ಉಷಾ ಮತ್ತು ಭಾಸ್ಕರ್‌ ನಡುವೆ ಇಂದು ಮತ್ತೊಮ್ಮೆ ಜಗಳ ತಾರಕಕ್ಕೇರಿತ್ತು. ಇದರಿಂದ ಕಂಗೆಟ್ಟು ಭಯಗೊಂಡಿದ್ದ ಇಬ್ಬರು ಮಕ್ಕಳು ತಾವೇ ಹೇಗೋ ತಯಾರಾಗಿ ಶಾಲೆಗೆ ಹೊರಟುಬಿಟ್ಟರು. ಆಫೀಸಿನ ಸಮಯ ಸಮೀಪಿಸಿದಂತೆ ಭಾಸ್ಕರ್‌ ಕಾಫಿ ತಿಂಡಿಗೆ ಕಾಯದೇ ಸಿಡಿಗುಟ್ಟುತ್ತವೇ ಹೊರಟುಬಿಟ್ಟ. ಉಷಾಳ ಮೂಡ್‌ ಅಂತೂ ಮೊದಲೇ ಆಫ್‌ ಆಗಿತ್ತು. ಅವಳೂ ಮನೆಗೆ ಬೀಗ ಹಾಕಿ ದೂರದಲ್ಲಿದ್ದ ಗೆಳತಿ ವನಿತಾಳನ್ನು ಕಾಣಲು ಹೊರಟುಬಿಟ್ಟಳು.

ಉಷಾ ಕಾಲಿಂಗ್‌ ಬೆಲ್ ‌ಅದುಮುತ್ತಿದ್ದಂತೆ ಅವಳ ಬಾಲ್ಯ ಗೆಳತಿ ವನಿತಾ ತಾನೇ ಬಾಗಿಲು ತೆರೆದು, ಇವಳನ್ನು ಆದರದಿಂದ ಬರಮಾಡಿಕೊಂಡಳು. ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದ ಉಷಾ ಏನೋ ಗಲಾಟೆ ಮಾಡಿಕೊಂಡು, ಅದನ್ನು ತನ್ನೊಂದಿಗೆ ಹಂಚಿಕೊಳ್ಳಲು ಬಯಸುತ್ತಾಳೆ ಎಂದು ವನಿತಾಳಿಗೆ ಅರ್ಥವಾಯಿತು. ಏನೂ ಉತ್ತರಿಸದೆ ಒಳಬಂದು ಮೌನವಾಗಿ ಕುಳಿತ ಉಷಾ ಅದೇ ನಿಜ ಎನಿಸಿದಳು.

ಹೀಗಾಗಿ ವನಿತಾ ಏನಾಯಿತು ಎಂದು ಕಾಫಿ ಕೊಡುತ್ತಾ ಕೂಲಂಕಷವಾಗಿ ವಿಚಾರಿಸಿದಳು, ``ಯಾಕೆ ಉಷಾ? ಇವತ್ತೇನಾದರೂ ನಿಮ್ಮ ರಾಯರ ಜೊತೆ ತಕರಾರಾ?'' ಅವಳ ಕಕ್ಕುಲತೆಯ ನುಡಿಗಳಿಗೆ ಕರಗಿದ ಉಷಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

``ಏನು ಹೇಳಲಿ ವನಿ.... ನಾನು ಭಾಸ್ಕರ್‌ನ ಎಷ್ಟು ಪ್ರೀತಿಸ್ತೀನಿ, ಅವರನ್ನು ಸದಾ ಸುಖವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೀನಿ ಎಂದು ನಿನಗೆ ಗೊತ್ತೇ ಇದೆ. ನನ್ನ ಸ್ವಭಾವ ಚೆನ್ನಾಗಿ ಗೊತ್ತಿದ್ದರೂ ಒಂದಲ್ಲ ಒಂದು ವಿಷಯಕ್ಕೆ ಜಗಳಕ್ಕೆ ಎಳೀತಾರೆ. ರಾತ್ರಿ 11 ಗಂಟೆವರೆಗೂ ಟಿ.ವಿ. ನೋಡಿ ಮಲಗಿಬಿಡ್ತಾರೆ, ಬೆಳಗ್ಗೆ 6ಕ್ಕೆ ಮೊದಲೇ ಮೂಡ್‌ ತರಿಸಿಕೊಂಡು ಸೆಕ್ಸ್ ಬೇಕು ಅಂತಾರೆ. ಬೆಳ್ಳಂಬೆಳಗ್ಗೆ ಅದರ ಬಗ್ಗೆ ತಲೆ ಕೆಡಿಸಿಕೊಂಡರೆ, ಮನೆ ತುಂಬಾ ಇರೋ ಕೆಲಸ ಮಾಡೋರು ಯಾರು?''

ಒಂದು ಕ್ಷಣದಲ್ಲಿ ವನಿತಾಳಿಗೆ ವಿಷಯವೆಲ್ಲ ಅರ್ಥವಾಯಿತು. ಅವಳು ಪ್ರೀತಿಯಿಂದ ಉಷಾಳ ಬೆನ್ನು ತಟ್ಟುತ್ತಾ, ``ಇಷ್ಟೇನಾ ವಿಷಯ? ಬೆಟ್ಟ ಅಗೆದು ಇಲಿ ಹಿಡಿದರು ಅಂದಹಾಗಾಯ್ತು. ನೀನು ಗಡಿಗೆ ಮುಖ ಮಾಡಿಕೊಂಡಿದ್ದು ನೋಡಿ ನಾನು ಏನಾಯ್ತೋ ಏನೋ ಅಂದುಕೊಂಡೆ, ಇಷ್ಟೇನಾ? ಇಷ್ಟು ದಿನಗಳ ದಾಂಪತ್ಯದ ನಂತರ ನೀನು ಬೋರ್ಡ್‌ ಆಗಿದ್ದಿ.

``ಅರೆ, ಬೆಳಗಿನ ಹೊತ್ತು ಸೆಕ್ಸ್ ಸವಿದರೆ ಅದರಲ್ಲಿ ತಪ್ಪೇನಿಲ್ಲ, ಸಂಕೋಚ ಇಲ್ಲ. ಪಾಪಪ್ರಜ್ಞೆ ಕಾಡಬೇಕಾಗಿಯೂ ಇಲ್ಲ. ನಾನು ಅರುಣ್‌ ಇಬ್ಬರೂ ಎಷ್ಟೋ ಸಲ ಇದರ ಲಾಭ ಪಡೆದಿದ್ದೇವೆ. ಇವರು ಆಫೀಸ್‌ ಕೆಲಸ ಮುಗಿಸಿ ಬರುವಷ್ಟರಲ್ಲಿ ಎಷ್ಟೋ ಸಲ 9 ಅಥವಾ 10 ಗಂಟೆ ಆಗಿಬಿಡುತ್ತೆ. ಇಬ್ಬರೂ ಸುಸ್ತಾಗಿರ್ತೀವಿ, ಉಂಡು ಮಲಗಿದರೆ ಸಾಕು ಅಂತ ಆಗಿರುತ್ತೆ. ಬೆಳಗ್ಗೆ ಎದ್ದಾಗ ಫ್ರೆಶ್ ಆಗ್ತೀಲ್ಲ, ಫುಲ್ ಮೂಡ್‌..... ಏನಂತೀಯಾ....?'' ಎಂದು ಜೋರಾಗಿ ನಕ್ಕು ಉಷಾಳನ್ನು ತಬ್ಬಿದಾಗ, ಉಷಾಳಿಗಿದ್ದ ಸಂಕೋಚ ಎಷ್ಟೋ ಮರೆಯಾಯಿತು.

ಗಂಡಸರ ದೈಹಿಕ ಪ್ರವೃತ್ತಿ

ವನಿತಾ ಹೇಳಿದಂತೆ ಬೆಳಗಿನ ಹೊತ್ತು ಸೆಕ್ಸ್ ಅನುಭವಿಸುವುದು ಕೆಟ್ಟ ವಿಷಯವಲ್ಲ ಅಥವಾ ಅನುಚಿತ ಅಲ್ಲ. ಗಂಡಸರು ಹೆಚ್ಚಾಗಿ ಬೆಳಗಿನ ಹೊತ್ತು ಇದನ್ನು ಅಪೇಕ್ಷಿಸುತ್ತಾರೆ. ಆದರೆ ಉಷಾ ಹೇಳಿದ ಮಾತಿನಲ್ಲೂ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಹೆಂಗಸರಿಗೆ ರಾತ್ರಿ ಹೊತ್ತಿನ ಸಮಾಗಮ ಹೆಚ್ಚು ಪ್ರಿಯವೆನಿಸುತ್ತದೆ, ಅದಾದ ಮೇಲೆ ಅವರಿಗೆ ವಿಶ್ರಾಂತಿಗೆ ಹೆಚ್ಚಿನ ಸಮಯ ಸಿಗುತ್ತದೆ. ಬೆಳಗಾದರೆ ಮನೆಗೆಲಸದ ಧಾವಂತ ಅವರನ್ನು ಇರಿಸುಮುರಿಸಿಗೆ ಒಳಪಡಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ