡಿಸಿದರೆ ನಿಮ್ಮ ಲುಕ್‌ನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬಹುದು. ಹೇರ್‌ ಕಲರ್‌ನ್ನು ಆರಿಸಿಕೊಳ್ಳುವಾಗ ನಿಮ್ಮ ಪ್ರೊಫೆಶನಲ್ ಬಗ್ಗೆಯೂ ಗಮನಿಸಿ.

ಒಂದು ವೇಳೆ ನಿಮ್ಮದು ಬಿಳಿಯ ಬಣ್ಣವಾಗಿದ್ದರೆ ನೀವು ಬ್ಲೆಂಡ್‌ ಅಥವಾ ಬ್ರೂ ನೆಟ್‌ ಶೇಡ್ಸ್ ಉಪಯೋಗಿಸಬಹುದು. ಈಗ ಅದು ಹೆಚ್ಚು ಫ್ಯಾಷನ್‌ನಲ್ಲಿದೆ. ಬಿಳಿಯ ಬಣ್ಣದ ಹುಡುಗಿಯರಿಗೆ ಕಾಪರ್‌ ಮತ್ತು ರೆಡ್‌ ಶೇಡ್‌ನ ಹೈಲೈಟಿಂಗ್‌ ಬಹಳ ಚೆನ್ನಾಗಿರುತ್ತದೆ. ಅದಲ್ಲದೆ, ಕಾಲೇಜು ಹುಡುಗಿಯರು ಬ್ಲೂ, ಯೆಲ್ಲೋ ಇತ್ಯಾದಿ ಫಂಕಿ ಕಲರ್‌ಗಳನ್ನು ಉಪಯೋಗಿಸುತ್ತಾರೆ. ಓವರ್‌ ಎಕ್ಸ್ ಪೆರಿಮೆಂಟ್‌ ಮಾಡುವ ಧೈರ್ಯವಿದ್ದರೆ ಕೂದಲಿನಲ್ಲಿ 2 ಬಣ್ಣಗಳನ್ನು ಒಟ್ಟಿಗೆ ಕ್ಯಾರಿ ಮಾಡಬಹುದು. ಆದರೆ ಅರ್ಧ ಕೂದಲಿನ ಮೇಲೆ ಬ್ಲೆಂಡ್‌ ಕಲರ್‌ ಮತ್ತು ಇನ್ನರ್ಧ ಕೂದಲಿನ ಮೇಲೆ ರೆಡ್‌ ಕಲರ್‌ ಮಾಡಬಹುದು. ಗೋಧಿ ಬಣ್ಣಕ್ಕೆ ಕಾಪರ್‌ ಕಲರ್‌ನ ಹೈಲೈಟಿಂಗ್‌ ಚೆನ್ನಾಗಿ ಒಪ್ಪುತ್ತದೆ. ಈ ಬಣ್ಣಕ್ಕೆ ಗ್ಲೋಬಲ್ ಕಲರಿಂಗ್‌ ಮಾಡಿಸಲು ಇಚ್ಛಿಸಿದರೆ ಚೆಸ್‌ ಅಥವಾ ಮಹಾಗನಿಯ ಗಾಢ ಟೋನ್‌ ಹೆಚ್ಚು ಸೂಟ್‌ ಆಗುತ್ತದೆ.

ಶ್ಯಾಮಲ ವರ್ಣದ ಮೇಲೆ ಡೀಪ್‌ ರೋನ್‌ನ ಹೈಲೈಟಿಂಗ್‌ ಪರ್ಪಲ್, ರೆಡ್‌ ಅಥವಾ ರೆಡ್‌ ಫ್ಯಾಷನ್‌ ಕಲರ್‌ನಿಂದ ಹೈಲೈಟಿಂಗ್‌ಆಗುವಂತೆ ಹೆಚ್ಚು ಸೂಟ್‌ ಆಗುತ್ತದೆ.

ಏನನ್ನು ಗಮನಿಸಬೇಕು?

ಕಲರಿಂಗ್‌ ಮಾಡಿಸಲು ಕಲರ್‌ ಒಳ್ಳೆಯ ಕ್ವಾಲಿಟಿಯದಾಗಿರಬೇಕು. ಜೊತೆಗೆ ಕಲರ್‌ ಮಾಡುವವರಿಗೆ ಕೂದಲಿನ ಟೆಕ್ಸ್ ಚರ್‌ಹಾಗೂ ಕಲರ್‌ ಬಗ್ಗೆ ಪೂರ್ಣ ಮಾಹಿತಿ ಇರಬೇಕು.

ಕೂದಲಿಗೆ ಕಲರ್‌ ಮಾಡಿಸಿದ ನಂತರ ಅದನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಅಗತ್ಯ. ಏಕೆಂದರೆ ಕಲರ್ಸ್‌ ಕೆಮಿಕಲ್ ಯುಕ್ತ ಆಗಿರುವುದರಿಂದ ಹೇರ್‌ ಎಕ್ಸ್ ಪರ್ಟ್‌ರಿಂದ ಪೂರ್ಣ ಮಾಹಿತಿ ಪಡೆಯಿರಿ. ಅದರಂತೆ ಅನುಸರಿಸಿ ಕೂದಲು ಅತ್ಯಧಿಕ ಶುಷ್ಕ ಹಾಗೂ ನಿರ್ಜೀವವಾಗುವುದನ್ನು ತಡೆಯಲು 15 ದಿನಗಳಿಗೊಮ್ಮೆ ಒಳ್ಳೆಯ ಕಾಸ್ಮೆಟಿಕ್‌ ಕ್ಲಿನಿಕ್‌ನಿಂದ ಹೇರ್‌ ಸ್ಪಾ ಕೂಡ ಮಾಡಿಸುತ್ತಿರಿ. ಹಲವು ದಿನಗಳವರೆಗೆ ಕಲರ್‌ ಸ್ಥಿರವಾಗಿರಲು ಕಲರ್‌ ಸೇವ್ ಶ್ಯಾಂಪು ಮತ್ತು ಕಂಡೀಶನರ್‌ ಉಪಯೋಗಿಸಿ. ಇದಲ್ಲದೆ, ಬಿಸಿಲಲ್ಲಿ ಹೋಗುವಾಗ ಕೂದಲನ್ನು ಸ್ಕಾರ್ಫ್‌ ಅಥವಾ ಛತ್ರಿಯಿಂದ ಮುಚ್ಚಿಕೊಳ್ಳಿ.

ಮೊದಲ ಬಾರಿ ಕಲರ್‌ ಮಾಡಿಸುತ್ತಿದ್ದರೆ ಅಲರ್ಜಿ ಪ್ಯಾಕ್‌ ಟೆಸ್ಟ್ ಅಗತ್ಯವಾಗಿ ಮಾಡಿಸಿ.

ಟೆಕ್ಸ್ ಚರ್‌ ಆಗಿ ತಕ್ಕಂತೆ ಹೇರ್‌ ಕೇರ್‌ ಕೂದಲಿನ ಪ್ರಾಕೃತಿಕ ಸೌಂದರ್ಯ ಉಳಿಸಿಕೊಳ್ಳಲು ನಿಮ್ಮ ಕೂದಲಿನ ಟೆಕ್ಸ್ ಚರ್ ಗುರುತಿಸಿ ಅದಕ್ಕೆ ತಕ್ಕಂತೆ ನೋಡಿಕೊಳ್ಳಿ.

ನಾರ್ಮಲ್ ಹೇರ್‌ ಒಂದು ವೇಳೆ ಬೇಸಿಗೆಯಲ್ಲಿ 2 ದಿನ ಮತ್ತು ಚಳಿಗಾಲದಲ್ಲಿ 3 ದಿನಗಳ ನಂತರ ಕೂದಲನ್ನು ತೊಳೆಯಬೇಕು ಎನಿಸಿದರೆ, ನಿಮ್ಮ ಕೂದಲು ನಾರ್ಮಲ್. ಅಂತಹ ಕೂದಲನ್ನು ಸಮಯಕ್ಕೆ ಅನುಸಾರ ವಾಶ್‌ ಮಾಡುತ್ತಿರಿ. ವಾರಕ್ಕೊಮ್ಮೆ ರಾತ್ರಿ ಎಳ್ಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ. ಬೆಳಗ್ಗೆ ಕೂದಲನ್ನು ಶ್ಯಾಂಪೂನಿಂದ ತೊಳೆಯಿರಿ.

ಆಯ್ಲಿ ಹೇರ್‌ ಒಂದು ವೇಳೆ ಕೂದಲು ತೊಳೆದ ನಂತರ ಬೇಸಿಗೆಯಲ್ಲಿ ಮರುದಿನವೇ ಮತ್ತು ಚಳಿಗಾಲದಲ್ಲಿ 2 ದಿನಗಳಲ್ಲಿಯೇ ಮತ್ತೆ ಅಂಟಂಟಾಗಿ ಅವನ್ನು ತೊಳೆಯುವ ಅಗತ್ಯ ಎನಿಸಿದರೆ ನಿಮ್ಮ ಕೂದಲು ಆಯಿಲಿ ಎಂದು ತಿಳಿದುಕೊಳ್ಳಿ. ಅಂತಹ ಕೂದಲಿಗೆ ಕ್ರೀಮೀ ಶ್ಯಾಂಪೂ ಬದಲು ಆಯಿಲ್ ‌ಫ್ರೀ ಶ್ಯಾಂಪೂ ಉಪಯೋಗಿಸಿ. 1 ಮಗ್‌ ನೀರಿನಲ್ಲಿ ಅರ್ಧ ನಿಂಬೆಹಣ್ಣಿನ ರಸ ಹಾಕಿ. ಈ ನೀರಿನಿಂದ ನಿಮ್ಮ ಕೂದಲಿನಲ್ಲಿ  ರಿನ್ಸ್ ಮಾಡಿ.

ಡ್ರೈ ಹೇರ್‌ ಒಂದು ವೇಳೆ ಶ್ಯಾಂಪೂ ಹಾಗೂ ಕಂಡೀಶನಿಂಗ್‌ ನಂತರ ನಿಮ್ಮ ಕೂದಲು ಶುಷ್ಕವಾಗಿ, ಒರಟಾಗಿ ಕಂಡುಬಂದರೆ ನಿಮ್ಮ ಕೂದಲು ಡ್ರೈ ಎಂದರ್ಥ. ಮನೆಯ ಕಂಡೀಶನರ್‌ ರೂಪದಲ್ಲಿ ನೆಲ್ಲಿಕಾಯಿ ಪುಡಿಯಲ್ಲಿ ಮೊಟ್ಟೆ, ಅರ್ಧ ಬಾಳೆಹಣ್ಣು, ನಿಂಬೆ ಮತ್ತು ಆಲಿವ್ ಆಯಿಲ್ ‌ನ ಕೆಲವು ಹನಿಗಳನ್ನು ಸೇರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಯಾವುದಾದರೂ ಕಂಡೀಶನರ್‌ ಯುಕ್ತ ಕ್ರೀಮೀ ಶ್ಯಾಂಪುನಿಂದ ತಲೆಯನ್ನು ಮೊಟ್ಟೆಯ ವಾಸನೆ ಹೋಗುವಂತೆ ತೊಳೆಯಿರಿ.

khul-kar-karain-Ds

ಹೇರ್ಸ್ಟೈಲಿಂಗ್ಮೂಲಕ ಚೇಂಜ್ತನ್ನಿ

ಲುಕ್‌ ಚೇಂಜ್‌ ಮಾಡುವ ಅತ್ಯಂತ ಸುಲಭ ವಿಧಾನ ಹೇರ್‌ ಸ್ಟೈಲ್‌ಚೇಂಜ್‌ ಮಾಡವುದಾಗಿದೆ. ಬದಲಾದ ಹೇರ್‌ ಸ್ಟೈಲ್ ನಿಮ್ಮ ಲುಕ್‌ನಲ್ಲಿ ಬದಲಾವಣೆ ತರುವ ಜೊತೆ ನಿಮ್ಮ ಪರ್ಸನಾಲಿಟಿಯನ್ನೂ ಅಟ್ರ್ಯಾಕ್ಟಿವ್ ‌ಮಾಡುತ್ತದೆ. ಹೇರ್‌ ಸ್ಟೈಲಿಂಗ್‌ನಲ್ಲಿ ಬದಲಾವಣೆ ಲೇಟೆಸ್ಟ್ ಹೇರ್‌ ಕಟ್‌ ಅಥವಾ ರೀಬೌಂಡಿಂಗ್‌ ಇಲ್ಲವೇ ಪರ್ಮಿಂಗ್‌ ಮೂಲಕ ಪರ್ಮನೆಂಟ್‌ ಸಲ್ಯೂಷನ್‌ ತರಬಹುದು.

ಲೇಟೆಸ್ಟ್ ಹೇರ್ಕಟ್ಡಿಸ್ಕನೆಕ್ಷನ್ಸ್ಟೈಲ್

‌ಈ ಸ್ಟೈಲ್ ಮಾಡುವಾಗ ಮೇಲಿನಿಂದ ಕೂದಲನ್ನು ಚಿಕ್ಕದಾಗಿ ಇಡಲಾಗುತ್ತದೆ. ಅದರಿಂದ ತಲೆಯ ಮೇಲೆ ಹೆಚ್ಚು ಬೌನ್ಸ್ ಕಂಡುಬರುತ್ತದೆ. ಕೆಳಗಿನ ಕೂದಲನ್ನು ಉದ್ದವಾಗಿ ಇಡಲಾಗುತ್ತದೆ. ಕೂದಲಿನ ಈ ಮಿಸ್‌ ಮ್ಯಾಚ್‌ನಿಂದಾಗಿ ಈ ಸ್ಟೈಲ್ ‌ನ್ನು ಡಿಸ್ ಕನೆಕ್ಷನ್‌ ಸ್ಟೈಲ್ ಎಂದು ಕರೆಯುತ್ತಾರೆ. ಈ ಹೇರ್‌ ಸ್ಟೈಲ್ ‌ಎಲ್ಲ ರೀತಿಯ ಫೇಸ್‌ಗೆ ಒಪ್ಪುತ್ತದೆ. ಜೊತೆಗೆ ನಿಮ್ಮ ಕೂದಲಿನ ಉದ್ದವನ್ನು ಸ್ಧಿರವಾಗಿಟ್ಟು ನಿಮಗೆ ಟ್ರೆಂಡಿ ಲುಕ್‌ ಕೂಡ ಕೊಡುತ್ತದೆ.

ರಿವರ್ಸ್‌ ವೆಜ್‌ ಈ ಹೇರ್‌ ಸ್ಟೈಲ್ ನಲ್ಲಿ ಹಿಂದಿನ ಕೂದಲು ಚಿಕ್ಕದಾಗಿ ಮತ್ತು ಮುಂದಿನ ಕೂದಲು ಉದ್ದವಾಗಿರುತ್ತದೆ. ಈ ಹೇರ್‌ಸ್ಟೈಲ್ ‌ನಿಮ್ಮದಾಗಿಸಿಕೊಂಡು ನೀವು ತೆಳುವಾಗಿ ಯಂಗ್‌ ಲುಕ್ಸ್ ಹೊಂದಬಹುದು.

3ಡಿ ಮ್ಯಾಜಿಕ್‌ ಕೂದಲನ್ನು ಉದ್ದವಾಗಿಟ್ಟು ಯಾವುದಾದರೂ ಸ್ಟೈಲ್ ‌ಕ್ಯಾರಿ ಮಾಡಲು ಇಚ್ಛಿಸಿದರೆ 3ಡಿ ಮ್ಯಾಜಿಕ್‌ ಹೇರ್‌ ಕಟ್‌ಗೆ ಆದ್ಯತೆ ನೀಡಬಹುದು. ಇದರಲ್ಲಿ ಮೇಲಿನ ಕೂದಲು ಚಿಕ್ಕದಾಗಿ, ಕೆಳಗಿನ ಕೂದಲು ಉದ್ದವಾಗಿ ಮತ್ತು ಮಧ್ಯದ ಕೂದಲನ್ನು ಸಾಮಾನ್ಯ ಲೆಂಗ್ತ್ ನಲ್ಲಿ  ಕತ್ತರಿಸಲಾಗಿರುತ್ತದೆ. ಈ ಕಟ್‌ನಿಂದ ಕೂದಲು ಉದ್ದವಾಗಿ ಒತ್ತಾಗಿ ಕಂಡುಬರುತ್ತದೆ. ಈ ಸ್ಟೈಲ್ ‌ಸಾಕಷ್ಟು ಸ್ಮಾರ್ಟ್‌ ಲುಕ್‌ ಕೊಡುತ್ತದೆ. ಈ ಹೇರ್‌ ಕಟ್‌ನ ಸೌಂದರ್ಯ ಕೂದಲಿನ ತುದಿಗಳು ಕಲರ್‌ ಆಗಿರುವಾಗ ಇನ್ನೂ ಹೆಚ್ಚು ಕಂಡುಬರುತ್ತದೆ. 3ಡಿ ಮ್ಯಾಜಿಕ್‌ ಕಟ್‌ನ ಚಮತ್ಕಾರ ಮಾಡರ್ನ್‌ ಮತ್ತು ಟ್ರೆಡಿಶನಲ್ ಔಟ್‌ಫಿಟ್‌ ಎರಡರೊಂದಿಗೆ ಬಹಳ ಚೆನ್ನಾಗಿ ಮ್ಯಾಚ್‌ ಆಗುತ್ತದೆ.

ಪಿ. ಮೋನಿಶಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ