ಗಂಡ ಹೆಂಡತಿಯ ಸಂಬಂಧದಲ್ಲಿ ಸೆಕ್ಸ್ ನ ಮಹತ್ವವನ್ನು ಅಲ್ಲಗಳೆಯಲಾಗದು. ಎಲ್ಲಿಯವರೆಗೆ ಗಂಡ ಹೆಂಡತಿ ತನುಮನದಿಂದ ಸೆಕ್ಸ್ ನಲ್ಲಿ ಮಗ್ನರಾಗುವುದಿಲ್ಲವೇ ಅಲ್ಲಿಯವರೆಗೆ ಅವರಿಗೆ ಮಾನಸಿಕ ಅನುಭೂತಿ ಲಭಿಸುವುದಿಲ್ಲ. ಸಮಾಗಮದ ಯಶಸ್ಸು ಕೇವಲ ಒಬ್ಬರಿಂದ ಸಿಗುವಂಥದಲ್ಲ. ಅದನ್ನು ಯಶಸ್ವಿಗೊಳಿಸಲು ಇಬ್ಬರ ಸಹಕಾರ, ಪಾಲುದಾರಿಕೆ ಅಗತ್ಯ.
ಹೆಂಡತಿಗೆ ಏನು ಇಷ್ಟ?
ಸಮಾಗಮದ ಸಮಯದಲ್ಲಿ ಗಂಡನ ಉತ್ಸಾಹ ಕಡಿಮೆ ಆಗಲೇಬಾರದು ಎಂದು ಹೆಂಡತಿ ಬಯಸುತ್ತಾಳೆ. ಸಂಪೂರ್ಣವಾಗಿ ಪ್ರೀತಿಸುವ ಪತಿ ತನ್ನವನಾಗಬೇಕೆಂದು ಆಕೆ ಬಯಸುತ್ತಾಳೆ. ಸಮಾಗಮ ಕ್ರಿಯೆ ಒತ್ತಡ ರಹಿತವಾಗಿ ನಡೆದಾಗಲೇ ಲೈಂಗಿಕ ಕ್ರಿಯೆಯಲ್ಲಿ ಹೊಂದಾಣಿಕೆ ಸಾಧಿಸಲು ಸಾಧ್ಯ. ಹೆಂಡತಿ ಯಾವುದೇ ಸಂಕೋಚ ಇಲ್ಲದೆ ಪತಿಯ ಸಹಕಾರದಿಂದ ಉತ್ತುಂಗತೆ ತಲುಪಬೇಕೆನ್ನುತ್ತಾಳೆ. ಅವಳು ವೈವಾಹಿಕ ಜೀವನದಲ್ಲಿ ಕೆಲವು ದಿನ ಕಳೆದ ಬಳಿಕ ಅದರಲ್ಲಿ ಅನುಭವಿಯಾಗುತ್ತಾಳೆ. ಆಗ ಆಕೆಯ ಲೈಂಗಿಕ ಉತ್ತೇಜನದ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚುತ್ತದೆ. ಇಂತಹ ಪತ್ನಿ ಗಂಡನಿಂದ ಹೆಚ್ಚಿನ ಸಮಯದ ತನಕ ಸಹವಾಸ ಸುಖ ಬಯಸುತ್ತಾಳೆ. ಅವಳು ಈ ಸಂದರ್ಭದಲ್ಲಿ ಯಾವುದೇ ಆತುರವನ್ನು ಇಷ್ಟಪಡುವುದಿಲ್ಲ. ಅವಳು ಭಾವನಾತ್ಮಕವಾಗಿ ಪ್ರೀತಿಯಿಂದ, ತನುಮನದಿಂದ ಅದರಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾಳೆ.
ಗಂಡನ ಸಹಯೋಗ ಹೇಗಿರಬೇಕು?
ಗಂಡ ಪ್ರೇಮಿಯ ಹಾಗೆ ರೊಮಾನ್ಸ್ ಮಾಡಬೇಕು. ಅದು ಸಕ್ರಿಯವಾಗಿರಬೇಕು, ಎಂದು ಆಕೆ ಬಯಸುತ್ತಾಳೆ. ಏಕೆಂದರೆ ಅದು ಅವಳಿಗೆ ಹೃದಯಪೂರ್ವಕ ವಿಷಯ, ಭಾವನೆಗಳ ಆಟ, ಮನಸ್ಸಿನ ಮಿಲನವಾಗಿರುತ್ತದೆ.
ಸೆಕ್ಸ್ ನಲ್ಲಿ ಗಂಡ ಹೆಂಡತಿಯ ಸಕ್ರಿಯತೆ ಹಾಗೂ ತೀವ್ರತೆಯ ಜೊತೆ ಹೆಚ್ಚು ಅವಧಿಯತನಕ ಸಹಕಾರ ನೀಡಬೇಕು. ಹೆಂಡತಿ ಪ್ರೀತಿ, ಕರುಣೆ, ನಿವೇದನೆಯ ಮಾತುಗಳಿಗೆ ಬೇಗ ಕರಗಿಬಿಡುತ್ತಾಳೆ. ಪತಿಯ ಶೌರ್ಯ, ಪ್ರೀತಿ, ರೊಮ್ಯಾಂಟಿಕ್, ಚೆಲ್ಲಾಟ ಅಷ್ಟಿಷ್ಟು ಹಾಸ್ಯ ಮನೋಭಾವವನ್ನು ಆಕೆ ಹಾಸಿಗೆ ಮೇಲೆ ಇಷ್ಟಪಡುತ್ತಾಳೆ. ಕಾಮದ ವೇಗ ದೇಹದಲ್ಲಿ ಸೆಕ್ಸ್ ಸಂಬಂಧದ ಆನಂದವನ್ನು ದ್ವಿಗುಣಗೊಳಿಸುತ್ತದೆ. ತನ್ನ ಉತ್ತೇಜನದ ಪ್ರದರ್ಶನವನ್ನು ಆಕೆ ತನ್ನ ಸಮರ್ಪಣೆ, ವಿಭಿನ್ನ ಚೇಷ್ಟೆಗಳು ಹಾಗೂ ಸೂಕ್ಷ್ಮ ಸನ್ನೆಗಳ ಮೂಲಕ ಮಾಡುತ್ತಾಳೆ. ಇದುವೇ ಸಮಾಗಮದಲ್ಲಿ ಅವಳ ಸಹಕಾರ ಎಂದು ಕರೆಯಿಸಿಕೊಳ್ಳುತ್ತದೆ.
ಹೆಂಡತಿ ಸೆಕ್ಸ್ ಸಂಬಂಧದಲ್ಲಿ ಹೆಜ್ಜೆ ಹಾಕಿಸುವ ಜವಾಬ್ದಾರಿ ಗಂಡನದ್ದೇ ಆಗಿರುತ್ತದೆ. ಹೆಂಡತಿಯನ್ನು ಸಮಾಗಮ ಚಟುವಟಿಕೆಗಾಗಿ ಹೇಗೆ ಉತ್ತೇಜಿತಗೊಳಿಸಬೇಕು ಎನ್ನುವುದು ಗಂಡನಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವಳಿಗೆ ಖುಷಿ ಕೊಡುವ ಯಾವುದೇ ಸಂಗತಿಯನ್ನು ನಿರ್ಲಕ್ಷ್ಯ ಮಾಡಬಾರದು. ಇದರ ಹೊರತಾಗಿ ಸ್ತ್ರೀ ಕಾಮೋತ್ತೇಜಿತಳಾಗಲು ಹೆಚ್ಚು ಸಮಯ ತಗುಲುತ್ತದೆ ಎಂಬುದು ನಿಮ್ಮ ಗಮನದಲ್ಲಿರಬೇಕು. ಅವಳನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ಕೂಡ ನಿಮ್ಮದೇ ಜವಾಬ್ದಾರಿಯಾಗಿರುತ್ತದೆ.
ಪ್ರೌಢಾವಸ್ಥೆಯಲ್ಲಿ ಹೆಂಡತಿಯ ಅಪೇಕ್ಷೆ
ಪ್ರೌಢಾವಸ್ಥೆಯಲ್ಲಿ ಹೆಂಡತಿ ಗಂಡನಿಂದ ಹೆಚ್ಚೆಚ್ಚು ಸಹಕಾರ ಬಯಸುತ್ತಾಳೆ. ಏಕೆಂದರೆ ಸಾಧಾರಣ ಸಹವಾಸದ ಪ್ರಯತ್ನದಿಂದ ಆಕೆ ಉತ್ತೇಜಿತಳೂ ಆಗುವುದಿಲ್ಲ, ಉತ್ತುಂಗಕ್ಕೂ ತಲುಪುವುದಿಲ್ಲ. ಇಂತಹದರಲ್ಲಿ ಗಂಡನಾದವನು ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ರೀತಿಯಲ್ಲಿ ಹೆಂಡತಿಗೆ ಪ್ರೀತಿಯ ಕೋರಿಕೆ ಸಲ್ಲಿಸಬೇಕು. ಸೆಕ್ಸ್ ಕುರಿತಾದ ಪಿಸುಮಾತುಗಳನ್ನು ಹೇಳಬೇಕು. ಪುರುಷನೇ ಮುಂದೆ ಹೆಜ್ಜೆ ಹಾಕಿ ತನ್ನನ್ನು ಪಡೆಯಬೇಕೆಂದು ಪ್ರೌಢ ಮಹಿಳೆ ಬಯಸುತ್ತಾಳೆ.
ಸಮಾಗಮ ಕ್ರಿಯೆಯಲ್ಲಿ ನವವಿವಾಹಿತೆ ಶೀಘ್ರ ಸಂತೃಪ್ತಳಾಗುವುದಿಲ್ಲ. ಅವಳು ಗಂಡನಿಂದ ದೈಹಿಕ ಶಕ್ತಿ, ಉತ್ಸಾಹ ಹಾಗೂ ಕ್ರಿಯಾಶೀಲತೆಯನ್ನು ಇಷ್ಟಪಡುತ್ತಾಳೆ.
ಲೈಂಗಿಕ ತಜ್ಞ ಡಾ. ಎಸ್.ಕೆ. ಶರ್ಮ, ಸೆಕ್ಸ್ ಗೆ ಸಂಬಂಧಪಟ್ಟ ಸ್ತ್ರೀ ಸಾಮಾನ್ಯ ಇಚ್ಛೆಗಳ ಕುರಿತಂತೆ ಹೀಗೆ ಹೇಳುತ್ತಾರೆ, “ಸ್ತ್ರೀ ಸಮಾಗಮದ ಸಮಯದಲ್ಲಿ ಆರಂಭದಿಂದ ಕೊನೆಯತನಕ ಪತಿ ಯಾವ ಯಾವ ವಿಧಾನ ಅನುಸರಿಸುತ್ತಾನೆಂದು ಗಮನವಿಟ್ಟು ನೋಡುತ್ತಿರುತ್ತಾಳೆ. ಸಮಾಗಮದಲ್ಲಿ ಆಕೆಗೆ ಕೋಮಲತೆ ಇಷ್ಟವಾಗುವುದಿಲ್ಲ. ಲೈಂಗಿಕ ಸುಖ ಪಡೆದು ಆಕೆ ಶಾಂತಿ ಪಡೆದುಕೊಳ್ಳುತ್ತಾಳೆ. ಸಮಾಗಮವನ್ನು ಹೆಚ್ಚಿನ ಸಮಯದತನಕ ಮುಂದುವರಿಸಿದರೆ ಆಕೆ ಒಂದಕ್ಕಿಂತ ಹೆಚ್ಚು ಸಲ ಉತ್ತುಂಗ ಸುಖ ಪಡೆದುಕೊಳ್ಳುತ್ತಾಳೆ.”
ದಾಂಪತ್ಯ ಜೀವನದಲ್ಲಿ ಸಮಾಗಮ ಕ್ರಿಯೆಯನ್ನು ಯಶಸ್ವಿಗೊಳಿಸಲು ಗಂಡ ಹೆಂಡತಿ ಪರಸ್ಪರರಿಗೆ ಇಷ್ಟವಾಗುವ ರೀತಿಯಲ್ಲಿಯೇ ಕಾರ್ಯ ಪ್ರವೃತ್ತರಾಗಬೇಕು. ಆಗಲೇ ಜೀವನ ಆನಂದಮಯವಾಗುತ್ತದೆ, ದಾಂಪತ್ಯ ಜೀವನ ಸುಖಕರವಾಗುತ್ತದೆ.
– ಜಿ. ಆಶಾ