ಅಂಡರ್‌ ಗಾರ್ಮೆಂಟ್ಸ್ ಅರ್ಥಾತ್‌ ಒಳಉಡುಪು ಈಗ ಕೇವಲ ಅವಶ್ಯಕತೆಯಾಗಿ ಉಳಿದಿಲ್ಲ. ಅವುಗಳಿಗಿಂತಲೂ ಹೆಚ್ಚಿಗೆ ಏನೋ ಇದೆ. ಹಾಗೆಂದೇ ಹಾಲಿವುಡ್‌ನ ಕೇಟಿ ಹೋಮ್ಸ್ ಈವರೆಗಿನ ಅತ್ಯಂತ ದುಬಾರಿ ಒಳಉಡುಪುಗಳನ್ನು ಧರಿಸಿ ಒಂದು ದಾಖಲೆಯನ್ನೇ ಮಾಡಿದಳು. ಕ್ಯಾಟಿ ಹೋಮ್ಸ್ ಳ ಮದುವೆಯ ಲಿಂಜರಿ 3,500 ಡಾಲರ್‌ನದ್ದಾಗಿತ್ತು. ಅದನ್ನು ಜರ್ಮನಿಯ ಡಿಸೈನರ್‌ರೊಬ್ಬರು ತಯಾರಿಸಿದ್ದರು. ಬಹುಶಃ ಈವರೆಗಿನ ಅತ್ಯಂತ ದುಬಾರಿ ಒಳ ಉಡುಪುಗಳ ಸಂಗ್ರಹ ಕ್ಯಾಟಿಯ ಬಳಿಯೇ ಇರಬೇಕು.

ಈವರೆಗೆ ಅತ್ಯಂತ ದುಬಾರಿ ಒಳ ಉಡುಪುಗಳನ್ನು ತಯಾರಿಸುತ್ತಿದ್ದುದು ಫ್ರಾನ್ಸಿನ ಶಾರ್ಟ್ಲಿಂಗಲಿ ಎಂಬ ಕಂಪನಿ. ಆದರೆ ಕ್ಯಾಟಿಯ ಜರ್ಮನ್‌ ಡಿಸೈನರ್‌ ಕಂಪನಿ ಆ ಒಳ ಉಡುಪುಗಳನ್ನು ತಯಾರಿಸಿ ಹೊಸ ದಾಖಲೆಯನ್ನೇ ಬರೆದಿದೆ. ವ್ಯಕ್ತಿತ್ವ ವರ್ಧನೆಯಲ್ಲೂ ಲಿಂಜರಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ಸಂದರ್ಭಕ್ಕೆ ಯಾವ ಡ್ರೆಸ್‌ ಧರಿಸಬೇಕು ಎನ್ನುವುದು ಹಳೆಯ ಸಂಗತಿಯಾಯಿತು. ಈ ತಿಳಿವಳಿಕೆ ಎಲ್ಲರಿಗೂ ಹೆಚ್ಚು ಕಡಿಮೆ ಬಂದುಬಿಟ್ಟಿದೆ. ಆದರೆ ಈಗಿನ ಅವಶ್ಯಕತೆ ಎಂದರೆ ಯಾವ ಡ್ರೆಸ್‌ಗೆ ಎಂತಹ ಪ್ರಕಾರದ ಅಂಡರ್‌ ಗಾರ್ಮೆಂಟ್‌ ಧರಿಸಬೇಕು ಎನ್ನುವುದಾಗಿದೆ. ಅಂದಹಾಗೆ ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳಲ್ಲಿ ಎಲ್ಲ ಬಗೆಯ ಒಳ ಉಡುಪುಗಳೂ ಲಭಿಸುತ್ತವೆ. ಆದರೆ ಅಲ್ಲಿ ಅಷ್ಟೊಂದು ಬಗೆಯ ವೆರೈಟಿ ಕಂಡು ತಲೆ ಸುತ್ತುವುದು ಸ್ವಾಭಾವಿಕ. ಯಾವ ಸಂದರ್ಭಕ್ಕೆ ಯಾವ ಲಿಂಜರಿ ಸೂಕ್ತ ಎನ್ನುವುದು ಈ ಸಂಗತಿಯ ಮೇಲೆ ಫೋಕಸ್‌ ಮಾಡುತ್ತದೆ.

ಕೆಲವು ವರ್ಷಗಳ ಮುಂಚೆ ಕೋಲ್ಕತಾ ಫಿಲ್ಮ್ ಫೆಸ್ಟಿವಲ್ ‌ನಲ್ಲಿ `ಎಮಾಸ್‌ ಬ್ರಾ' ಎಂಬ ಮೆಕ್ಸಿಕನ್‌ ಸಿನಿಮಾ ಪ್ರದರ್ಶಿಸಲಾಗಿತ್ತು. ಈ ಸಿನಿಮಾ ಹದಿಹರೆಯದ ಹುಡುಗಿಯೊಬ್ಬಳ ಸುತ್ತಲೇ ಸುತ್ತುತ್ತಿರುತ್ತದೆ. ಅವಳ ಮೊದಲ ಬಾರಿಯ ಬ್ರಾ ಧರಿಸುವ ಅನುಭವ ಅತ್ಯಂತ ವಿಚಿತ್ರವಾಗಿತ್ತು. ಈ ಚಿತ್ರ ನೋಡಿ ಪ್ರೇಕ್ಷಕರು ನಕ್ಕಿದ್ದೇ ನಕ್ಕಿದ್ದು. ಸಿನಿಮಾಕ್ಕೇನೋ ಇದು ಸರಿ. ಆದರೆ ಇಂದಿನ ಕಾಲದಲ್ಲಿ ಯಾವ ಹುಡುಗಿ ಡ್ರೆಸ್‌ ಜೊತೆಗೆ ಎಂತಹ ಲಿಂಜರಿ ಧರಿಸಬೇಕು ಎಂದು ತಿಳಿಯಲು ಇಚ್ಛಿಸುವುದಿಲ್ಲ ಹೇಳಿ?

`ಲಿಂಜರಿ' ಇದು ಫ್ರೆಂಚ್‌ ಮೂಲದ ಶಬ್ದ. ಇನ್ನರ್‌ ವೇರ್‌ ಬಾಬತ್ತಿನಲ್ಲಿ ಫ್ರಾನ್ಸ್ ನವರು ಅಳೆದೂ ತೂಗಿ ನೋಡುತ್ತಾರೆ. ಈ ಕುರಿತಂತೆ ಅವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಕಲಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಅವರು ಫ್ಯಾಷನ್‌, ಪರ್ಫ್ಯೂಮ್ ಮತ್ತು ಲಿಂಜರಿಯ ಬಾಬತ್ತಿನಲ್ಲಿ ಅತ್ಯಂತ ರಸಿಕ ಮನೋಭಾವದವರು. ಈಗಲೂ ಲಿಂಜರಿಯ ಸಮಸ್ತ ಬ್ರ್ಯಾಂಡ್‌ಗಳ ಬೆಡಗಿಯರಿಗೆ ಫ್ರಾನ್ಸ್ ನ ಲಿಂಜರಿಗಳೇ ಇಷ್ಟವಾಗುತ್ತವೆ.

ಹಾಲಿವುಡ್‌ನಿಂದ ಬಾಲಿವುಡ್‌ ತನಕ ಬಹಳಷ್ಟು ನಾಯಕಿಯರ ಕರ್ವಿ ಬಾಡಿ ಹಾಗೂ ಬ್ರೆಸ್ಚೈನ್‌ನ ರಹಸ್ಯ ಲಿಂಜರಿಯಲ್ಲೇ ಅಡಗಿದೆ ಎನ್ನುವುದು ಫ್ಯಾಷನ್‌ ಜಗತ್ತಿನ ನಂಬಿಕೆಯಾಗಿದೆ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಅವರ ತುಂಬಿ ತುಳುಕುವ ವಕ್ಷ ಸೌಂದರ್ಯದ ಯಶಸ್ಸು ಲಿಂಜರಿಗೇ ಸಲ್ಲುತ್ತದೆ.

ಲಿಂಜರಿ ಕೇವಲ ಒಂದು ಅಂಡರ್‌ ಗಾರ್ಮೆಂಟ್‌ ಅಷ್ಟೇ  ಅಲ್ಲ, ಹದಿಹರೆಯದವರಿಗೆ ಅದರಲ್ಲೂ ಯೌವನಕ್ಕೆ ಕಾಲಿಡುತ್ತಿರುವ ಹುಡುಗಿಯರಿಗೆ ಅವರ ಬೆಳವಣಿಗೆಯ ಪ್ರತೀಕವೇ ಆಗಿರುತ್ತದೆ. ಹದಿಹರೆಯದವರ ಸಮಸ್ಯೆ ಏನೆಂದರೆ, ಕಾರಣವಿಲ್ಲದೆಯೇ ಆತಂಕ ಪಟ್ಟುಕೊಳ್ಳುವುದು, ತಮ್ಮ ಬಗ್ಗೆ ತಾವೇ ಕೀಳರಿಮೆ ಹೊಂದುವುದು. ಲಿಂಜರಿಗಳ ಬಗೆ ಗೊತ್ತಿಲ್ಲದಿದ್ದರೆ ವಾರ್ಡ್‌ರೋಬ್‌ನಲ್ಲಿ ಲಿಂಜರಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಾವಿಲ್ಲಿ ಕೆಲವು ವಿಶಿಷ್ಟ ಬಗೆಯ ಲಿಂಜರಿಗಳ ಬಗ್ಗೆ ತಿಳಿಸುತ್ತಿದ್ದೇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ