ಮಹಿಳೆಯರು ಹಾಗೂ ಪುರುಷರ ವರ್ತನೆಯಲ್ಲಿನ ವಿಭಿನ್ನತೆಗಳನ್ನು ಕಂಡುಕೊಳ್ಳಲು ಒಂದು ಸಂಶೋಧನೆ ಕೈಗೊಳ್ಳಲಾಯಿತು. ಈ ಸಂಶೋಧನೆಯ ಪರಿಣಾಮಗಳು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಅಷ್ಟೇ ಅಲ್ಲ ಕಚಗುಳಿ ಕೂಡ ಇಡುತ್ತವೆ.

ಮಹಿಳೆಯರು ಹಾಗೂ ಪುರುಷರ ದೈಹಿಕ ಮತ್ತು ಮಾನಸಿಕ ವೈಶಿಷ್ಟ್ಯತೆಗಳು ಮತ್ತು ವಿಭಿನ್ನತೆಗಳ ಕುರಿತಂತೆ ದೇಶ ವಿದೇಶಗಳಲ್ಲಿ ಹಲವು ಅಧ್ಯಯನಗಳು ನಡೆದಿವೆ. ಅಮೆರಿಕದ ವೈದ್ಯ ಡಾ. ಮೆರಿಯನ್‌ ಲಿಗೆಟೊ ಅವರ ಸಂಶೋಧನಾ ಗ್ರಂಥ `ಲೈ ಮೆನ್‌ ನೆವರ್‌ರಿಮೆಂಬರ್‌ ಅಂಡ್‌ ವುಮನ್‌ ನೆವರ್‌ ಫರ್ಗೆಟ್‌' ಅಂದರೆ `ಪುರುಷರು ಎಂದೂ ನೆನಪಿಟ್ಟುಕೊಳ್ಳುವುದಿಲ್ಲ ಮತ್ತು ಮಹಿಳೆಯರು ಎಂದೂ ಮರೆಯುವುದಿಲ್ಲ' ಏಕೆ ಎಂಬರ್ಥ ಕೊಡುವ ಪುಸ್ತಕ ವೈದ್ಯ ವಿಜ್ಞಾನದಲ್ಲಿ ಕ್ರಾಂತಿಯನ್ನೇ ಮಾಡಿದೆ.

ಲಿಗೆಟೊ ಅವರ ಈ ಸಂಶೋಧನೆಯಿಂದಾಗಿ ವೈದ್ಯ ವಿಜ್ಞಾನದ ಮುಖಚಹರೆಯೇ ಬದಲಾಗಿಬಿಟ್ಟಿದೆ. ಅದರಿಂದಾಗಿ ಹೊಸ ಶಾಖೆ `ಜೆಂಡರ್‌ ಸ್ಪೆಸಿಫಿಕಲ್ ಮೆಡಿಸಿನ್‌' ಅಥವಾ ಲಿಂಗ ವಿಶಿಷ್ಟ ಔಷಧಿ ಆರಂಭವಾಗಿಬಿಟ್ಟಿದೆ. ಇದರಿಂದಾಗಿ ಸ್ತ್ರೀ ಹಾಗೂ ಪುರುಷರ ವಿಭಿನ್ನತೆಗಳನುಸಾರ ಚಿಕಿತ್ಸೆಯ ಮಾನದಂಡ ಸಿದ್ಧಪಡಿಸುವಲ್ಲಿ ಯಶಸ್ಸು ದೊರಕಿದೆ. ಅದರಿಂದ ಇಡೀ ವಿಶ್ವಕ್ಕೆ ಲಾಭ ದೊರಕುತ್ತದೆ. 79 ವರ್ಷದ ಲಿಗೆಟೊ ಅವರು ಹೃದ್ರೋಗಿಗಳ ಬಗೆಗೆ ಅಧ್ಯಯನ ನಡೆಸಿದ ಬಳಿಕ ಮಹಿಳೆ ಹಾಗೂ ಪುರುಷರು ಮೆದುಳಿನ ಅಧ್ಯಯನ ಆಧರಿಸಿದ `ಫೀಮೇಲ್ ಹಾರ್ಟ್‌ ಅಂಡ್‌ ಈವ್ಸ್' ಪುಸ್ತಕ ಸಾಕಷ್ಟು ಮಾರಾಟವಾಯಿತು. ಈ ಪುಸ್ತಕಗಳಲ್ಲಿ ಲಿಗೆಟೊ ಅವರು ಸ್ತ್ರೀ-ಪುರುಷರ ಸಾಮರ್ಥ್ಯ ಮತ್ತು ವಿಭಿನ್ನತೆಗಳ ಕುರಿತಂತೆ ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಕ್ಷೇಪವಾಗಿ ಕೊಡಲಾಗಿದೆ.

ಸ್ಮರಣೆ ಸಾಮಾನ್ಯವಾಗಿ ಮಹಿಳೆಯರ ಸ್ಮರಣ ಶಕ್ತಿ ಪುರುಷರಿಗಿಂತ ಅತ್ಯುತ್ತಮವಾದುದಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಮೆದುಳಿನ ಕೆಲವು ಭಾಗಗಳಲ್ಲಿ ರಕ್ತ ಪರಿಚಲನೆಯ ಪ್ರಮಾಣ ಅಧಿಕವಾಗಿರುತ್ತದೆ. ಮೆದುಳಿನ ಯಾವ ಭಾಗದಲ್ಲಿ ಭಾಷೆಯ ನಿಯಂತ್ರಣವಾಗುತ್ತೊ ಅಲ್ಲಿ ಕೂಡ ಇದರ ಪ್ರಮಾಣ ಅಧಿಕವಾಗಿರುತ್ತದೆ. ಮಹಿಳೆಯರು ಬಾಲ್ಯದ ಸಂಗತಿಗಳನ್ನು ಅದರಲ್ಲೂ ವಿಶೇಷವಾಗಿ ಭಾವನಾತ್ಮಕ ಸಂಗತಿಗಳನ್ನು ಹೆಚ್ಚು ನೆನಪಲ್ಲಿಟ್ಟುಕೊಳ್ಳುತ್ತಾರೆ.

ಭಾಷಾ ಸಾಮರ್ಥ್ಯ ವರ್ತನೆ, ವ್ಯಾಕರಣ, ಲೇಖನ ಮತ್ತು ಮಾತನಾಡುವುದರಲ್ಲಿ ಮಹಿಳೆಯರ ಕೌಶಲ ಉತ್ಕೃಷ್ಟ ಮಟ್ಟದಲ್ಲಿರುತ್ತದೆ. ಮಹಿಳೆಯರ ಮೆದುಳಿನ ಭಾವ ನಿಯಂತ್ರಕ ಭಾಗದಲ್ಲಿ ನರ್ವ್ ‌ಟ್ರಾನ್ಸ್ ಮಿಟರ್‌ ಡೆಪಾಮೈನ್‌ನ ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದೆ. ಭಾಷಾ ದೃಷ್ಟಿಯಲ್ಲಿ ಸಕ್ರಿಯ ನರಕೋಶಗಳು ಅವರ ಮೆದುಳಿನಲ್ಲಿ ಅಧಿಕವಾಗಿರುವುದು ಕಂಡುಬಂದಿದೆ.

ಥ್ರೀಡಿ ವಸ್ತುಗಳ ಮೂವ್‌ಮೆಂಟ್‌ ಅಂದರೆ ಸಂಚಲನವನ್ನು ಅರಿತುಕೊಳ್ಳಲು ಪುರುಷರು ಸಮರ್ಥರಾಗಿರುತ್ತಾರೆ. ಒಂದು ವೇಳೆ ಪುರುಷರಿಗೆ ಗ್ಲಾಸ್‌ ತಿರುಚಿದಂತಿದ್ದರೆ ಅದರಲ್ಲಿರುವ ನೀರಿನ ಮಟ್ಟ ಹೇಗಿರುತ್ತದೆ ಎಂದು ಕೇಳಿದರೆ, ಅವರು ಭೂಮಿಯ ಸಮಾನಾಂತರಾಗಿಯೇ ಇರುತ್ತದೆ ಎಂದು ಸರಿಯಾಗೇ ಹೇಳುತ್ತಾರೆ. ಆದರೆ ಶೇ.50ರಷ್ಟು ಮಹಿಳೆಯರು ಅದಕ್ಕೆ ತದ್ವಿರುದ್ಧ ಉತ್ತರ ಕೊಡುತ್ತಾರೆ.

ಹಾವ ಭಾವ

ಪುರುಷರು ಮೌನದಿಂದಿರುವಾಗ ಅವರ ಹಾವಭಾವಗಳನ್ನು ಅರಿತುಕೊಳ್ಳುವುದು ಕಠಿಣವಾಗುತ್ತದೆ. ಅವರಿಗೆ ಸಾಮಾನ್ಯವಾಗಿ ಮಹಿಳೆಯರ ಹಾವಭಾವವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಮಾತ್ರ ಇದರಲ್ಲಿ ಸಮರ್ಥರಾಗಿರುತ್ತಾರೆ. ಪುರುಷರು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳದಿರುವಂತೆ ತಮ್ಮ ಮುಖಭಾವನೆಗಳನ್ನು ಹೊಂದಿರುತ್ತಾರೆ. ತಮಗೆ ಏನು ಬೇಕೊ ಅದನ್ನು ಬಾಯಿಬಿಟ್ಟು ಹೇಳುವುದೇ ಸೂಕ್ತ ಎಂದು ಭಾವಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ