ನೀವು ಸಹ ಹಾಲಿವುಡ್‌ ನಟಿ ಜೆಸಿಕಾ ಪಾರ್ಕರ್‌, ಸಿಂಗರ್‌ ಸೆಲೆನಾ ಗೋಮೇಜ್‌ ಅಥವಾ ಬಾಲಿವುಡ್‌ ನಟಿ ಬಿಪಾಶಾ ಬಸುರಂತೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಇಚ್ಛಿಸಿದ್ದೀರಾ? ಹೌದು ಎಂದಾದರೆ ನಿಮಗೆ ಬೋಲ್ಡ್ ಸ್ಟೇಟ್‌ಮೆಂಟ್‌ ಕೊಡುವ ಜೊತೆ ಜೊತೆಗೆ ಕೂಲ್ ‌ಫೀಲ್ ‌ಮಾಡುವಂತಹ ಡ್ರೆಸ್‌ ಬಗ್ಗೆ ತಿಳಿಸುತ್ತೇವೆ.

ಒಂದುವೇಳೆ ನೀವು ವಿಶೇಷ ಡ್ರೆಸ್‌ ಪರ್ಸನ್‌ ಅಲ್ಲದಿದ್ದರೆ ಈ ಡ್ರೆಸ್‌ ನಿಮಗೆ ಪರ್ಫೆಕ್ಟ್ ಆಗಿರುತ್ತದೆ. 1940ರ ಯೂರೋಪಿಯನ್‌ಫ್ಯಾಷನ್‌ನಿಂದ ಪ್ರೇರಿತವಾದ ಮ್ಯೂಲೆಟ್‌ ಡ್ರೆಸ್‌ ಇಂದು ರೆಡ್‌ ಕಾರ್ಪೆಟ್‌ ಸ್ಟೈಲ್ ಆಗುವ ಜೊತೆ ಜೊತೆಗೆ ಫ್ಯಾಷನ್‌ನೊಂದಿಗೆ ಸಾಗುವವರ ಹಾಟ್‌ ಪಿಕ್‌ ಕೂಡ ಆಗಿದೆ. ಈ ಡ್ರೆಸ್‌ ಧರಿಸಿ ನೀವು ಯಾವುದಾದರೂ ಪಾರ್ಟಿಯ ವೈಭವ ಹೆಚ್ಚಿಸಬಹುದು. ಮುಂದಿನಿಂದ ಶಾರ್ಟ್‌ ಅಂದರೆ ಎತ್ತರದ ಮತ್ತು ಹಿಂದಿನಿಂದ ಲಾಂಗ್‌ ಅಂದರೆ ಉದ್ದವಾಗಿರುವುದರಿಂದ ಈ ಡ್ರೆಸ್‌ನ್ನು ಹೈಲೋ ಅಥವಾ ವಾಟರ್‌ ಫಾಲ್ ‌ಡ್ರೆಸ್‌ ಎಂದು ಕರೆಯುತ್ತಾರೆ. ಫ್ಯಾಷನ್‌ ಫ್ಲೋರ್‌ನಲ್ಲಿ ಚೆಲುವು ತೋರಿಸುವ ಮ್ಯೂಲೆಟ್‌ ಡ್ರೆಸ್‌ ಧರಿಸುವವರಿಗೆ ಸ್ಟನ್ನಿಂಗ್‌ ಲುಕ್‌ ಕೊಡುತ್ತದೆ.

ಈ ಡ್ರೆಸ್‌ನ ವೆರೈಟಿಯ ಬಗ್ಗೆ ಮಾತಾಡಿದರೆ ಫ್ಯಾಷನ್‌ ಮಾರ್ಕೆಟ್‌ನಲ್ಲಿ ಮ್ಯೂಲೆಟ್‌ ಟ್ಯೂನಿಕ್ಸ್, ಮ್ಯೂಲೆಟ್‌ ಡ್ರೆಸೆಸ್‌, ಸ್ಕರ್ಟ್ಸ್, ಟಾಪ್ಸ್ ಮತ್ತು ಜಾಕೆಟ್ಸ್ ಲಭ್ಯವಿವೆ. 2 ಲುಕ್‌ ಕೊಡುವ ಈ ಸಿಂಗಲ್ ಡ್ರೆಸ್‌ ಎದುರಿನಿಂದ ಬಿಸ್‌ನೆಸ್‌ ಅಥವಾ ಪ್ರೊಫೆಷನಲ್ ಸ್ಟೈಲ್ ಲುಕ್‌ ಮತ್ತು ಹಿಂದಿನಿಂದ ಪಾರ್ಟಿ ಸ್ಟೈಲ್ ‌ಲುಕ್‌ ಕೊಡುತ್ತದೆ. ಈ ಎಲ್ಲ ಡ್ರೆಸ್‌ಗಳು ಎದುರಿನಿಂದ ಶಾರ್ಟ್‌ ಮತ್ತು ಹಿಂದಿನಿಂದ ಲಾಂಗ್‌ ಟೇಲ್ ‌ಇರುತ್ತದೆ. ಮ್ಯೂಲೆಟ್‌ ಡ್ರೆಸ್‌ ಬಹಳಷ್ಟು ಬೋಲ್ಡ್ ಮತ್ತು ಸೆಕ್ಸಿ ಲುಕ್‌ ಕೊಡುತ್ತದೆ. ಕೆಲವು ಮ್ಯೂಲೆಟ್‌ ಡ್ರೆಸ್‌ಗಳಲ್ಲಿ ಫಿಟೆಡ್‌ ಮಿನಿ ಸ್ಕರ್ಟ್‌ ಕೂಡ ಅಟ್ಯಾಚ್ಡ್ ಆಗಿರುತ್ತದೆ. ಕೆಲವು ಡ್ರೆಸ್‌ಗಳಲ್ಲಿ ಬರೀ ಹೈಲೋ ಮಾತ್ರ ಇರುತ್ತದೆ. ಈ ಮ್ಯೂಲೆಟ್‌ ಡ್ರೆಸ್‌ಗಳು ಸೆಲೆಬ್ರಿಟಿಗಳಿಗೆ ವಿಶೇಷವಾಗಿ ಇಷ್ಟವಾಗಿದೆ. ಇವನ್ನು ಅವರು ರೆಡ್‌ ಕಾರ್ಪೆಟ್‌ನಿಂದ ಹಿಡಿದು ಪಾರ್ಟಿಗಳವರೆಗೆ ಧರಿಸಿ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾರೆ.

ಪ್ರತಿ ಫಿಗರ್‌ಗೂ ಪರ್ಫೆಕ್ಟ್ ಲುಕ್‌ ಮ್ಯೂಲೆಟ್‌ ಡ್ರೆಸ್‌ ಪ್ರತಿ ಫಿಗರ್‌ನ ಮಹಿಳೆಯರಿಗೆ ಸೂಟ್‌ ಆಗಿದ್ದು ಅವರಿಗೆ ಪರ್ಫೆಕ್ಟ್ ಲುಕ್ ಕೊಡುತ್ತದೆ. ಈ ಡ್ರೆಸ್‌ ಬರೀ ಉದ್ದವಾಗಿರುವ ಹಾಗೂ ತೆಳುವಾಗಿರುವ ಮಹಿಳೆಯರಿಗೆ ಮಾತ್ರ ಸೂಟ್‌ ಆಗುತ್ತದೆ ಎಂದು ಕೆಲವು ಮಹಿಳೆಯರು ಹೇಳುತ್ತಾರೆ. ಆದರೆ ಹಾಗೇನೂ ಇಲ್ಲ. ಉದ್ದವಿರುವ ಮಹಿಳೆಯರಿಗೆ ಮ್ಯೂಲೆಟ್‌ ಡ್ರೆಸ್‌ ಸೂಪರ್‌ ಮಾಡಲ್ ‌ರಂತಹ ಲುಕ್‌ ಕೊಡುತ್ತದೆ. ಭಾರಿ ಶರೀರದ ಮಹಿಳೆಯರಿಗೆ ಗ್ಯಾದರ್ಸ್‌ ಇಲ್ಲದ ಸ್ಟ್ರೇಟ್‌ ಕಟ್‌ನ ಮ್ಯೂಲೆಟ್‌ ಡ್ರೆಸ್‌ ಧರಿಸಬಹುದು ಹಾಗೂ ತಮ್ಮ ಕರ್ವ್ಸ್ ತೋರಿಸಬಹುದು. ಅಂತಹ ಮಹಿಳೆಯರು ವೇಸ್ಟ್ ಲೈನ್‌ ಮೇಲೆ ಸ್ಕೀನೀ ಬೆಲ್ಟ್ ಧರಿಸಿ ಬಾಡಿ ಶೇಪ್‌ಗೆ ಪರ್ಫೆಕ್ಟ್ ಲುಕ್‌ ಕೊಡಬಹುದು.

ಪಿಯರ್‌ ಶೇಪ್‌ನ ಮಹಿಳೆಯರು ಮ್ಯೂಲೆಟ್‌ ಡ್ರೆಸ್‌ನ ಟೇಲರ್ಡ್‌ ಕಟ್‌ ಧರಿಸಬಹುದು. ರೆಕ್ಟಾಂಗಲ್ ಶೇಪ್‌ನವರು ಹಿಂದಿನ ಸೈಡ್‌ಮೇಲೆ ಫ್ಲೇಯರ್ಸ್‌ ಇರುವಂಥದ್ದು ಹಾಗೂ ಬಲ್ಕಿ ಶರೀರದ ಹಾಗೂ ಕಡಿಮೆ ಎತ್ತರದ ಮಹಿಳೆಯರು ಅಸಮಾನ ಮ್ಯೂಲೆಟ್‌ ಡ್ರೆಸ್‌, ಹಿಂದೆ ಮತ್ತು ಮುಂದೆ ಉದ್ದದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ್ದನ್ನು ಆರಾಮವಾಗಿ ಧರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ