ಫ್ಯಾಷನ್ನಿನ ಪರಿಣಾಮ ಯುವಜನರಿಂದ ಹಿಡಿದು ವಯಸ್ಕರವರೆಗೂ ವ್ಯಾಪಿಸಿ ಕೊಂಡಿದೆ. ಯಾವುದೇ ಒಂದು ಹೊಸ ಟ್ರೆಂಡ್‌ಮಾರುಕಟ್ಟೆಗೆ ಬರುತ್ತಿದ್ದಂತೆ ಜನ ಅದನ್ನು ಅನುಸರಿಸಲು ನಾ ಮುಂದೆ ತಾ ಮುಂದೆ ಎನ್ನತೊಡಗುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಸ್ಮಾರ್ಟ್‌ ಆಗಿ ಕಾಣಲು ಇಚ್ಛಿಸುತ್ತಾರೆ.

ಫ್ಯಾಷನ್‌ ಯಾವಾಗಲೂ ಸಿನಿಮಾಗಳಿಂದಲೇ ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಕಾಲದ ನಾಯಕ ನಾಯಕಿಯರ ಅನುಕರಣೆ ಮಾಡುತ್ತಾರೆ. ಚಲನಚಿತ್ರ ಹಿಟ್‌ ಆಗುತ್ತಿದ್ದಂತೆ ಫ್ಯಾಷನ್‌ ಟ್ರೆಂಡ್‌ ಕೂಡ ಹಿಟ್‌ ಆಗಿಬಿಡುತ್ತದೆ.

ಫ್ಯಾಷನ್ನಿನ ಹೆಚ್ಚುತ್ತಿರುವ ಕ್ರೇಜ್‌ ಈ ಕುರಿತಂತೆ ಮುಂಬೈನ ಫ್ಯಾಷನ್‌ ಡಿಸೈನರ್‌ ಶೃತಿ ಸುಹಾಸ್‌ ಹೀಗೆ ಹೇಳುತ್ತಾರೆ, ``ಫ್ಯಾಷನ್‌ ಹಾಗೂ ಸ್ಟೈಲ್‌ನ್ನು ಮೈಗೂಡಿಸಿಕೊಳ್ಳುವವರಲ್ಲಿ ಮಹಿಳೆಯರು ಪುರುಷರನ್ನು ಹಿಂದೆ ಹಾಕುತ್ತಾರೆ. ಜಾಗತೀಕರಣದ ಕಾರಣದಿಂದ ಫ್ಯಾಷನ್‌ ಹಾಗೂ ಸ್ಟೈಲ್‌‌ನ ಕ್ರೇಝ್ ಹೆಚ್ಚಿದೆ. ನಿಮ್ಮ ದೇಹಕ್ಕೆ ಅನುರೂಪವಾಗುವಂತಹ ಪೋಷಾಕು ಧರಿಸುತ್ತಿದ್ದರೆ, ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರಗು ಬರುತ್ತದೆ. ಆತ್ಮವಿಶ್ವಾಸ ವರ್ಧಿಸುತ್ತದೆ.''

ಆದರೆ ಟ್ರೆಂಡ್‌ ಬದಲಾಗುತ್ತ ಇರುತ್ತದೆ. 20 ವರ್ಷಗಳ ಹಿಂದೆ ಯಾವ ಟ್ರೆಂಡ್‌ ಇತ್ತೋ, ಈಗ ಆ ಟ್ರೆಂಡ್‌ ಇಲ್ಲ. ಒಂದು ಟ್ರೆಂಡ್ ಸಾಮಾನ್ಯವಾಗಿ 20 ವರ್ಷಗಳ ಬಳಿಕ ಸಾಕಷ್ಟು ಬದಲಾಗುತ್ತದೆ.

ವ್ಯಕ್ತಿಗೆ ತನ್ನ ಪ್ರೊಫೆಷನಲ್, ಕಲ್ಚರ್‌ ಮತ್ತು ಪರ್ಸನಾಲಿಟಿಗೆ ತಕ್ಕಂತೆ ಒಂದು ಸ್ಟೈಲ್ ‌ಇರಬೇಕು. ಯಾವಾಗಲೂ ಸ್ಟೈಲ್‌ನ್ನು ಫಾಲೋ ಮಾಡಿ, ಆದರೆ ಟ್ರೆಂಡ್‌ನ್ನು ಅಲ್ಲ. ಸ್ಟೈಲ್ ‌ಹಾಗೂ ಟ್ರೆಂಡ್‌ ನಡುವೆ ಒಂದು ಸೂಕ್ಷ್ಮ ರೇಖೆ ಇರುತ್ತದೆ. ಅದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ವ್ಯಕ್ತಿ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡು ತನಗೆ ಯಾವುದು ಸರಿ ಹೊಂದುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಸ್ಟೈಲಿಶ್‌ ವ್ಯಕ್ತಿಗಳು ಯಾವಾಗಲೂ ಬೇರೆಯವರ ಪ್ರಶಂಸೆ ಪಡೆಯುತ್ತಿರುತ್ತಾರೆ.

ಸ್ಮೈಲ್ ಇಲ್ಲದ ಸ್ಟೈಲ್ ಅಪೂರ್ಣ

ಫ್ಯಾಷನ್‌ ಡಿಸೈನರ್‌ ಹೇಳುವ ಪ್ರಕಾರ, ಮುಂಬರುವ ವರ್ಷಗಳಲ್ಲಿ ಪ್ಲೀಟ್ಸ್ ಅಂದರೆ ನೆರಿಗೆಗಳ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಪ್ಲಾಜೊ ಪ್ಯಾಂಟ್‌, ನೀ ಲೆಂಥ್‌ ಪ್ಯಾಂಟ್‌, ಸ್ಕರ್ಟ್‌, ಸ್ಟ್ರೇಟ್‌ ಸೂಟ್‌ ಮುಂತಾದವು ಹೆಚ್ಚಿಗೆ ಚಾಲ್ತಿಗೆ ಬರಬಹುದು. ಪ್ರಖರ ವರ್ಣಗಳು ಹೆಚ್ಚು ಪ್ರಭಾವಿ ಎನಿಸುತ್ತವೆ. ಅದರಲ್ಲಿ ಎಮರಾಲ್ಡ್, ಬರ್ನ್‌ ಆರೆಂಜ್‌, ಚೆರ್ರಿ, ಸ್ಲೇಟ್‌ ಕಲರ್‌, ನ್ಯಾಚುರಲ್ ಪ್ರಿಂಟ್ಸ್,  ಟ್ರೈಬಲ್ ಪ್ರಿಂಟ್ಸ್ ಮುಂತಾದವು ಹೆಚ್ಚು ಚಾಲ್ತಿಯಲ್ಲಿರುತ್ತವೆ. ನೀವು ಯಾವುದೇ ಪೋಷಾಕು ಧರಿಸಿ, ಆದರೆ ಅದನ್ನು ನೀವು ಅದನ್ನು ಆತ್ಮವಿಶ್ವಾಸದ ಜೊತೆಗೆ ಪ್ರಸ್ತುತಪಡಿಸದೇ ಇದ್ದರೆ, ಯಾವುದೂ ಸರಿಕಾಣದು. ಇದರ ಜೊತೆಗೆ ಮುಖದಲ್ಲಿ ನಗುವಿನ ಅಸ್ತಿತ್ವ ಇರಬೇಕು. ಅದೇ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಆಗ ನೀವು ಗೊತ್ತಿದ್ದೂ, ಗೊತ್ತಿಲ್ಲದೆಯೋ ಇತರರ ಪ್ರೀತಿಗೆ ಪಾತ್ರರಾಗುವಿರಿ. ಆದರೆ ಸುಂದರ ನಗುವೊಂದು ಹೊಳೆಯುವ ಹಲ್ಲುಗಳಿಲ್ಲದೆ ಸಪ್ಪೆ ಎನಿಸುತ್ತದೆ. ಆದರೆ ಈಗ ಕ್ಲೋಸಪ್‌ ಡೈಮಂಡ್‌ ಅಟ್ರ್ಯಾಕ್ಷನ್‌ ಈ ಸಮಸ್ಯೆಗೆ ಪರಿಹಾರವಾಗಿದೆ. ಸ್ಟೈಲ್ ‌ಯಾವುದೇ ಆಗಿರಲಿ, ಕಾನ್ಛಿಡೆಂಟ್‌ ಸ್ಮೈಲ್ ‌ನಿಮಗೆ ಪರ್ಫೆಕ್ಟ್ ಲುಕ್‌ ಕೊಡುತ್ತದೆ.

- ಟಿ. ಮನೋಹರಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ