ಈ ವರ್ಷದ ಹೇಮಂತ ಶಿಶಿರ ಋತು ಇಂಡಿಯಾ ಫ್ಯಾಷನ್‌ ವೀಕ್‌ನ 25ನೇ ಆವೃತ್ತಿಗೆ ದ್ಯೋತಕವಾಗಲಿದೆ. ಈ ಇವೆಂಟ್‌ನವದೆಹಲಿಯಲ್ಲಿ ಖ್ಯಾತ ಡಿಸೈನರ್ಸ್‌, ಮಾಡೆಲ್‌, ಸ್ಟಾರ್‌ಗಳನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸುತ್ತದೆ. ಕಳೆದ 2006-2014ರವರೆಗೂ ವೀಲ್ಸ್ ಲೈಫ್‌ ಸ್ಟೈಲ್ ಇದರ ಅಫಿಶಿಯಲ್ ಸ್ಪಾನ್ಸರ್‌ ಆಗಿತ್ತು, ಈ ವರ್ಷ ಅಮೆರನ್‌.ಇನ್‌ ಅದರ ಸ್ಥಾನದಲ್ಲಿದೆ.

ಭಾರತೀಯ ಫ್ಯಾಷನ್‌ ಡಿಸೈನರ್‌ಗಳಲ್ಲಿ ಖ್ಯಾತನಾಮರು ದೆಹಲಿಯಲ್ಲಿ ಒಟ್ಟುಗೂಡಿ ತಮ್ಮ ಉತ್ಕೃಷ್ಟ `ಹಾಟ್‌ ಕೌಚರ್‌' ಪ್ರದರ್ಶಿಸುವ ಸುಸಂದರ್ಭವಿದು. ಹೀಗಾಗಿ ಇಂಡಿಯನ್‌ ಫ್ಯಾಷನ್‌ ವೀಕ್‌ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಫ್ಯಾಷನ್ ಉದ್ಯಮಕ್ಕೆ ಅತ್ಯುತ್ತಮ ವೇದಿಕೆ ಒದಗಿಸುತ್ತಿದೆ, ಹೀಗಾಗಿ ಇದರ ಆಯೋಜಕರು ಇದನ್ನು ಅರ್ಧ ವಾರ್ಷಿಕ ಇವೆಂಟ್‌ ಆಗಿಸಲು ಯೋಚಿಸುತ್ತಿದ್ದಾರೆ.

ಡಿಸೈನರ್‌ ಅಂಜು ಮೋದಿ ತಮ್ಮ ಹೊಸ ವಸ್ತ್ರ ಸಂಗ್ರಹಕ್ಕೆ `ಹೌ ಟು ರೈಟ್‌ ಎ ಫೇರಿ ಟೇಲ್‌' ಎಂದು ಹೆಸರಿಸಿ ಅವರ್ಣನೀಯ ವಿನ್ಯಾಸಗಳನ್ನು ಪ್ರದರ್ಶಿಸಿದರು. ಈಕೆ ತಮ್ಮ ಮಾಡೆಲ್ ಗಳಿಗೆ ಅರಮನೆಯಂಥ ಕಿರೀಟ, ರೆಕ್ಕೆಗಳಿರುವ ಈವ್ನಿಂಗ್‌ ಗೌನ್‌, ಬಗೆಬಗೆಯ ಬೆಲ್ಟ್, ಗ್ರೀಕ್‌ ದೇವತೆ ಹರ್ಮೆಸ್‌ನಂಥ ಸ್ನೀಕರ್ಸ್‌, ಗಾರ್ಮೆಂಟ್ಸ್ ಮೇಲೆ ಡಿಸ್ನಿಲ್ಯಾಂಡ್‌ನಂಥ ಕಸೂತಿ ಇತ್ಯಾದಿ ಒದಗಿಸಿ ಪ್ರೇಕ್ಷಕರ ಕಣ್ಮನ ತಣಿಸಿದರು. ಇಡೀ ರಾಂಪ್‌ನ್ನು ದೇದೀಪ್ಯಮಾನವಾಗಿ ಬೆಳಗುತ್ತಿರಲು ಮಾಡೆಲ್ಸ್ ಎಲ್ಲಾ ಬಗೆಯ ಥೀಮ್ ಗಳನ್ನೂ ಜೀವಂತಗೊಳಿಸಿದರು.

ಅವರು ಎಸಿಮೆಟ್ರಿಕ್‌ ಕಲೀದಾರ್‌ಗಳು, ಕೋಟ್‌, ಬೆಲ್ ಸ್ಲೀವ್ಡ್ ಜ್ಯಾಕೆಟ್ಸ್, ಬ್ಯೂಟಿಫುಲ್ ರಿಬ್ಬನ್‌ವುಳ್ಳ ಕೇಪ್ಸ್, ಫ್ಲೈಯಿಂಗ್‌ ಬರ್ಡ್ಸ್ ವುಳ್ಳ ಓವರ್‌ ಕೋಟ್‌ ಇತ್ಯಾದಿ ವಿಭಿನ್ನ ವಿನ್ಯಾಸಗಳನ್ನು ಪ್ರದರ್ಶಿಸಿದರು. ಜೊತೆಗೆ ಲಹಂಗಾ ಸ್ಕರ್ಟ್‌, ಸ್ಟ್ರೇಟ್ ಪ್ಯಾಂಟ್ಸ್, ಚೂಡೀದಾರ್‌ಗಳಂಥ ಸಾಧಾರಣ ಉಡುಗೆಗಳೂ ವಿಶಿಷ್ಟವೆನಿಸಿದ. ಚಿತ್ರವಿಚಿತ್ರ ಹೂಬಳ್ಳಿ, ಛತ್ರಿ, ಸ್ನೋ ಫ್ಲೇಕ್ಸ್, ಹಾಟ್‌ ಏರ್ ಬೆಲೂನ್‌, ಸಿನಿಕ್‌ ಶಿಪ್‌ಗಳಂಥ ಕಸೂತಿ ವಿನ್ಯಾಸ ಎಲ್ಲರ ಮನಗೆದ್ದ. ಪುರುಷ ಮಾಡೆಲ್ ‌ಗಳಿಗೆ ಮ್ಯಾಚಿಂಗ್‌ ಲಾಂಗ್‌ ಕೋಟ್ ಪ್ಯಾಂಟುಗಳು, ಫಾರ್ಮ್‌ವೇರ್‌ನಲ್ಲಿ ಸಾಂಪ್ರದಾಯಿಕ ಅಚಕನ್‌ಗಳಿಗೆ ಪರ್ಯಾಯ ಎನಿಸಿದ್ದವು.

ಇಡೀ ವೇದಿಕೆಯ ಸೆಟ್‌ ರಾಜಸ್ಥಾನದ ಕೋಟೆಯಂತಿದ್ದು, ಅದರಲ್ಲಿ ತೊಗಲು ಬೊಂಬೆಗಳ ಅಲಂಕಾರ ಇತ್ತು. ಡಿಸೈನರ್‌ಗಳಾದ ಮನೀಶ್‌ ಮಲ್ಹೋತ್ರಾ, ಲೆಂಡೆಲ್ ರಾಡ್ರಿಕ್ಸ್, ಸುನೀಲ್ ವ‌ರ್ಮ, ತರುಣ್‌ ತಹ್ಲಾನಿ, ರಾಘವೇಂದ್ರ ರಾಠೋರ್‌ ಮುಂತಾದವರು ತಮ್ಮ ಉತ್ಕೃಷ್ಟ ವಿನ್ಯಾಸಗಳನ್ನು ಪಿಂಕ್‌, ರೆಡ್‌, ಆರೆಂಜ್‌ ಬಣ್ಣಗಳಲ್ಲಿ ಪ್ರಸ್ತುತಪಡಿಸಿದರು.

ಪ್ರದರ್ಶನದ ಆರಂಭ

ಪ್ರಸಿದ್ಧ ಡಿಸೈನರ್‌ ರಾಜೇಶ್‌ ಪ್ರತಾಪ್‌ ಸಿಂಗ್‌ ಈ ಪ್ರದರ್ಶನವನ್ನು ಒಂದು ಬುಧವಾರದ ಸಂಜೆ ಉದ್ಘಾಟಿಸಿದರು. ಅದರಲ್ಲಿ ಅವರು ಒಂದು ಆಸ್ಪತ್ರೆಯ ವಾರ್ಡ್‌ ದೃಶ್ಯ ಪ್ರಸ್ತುತಪಡಿಸಿದರು. ಮೇಲ್ ಫೀಮೇಲ್ ‌ನರ್ಸುಗಳು, ಅಚ್ಚ ಬಿಳುಪಿನ ಬೆಡ್‌ ಶೀಟ್‌ಗಳೊಂದಿಗೆ ಅವರ ಮಾನೋಕ್ರೊಮ್ಯಾಟಿಕ್‌ ಸಂಗ್ರಹ ಮೊದಲಿಟ್ಟಿತು. ಇಡೀ ವೇದಿಕೆ ಇದ್ದಕ್ಕಿದ್ದಂತೆ ಆಸ್ಪತ್ರೆ ವಾತಾವರಣ ತಾಳಿತು. ಮೆಡಿಕಲ್ ಬೆಡ್ಸ್, ಗ್ಲೂಕೋಸ್‌ ಡ್ರಿಪ್‌ ಬ್ಯಾಗ್ಸ್, ಫೇರಿ ವೈಟ್ಸ್ ಜೊತೆಗೂಡಿದ್ದವು. ಹಿನ್ನೆಲೆ ಸಂಗೀತ ಅಷ್ಟೇ ಮಾದಕವಾಗಿತ್ತು. ಕರ್ಷ್‌ ಕಾಳೆ ಮತ್ತು ಅಂಕುರ್‌ ತಿವಾರಿ ಒದಗಿಸಿದ ಮೋಹಕ ಸಂಗೀತ ಕ್ಯಾಟ್‌ ವಾಕ್‌ ಮಾಡುವವರಿಗೆ ಒಳ್ಳೆ ಮೂಡ್‌ ನೀಡಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ