ಅದೆಷ್ಟೋ ಮಹಿಳೆಯರು ತಮ್ಮ ಪತಿಗೆ ಮೊದಲಿನ ಉತ್ಸಾಹ ಉಳಿದಿಲ್ಲ. ಅವರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ ಎಂದು ಹೇಳುತ್ತಾರೆ.
ಎಷ್ಟೋ ಸಲ ಪುರುಷರು ಇಷ್ಟಪಟ್ಟರೂ ಕೂಡ ಸಮಾಗಮ ಕ್ರಿಯೆ ನಡೆಸಲಾಗುವುದಿಲ್ಲ. ಅವರ ಮನಸ್ಸಿನಲ್ಲಿ ಒಂದು ತೆರನಾದ ಭಯ ಆರಿಸಿಕೊಂಡಿರುತ್ತದೆ. ತಾನು ಹೆಂಡತಿಯೊಂದಿಗೆ ಯಶಸ್ವಿಯಾಗಿ ಸಂಬಂಧ ಹೊಂದಲು ಆಗುವುದಿಲ್ಲ ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಸಂಕೋಚ ಅವರಲ್ಲಿ ಮನೆ ಮಾಡಿರುತ್ತದೆ.
ಅವರ ಹಳೆಯ ಉತ್ಸಾಹವನ್ನು ಮರುಕಳಿವುಸುದರ ಮೂಲಕ ಲೈಂಗಿಕ ಜೀವನವನ್ನು ಇನ್ನಷ್ಟು ಆನಂದದಾಯಕಗೊಳಿಸಬಹುದು. ಅದಕ್ಕೆ ಈ ಉಪಾಯಗಳನ್ನು ಅನುಸರಿಸಿ.
ಕೆಲಸ ಖುಷಿಯನ್ನು ನುಂಗದಿರಲಿ
ನೀವು ಪತಿಗೆ ಒಂದು ವಿಷಯವನ್ನು ಪ್ರೀತಿಯಿಂದ ತಿಳಿಸಿ ಹೇಳುವುದು ಅತ್ಯಂತ ಮಹತ್ವದ್ದು. ``ನಿಮ್ಮ ಕೆರಿಯರ್ ಬಹಳ ಮಹತ್ವದ್ದು. ಅದಕ್ಕೆ ಪರಿಪೂರ್ಣ ಸಮಯ ಕೊಡುವುದು ಅತ್ಯವಶ್ಯ ನಿಜ. ಆದರೆ ಅದನ್ನು ಬೆಡ್ ರೂಮಿನಲ್ಲಿ ತರುವುದು ಬ್ಯಾಡ್ ಹ್ಯಾಬಿಟ್,'' ಎಂದು ಅವರಿಗೆ ಮನವರಿಕೆ ಮಾಡಿಕೊಡಿ.
ಆಫೀಸಿನ ಕೆಲಸ
ಕೆರಿಯರ್ ಲೈಫ್‌ಗೆ ಎಷ್ಟು ಮಹತ್ವದ್ದೊ, ಅಂತರಂಗದ ಕ್ಷಣಗಳು ಅಂದರೆ ಲೈಂಗಿಕ ಚಟುವಟಿಕೆ ಪರ್ಸನಲ್ ಲೈಫ್‌ಗೆ ಅಷ್ಟೇ ಮಹತ್ವದ್ದಾಗಿದೆ. ದುಡಿಯುವುದು ಜೀವನ ನಿರ್ವಹಣೆಗೆ. ಹಣ ಗಳಿಸಲೆಂದು ನಾವು ನೌಕರಿ ಮಾಡುತ್ತೇವೆ. ಹಣ ಗಳಿಸುವುದು ಸುಖದಿಂದ ಇರಲೆಂದು. ಅದು ನಮ್ಮನ್ನು ಸುಖದಿಂದ ವಂಚಿತರನ್ನಾಗಿ ಮಾಡುತ್ತಿದ್ದರೆ ಆ ಹಣದಿಂದ ಏನು ಲಾಭ?
ಮೆದುಳು ಬೇರೆ ಜಂಜಾಟಗಳಿಂದ ಮುಕ್ತವಾದಾಗಲೇ ಬೇರೆ ಅಂಗಗಳಿಗೆ ಸಮರ್ಪಕವಾಗಿ ಕೆಲಸ ಮಾಡುವ ಸೂಕ್ತ ನಿರ್ದೇಶನ ದೊರೆಯುತ್ತದೆ. ಹೀಗಾಗಿ ಆಫೀಸಿನ ಕೆಲಸವನ್ನು ಆಫೀಸಿನಲ್ಲಿಯೇ ಬಿಟ್ಟು ಬನ್ನಿ. ಏಕೆಂದರೆ ಮನೆ ಕೆಲಸವನ್ನು ಏಕಾಗ್ರತೆಯಿಂದ ನೆಮ್ಮದಿಯಿಂದ ಕಳೆಯಲು ಸಾಧ್ಯವಾಗುತ್ತದೆ.
ಮತ್ತೆ ಮತ್ತೆ ಪ್ರಯತ್ನಿಸಿ
ಯಶಸ್ಸಿನ ಫಾರ್ಮುಲಾ ಕೆರಿಯರ್ ಲೈಫ್ ಅಥವಾ ಅಕಾಡೆಮಿಕ್ ಲೈಫ್‌ನಲ್ಲಿ ಕೆಲಸ ಮಾಡುತ್ತದೆ. ಅದು ಇಲ್ಲೂ ಕೂಡ ಅನ್ವಯಿಸುತ್ತದೆ. ನಿಮ್ಮ ಪತಿ ಒಂದು ಸಲದ ಸಮಾಗಮದಲ್ಲಿ ವಿಫಲರಾದರೆ, ಹಾಗೆಯೇ ಮತ್ತೆ ಮತ್ತೆ ಆಗಬಹುದು. ಅಂದುಕೊಳ್ಳುವುದು ತಪ್ಪು. `ಟ್ರೈ ಒನ್ ಮೋರ್ ಟೈಮ್' ಎನ್ನುವ ಫಾರ್ಮುಲಾ ಇಲ್ಲೂ ಕೆಲಸ ಮಾಡುತ್ತದೆ. ಅವರೊಂದಿಗೆ ಮನಬಿಚ್ಚಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ದೂರ ಸರಿಸಬೇಡಿ
ಪತಿ ನಿಮ್ಮನ್ನು ಆಲಂಗಿಸಿಕೊಳ್ಳಲು, ಚುಂಬಿಸಲು ಬಂದಾಗ ಅವರನ್ನು ತಿರಸ್ಕಾರ ಭಾವದಿಂದ ದೂರ ಸರಿಸದೆ ಅವರ ಆಸೆಯನ್ನು ಪುರಸ್ಕರಿಸಿ. ನೀವು ಅವರನ್ನು ದೂರ ಇಡುತ್ತಾ ಹೋದರೆ ಅವರ ಉತ್ಸಾಹ ತಣ್ಣಗಾಗುತ್ತದೆ. ಅವರು ಚೆನ್ನಾಗಿ ಪರ್ಫಾಮ್ ಮಾಡಲು ಆಗುವುದಿಲ್ಲ. ನೀವು ಕೂಡ ಅವರನ್ನು ಹುರಿದುಂಬಿಸಿ. ಪ್ರತಿಯಾಗಿ ಆಲಂಗಿಸಿಕೊಳ್ಳಿ, ಚುಂಬಿಸಿ. ಇದರಿಂದ ಅವರ ಉತ್ಸಾಹ ಹೆಚ್ಚಾಗಿ ಸೆಕ್ಸ್ ಭಾವನೆ ಜಾಗೃತಗೊಳ್ಳುತ್ತದೆ.
ಹೆಚ್ಚಿನ ಪ್ರಕರಣಗಳಲ್ಲಿ ಇಂತಹ ಸ್ಥಿತಿಯಲ್ಲಿ ನಿಮಿರು ದೌರ್ಬಲ್ಯದ ಸಮಸ್ಯೆಯೂ ನಿವಾರಣೆಯಾಗುತ್ತದೆ. ನಿಮ್ಮ ಸ್ವರ್ಶ ಮತ್ತು ಚುಂಬನ ಅವರಿಗೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ.
ವ್ಯಾಯಾಮದಿಂದ ಉಪಯುಕ್ತ
ಅವರು ದೈಹಿಕವಾಗಿ ಕ್ರಿಯಾಶೀಲರಾಗಿರಲು ವ್ಯಾಯಾಮ ಮಾಡಲು ಪ್ರೇರೇಪಿಸಿ. ಸಾಧ್ಯವಾದರೆ ನೀವು ಅವರಿಗೆ ಜೊತೆ ಕೊಡಿ. ಅವರು ಆ ಬಗ್ಗೆ ನಿರಾಕರಣೆ ಅಥವಾ ವ್ಯಾಯಾಮ ನಡಿಗೆ ನಾಳೆ ಮಾಡಿದರಾಯಿತು ಬಿಡು ಎಂದು ಹೇಳುತ್ತಿದ್ದರೆ, ಅದರಿಂದ ಏನೇನು ದುಷ್ಪರಿಣಾಮಗಳಾಗಬಹುದು ಎಂದು ತಿಳಿಹೇಳಿ.