ಹಾಯಿಸೋಣ.....
ಈಗ ಫ್ಯಾಷನ್ನಿನ ಯುಗ. ಈಗ ಎಲ್ಲರೂ ಹೊಸ ಸ್ಟೈಲ್ ತಮ್ಮದಾಗಿಸಿಕೊಂಡು ಹೆಚ್ಚು ಸುಂದರವಾಗಿ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಸ್ಪರ್ಧಿಸುತ್ತಿದ್ದಾರೆ. ಅದಕ್ಕೆ ಹೊಸ ಫ್ಯಾಷನ್ ತನ್ನ ಹೊಸ ರೂಪ ತೋರಿಸುತ್ತಿದೆ. ಟ್ರೆಡಿಶನಲ್ ಫ್ಯಾಷನ್ ಪಾರಂಪರಿಕ ಉಡುಪುಗಳ ಮೂಲರೂಪವನ್ನು ಇಟ್ಟುಕೊಂಡು ಅವುಗಳಲ್ಲಿ ಕೆಲವು ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಸೀರೆ ಹಾಗೂ ಸಲ್ವಾರ್ ಸೂಟ್ ನಮ್ಮ ಪಾರಂಪರಿಕ ಉಡುಪುಗಳಾಗಿವೆ. ಆದರೆ ಇಂದು ಫ್ಯಾಷನ್ ಲೋಕದಲ್ಲಿ ಈ ಉಡುಪುಗಳಲ್ಲಿ ಹೊಸ ಹೊಸ ಬದಲಾವಣೆ ತಂದು ಅವನ್ನು ನ್ಯೂ ಫ್ಯಾಷನ್ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ಆದರೆ ಪಾಶ್ಚಿಮಾತ್ಯ ಉಡುಪುಗಳಲ್ಲಿ ಯಾವುದೇ ವಿಶೇಷ ಬದಲಾವಣೆಗಳು ಕಾಣುವುದಿಲ್ಲ. ಅಲ್ಲಿನ ಜೀನ್ಸ್ ಟಾಪ್, ತ್ರೀ ಫೋರ್ಥ್, ಮಿಡಿ, ಫ್ರಾಕ್, ಮ್ಯಾಕ್ಸಿ, ಫುಲ್ ಪ್ಯಾಂಟ್, ಹಾಫ್ ಪ್ಯಾಂಟ್ ಇವೆಲ್ಲ ಉಡುಪುಗಳು ಹಿಂದಿನ ಕಾಲದಿಂದ ಇಂದಿನವರೆಗೂ ಚಾಲನೆಯಲ್ಲಿವೆ. ಆದರೆ ವ್ಯತ್ಯಾಸವೆಂದರೆ ಈ ಉಡುಪುಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಅವಕ್ಕೆ ಹೊಸ ಲುಕ್ ಕೊಡಲಾಗುತ್ತದೆ. 70ರ ದಶಕದಲ್ಲಿ ಬೆಲ್ ಬಾಟಮ್ ಪ್ಯಾಂಟು ಹಾಗೂ ಜೀನ್ಸ್ ನ್ನು ಧರಿಸುತ್ತಿದ್ದರು. 80 ರಿಂದ 90ರವರೆಗಿನ ದಶಕದಲ್ಲಿ ಈ ಪ್ಯಾಂಟ್‌ಗಳಲ್ಲಿ ಬದಲಾವಣೆ ಬಂದಿತು. ಅವುಗಳ ಬಾಟಮ್ ಚಿಕ್ಕದಾಯಿತು. 90 ರಿಂದ 2000ರವರೆಗಿನ ದಶಕದಲ್ಲಿ ಇವುಗಳಲ್ಲಿ ಮತ್ತೆ ಬದಲಾವಣೆ ಬಂದಿತು ಮತ್ತು ಹಳೆಯ ಬೆಲ್ ಬಾಟಮ್ ಪ್ಯಾಂಟ್‌ಗಳ ಕಾಲ ಬಂದಿತು. ಆದರೆ 2010 ಬರುತ್ತವೆ ಮತ್ತೆ ಬಾಟಮ್ ಚಿಕ್ಕದಾಯಿತು. ಶರೀರದಲ್ಲಿ ಫಿಟ್ ಆಗುವ ಚಿಕ್ಕ ಬಾಟಮ್ ನ ಪ್ಯಾಂಟ್‌ಗಳ ಸುರಿಮಳೆ ಶುರುವಾಯಿತು. ಈಗಲೂ ಫಿಟ್ ಆಗಿದ್ದು ಬಾಡಿಶೇಪ್ ತೋರಿಸುವ ಪ್ಯಾಂಟ್‌ಗಳ ಫ್ಯಾಷನ್ ಇದೆ. ಟೀಶರ್ಟ್ ಮತ್ತು ಟಾಪ್ಸ್ ಬಗ್ಗೆ ಹೇಳುವುದಾದರೆ ಅವುಗಳ ಡಿಸೈನ್ ಮತ್ತು ಪ್ಯಾಟರ್ನ್ ಬದಲಿಸಿ ಅವಕ್ಕೆ ನ್ಯೂ ಫ್ಯಾಷನ್ ಎಂದು ಕರೆಯಲಾಗುತ್ತದೆ. ಬದಲಾದ ಸಮಯದೊಂದಿಗೆ 2015ರ ಫ್ಯಾಷನ್‌ನಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆಯೆಂದು ತಿಳಿಯೋಣ ಬನ್ನಿ.
ಉಡುಪುಗಳು
ಪಾರಂಪರಿಕ ಉಡುಪುಗಳನ್ನು ನೋಡುವಾಗ ಸಲ್ವಾರ್ ಸೂಟ್‌ನಲ್ಲಿ ಸಡಿಲವಾದ ಮತ್ತು ಲಾಂಗ್ ಅನಾರ್ಕಲಿ ಡ್ರೆಸ್‌ನ ಫ್ಯಾಷನ್ ಚಾಲನೆಯಲ್ಲಿದೆ. ಸೂಟ್ ಆದರೂ ಇದರಲ್ಲಿ ಬ್ಲೌಸ್‌ನಂತೆ ಹಿಂದೆ ಡೀಪ್ ನೆಕ್ ಇರುತ್ತದೆ. ಕುಚ್ಚು ಸಿಕ್ಕಿಸಿ ಇನ್ನಷ್ಟು ಸುಂದರಗೊಳಿಸಬಹುದು. ಸ್ಲೀವ್ ಲೆಸ್, ಹಾಫ್ ಸ್ಲೀವ್, ಮೆಗಾ ಸ್ಲೀವ್, ತ್ರೀ ಫೋರ್ಥ್ ಮತ್ತು ಫುಲ್ ಸ್ಲೀವ್ ಗಳನ್ನು ಅವರವರ ಇಚ್ಛೆಗೆ ತಕ್ಕಂತೆ ಆರಿಸಿಕೊಳ್ಳಬಹುದು. ನೀವು ಉದ್ದವಾಗಿದ್ದರೆ ಎಂಪೈರ್ ಅಥವಾ ವೇಸ್ಟ್ ಲೈನ್‌ನ ಕಾಂಟ್ರಾಸ್ಟ್ ಕಲರ್ ಇರುವ ಅನಾರ್ಕಲಿ ಧರಿಸಿ. ನಿಮ್ಮ ಎತ್ತರ ಕಡಿಮೆಯಾಗಿದ್ದರೆ. ವೈಟ್ ಫ್ಯಾಬ್ರಿಕ್‌ನ ಕಡಿಮೆ ಫ್ಲೇಯರ್ಸ್ ಮಂಡಿಯವರೆಗೆ ಅನಾರ್ಕಲಿ ಹೊಲಿಸಿ. ಹೈಟ್ ಕಡಿಮೆಯಾಗಿದ್ದರೂ ನೀವು ಹೆಲ್ದಿಯಾಗಿದ್ದರೆ ಅನಾರ್ಕಲಿ ಧರಿಸದಿರುವುದೇ ಒಳ್ಳೆಯದು. ಅದನ್ನು ಧರಿಸಲೇಬೇಕೆಂದಿದ್ದರೆ ಸಿಂಪಲ್ ಕಲರ್‌ನಲ್ಲಿ ಸಿಂಪಲ್ ಡಿಸೈನ್‌ನ ಫ್ಲೇಯರ್ ಮತ್ತು ಕಡಿಮೆ ಮೊಗ್ಗುಗಳನ್ನು ಮಾಡಿಸಿ. ತೆಳ್ಳಗಿನ ಹುಡುಗಿಯರಿಗೆ ಅನಾರ್ಕಲಿ ಪರ್ಫೆಕ್ಟ್ ಆಗಿರುತ್ತದೆ. ದಪ್ಪ ಹುಡುಗಿಯರು ಶರೀರದ ಅಪ್ಪರ್ ಪಾರ್ಟ್‌ನಿಂದ ಶುರುವಾಗುವ ಅರ್ನಾಕಲಿ ಆಯ್ದುಕೊಳ್ಳಬೇಕು.