ಈ ವರ್ಷದ ಹೇಮಂತ ಶಿಶಿರ ಋತು ಇಂಡಿಯಾ ಫ್ಯಾಷನ್ ವೀಕ್‌ನ 25ನೇ ಆವೃತ್ತಿಗೆ ದ್ಯೋತಕವಾಗಲಿದೆ. ಈ ಇವೆಂಟ್‌ನವದೆಹಲಿಯಲ್ಲಿ ಖ್ಯಾತ ಡಿಸೈನರ್ಸ್, ಮಾಡೆಲ್, ಸ್ಟಾರ್‌ಗಳನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸುತ್ತದೆ. ಕಳೆದ 2006-2014ರವರೆಗೂ ವೀಲ್ಸ್ ಲೈಫ್ ಸ್ಟೈಲ್ ಇದರ ಅಫಿಶಿಯಲ್ ಸ್ಪಾನ್ಸರ್ ಆಗಿತ್ತು, ಈ ವರ್ಷ ಅಮೆರನ್.ಇನ್ ಅದರ ಸ್ಥಾನದಲ್ಲಿದೆ.
ಭಾರತೀಯ ಫ್ಯಾಷನ್ ಡಿಸೈನರ್‌ಗಳಲ್ಲಿ ಖ್ಯಾತನಾಮರು ದೆಹಲಿಯಲ್ಲಿ ಒಟ್ಟುಗೂಡಿ ತಮ್ಮ ಉತ್ಕೃಷ್ಟ `ಹಾಟ್ ಕೌಚರ್’ ಪ್ರದರ್ಶಿಸುವ ಸುಸಂದರ್ಭವಿದು. ಹೀಗಾಗಿ ಇಂಡಿಯನ್ ಫ್ಯಾಷನ್ ವೀಕ್ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಫ್ಯಾಷನ್ ಉದ್ಯಮಕ್ಕೆ ಅತ್ಯುತ್ತಮ ವೇದಿಕೆ ಒದಗಿಸುತ್ತಿದೆ, ಹೀಗಾಗಿ ಇದರ ಆಯೋಜಕರು ಇದನ್ನು ಅರ್ಧ ವಾರ್ಷಿಕ ಇವೆಂಟ್ ಆಗಿಸಲು ಯೋಚಿಸುತ್ತಿದ್ದಾರೆ.
ಡಿಸೈನರ್ ಅಂಜು ಮೋದಿ ತಮ್ಮ ಹೊಸ ವಸ್ತ್ರ ಸಂಗ್ರಹಕ್ಕೆ `ಹೌ ಟು ರೈಟ್ ಎ ಫೇರಿ ಟೇಲ್’ ಎಂದು ಹೆಸರಿಸಿ ಅವರ್ಣನೀಯ ವಿನ್ಯಾಸಗಳನ್ನು ಪ್ರದರ್ಶಿಸಿದರು. ಈಕೆ ತಮ್ಮ ಮಾಡೆಲ್ ಗಳಿಗೆ ಅರಮನೆಯಂಥ ಕಿರೀಟ, ರೆಕ್ಕೆಗಳಿರುವ ಈವ್ನಿಂಗ್ ಗೌನ್, ಬಗೆಬಗೆಯ ಬೆಲ್ಟ್, ಗ್ರೀಕ್ ದೇವತೆ ಹರ್ಮೆಸ್‌ನಂಥ ಸ್ನೀಕರ್ಸ್, ಗಾರ್ಮೆಂಟ್ಸ್ ಮೇಲೆ ಡಿಸ್ನಿಲ್ಯಾಂಡ್‌ನಂಥ ಕಸೂತಿ ಇತ್ಯಾದಿ ಒದಗಿಸಿ ಪ್ರೇಕ್ಷಕರ ಕಣ್ಮನ ತಣಿಸಿದರು. ಇಡೀ ರಾಂಪ್‌ನ್ನು ದೇದೀಪ್ಯಮಾನವಾಗಿ ಬೆಳಗುತ್ತಿರಲು ಮಾಡೆಲ್ಸ್ ಎಲ್ಲಾ ಬಗೆಯ ಥೀಮ್ ಗಳನ್ನೂ ಜೀವಂತಗೊಳಿಸಿದರು.
ಅವರು ಎಸಿಮೆಟ್ರಿಕ್ ಕಲೀದಾರ್‌ಗಳು, ಕೋಟ್, ಬೆಲ್ ಸ್ಲೀವ್ಡ್ ಜ್ಯಾಕೆಟ್ಸ್, ಬ್ಯೂಟಿಫುಲ್ ರಿಬ್ಬನ್‌ವುಳ್ಳ ಕೇಪ್ಸ್, ಫ್ಲೈಯಿಂಗ್ ಬರ್ಡ್ಸ್ ವುಳ್ಳ ಓವರ್ ಕೋಟ್ ಇತ್ಯಾದಿ ವಿಭಿನ್ನ ವಿನ್ಯಾಸಗಳನ್ನು ಪ್ರದರ್ಶಿಸಿದರು. ಜೊತೆಗೆ ಲಹಂಗಾ ಸ್ಕರ್ಟ್, ಸ್ಟ್ರೇಟ್ ಪ್ಯಾಂಟ್ಸ್, ಚೂಡೀದಾರ್‌ಗಳಂಥ ಸಾಧಾರಣ ಉಡುಗೆಗಳೂ ವಿಶಿಷ್ಟವೆನಿಸಿದ. ಚಿತ್ರವಿಚಿತ್ರ ಹೂಬಳ್ಳಿ, ಛತ್ರಿ, ಸ್ನೋ ಫ್ಲೇಕ್ಸ್, ಹಾಟ್ ಏರ್ ಬೆಲೂನ್, ಸಿನಿಕ್ ಶಿಪ್‌ಗಳಂಥ ಕಸೂತಿ ವಿನ್ಯಾಸ ಎಲ್ಲರ ಮನಗೆದ್ದ. ಪುರುಷ ಮಾಡೆಲ್ ಗಳಿಗೆ ಮ್ಯಾಚಿಂಗ್ ಲಾಂಗ್ ಕೋಟ್ ಪ್ಯಾಂಟುಗಳು, ಫಾರ್ಮ್‌ವೇರ್‌ನಲ್ಲಿ ಸಾಂಪ್ರದಾಯಿಕ ಅಚಕನ್‌ಗಳಿಗೆ ಪರ್ಯಾಯ ಎನಿಸಿದ್ದವು.
ಇಡೀ ವೇದಿಕೆಯ ಸೆಟ್ ರಾಜಸ್ಥಾನದ ಕೋಟೆಯಂತಿದ್ದು, ಅದರಲ್ಲಿ ತೊಗಲು ಬೊಂಬೆಗಳ ಅಲಂಕಾರ ಇತ್ತು. ಡಿಸೈನರ್‌ಗಳಾದ ಮನೀಶ್ ಮಲ್ಹೋತ್ರಾ, ಲೆಂಡೆಲ್ ರಾಡ್ರಿಕ್ಸ್, ಸುನೀಲ್ ವರ್ಮ, ತರುಣ್ ತಹ್ಲಾನಿ, ರಾಘವೇಂದ್ರ ರಾಠೋರ್ ಮುಂತಾದವರು ತಮ್ಮ ಉತ್ಕೃಷ್ಟ ವಿನ್ಯಾಸಗಳನ್ನು ಪಿಂಕ್, ರೆಡ್, ಆರೆಂಜ್ ಬಣ್ಣಗಳಲ್ಲಿ ಪ್ರಸ್ತುತಪಡಿಸಿದರು.
ಪ್ರದರ್ಶನದ ಆರಂಭ
ಪ್ರಸಿದ್ಧ ಡಿಸೈನರ್ ರಾಜೇಶ್ ಪ್ರತಾಪ್ ಸಿಂಗ್ ಈ ಪ್ರದರ್ಶನವನ್ನು ಒಂದು ಬುಧವಾರದ ಸಂಜೆ ಉದ್ಘಾಟಿಸಿದರು. ಅದರಲ್ಲಿ ಅವರು ಒಂದು ಆಸ್ಪತ್ರೆಯ ವಾರ್ಡ್ ದೃಶ್ಯ ಪ್ರಸ್ತುತಪಡಿಸಿದರು. ಮೇಲ್ ಫೀಮೇಲ್ ನರ್ಸುಗಳು, ಅಚ್ಚ ಬಿಳುಪಿನ ಬೆಡ್ ಶೀಟ್‌ಗಳೊಂದಿಗೆ ಅವರ ಮಾನೋಕ್ರೊಮ್ಯಾಟಿಕ್ ಸಂಗ್ರಹ ಮೊದಲಿಟ್ಟಿತು. ಇಡೀ ವೇದಿಕೆ ಇದ್ದಕ್ಕಿದ್ದಂತೆ ಆಸ್ಪತ್ರೆ ವಾತಾವರಣ ತಾಳಿತು. ಮೆಡಿಕಲ್ ಬೆಡ್ಸ್, ಗ್ಲೂಕೋಸ್ ಡ್ರಿಪ್ ಬ್ಯಾಗ್ಸ್, ಫೇರಿ ವೈಟ್ಸ್ ಜೊತೆಗೂಡಿದ್ದವು. ಹಿನ್ನೆಲೆ ಸಂಗೀತ ಅಷ್ಟೇ ಮಾದಕವಾಗಿತ್ತು. ಕರ್ಷ್ ಕಾಳೆ ಮತ್ತು ಅಂಕುರ್ ತಿವಾರಿ ಒದಗಿಸಿದ ಮೋಹಕ ಸಂಗೀತ ಕ್ಯಾಟ್ ವಾಕ್ ಮಾಡುವವರಿಗೆ ಒಳ್ಳೆ ಮೂಡ್ ನೀಡಿತ್ತು.
ಮಾಡೆಲ್‌ಗಳು ಕ್ಷಣಕ್ಕೊಮ್ಮೆ ಉಡುಗೆ ಬದಲಿಸುತ್ತಾ ಮಿಂಚಿನಂತೆ ಮೆರೆದರು. ರಾಜೇಶ್‌ರ ವಿನ್ಯಾಸದಲ್ಲಿ ಶೀತಲ್ ಡ್ರೆಸ್, ಪ್ಲೀಟೆಡ್‌ಸ್ಕರ್ಟ್, ಬಿಲ್ಟ್ ಅಪ್ ನೆಕ್ ಲೈನ್ಸ್, ಬೋಟ್ ನೆಕ್, ಲೆದರ್ ನಲ್ಲಿ ಕಿಮೋನೋ, ಚೆಕ್ಸ್ ಸ್ಚ್ರೈಪ್ಸ್ ವುಳ್ಳ ಇಕತ್ಸ್ ಎಲ್ಲಕ್ಕೂ ಮುಂದಿತ್ತು. ಥೀಂ ಗಮನದಲ್ಲಿರಿಸಿಕೊಂಡು ಕೆಲವು ಮಾಡೆಲ್ಸ್ ಕೆಂಪು ಫಸ್ಟ್ ಏಡ್ ಕಿಟ್‌ನೊಂದಿಗೆ ನಡೆದುಬಂದರು. ತಲೆಗೆ ಬ್ಯಾಂಡೇಜ್ ಸುತ್ತಿಕೊಂಡು ಕೆಲವರು ಡ್ಯಾನ್ಸಿಂಗ್ ಶೂಸ್‌ನಲ್ಲಿ ಮಿಂಚಿದರು.
ಮೊದಲ ಶೋ ಮುಗಿದ ನಂತರ, ಮುಂದಿನ ಸುತ್ತನ್ನು ನಿಕಾಶಾ ಮತ್ತು ಪಾಯಲ್ ಸಿಂಘಾಲ್ ನಿರ್ವಹಿಸಿದರು. ನಿಕಾಶಾರ ಶೋನಲ್ಲಿ ಗ್ಲೋ ಇಂಡಿಯನ್ ಟಚ್ ಇದ್ದು ಜರ್ದೋಜಿಯ ಫ್ಯಾಬ್ರಿಕ್ಸ್ ಗೆ ಮಹತ್ವ ಕೊಟ್ಟಿದ್ದರು. ಹಳದಿ ಮತ್ತು ಕೆಂಪು ಇಲ್ಲಿ ಪ್ರಧಾನವಾಗಿತ್ತು. ಪಾಯಲ್ ಒಂದು ಫ್ರೆಂಚ್ ಪ್ರೇಮಗೀತೆಯೊಂದಿಗೆ ತಮ್ಮ ಬ್ರೈಟ್ ರೆಡ್ ಶೇಡ್ಸ್ ಪ್ರದರ್ಶಿಸಿದರು. ಪ್ಯಾರಿಸ್‌ನ ಡಿಸೈನರ್ ಲೋಲೋ ಡೀಲಾ ಫಾಸ್ ಹಾಗೂ ವೀಸ್ ಸೇಂಟ್ ವಾರೆಂಟ್ ಬ್ರ್ಯಾಂಡ್ ಜೊತೆ ಪ್ರೇರಣೆ ಪಡೆದಿದ್ದರು. ಫ್ರೆಂಚ್‌ರಿವೇರಾದ ದಟ್ಟ ಗ್ಲಾಮರಸ್ ವಾತಾವರಣ ಅಲ್ಲಿ ಒಡಮೂಡಿತ್ತು.
ಮುದ ನೀಡಿದ ಪ್ರದರ್ಶನ ಪಾಯಲ್ ರ ಪ್ರದರ್ಶನ ಅತ್ಯಂತ ರೋಚಕ ಎನಿಸಿತು. ಅಪರೂಪದ ಪೌಡರ್ ಬ್ಲೂ, ಗ್ರೇ, ಲ್ಯಾವೆಂಡರ್, ರೋಜ್ ಬ್ಲಶ್, ಪೇವಲ್ ಗ್ರೀನ್, ಪೇವಲ್ ಗ್ರೇ ಇತ್ಯಾದಿ ಬಣ್ಣಗಳಿದ್ದವು. ಇಲ್ಲಿ ವಸ್ತ್ರ ವಿನ್ಯಾಸವಂತೂ ಇನ್ನೂ ಬೊಂಬಾಟ್! ಕಸೂತಿಗೊಳಿಸಲಾದ ವಿಶಿಷ್ಟ ಲಹಂಗಾ, ಆಫ್ ಶೋಲ್ಡರ್‌ಚೋಲಿ, ಫುಲ್ ಸರ್ಕಲ್ ಸ್ಕರ್ಟ್, ಕಫ್ತಾನ್, ಲೇಸ್ ಕ್ರಾಪ್‌ವುಳ್ಳ ಟಾಪ್, ಓವರ್ ವೇ ಪ್ಯಾಂಟ್ಸ್, ಕ್ರಾಪ್ಡ್ ಚೋಲಿ, ಬಸ್ಟಿಯರ್, ಸೀರೆ ಇತ್ಯಾದಿಗಳಿದ್ದವು. ಬಹುತೇಕ ಎಲ್ಲಾ ವಿಶಿಷ್ಟ ವಸ್ತ್ರಗಳೂ ಮೊದಲ ದಿನ ಬ್ರೈಟ್ ಕಲರ್ಸ್‌ಎಂಬ್ರಾಯಿಡರಿ ಟಚ್‌ನಿಂದ ಹೊಳೆಯುತ್ತಿದ್ದವು. ಇಲ್ಲಿ ಬಾಲಿವುಡ್‌ನ ತಾರೆಗಳೇನೂ ಇರಲಿಲ್ಲ, ಆದರೆ ಇಲ್ಲಿನ ಮಾಡೆಲ್‌ಗಳು ಅದರ ಕೊರತೆ ಇಲ್ಲದಂತೆ ನ್ಯೂ ಏಜ್ ಫ್ಯಾಷನ್ನಿನ ಮೋಡಿ ಮಾಡಿದ್ದರು.
ಇಲ್ಲಿನ ರೊಮ್ಯಾಂಟಿಕ್ ಐಡಿಯಾಲಜಿ ಹಾಗೂ ಚರಿಷ್ಮಾ ಇಡೀ ದೇಶವನ್ನು ಫ್ಯಾಷನ್ನಿನ ಹೊಸ ಅಲೆಯಲ್ಲಿ ತೇಲಿಸಿತ್ತು. ಬಹುತೇಕ ಎಲ್ಲಾ ಡಿಸೈನರ್‌ಗಳ ಸಂಗ್ರಹದಲ್ಲೂ ಟ್ಯಾಸೆಲ್ಸ್ ಫ್ರಿಂಜಸ್‌ನ ಮಿಕ್ಸಿಂಗ್ ಇತ್ತು. ಹ್ಯಾಟ್‌ಬೋಹೋ ಚೆಕ್ ಕಲೆಕ್ಷನ್ಸ್ ಕೂಡ ಹೇರಳವಾಗಿತ್ತು. ಫ್ಲೋರ್ ಲೆಂತ್ ಜ್ಯಾಕೆಟ್ ಗೌನು, ಹಸ್ತ ಕಸೂತಿಯ ಕೇಪ್ಸ್, ಜಿಪ್ಸಿ ಲೈಬ್ಸ್ ಇದರಲ್ಲಿ ಪ್ರಮುಖ ಆಕರ್ಷಣೆ ಎನಿಸಿತ್ತು. ಎಲ್ಲಾ ಬೋಲ್ಡ್ ಪ್ರಿಂಟ್ಸ್ ನಿಂದ ಅರ್‌ಟೆಕ್ ಪ್ರಿಂಟ್ಸ್ ಗಳವರೆಗೂ ಫ್ಯಾಷನ್‌ಗ್ಲಾಮರ್ ಹರಿದಾಡಿತ್ತು. ಇದರಲ್ಲಿ ಅನೇಕ ಟೆಕ್ಸ್ ಚರ್‌ಗಳಿಗೆ ಪ್ಲೇವರ್ ಕಸೂತಿ, ಕಾರ್ಪೆಟ್ ಇನ್‌ಸ್ಪೈರ್ಡ್ ಪ್ರಿಂಟ್ಸ್, ಲೇಸರ್ ಕಟ್ ಮೋಟಿಫ್ಸ್ ಇದ್ದವು. ಪ್ಯಾಚ್ ವರ್ಕ್ ಅಂತೂ ಎಲ್ಲಕ್ಕಿಂತ ಪ್ರತ್ಯೇಕವಾಗಿ ಗಮನಸೆಳೆದವು. ಒಟ್ಟಾರೆ ಈ ಸಂಗ್ರಹದ ವಸ್ತ್ರ ವಿನ್ಯಾಸಗಳಲ್ಲಿ ಒಂದು ಅದ್ಭುತ ತಾಜಾತನ ಹಾಗೂ ಸೂಕ್ಷ್ಮತೆ ಗೋಚರಿಸಿತು. ಇದು 2015ರ ಹೇಮಂತ ಶಿಶರ ಋತುವಿನ ಫ್ಯಾಷನ್‌ಗೆ ಅದ್ಭುತ ಪಾಸಿಟಿವ್ ವೈಬ್ಸ್ ಒದಗಿಸಿತು.
ಒಂದು ಸೋಬರ್ ನೋಟ್‌ನೊಂದಿಗೆ ಅಂದಿನ ಕಾರ್ಯಕ್ರಮ ಶುರುವಾಗಿತ್ತು. ಖ್ಯಾತ ಡಿಸೈನರ್‌ಗಳಾದ ರೋಹಿತ್ ಗಾಂಧಿ ಹಾಗೂ ರಾಹುಲ್ ಖನ್ನಾ ಮುಂದಿನ ಚಳಿಗಾಲದ ವಿಶೇಷ ಫ್ಯಾಷನ್ ಕುರಿತು ಮಾತನಾಡಿದರು. ಅವರ ಸಂಗ್ರಹದ ವಸ್ತ್ರಗಳೆಲ್ಲ ಬ್ಲ್ಯಾಕ್‌ವೈಟ್‌ನಲ್ಲಿ ಮಾಡರ್ನ್ ಸಿಲ್ ಹೌಲ್ಸ್ ಆಗಿ ಮಿಂಚಿದ. ಪೆನ್ಸಿಲ್ ಸ್ಕರ್ಟ್ಸ್, ಅದರಲ್ಲೂ ಕಾಂಗ್ರಿಗೇಟೆಡ್ ಟೆಕ್ಸ್ ಚರ್ ಹಾಗೂ ಪ್ಯಾಟರ್ನ್‌ಗಳಲ್ಲಿ ಡಯಾಫನಸ್ ಜಂಪ್ ಸೂಟ್ಸ್, ಕೇಪ್ಸ್, ಫುಲ್ ಸೂಟ್, ಚಿತ್ರವಿಚಿತ್ರ ಸ್ಲೀವ್ಸ್ ಇತ್ಯಾದಿಗಳಿದ್ದವು. ಇಲ್ಲಿನ ಜ್ಯಾಮಿತೀಯ ವಿನ್ಯಾಸಗಳು ಹಾಗೂ ಪ್ರಿಂಟ್ಸ್ ಫ್ಯಾಷನ್ ಪ್ರಿಯರಿಗೆ ಮೋಡಿ ಮಾಡಿದ. ಒಬ್ಬ ವಿದ್ಯಾರ್ಥಿಯಾದ ಸೋಮದತ್ತ ಹೇಳುತ್ತಾರೆ, “ಪ್ರತಿ ಫ್ಯಾಷನ್ ವೀಕ್ ಉದಯೋನ್ಮುಖ ಡಿಸೈನರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ. ಇಲ್ಲಿಗೆ ಆಸಕ್ತಿಯಿಂದ ಬರುವ ವ್ಯಕ್ತಿ ರಫ್ತು ಹಾಗೂ ರೀಟೇಲ್ ವ್ಯವಹಾರದಲ್ಲಿದ್ದು, ಡಿಸೈನಿಂಗ್‌ನ ಮುಖ್ಯವಾಹಿನಿಯಲ್ಲಿ ಇಲ್ಲದಿದ್ದರೂ, ಇದು ಅವರನ್ನು ಬಹಳ ಜಿಜ್ಞಾಸೆಗೆ ಒಳಪಡಿಸುತ್ತದೆ.
“ಅಮ್ ರಾಜ್ ಸೇನ್ ಗುಪ್ತಾರ ಪೂರ್ವ ಹಾಗೂ ಪಾಶ್ಚಿಮಾತ್ಯ ಉಡುಗೆಗಳ ಸಂಗಮ, ನಿಜಕ್ಕೂ ಬಹಳ ಬೆಡಗಿನಿಂದ ಕೂಡಿದ್ದು, ನಾನು ಅಂದುಕೊಂಡದ್ದಕ್ಕಿಂತ ವಿಶಿಷ್ಟವಾಗಿತ್ತು. ಪ್ರತಿಮಾ ಪಾಂಡೆ ನನಗೆ ಈ ಫ್ಯಾಷನ್ ಉದ್ಯಮಕ್ಕೆ ಬರಲು ಪ್ರಮುಖ ಮಾರ್ಗದರ್ಶನ ನೀಡಿದರು. ರೀನಾ ಢಾಕಾ ತಮ್ಮ ಮಾರ್ಲಸ್ ವ್ಯಕ್ತಿತ್ವದಿಂದ ಗಮನ ಸೆಳೆದರು.”
ಹೇಮಂತ್ ಮತ್ತು ನಂದಿತಾರ ಜಂಟಿ ಪ್ರಯತ್ನದಲ್ಲಿ ಒಡಮೂಡಿದ ವಿನ್ಯಾಸಗಳಲ್ಲಿ ಪ್ರವಾಸಿಗರಿಗೆ ಬೇಕಾಗುವ ವಿಶೇಷ ದಿರಿಸುಗಳಿದ್ದವು. ಕೋಸಿ ಬ್ಲಾಂಕೆಟ್, ಓವರ್ ಕೋಟ್, ಲಾಂಗ್ ಲೂಸ್ ಗೌನು, ಕಾಲರ್ಡ್ ಶರ್ಟ್ಸ್ ಎಲ್ಲರ ಮೆಚ್ಚುಗೆ ಗಳಿಸಿದವು. ಇಲ್ಲಿನ ವರ್ಣ ವೈವಿಧ್ಯಂತೂ ಡಸ್ಕಿ ಬ್ರೌನ್‌ನಿಂದ ಸ್ಮೋಕಿ ಗ್ರೇವರೆಗೂ, ಆಲಿವ್ ಗ್ರೀನ್, ಮಸ್ಟರ್ಡ್, ಸ್ನಫ್, ಎಲ್ಲವು ರಾರಾಜಿಸಿದವು. ಪಾಪ್ ಅಬ್ ಸ್ಟ್ರಾಕ್ಟ್ ಫ್ಲೋರ್ ಪ್ರಿಂಟ್ಸ್, ಸ್ವಿರ್ಲಿಂಗ್ ಎಥ್ನಿಕ್ ಪ್ರಿಂಟ್ಸ್, ಇಂಟ್ರಿಕೇಟ್ ಟೆಕ್ಸ್ ಚರ್‌ಗಳು ಈ ಪ್ರದರ್ಶನದ ಬೋನಸ್ ಎನಿಸಿತು.
ಡಿಸೈನರ್ ಸಾಮಂತ್ ಚೌಹಾಣ್‌ರ ಸಂಗ್ರಹವಂತೂ ಅಲ್ಲಿದ್ದವು ಎಲ್ಲರ ಹೃದಯ ಸೂರೆಗೊಂಡಿತು. ಅವರ ಅಚ್ಚ ಬಿಳುಪಿನ `ರಜಪುತಾನಾ ಕುಮಾರಿ’ ಸ್ಟೇಟ್‌ಮೆಂಟ್ ಕಲೆಕ್ಷನ್, ಈ ಬಾರಿಯ 2015ರ ರನ್ ವೇಗೆ ಒಂದು ವಿಶಿಷ್ಟ ಕಳೆ ನೀಡಿತು. ಅವರ ಈ ಸಂಗ್ರಹದಲ್ಲಿ ಕಾಟನ್, ರೇಷ್ಮೆ, ವೆಲ್ವೆಟ್, ಭಾರಿ ಕಸೂತಿ, ಜರಿ ವರ್ಕ್ ಪ್ರಮುಖವಾಗಿತ್ತು. ಇವರೆಲ್ಲರಿಗಿಂತ ಭಿನ್ನವಾಗಿ ಡಿಸೈನರ್ ಮಾಲಿನಿ ರಮಣಿ ತಮ್ಮ ಬೋಲ್ಡ್ ಗಾಥಿಕ್ ಕಲೆಕ್ಷನ್ ಪ್ರಸ್ತುತಪಡಿಸಿದರು, ಆ ಪ್ರಸ್ತುತಿಯಲ್ಲಿ ತುಸು ಡ್ರಾಮಾ ಸಹ ಇತ್ತು. ಅವರ ಮಾಡೆಲ್ಸ್ ಹೈ ಸ್ಲಿಟ್ಸ್, ಎಸಿಮೆಟ್ರಿಕ್ ಕಟ್ಸ್, ಲಾಂಗ್ ಸ್ಕರ್ಟ್ಸ್ ಇತ್ಯಾದಿ ಪ್ರದರ್ಶಿಸಿದರು. ಡಾರ್ಕ್ ಐ ಶ್ಯಾಡೋ ಇವರ ಲುಕ್ಸ್ ನ್ನು ಹೆಚ್ಚು ಪೇಟೆಂಟ್‌ವೈಬ್ರೆಂಟ್ ಆಗಿಸಿತ್ತು. ಪಲ್ಲವಿ ಮೋಹನ್ ಪ್ರಸ್ತುತಪಡಿಸಿದ `ನಾಟ್ ಸೋ ಸೀರಿಯಸ್’ ಪ್ರಸ್ತುತ ಫ್ಯಾಷನಿನ್ನ ಟ್ಯಾಸೆಲ್ ಟಚ್‌ನ್ನು ತೋರಿಸಿತು. ಇಲ್ಲಿ ಹೆಚ್ಚೆಚ್ಚು ಬ್ಲಾಂಕೆಟ್ ಕೇಪ್ಸ್, ವೈಡ್ ಸ್ಕರ್ಟ್ಸ್ ಲಾಂಗ್ ಜ್ಯಾಕೆಟ್ಸ್ ಡ್ರೆಸೆಸ್ ಮುಖ್ಯವಾಗಿ ಬ್ಲ್ಯಾಕ್‌ಬ್ಲೂನಲ್ಲಿ ಶೋಭಾಯಮಾನ ಎನಿಸಿತು. ಈ ಸ್ಟೈಲ್ ಗೆ ಜೊತೆಗೂಡಲು ಹೈ ಸ್ಯೂಡ್ ಬೂಟ್ಸ್, ಗ್ಲವ್ಸ್, ಫ್ಲವರ್ ಬೆಡೆಕ್ಡ್ ಬೆರೆಟ್ಸ್ ಇತ್ಯಾದಿಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು.
ಕೆಲವು ವಿಶಿಷ್ಟ ಕೊಡುಗೆಗಳು
ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ಸ್ ನ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ ಶಿಂಜಿನಿ ಬರ್ದಾನ್‌ರ ಪ್ರಕಾರ, “ಫ್ಯಾಷನ್ನಿನ ವಿದ್ಯಾರ್ಥಿಯಾಗಿ ಇಲ್ಲಿ ನಾನು ಅನಂತ ವಿನ್ಯಾಸಗಳನ್ನು ಗಮನಿಸಿದೆವು. ಇವರ ಮಧ್ಯೆ ಒಬ್ಬರನ್ನೇ ಬೊಟ್ಟು ಮಾಡಿ ತೋರಿಸಿ ನನ್ನ ಫೇವರಿಟ್ ಎಂದು ಹೇಳಲು ಸಾಧ್ಯವಾಗ್ತಿಲ್ಲ.
“ಇಲ್ಲಿನ ಎಲ್ಲಾ ಡಿಸೈನರ್‌ಗಳೂ ಬಹು ಪ್ರೇರಣಾದಾಯಕರಾಗಿದ್ದಾರೆ. ಈ ಬಾರಿ ವಿಶಿಷ್ಟ ಆಫರಿಂಗ್ಸ್ ನೀಡಿದೆ. ಈ ಡಿಸೈನರ್‌ಗಳ ಇಂಥ ಅದ್ಭುತ ಕೊಡುಗೆಗಳನ್ನು ಮರೆಯಲಾಗದು. ಬ್ರಾಂಡ್ ಸ್ನೇಹಾ ಅರೋರಾರ ಮಾರ್ಗದರ್ಶನದಲ್ಲಿ ಇಂಟರ್ನ್‌ಶಿಪ್ ಮುಗಿಸಿದ್ದು ರೋಚಕ ಎನಿಸಿತು. “ಆಕೆ ಈ ಬಾರಿ ರೂಪಿಸಿದ ಪ್ರತಿಯೊಂದು ವಸ್ತ್ರ ವಿನ್ಯಾಸ ಅಪೂರ್ವ, ಅವೋಘ! ಮುಖ್ಯವಾಗಿ ಸಿಗ್ನೇಚರ್ ಪ್ರಿಂಟ್ಸ್ ನನ್ನ ಅಚ್ಚುಮೆಚ್ಚಾಯ್ತು. ಜೊತೆಗೆ ಆಕೆಯ ಕ್ಯಾಶುಯಲ್ಸ್ ಕೂಡ ಅಷ್ಟೇ ಬೊಂಬಾಟ್!”
ಅನಾಮಿಕಾ ಖನ್ನಾರ ಶೋ ಮತ್ತೊಂದು ರೋಮಾಂಚನವನ್ನೇ ಉಂಟುಮಾಡಿತ್ತು. ಅಂಥ ಬ್ಯೂಟಿಫುಲ್ ಸಿಲ್ ಹೌಟ್ಸ್, ಚಿತ್ರವಿಚಿತ್ರ ಹಸ್ತ ಕೌಶಲದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಹೇಮಂತ್ ಮತ್ತು ನಂದಿತಾ ರೂಪಿಸಿದ ಬೊಹೆಮಿಯನ್ ಆಧಾರಿತ ಕಲೆಕ್ಷನ್ ನಿಜಕ್ಕೂ ಅನುಪಮ ಎನಿಸಿತು. ಮುಖ್ಯವಾಗಿ ಫನ್ ಪ್ರಿಂಟ್ಸ್, ಕೇಪ್ಸ್, ಫ್ರಿಂಜ್ಸ್ ಇತ್ಯಾದಿ.ವಿನ್ಯಾಸಕಾರರು ಇಲ್ಲಿ ಪ್ರದರ್ಶಿಸಿದ ಸಂಗ್ರಹಗಳೆಲ್ಲ ಸಾಮಾನ್ಯವಾಗಿ ಸಾಂಪ್ರದಾಯಿಕ ಫ್ಯಾಷನ್ನಿನ ಸುತ್ತಮುತ್ತಲೇ ಇತ್ತು. ಇಲ್ಲಿ ಭಾರತದ ಎಲ್ಲಾ ಮಹಾನಗರಗಳ ಜನಾಂಗೀಯ ಸಂಸ್ಕೃತಿಯ ಪ್ರತಿಬಿಂಬ ಕಾಣಬಹುದಾಗಿತ್ತು. ಇಲ್ಲಿ ಎಪಿಸಿನ್ ಸಿಲ್ ಹೌಟ್ಸ್ ನ್ನು ಎಲೈನ್ ಶಿಫ್ಟ್ ಡ್ರೆಸೆಸ್ ಜೊತೆ ಬೆಸೆಯಲಾಗಿತ್ತು. ಟಕ್ಸೆಡೊ ಪ್ಯಾಂಟ್ಸ್, ಜರ್ಸಿಗಳು ಸಹ ನಂತರದ ದಿನಗಳ ಪ್ರದರ್ಶನದಲ್ಲಿ ಪ್ರಮುಖವೆನಿಸಿದವು. ಸಾಂಪ್ರದಾಯಿಕ ವೇಷಭೂಷಣಗಳನ್ನು ಅತ್ಯಾಧುನಿಕವಾಗಿ ಮಾರ್ಪಡಿಸಿ ಲಹಂಗಾ, ಕುರ್ತಿ, ಅಂಗ್‌ರಖಾಗಳನ್ನು ಪ್ರಸ್ತುತಪಡಿಸಲಾಯಿತು.
ಸರಳ, ಮಾರ್ಮಿಕ ಹಾಗೂ ಸೂಕ್ಷ್ಮ ಉಡುಗೆಗಳು ಈ ಪ್ರದರ್ಶನದ ಮುಂದಿನ ದಿನಗಳ ಮಂತ್ರವಾಗಿತ್ತು. ಇಲ್ಲಿನ ಡಿಸೈನ್ಸ್ ಸಂಪ್ರದಾಯದ ನೆರಳಲ್ಲೇ ಸರಿದರೂ, ಪಾರ್ಟಿ ಪ್ರಿಯರ ಮಹತ್ವಾಕಾಂಕ್ಷೆಗಳನ್ನು ಮರೆತಿರಲಿಲ್ಲ. ಇಂಥ ಸಮ್ಮೋಹಕ, ಸೆಕ್ಸೀ ವಿನ್ಯಾಸಗಳಲ್ಲಿ ನಮ್ರತಾ ಜೋಶಿಪುರಾರದು ಎತ್ತಿದ ಕೈ. ಆಕೆ ಪ್ರದರ್ಶಿಸಿದ ಪಾರ್ಟಿ ಕಲೆಕ್ಷನ್‌ನಲ್ಲಿ ಗ್ರೀಕ್ ದೇವತೆಗಳ ವಸ್ತ್ರ ವೈಭವವನ್ನು ಕಾಣಬಹುದಿತ್ತು. ಆಕೆಯ ಸಂಗ್ರಹದಲ್ಲಿ ಶಿಮರಿ ಶೈನಿಂಗ್ ಸೆಕ್ಸೀ ಕರ್ಟ್ ವರ್ಕ್ ಸ್ಕರ್ಟ್ಸ್, ಪ್ಲಂಜಿಂಗ್ ನೆಕ್ ಲೈನ್‌ಜಂಪ್ ಸೂಟ್ಸ್, ಕೋರ್ಸೆಟ್ ಟಾಪ್ಸ್, ಫಾಕ್ಸ್ ಫರ್‌ಗಳು ಆಸಕ್ತಿ ಕೆರಳಿಸಿದವು.
ಈ ಡಿಸೈನ್‌ಗಳಲ್ಲಿ ಅದ್ಭುತ ಮಾಯಾಜಾಲವೇ ಅಡಗಿದ್ದು ಬ್ಲ್ಯಾಕ್, ಸಿಲ್ವರ್, ಎಮರಾಲ್ಡ್ ಗ್ರೀನ್, ಬ್ರಿಕ್ ರೆಡ್ ಇತ್ಯಾದಿ ಪ್ರಮುಖ ಬಣ್ಣಗಳೆನಿಸಿದವು.
ಮತ್ತೊಂದೆಡೆ ತನ್ವಿ ಕೇಡಿಯಾರ ಸಂಗ್ರಹ ವೈಬ್ರೆಂಟ್ ಬಣ್ಣಗಳೊಂದಿಗೆ ಹೆಚ್ಚು ಡ್ರೇಪ್ಸ್, ಚಿತ್ತಾಕರ್ಷಕ ಕಸೂತಿಯನ್ನು ಹೊಂದಿದ್ದವು. ಆಕೆಯ ಪೋಷಾಕುಗಳಲ್ಲಿ ಭಾರತೀಯ ಮೂಲದ ಕುರ್ತಿ, ಪಟಿಯಾಲಾ ಪ್ಯಾಂಟ್, ಡಿಜಿಟಲ್ ಪ್ರಿಂಟ್ ಬ್ಲೌಸ್, ಲಾಂಗ್ ಸ್ಕರ್ಟ್ಸ್ ಗಮನಸೆಳೆದವು. ವರ್ಣಮಯ ವೈವಿಧ್ಯತೆಗಳ ಆಗರವಾಗಿ ಸಾಹಿಲ್ ಕೋಚರ್‌ರ `ಹ್ಯಾರೋ ಬಾರ್ನೊ’ ಕಲೆಕ್ಷನ್ ಬೆರಗು ಮೂಡಿಸಿತು. ಜೈಪುರ್ ಸಿಟಿ ಪ್ಯಾಲೆಸ್ ನ ಅಂಗಳದ 4 ಋತುಗಳನ್ನು ಪ್ರತಿಬಿಂಬಿಸುವಂತೆ ಇವು ಕಣ್ಮನ ತಣಿಸಿದವು. ಇವರ ಕಲೆಕ್ಷನ್ ಎಡ್ಜಿ ಸ್ಕ್ಟಕ್ಚರ್‌ನ ಅನುಪಮ ಟೆಕ್ಸ ಚರ್‌ಗಳನ್ನು ಒಳಗೊಂಡಿದ್ದವು.
ಅನನ್ಯ ಅನುಭವ
ಸ್ನೇಹಾ ಅರೋರಾ ಹೇಳಿದರು, “ಪ್ರತಿ ವರ್ಷ ಒಂದೊಂದು ಹೊಸ ಅನುಭವ ಇದ್ದೇ ಇರುತ್ತದೆ. ಹೀಗಾಗಿ ಪ್ರತಿ ವರ್ಷ ಏನಾದರೊಂದು ಹೊಸತನ್ನು ಕಲಿಯುತ್ತೇವೆ. ಜನ ಈ ಸಲ ಸೂಕ್ಷ್ಮಾತಿಸೂಕ್ಷ್ಮ ಸಂಗ್ರಹಕ್ಕೆ ಹೆಚ್ಚಿನ ಬೇಡಿಕೆ ಒಡ್ಡುತ್ತಿದ್ದಾರೆ, ಜೊತೆಗೆ ಅ ಸಿಂಪಲ್ ಸೊಫೆಸ್ಟಿಕೇಟೆಡ್ ಸಹ ಆಗಿರಬೇಕು.
“ಈ ಸೀಸನ್ನಿನ ಹೊಸ ಟ್ರೆಂಡ್ ಎಂದರೆ ಚೆಕ್ಸ್ ವುಳ್ಳ ಜ್ಯಾಕೆಟ್ಸ್, ಚೆಕ್ ಸ್ಕರ್ಟ್ಸ್, ಲೂಸ್ ಪ್ಯಾಂಟ್ಸ್. ಸ್ಟೈಲಿಂಗ್‌ಕ್ಯಾಶ್ಯುಯೆಲ್‌ಆಗಿದ್ದು ಹೆವಿ ವರ್ಕ್ ಬೇಡ ಎನ್ನುತ್ತಾರೆ. ಲೇಯರಿಂಗ್ ಈಗ ಅತಿ ಭಾರಿ ಎನಿಸುತ್ತದೆ. ಸ್ಕರ್ಟ್‌ಗಳ ಜೊತೆ ಡ್ರೆಸ್ ಟೀಮಿಂಗ್ ಈಗಿನ ವಿನೂತನ ಟ್ರೆಂಡ್.”
ನಿಜ ಹೇಳಬೇಕೆಂದರೆ, ಪ್ರತಿ ಸೀಸನ್‌ನಲ್ಲೂ ಹೊಚ್ಚ ಹೊಸ ಕಲೆಕ್ಷನ್ಸ್ ಬಂದಂತೆ ಟ್ರೆಂಡ್ ಬದಲಾಗುತ್ತಿರುತ್ತದೆ. ಪ್ರತಿಯೊಂದು ಸಣ್ಣ ಬದಲಾವಣೆಯನ್ನೂ ಇದು ಹೀಗೇ ಎಂದು ಪ್ರತ್ಯೇಕಿಸಿ ಹೇಳಲಾಗದು. ಆದರೆ ಈ ಬಾರಿ, ಒಟ್ಟಾರೆ ಆ್ಯಂಡ್ರೋಜಿನಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಅಂದರೆ ಹೆಣ್ಣು ಗಂಡು ಇಬ್ಬರಿಗೂ ಒಪ್ಪು ಒಂದೇ ಉಡುಗೆ ಜನಪ್ರಿಯವಾಗುತ್ತಿದೆ. ಹೀಗಾಗಿ ಹೆಚ್ಚು ಹೆಚ್ಚು ಬಾಕ್ಸಿ ಸಿಲ್‌ಹೌಟ್ಸ್, ಶೂಸ್, ಬ್ರೋಗ್ಸ್ ಕಂಡುಬಂದವು. ಈ ಬಾರಿಯ ಶೋನಲ್ಲಿ ಡಿಸೈನರ್ಸ್ ವೈವಿಧ್ಯಮಯ ಬಣ್ಣಗಳು, ಹೆಚ್ಚು ಶಿಮ್ಮರಿಂಗ್ ಡಿಸೈನ್ಸ್, ಕಟ್ ವರ್ಕ್ಸ್ ಪ್ರಯೋಗಿಸಿ ಪೋಷಾಕುಗಳಿಗೆ ನಾವೀನ್ಯತೆ ಒದಗಿಸಿದ್ದರು. ಫ್ಯಾಷನ್ ಪರಿಮಿತಿಯೊಳಗಿದ್ದರೆ ಅಂಥ ಡ್ರೆಸ್ ಎಂದೂ ಔಟ್ ಆಫ್ ಸ್ಟೈಲ್ ಎನಿಸದವು. ಇದನ್ನು ಗಮದಲ್ಲಿರಿಸಿಕೊಂಡು ಈ ಮಂದಿ ಹೊಸ ಪ್ರಯೋಗಗಳನ್ನು ಮಾಡಿ ಅರ್ ಟೆಕ್ ಪ್ರಿಂಟ್ಸ್, ಬೋಲ್ಡ್ ಪ್ರಿಂಟ್ಸ್, ಗಾಥಿಕ್ ಲುಕ್ಸ್ ಇತ್ಯಾದಿ ಒದಗಿಸಿದ್ದಾರೆ. ಜೊತೆಗೆ ಇಂದಿನ ವಿನ್ಯಾಸಕಾರರು ರೆಡಿ ಟು ವೇರ್ ಕಾಂಟೆಂಪರರಿ ಸ್ಟೈಲ್ ಗೇ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಇದು ಭಾರತೀಯ ಉಡುಗೆಗಳ ಮೇಲೆ ಮತ್ತೆ ಮತ್ತೆ ಹೊಸ ಪ್ರಯೋಗ ಮಾಡುವುದಕ್ಕಿಂತ ವಿಭಿನ್ನ, ವಿಶಿಷ್ಟ ಎನಿಸುತ್ತದೆ.
ಇಂದಿನ ಫ್ಯಾಷನ್ ಉದ್ಯಮ ಆಧುನಿಕ ನಾಗರಿಕ ಹೆಣ್ಣಿನ ಅಗತ್ಯಗಳನ್ನು ಗಮದನಲ್ಲಿರಿಸಿಕೊಂಡೇ ಈ ವರ್ಷದ ಶೋ ರೂಪಿಸಿದೆ. ಇಲ್ಲಿನ ಎಷ್ಟೋ ಟ್ರೆಂಡ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಪ್ರಸ್ತುತ ವಿಭಿನ್ನ ಫ್ಯಾಷನ್ ಕ್ರಿಟಿಕ್ಸ್ ಹಾಗೂ ಫ್ಯಾಷನ್ ಕನ್ಸಲ್ಟೆಂಟ್ಸ್ ಈ ಎಲ್ಲಾ ಟ್ರೆಂಡ್‌ಗಳ ಬಗ್ಗೆ ವಿಮರ್ಶಿಸುವುದನ್ನು ನಾವು ಗಮನಿಸಬಹುದು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಕಮ್ ಕನ್ಸಲ್ಟೆಂಟ್ ಆಗಿರುವ ಇಂದ್ರನೀಲ್ ಮುಖರ್ಜಿ ಹೇಳುತ್ತಾರೆ, “ನೀವು ಧರಿಸುವ ಯಾವುದೇ ಉಡುಗೆ ನಿಮಗೆ ಹೆಚ್ಚು ಅನುಕೂಲಕರ ಹಾಗೂ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವಂಥದ್ದೇ ಆಗಿರಬೇಕು. ಆ ನಿಟ್ಟಿನಲ್ಲಿ ಈ ಬಾರಿಯ ಹೆಚ್ಚು ಯಶಸ್ವಿ ಎನಿಸಿದೆ. ಈ ಸಲದ ಶೋನಲ್ಲಿ ನನಗೆ ಮಾಲಿನಿ ರಮಣಿಯರ ಸಂಗ್ರಹ ಇಷ್ಟವಾಯ್ತು. ಈ ಬಾರಿಯ ಚಳಿಗಾಲದಲ್ಲಿ ಡಾರ್ಕ್ ಕಲರ್ಸ್ ಎಷ್ಟು ಪ್ರಮುಖ ಎನಿಸಲಿವೆ ಎಂದು ಚೆನ್ನಾಗಿ ನಿರೂಪಿಸಿದ್ದಾರೆ.
“ಆಕೆ ರಾಂಪ್ ಮೇಲೆ ಪ್ರದರ್ಶಿಸಿದ ಶೋ ಗಾಥಿಕ್, ಸೆನ್ಸೇಶನ್ ಹಾಗೂ ಹೆಚ್ಚು ಆಳವಾದುದಾಗಿತ್ತು. ರಾಂಪ್‌ನಲ್ಲಿ ಕ್ಯಾಟ್ ವಾಕ್‌ಮಾಡಿದ ಮಾಡೆಲ್‌ಗಳು ಹೆಚ್ಚು ಡಾರ್ಕ್ ಶೇಡ್ಸ್ ನ್ನೇ ಪ್ರದರ್ಶಿಸಿದರು. ಮಾಲಿನಿ ಮುಖ್ಯವಾಗಿ ಕಪ್ಪು ಬಣ್ಣದ ಮೇಲೆ ಹೆಚ್ಚು ಫೋಕಸ್ ಮಾಡಿದ್ದರು. “ಮುಖ್ಯವಾಗಿ ಲಾಂಗ್ ಸ್ಕರ್ಟ್ಸ್, ಡೀಪ್ ಥೈಹೈ ಸ್ಲಿಟ್ಸ್, ಆ್ಯಂಕಲ್ ಲೆಂತ್ ಸ್ಕರ್ಟ್ಸ್ ವಿತ್ ಸ್ಲಿಟ್ಸ್ ಹಾಗೂ ಎಸಿಮೆಟ್ರಿಕ್ ಕಟ್ಸ್ ಎಲ್ಲರ ಮನಸೂರೆಗೊಂಡವು. ಲೆವೆಂಡೆ ರಾಡ್ರಿಕ್ಸ್ ರ ಹೊಸ ಕ್ರಿಯೇಷನ್ಸ್ ಸಹ ಬೆರಗು ಮೂಡಿಸುವಂತಿತ್ತು. ಈ ಬಾರಿಯ ಟ್ರೆಂಡ್ ಬಹಳ ಸರಳ, ಕ್ಯೂಟ್ ಎನಿಸಿತು. ಅದರಲ್ಲೂ ಚೆಕ್ ಪ್ಯಾಟರ್ನ್ಸ್, ಅರ್ ಟೆಕ್ ಪ್ರಿಂಟ್ಸ್, ಗಾಥಿಕ್ ಲುಕ್ಸ್ ಹೆಚ್ಚು ಜನಪ್ರಿಯ ಎನಿಸಿದವು.”
ರೋಹಿತ್ ಬಾಲ್, ಸಬ್ಯಸಾಚಿ, ರಿತು ಕುಮಾರ್‌ರಂಥ ಅದ್ಭುತ ವಿನ್ಯಾಸಕಾರರು ಭಾರತೀಯ ಮೂಲದ 25 ಡಿಸೈನರ್‌ಗಳಲ್ಲಿ ಅಗ್ರ ಪಂಕ್ತಿಯಲ್ಲಿ ತಮ್ಮ ಪ್ರತಿಭೆ ಮೆರೆದು, ಭಾರತೀಯ ಹಸ್ತಕೌಶಲಕ್ಕೆ ಹೆಮ್ಮೆ ತಂದರು. ಈ ಫ್ಯಾಷನ್ ಶೋಗಳು ಕೇವಲ ಪ್ರೇರಣಾದಾಯಕ ಮಾತ್ರವಲ್ಲದೆ ಇಡೀ ರಾಷ್ಟ್ರದ ಯುವಜನತೆಗೆ ಹೆಚ್ಚು ಪ್ರಿಯ ಎನಿಸಿದೆ.
ಫ್ಯಾಷನ್ ಕ್ರಿಟಿಕ್ ಶಿವಾನಿ ಶರ್ಮ ಆ ಕುರಿತಾಗಿ ವಿಮರ್ಶಿಸುತ್ತಾ, “ಈ ಬಾರಿಯ ಟ್ರೆಂಡ್ ಏನೇನೂ ತ್ರಾಸದಾಯಕವಲ್ಲ. ಬದಲಿಗೆ ಸುಲಭವಾಗಿ ಮ್ಯಾನೇಜ್ ಮಾಡಬಹುದು, ಹೆಚ್ಚು ಕಂಫರ್ಟೆಬಲ್ ಕೂಡ. ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಲೂಸ್‌ಫಿಟ್ಟಿಂಗ್ ಪ್ಯಾಂಟ್ಸ್ ಹೆಚ್ಚು ಹೆಚ್ಚು ಕಾಂಟ್ರಾಸ್ಟಿಂಗ್ ಅವರ್ ಟೆಕ್ ಪ್ರಿಂಟ್ಸ್, ಚೆಕ್ ಪ್ಯಾರ್ಟನ್ಸ್ ಜೊತೆ ಇವೆ.
“ಹೀಗಾಗಿ ಇವನ್ನು ಬಳಸುವುದು ತುಂಬಾ ಸುಲಭ. ಅತಿ ಹೆಚ್ಚಿನ ಮೇಕಪ್ ಮತ್ತು ಹೇರ್ ಸ್ಟೈಲ್ ಬಯಸದ ಈ ಬಗೆಯ ಉಡುಗೆಗಳು ಎಲ್ಲಾ ಫ್ಯಾಷನ್ ಪ್ರಿಯರಿಗೂ ಬಹಳ ಇಷ್ಟ ಆಗುವುದರಲ್ಲಿ ಎರಡು ಮಾತಿಲ್ಲ,” ಎನ್ನುತ್ತಾರೆ.
ಈ ಎಲ್ಲಾ ವೈವಿಧ್ಯಮಯ ವಿನ್ಯಾಸಗಳನ್ನು ಮುಂದಿನ ಸೀಸನ್ನಿನ ಸಂಗ್ರಹದವರೆಗೂ ಧಾರಾಳವಾಗಿ ಗಮನಿಸಬಹುದಾಗಿದೆ. ಫ್ಯಾಷನ್ ಎಂಬುದು ನಿರಂತರ ಪ್ರಹಿಸುವ ನದಿಯಂತೆ, ಅದು ಮುನ್ನುಗ್ಗುತ್ತಾ ಇರುತ್ತದೆ. ರಿಪೀಟ್‌ವಸಹ ಆಗಬಹುದು, ಕೇವಲ ಸ್ಟೈಲ್ ಮಾತ್ರ ಬದಲಾಗುತ್ತಿರುತ್ತದೆ. ಈ ಅದ್ಭುತ, ಪ್ರಚಂಡ ವಿನ್ಯಾಸಕಾರರು ಮುಂದಿನ ಚಳಿಗಾಲ ಹಾಗೂ ಇತರ ಋತುಗಳಿಗೆ ಏನೆಲ್ಲ ವೈವಿಧ್ಯಮಯ ಸ್ಟೈಲಿಶ್ ಕಲರ್ಸ್, ಪ್ರಿಂಟ್ಸ್ ಬಳಸಬಹುದೆಂದು ವಿಸ್ತೃತವಾಗಿ ಮೂಲಕ ತೋರಿಸಿಕೊಟ್ಟಿದ್ದಾರೆ.
ಒಟ್ಟಾರೆ ಈ ಸಂಗ್ರಹದ ವಸ್ತ್ರ ವಿನ್ಯಾಸಗಳಲ್ಲಿ ಒಂದು ಅದ್ಭುತ ತಾಜಾತನ ಹಾಗೂ ಸೂಕ್ಷ್ಮತೆ ಗೋಚರಿಸಿತು. ಇದು 2015ರ ಹೇಮಂತ ಶಿಶಿರ ಋತುವಿನ ಫ್ಯಾಷನ್‌ಗೆ ಅದ್ಭುತ ಪಾಸಿಟಿವ್ ವೈಬ್ಸ್ ಒದಗಿಸಿತು.