ಹಸಿರು ಬಣ್ಣದ ಪಟಿಯಾಲಾ ಸಲ್ವಾರ್‌ ಜೊತೆಗೆ ಶಾರ್ಟ್‌ ಮೆಜೆಂತಾ ಬಣ್ಣದ ಸ್ಲೀವ್ ಲೆ‌ಸ್‌ ಕುರ್ತಾ. ಇದರ ಮೇಲಿನ  ಗ್ರೀನ್ ಗೋಲ್ಡನ್‌ ಎಂಬ್ರಾಯಿಡರಿಯನ್ನು ನೋಡಿಯೇ ತಣಿಯಬೇಕು. ಮ್ಯಾಚಿಂಗ್‌ ಬಾಟಮ್ ಗ್ರೀನ್‌ ದುಪಟ್ಟಾ ಬೆಳ್ಳಿ ಅಂಚಿನಿಂದ ಶೋಭಾಯಮಾನಾಗಿದೆ.

 

ಬ್ರೋಕೇಡ್‌ನ ಲೈನಿಂಗ್‌ವುಳ್ಳ ಗೋಲ್ಡನ್‌ ನೆಟೆಡ್‌ ಲಹಂಗಾ. ಅದರ ಬಾರ್ಡರ್‌ನಲ್ಲಿ ಗೋಲ್ಡನ್‌ಗ್ರೀನ್‌ ಕಾಂಬಿನೇಶನ್ ಕಣ್ಸೆಳೆಯುವಂತಿದೆ. ಜೊತೆಗೂಡಿರುವ ಮೆಜೆಂತಾ ಕಲರ್‌ನ ಸ್ಟ್ರಾಪ್‌ವುಳ್ಳ ಸ್ಟೈಲಿಶ್‌ ಸ್ಲೀವ್ ಲೆ‌ಸ್‌ ಬ್ಲೌಸ್‌ ಅಚ್ಚುಕಟ್ಟಾಗಿ ಕೂತಿದೆ. ಎರಡಕ್ಕೂ ಮ್ಯಾಚಿಂಗ್‌ ಆಗುವ ದುಪಟ್ಟಾ ಇವಳನ್ನು ಗ್ಲಾಮರಸ್‌ ಕ್ವೀನ್‌ ಆಗಿಸಿದೆ.

fashion-B

ಬ್ರೋಕೇಡ್‌ನ ಮೆರೂನ್‌ ದಟ್ಟ ನೆರಿಗೆಗಳ ಸಲ್ವಾರ್‌ ಮೇಲೆ ಪರ್ಪಲ್ ಶಾರ್ಟ್‌ ಕುರ್ತಾ. ಇದರ ಮೇಲಿನ  ಕಸೂತಿಯಂತೂ ನಯನಾಕರ್ಷಕ. ಜೊತೆಗೆ ಡಬ್ಬಲ್ ಶೇಡೆಡ್‌ ದುಪಟ್ಟಾ ಚೆನ್ನಾಗಿ ಹೊಂದುತ್ತದೆ.

 

ಸಿಲ್ವರ್‌ ಪ್ರಿಂಟ್ಸ್ ವುಳ್ಳ ಬೇಬಿ ಪಿಂಕ್‌ ಕಲರ್‌ನ, ಮೊಗ್ಗಿನ ಲಹಂಗಾ ಭಾರಿ ಭರ್ಜರಿ ಗೆಟಪ್‌ ಹೊಂದಿದೆ. ಜೊತೆಗೆ ಸಿಲ್ಕ್ ನ ಶಾರ್ಟ್‌ಸ್ಲೀವ್ಸ್ ಮೇಲೆ ಎಂಬ್ರಾಯಿಡರಿಯುಳ್ಳ ಶಾರ್ಟ್‌ ಕುರ್ತಾ ಹಾಗೂ ನೆಟೆಡ್‌ ಸೀಕ್ವೆನ್ಸ್ ನ ದುಪಟ್ಟಾ ಸ್ಪೆಷಲ್ ಎನಿಸುತ್ತದೆ.

 

ಪ್ಲೇನ್‌ ಗ್ರೀನಿಶ್‌ ಬ್ಲೂ ಸಲ್ವಾರ್‌ನ ಜೊತೆ ಡಾರ್ಕ್‌ ಬ್ಲೂ ಬಾರ್ಡರಿನ, ಡಬಲ್ ಕಲರ್‌ ಎಂಬ್ರಾಯಿಡರಿಯುಳ್ಳ ಗ್ರೀನಿಶ್‌ ಬ್ಲೂ ಕುರ್ತಾ. ಇದರ ಮೇಲೆ ಟ್ರಾನ್ಸ್ ಪರೆಂಟ್‌ ಸ್ಲೀಕ್ಸ್ ಮತ್ತು ಡಬಲ್ ಶೇಡೆಡ್‌ ದುಪಟ್ಟಾ ಮನಮೋಹಕವಾಗಿದೆ.

fashion-C

ಬ್ರೋಕೇಡ್‌ನಲ್ಲಿ ಪರ್ಪಲ್ ಬಾರ್ಡರ್‌ವುಳ್ಳ ಅಚ್ಚ ಗಿಳಿ ಹಸಿರಿನ ಸ್ಲೀವ್ ಲೆಸ್ ಫ್ರಾಕ್‌ ಸೂಟ್‌, ಭುಜದ ಬಳಿ ಹಾಗೂ ಫ್ರಂಟ್‌ನಲ್ಲಿನ ವಿಶಿಷ್ಟ ಕಸೂತಿ ಡಿಸೈನ್‌ ಈ ಉಡುಗೆಯ ಕಳೆ ಹೆಚ್ಚಿಸಿದೆ. ರುಮಾಲಿನಂತೆ ಸುತ್ತಿರುವ ಮ್ಯಾಚಿಂಗ್‌ ದುಪಟ್ಟಾ ಬೊಂಬಾಟ್‌ಆಗಿದೆ.

 

ಸೀ ಗ್ರೀನ್‌ ಬಣ್ಣದ ಲಹಂಗಾ ಮೇಲೆ ಸಿಲ್ವರ್‌ ಗೋಲ್ಡನ್‌ ಶೇಡೆಡ್‌ ಬುಟ್ಟಾಗಳ ವಿನ್ಯಾಸ. ಜೊತೆಗೆ ಗ್ರೀನ್‌ ಬಾರ್ಡರ್‌ವುಳ್ಳ ಸ್ಕಿನ್‌ಕಲರ್‌ ಬ್ಲೌಸ್‌. ಇದರಲ್ಲಿ ಬ್ರೋಕೇಡ್‌ನ ಫುಲ್ ಸ್ಲೀವ್ಸ್ ಅಡಗಿದೆ. ಬಾರ್ಡರ್‌ವುಳ್ಳ ದುಪಟ್ಟಾ ಮ್ಯಾಚಿಂಗ್‌ ಬ್ರೋಕೆಡ್‌ನದಾಗಿದೆ.

 

ಡಾರ್ಕ್‌ ಗ್ರೀನ್‌ ಬಣ್ಣದ ಸಲ್ವಾರ್‌ ಸೂಟ್‌ನೊಂದಿಗೆ, ಸ್ಕಿನ್‌ ಕಲರ್‌ನ ಅದ್ಭುತ ಕಸೂತಿಯುಳ್ಳ ಸ್ಲೀವ್ ಲೆಸ್ ಕುರ್ತಾ ಹಾಗೂ ಶೇಡೆಡ್‌ ದುಪಟ್ಟಾ ಇವಳನ್ನು ಧರೆಗಿಳಿದ ವನದೇವಿ ಆಗಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ