ಯಾವುದೇ ಮಹಿಳೆಯ ಅರ್ಧ ಸೌಂದರ್ಯ ಮೇಕಪ್‌ನಿಂದ ಹಾಗೂ ಇನ್ನರ್ಧ ಸೌಂದರ್ಯ ಪರ್ಫೆಕ್ಟ್ ಹೇರ್‌ ಸ್ಟೈಲ್‌ನಿಂದ ಪೂರ್ತಿಯಾಗುತ್ತದೆ. ಮೇಕಪ್‌ ಎಷ್ಟೇ ಚೆನ್ನಾಗಿದ್ದರೂ ಹೇರ್‌ ಸ್ಟೈಲ್ ಸರಿಯಾಗಿಲ್ಲದಿದ್ದರೆ ಮೇಕಪ್‌ ಡಲ್ ಆಗಿ ಕಾಣುತ್ತದೆ. ಆದರೆ ಕಡಿಮೆ ಸಮಯದಲ್ಲಿ ಯಾವುದೇ ಹೇರ್‌ಸ್ಟೈಲ್‌ನ್ನು ಉತ್ತಮಗೊಳಿಸುವುದು ಸಾಕಷ್ಟು ಕಷ್ಟವಾಗುತ್ತದೆ.

ಈ ಕಷ್ಟಗಳನ್ನು ಸುಲಭಗೊಳಿಸಲು ಮೇಕಪ್‌ ಆರ್ಟಿಸ್ಟ್ ಹಾಗೂ ಹೇರ್‌ ಡಿಸೈನರ್‌ ಉಷಾ ಕೂಲ್ ‌ಮೇಕಪ್‌ನೊಂದಿಗೆ ಡಿಫರೆಂಟ್ ಆದ ಕೂಲ್ ‌ಹೇರ್‌ ಸ್ಟೈಲ್ ‌ಬಗ್ಗೆ ತಿಳಿಸುತ್ತಿದ್ದಾರೆ.

ಕೂಲ್ ಮೇಕಪ್‌ : ಮೊದಲು ಮುಖವನ್ನು ಚೆನ್ನಾಗಿ ಕ್ಲೀನ್‌ ಮಾಡಿ. ನಂತರ ಪ್ರೈಮರ್‌ ಹಚ್ಚಿ ಈಗ ಬೇಸ್‌ ಹಚ್ಚುವ ಮೊದಲು ಮುಖದ ವೈಟ್‌ ಝೋನ್‌ ಏರಿಯಾವನ್ನು ನೋಡಿ. ನಂತರ ಬೇಸ್‌ ಸ್ಕಿನ್‌ಗೆ ಅನುಸಾರವಾಗಿಯೇ ಹಚ್ಚಿ. ಅದಕ್ಕಾಗಿ ಮೊದಲು ವೈಟ್‌ ಝೋನ್‌ ಏರಿಯಾ ಅಂದರೆ ಫೋರ್‌ ಹೆಡ್‌, ನೋಸ್‌ನ ಸೆಂಟರ್‌ ಪಾರ್ಟ್‌ ಚೀಕ್ಸ್ ನ ಬೋನ್‌ ಏರಿಯಾ ಮತ್ತು ಟಿನ್‌ ನ ಸೈಡ್‌ ಏರಿಯಾದಲ್ಲಿ ಪ್ಯಾನ್‌ ಸ್ಟಿಕ್‌ ಹಚ್ಚಿ. ನಂತರ ಇದನ್ನು ಬ್ರಶ್‌ ಅಥವಾ ಸ್ಪಾಂಜ್‌ನಿಂದ ಚೆನ್ನಾಗಿ ಮರ್ಜ್‌ ಮಾಡಿ. ಆಮೇಲೆ ಬ್ರಶ್‌ನಿಂದ ಪ್ಯಾನ್‌ ಕೇಕ್‌ ಹಚ್ಚಿ ಮತ್ತು ಕ್ರೈಲಾನ್‌ನ 626 ಬಿ ಅಥವಾ ಸಿ ಮಿಕ್ಸ್ ಮಾಡಿ ಅದನ್ನು ಸ್ಪಾಂಜ್‌ನಿಂದ ಬೇಸ್‌ನೊಂದಿಗೆ ಮರ್ಜ್‌ ಮಾಡಿ. ನಂತರ ಮುಖದ ಕಾಂಟೂರಿಂಗ್‌ ಮಾಡಿ ಅಂದರೆ ನೋಸ್‌ನ ಎರಡೂ ಸೈಡ್‌ನಲ್ಲಿ ಡಾರ್ಕ್‌ ಶೇಡ್‌ ಹಚ್ಚಿ ನೋಸ್‌ನ್ನು ಶಾರ್ಪ್‌ ಮಾಡಿ ಮುಖವನ್ನು ಉಬ್ಬಿಸಲು ಚೀಕ್‌ ಬೋನ್‌ ಏರಿಯಾ ಮತ್ತು ಜಾ ಲೈನ್‌ ಏರಿಯಾದ ಕಟಿಂಗ್‌ ಮಾಡಿ. ನಂತರ ಟ್ರ್ಯಾನ್ಸ್ ಲೂಶನ್‌ ಪೌಡರ್‌ ಹಚ್ಚಿ ಮತ್ತು ಪಾಲಿಶಿಂಗ್‌ ಬ್ರಶ್‌ನಿಂದ ಗುಂಡಗೆ ಸುತ್ತುತ್ತಾ ಮುಖಕ್ಕೆ ಪಾಲಿಶ್‌ ಮಾಡಿ. ಬೇಸ್‌ತಯಾರಾದ ನಂತರ ಐಸ್‌ ಮೇಕಪ್‌ ಮಾಡಿ.

eye-makeup

ಐಸ್ಮೇಕಪ್‌ : ಐಸ್‌ ಮೇಕಪ್‌ಗಾಗಿ ರೆಪ್ಪೆಗಳ ಮೇಲೆ ಗೋಲ್ಡನ್‌ ಶ್ಯಾಡೋವನ್ನು ಒಳಗಿನತ್ತ ಹಚ್ಚಿ. ಔಟ್‌ ಸೈಡ್‌ನಲ್ಲಿ ಬ್ಲ್ಯಾಕ್ ಶ್ಯಾಡೋ ಹಚ್ಚಿ ಮತ್ತು ಮರ್ಜ್‌ ಮಾಡಿ. ನಂತರ ಐ ಲೈನರ್‌ ಹಚ್ಚಿ ರೆಪ್ಪೆಗಳ ಸೆಂಟರ್‌ನಲ್ಲಿ ಹೈಲೈಟರ್‌ ಹಚ್ಚಿ. ಕಣ್ಣುಗಳ ವಾಟರ್‌ ಲೈನ್‌ ಏರಿಯಾದ ಹೊರಗೆ ಹಗುರವಾಗಿ ಐ ಲೈನರ್‌ ಹಚ್ಚಿ. ವಾಟರ್‌ ಲೈನ್‌ ಏರಿಯಾದಲ್ಲಿ ಕಾಜಲ್ ಹಚ್ಚಿ. ನಂತರ ಐ ಲ್ಯಾಶಸ್‌ಮತ್ತು ಮಸ್ಕರಾ ಹಚ್ಚಿ.

ಲಿಪ್ಮೇಕಪ್‌ :  ಮೊದಲು ಲಿಪ್ಸ್ ಮೇಲೆ ಆರ್ದ್ರತೆಗಾಗಿ ಯಾವುದಾದರೂ ಮಾಯಿಶ್ಚರೈಸರ್‌ ಹಚ್ಚಿ. ನಂತರ ಲಿಪ್ಸ್ ಔಟ್‌ ಲೈನ್‌ಮಾಡಿ ಲಿಪ್‌ಸ್ಟಿಕ್‌ ಫಿಲ್ ‌ಅಪ್‌ ಮಾಡಿ. ಲಿಪ್‌ಸ್ಟಿಕ್‌ ಹೆಚ್ಚು ಡಾರ್ಕ್‌ ಆಗದಿರಲಿ. ಬಯಸಿದರೆ ಅದರ ಮೇಲೆ ಗ್ಲಾಸ್‌ ಹಚ್ಚಿ.

ಬ್ಲಶರ್‌ : ಚೀಕ್ಸ್ ಬೋನ್‌ ಮೇಲೆ ಬ್ರೌನ್‌ ಅಥವಾ ಪೀಚ್‌ ಕಲರ್‌ನ್ನೇ ಉಪಯೋಗಿಸಿ. ಅದನ್ನು ಬ್ರಶ್‌ನಿಂದ ಚೆನ್ನಾಗಿ ಮರ್ಜ್ ಮಾಡಿ.

hair-style

ಹೇರ್ಸ್ಟೈಲ್

ಪಫ್ಜಡೆ ಸ್ಟೈಲ್ : ಇಯರ್‌ ಟು ಇಯರ್‌ ಬೈತಲೆ ತೆಗೆದು ಹಿಂದೆ ಮಧ್ಯದಲ್ಲಿ ಎಲ್ಲ ಕೂದಲನ್ನು ಒಂದು ಪೋನಿ ಮಾಡಿ. ನಂತರ ಪೋನಿಯ ಮೇಲ ಒಂದು ಉದ್ದದ ಸ್ಟಫಿಂಗ್‌ ಸಿಕ್ಕಿಸಿ ಅದನ್ನು ಪಿನ್‌ನಿಂದ ಸೆಟ್‌ ಮಾಡಿ. ನಂತರ ಮುಂದಿನ ಕೂದಲಗಳ ಒಂದೊಂದು ಜುಟ್ಟು ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಅದನ್ನು ಸ್ಟಫಿಂಗ್‌ ಮೇಲಿನಿಂದ ಹಿಂದೆಗೆದುಕೊಂಡು ಪಿನ್‌ನಿಂದ ಸೆಟ್‌ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ