ವಿಶೇಷ ಸಂದರ್ಭಗಳಲ್ಲಿ ನಮ್ಮ ಮನೆಯನ್ನು ವಿಶೇಷವಾಗಿ ಕಾಣಿಸಲು ಏನೆಲ್ಲಾ ಮಾಡುತ್ತೇವೆ. ಮನೆಯನ್ನು ಸುಂದರವಾಗಿ ಅಲಂಕರಿಸುವ ಪ್ರಯತ್ನದಲ್ಲಿ ಹೊಸ ಫರ್ನೀಚರ್‌ ತರಲು ಪ್ಲ್ಯಾನ್‌ ಮಾಡುತ್ತಾರೆ. ಅದರಿಂದ ಇಂಟೀರಿಯರ್‌ಗೆ ಹೊಸ ಲುಕ್ ಸಿಗುತ್ತದೆ. ಪರದೆಗಳಿಂದ ಲುಕ್‌ ಬದಲಿಸಿ ಪರದೆಗಳು ಮನೆಗೆ ಸುಂದರ ಲುಕ್‌ ಕೊಡುವುದಲ್ಲದೆ ಬೆಡ್‌ ರೂಮಿಗೆ ಪ್ರೈವೆಸಿ ಹಾಗೂ ರೊಮ್ಯಾಂಟಿಕ್‌ ಲುಕ್‌ ಕೂಡ ಕೊಡುತ್ತದೆ. ನೀವು ಮನೆಯ ಅಲಂಕಾರ ಬದಲಿಸಲು ಇಚ್ಛಿಸಿದರೆ ಡ್ರಾಯಿಂಗ್‌ ರೂಮ್ ನಲ್ಲಿ ಒಂದೇ ಬಣ್ಣದ ಪರದೆಗಳನ್ನು ಹಾಕಿ. ನೀವು ಬಯಸಿದರೆ 2 ಪದರಗಳಿರುವ ಪರದೆಗಳ ಬದಲು ಜ್ಯೂಟ್‌ ಅಥವಾ ಸಿಲ್ಕ್ ನ ಪರದೆಯನ್ನೂ ಆರಿಸಬಹುದು. ಅವು ನಿಮ್ಮ ಲಿವಿಂಗ್‌ ರೂಮ್ ನ್ನು ವಿಶೇಷವಾಗಿಸುತ್ತವೆ.

ಪರದೆಗಳ ಡಿಸೈನ್‌ ಬಗ್ಗೆ ಹೇಳುವುದಾದರೆ ಸಿಲ್ಕ್ ಸ್ಟ್ರೈಪ್ಡ್, ವರ್ಟಿಕಲ್ ಸ್ಟ್ರೈಪ್ಡ್. ನೆಟ್‌, ಕಸೂತಿ ಮತ್ತು ಲೇಸ್‌ ಇರುವ ಪರದೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಫ್ಯಾಬ್ರಿಕ್‌ ಬಗ್ಗೆ ಹೇಳುವುದಾದರೆ ಸಿಲ್ಕ್, ವೆಲ್ವೆಟ್‌, ಕಾಟನ್‌ ಪಾಲಿಯೆಸ್ಟರ್‌, ಸಿಂಥೆಟಿಕ್‌, ಜಾರ್ಜೆಟ್‌, ಶಿಫಾನ್‌ಗಳಲ್ಲಿ ಯಾವುದೇ ಫ್ಯಾಬ್ರಿಕ್‌ನ್ನು ಆರಿಸಿಕೊಳ್ಳಬಹುದು. ಪರದೆಗಳನ್ನು ಆರಿಸಿಕೊಳ್ಳುವಾಗ ಗೋಡೆಗಳ ಅಥವಾ ಫರ್ನೀಚರ್‌ನ ಬಣ್ಣಗಳೊಂದಿಗೆ ಮ್ಯಾಚ್‌ ಮಾಡಿ.

ಹೀಗೆ ಪರದೆಗಳನ್ನು ಬದಲಿಸಿದಾಗ ಮನೆಗೆ ಹೊಸ ಲುಕ್‌ ಸಿಗುವುದಲ್ಲದೆ ನಿಮಗೂ ಹೊಸತನ ಮತ್ತು ಸಂತಸದ ಅನುಭವ ಉಂಟಾಗುತ್ತದೆ.

ಸೋಫಾ ಮತ್ತು ಕೌಚ್

ನೀವು ಹೊಸ ಸೋಫಾ ಮತ್ತು ಕೌಚ್‌ ಮೇಲೆ ಕುಳಿತು ಕಾಫಿ ಕುಡಿಯುತ್ತಾ ಯಾವುದಾದರೂ ರೊಮ್ಯಾಂಟಿಕ್‌ ಮೂವಿ ನೋಡುತ್ತಿದ್ದರೆ ಈ ಅದ್ಭುತವಾದ ಶಾಪಿಂಗ್‌ನ್ನು ಎಂದೂ ಮರೆಯುವುದಿಲ್ಲ. ಸೋಫಾ ಮತ್ತು ಕೌಚ್‌ ಯಾವುದೇ ಲಿವಿಂಗ್‌ ರೂಮ್ ಇಂಟೀರಿಯರ್‌ನ ಮಹತ್ವಪೂರ್ಣ ಭಾಗವಾಗಿದೆ. ಮಾರುಕಟ್ಟೆಯಲ್ಲಿ ಮಾಡರ್ನ್‌ ಮತ್ತು ಟ್ರೆಡಿಶನಲ್ ಸೋಫಾಗಳು ಮತ್ತು ಕೌಚ್‌ಗಳ ಅನೇಕ ಡಿಸೈನ್‌ಗಳಿವೆ. ನೀವು ನಿಮ್ಮ ಕೋಣೆಯ ಸ್ಪೇಸ್‌ ಮತ್ತು ಡೆಕೋರ್‌ನೊಂದಿಗೆ ಮ್ಯಾಚ್‌ ಮಾಡುತ್ತಾ ಅವನ್ನು ಖರೀದಿಸಬಹುದು. ನೀವು ಹಾಲಿವುಡ್‌ ಸ್ಟೈಲ್ ನ ಸೋಫಾ ಖರೀದಿಸಲು ಬಯಸಿದರೆ ಸಿಲ್ವರ್‌, ಗೋಲ್ಡ್, ಬ್ರಾಂಝ್ ಶೈಲಿ ಮೆಟ್ಯಾಲಿಕ್‌ ಸೋಫಾ ಖರೀದಿಸಿ. ಅದು ನಿಮ್ಮ ಇಂಟೀರಿಯರ್‌ನಲ್ಲಿ ಹಾಲಿವುಡ್‌ನ ಗ್ಲಾಮರಸ್‌ ಠೀವಿ ಮೂಡಿಸುವುದು.

ನಿಮ್ಮ ಲಿವಿಂಗ್‌ ರೂಮ್ ಗೆ ಅರಿಸ್ಟೋಕ್ರ್ಯಾಟ್‌ ಲುಕ್‌ ಬಯಸಿದರೆ ಲೆದರ್‌ ಅಥವಾ ಲೈಟ್‌ ಕಲರ್‌ನ ಸೋಫಾ ಖರೀದಿಸಿ. ಟ್ರೆಡಿಶನ್‌ ಲುಕ್‌ ಬಯಸಿದರೆ ರಾಜಸ್ಥಾನಿ ವರ್ಕ್‌ನ ಕರ್ವಿಂಗ್‌ ಅಥವಾ ಕೇನ್‌ನ ಸೋಫಾ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಬ್ಯಾಕ್‌ ಬೆಡ್‌ ಆಗಿ ಕನ್ವರ್ಟ್‌ ಆಗುವ ಸೋಫಾಗಳೂ ಲಭ್ಯವಿವೆ. ಸ್ಪೇಸ್‌ ಕಡಿಮೆ ಇರುವ ಮನೆಗಳಿಗೆ ಇವು ಉತ್ತಮ. ಟ್ರೆಡಿಶನಲ್ ಮೆಟೀರಿಯರ್‌ಗಾಗಿ, ರೋಲ್ಡ್ ಆರ್ಮ್ಸ್ನ ಸೋಫಾ ತೆಗೆದುಕೊಳ್ಳಿ. ಸೋಫಾದ ಎತ್ತರ, ಉದ್ದ, ಆಳವನ್ನು ಕೋಣೆಯ ಸೈಜ್‌ಗೆ ತಕ್ಕಂತೆ ನಿರ್ಧರಿಸಿ. ಒಂದು ವೇಳೆ ಜಾಗ ಕಡಿಮೆಯಿದ್ದರೆ ಲೋ ಆರ್ಮ್ಸ್ ಅಥವಾ ವಿತೌಟ್‌ ಆರ್ಮ್ಸ್ ಇರುವ ಸೋಫಾ ಖರೀದಿಸಿ. ಆಗ ಕೋಣೆ ದೊಡ್ಡದಾಗಿ ಕಾಣುತ್ತದೆ.

ಸೋಫಾ ಖರೀದಿಸುವಾಗ ಅದನ್ನು ರಿಲ್ಯಾಕ್ಸ್ ಮಾಡಲು, ಓದಲು, ಟಿ.ವಿ. ನೋಡುವಂತಹ ದೈನಂದಿನ ಕೆಲಸಕ್ಕೆ ಉಪಯೋಗಿಸುತ್ತೀರೋ ಅಥವಾ ಫಾರ್ಮಲ್ ಸಿಟಿಂಗ್‌ಗಾಗಿಯೇ ಎಂಬುದನ್ನು ಗಮನಿಸಬೇಕು.

ಬಹಳಷ್ಟು ಜನ ಸೋಫಾ ಮತ್ತು ಕೌಚ್‌ನ್ನು ಒಂದೇ ಎಂದುಕೊಳ್ಳುತ್ತಾರೆ. ಸೋಫಾ ಮತ್ತು ಕೌಚ್‌ ಸ್ಟೈಲ್‌, ಲುಕ್‌, ಸೈಜ್‌ಎಲ್ಲದರಲ್ಲೂ  ಪರಸ್ಪರ ಭಿನ್ನವಾಗಿರುತ್ತದೆ. ಎರಡರ ಉದ್ದೇಶಗಳೂ ಬೇರೆಯಾಗಿರುತ್ತದೆ. ಸೋಫಾಗೆ ಆರ್ಮ್ಸ್ ಮತ್ತು ಬ್ಯಾಕ್ ಇರುತ್ತದೆ. ಕೌಚ್‌ನಲ್ಲಿ ಆರ್ಮ್ಸ್ ಇರುವುದಿಲ್ಲ. ಸೋಫಾದಲ್ಲಿ ಹೆಚ್ಚು ಜನ ಕೂಡಬಹುದು. ಕೌಚ್‌ 2-3 ಜನರಿಗಾಗಿ ಮಾತ್ರ ಇದೆ. ಕೌಚ್‌ನ್ನು ಹೆಚ್ಚಾಗಿ ಗೆಳೆಯರು ಹಾಗೂ ಹತ್ತಿರದ ಸಂಬಂಧಿಗಳೊಂದಿಗೆ ಪಾರ್ಟಿ ಮಾಡಲು ಉಪಯೋಗಿಸಲಾಗುತ್ತದೆ. ಸೋಫಾವನ್ನು ಹೆಚ್ಚು ಜನ ಕೂರಲು ಬಳಸುತ್ತಾರೆ. ಕೌಚ್‌, ವಿಕ್ಟೋರಿಯನ್‌ ಸ್ಟೈಲ್ ಆಫ್‌ಡೆಕೋರೇಶನ್‌ ಪ್ರದರ್ಶಿಸಿದರೆ, ಸೋಫಾ ಅಮೆರಿಕನ್‌ ಸ್ಟೈಲ್ ನ್ನು ಪ್ರದರ್ಶಿಸುತ್ತದೆ. ನೀವು ಯಾವ ಸ್ಟೈಲ್ ‌ನಿಮ್ಮದಾಗಿಸಿಕೊಂಡು ನಿಮ್ಮ ಇಂಟೀರಿಯರ್‌ನಲ್ಲಿ ಹೊಸತನ ತರಲು ಇಚ್ಛಿಸುತ್ತೀರಿ ಎಂಬುದನ್ನು ಅವಲಂಬಿಸುತ್ತದೆ.

ಉಯ್ಯಾಲೆಯಿಂದ ಸ್ವಿಂಗಿಂಗ್ಮೋಶನ್

ಒಂದು ವೇಳೆ ನಿಮ್ಮ ಮನೆಯ ಸಿಂಗಾರದಲ್ಲಿ ಏನಾದರೂ ಅದ್ಭುತವನ್ನು ಮಾಡಲು ಯೋಚಿಸುತ್ತಿದ್ದರೆ, ಉಯ್ಯಾಲೆಯನ್ನು ನಿಮ್ಮ ಇಂಟೀರಿಯರ್‌ನಲ್ಲಿ ಸೇರಿಸಿಕೊಳ್ಳಬೇಕು. ಟ್ರೆಡಿಶನಲ್ ಮತ್ತು ಮಾಡರ್ನ್‌ರಾಜಸ್ಥಾನಿ ಆರ್ಟ್‌ ವರ್ಕ್‌ ಮತ್ತು ಕುಶನ್‌ನಿಂದ ಸಜ್ಜಾದ ಉಯ್ಯಾಲೆಯಿಂದ ನಿಮ್ಮ ಬಾಲ್ಯದ ನೆನಪುಗಳು ತಾಜಾ ಆಗಿರುತ್ತವೆ. ಉಯ್ಯಾಲೆ ಹೈಸೀಲಿಂಗ್‌ನಲ್ಲಿ ಬೆಸ್ಟ್ ಎಫೆಕ್ಟ್ ಕೊಡುತ್ತದೆ. ಇದನ್ನು ನಿಮ್ಮ ಲಾಬಿ, ಪೋರ್ಚ್‌ ಅಥವಾ ವರಾಂಡದಲ್ಲಿ ಅಳವಡಿಸಬಹುದು. ಹಗ್ಗ, ಮೆಟಲ್ ರಾಡ್‌ನಿಂದ ಕಟ್ಟಲ್ಪಟ್ಟ ಕೇನ್‌ ಮತ್ತು ವುಡನ್‌ ಸೀಟ್‌ನ ಸಾಫ್ಟ್ ಕುಶನ್‌ನಿಂದ ಅಲಂಕರಿಸಿದ ಉಯ್ಯಾಲೆ ರೊಮ್ಯಾಂಟಿಕ್‌ ಮೂಡ್‌ ಉಂಟುಮಾಡುತ್ತದೆ. ಬೆಳಗಿನ ತಾಜಾ ಹವೆಯಲ್ಲಿ ಅಥವಾ ಮುಸ್ಸಂಜೆಯಲ್ಲಿ ಉಯ್ಯಾಲೆಯಲ್ಲಿ ಕುಳಿತು ಕಾಫಿ ಹೀರುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಉಯ್ಯಾಲೆ ಯಾವುದೇ ಮನೆಯ ಅಲಂಕಾರದಲ್ಲಿ ಪಾರಂಪರಿಕ ಲುಕ್‌ಜೊತೆಗೆ ರೆಟ್ರೋ ಲುಕ್‌ನ್ನೂ ಕೊಡುತ್ತದೆ. ಅದರಲ್ಲಿ ಅನೇಕ ಡಿಸೈನ್‌ಗಳು ಮತ್ತು ಸ್ಟೈಲ್ ‌ಗಳು ಇವೆ. ಮನೆಯ ಸ್ಪೇಸ್‌ಗೆ ತಕ್ಕಂತೆ ನೀವು ಉಯ್ಯಾಲೆ ಖರೀದಿಸಬಹುದು.

ಮ್ಯಾಟ್ರೆಸ್ನಿಂದ ವಿಶ್ರಾಂತಿ ಮತ್ತು ಹೆಲ್ತ್

ಮಂದವಾದ ಬೆಳಕು ಹಾಗೂ ಆರಾಮದಾಯಕ ಬೆಡ್‌ ಇದ್ದರೆ, ಸುಂದರವಾದ ಕನಸುಗಳನ್ನು ಕಾಣಬಹುದು. ಆರಾಮದಾಯಕ ಬೆಡ್‌ನ ಮೊದಲ ಅಗತ್ಯ ಬೆಡ್‌ ಮ್ಯಾಟ್ರೆಸ್‌. ಕಂಫರ್ಟೆಬಲ್ ಬೆಡ್‌ ಮ್ಯಾಟ್ರೆಸ್‌ ಒಳ್ಳೆಯ ನಿದ್ದೆ ಕೊಡುವುದಲ್ಲದೆ ಪತಿ ಪತ್ನಿಯರ ಸಂಬಂಧಗಳನ್ನು ಸದೃಢಗೊಳಿಸುತ್ತದೆ.

ಈಗ ಮಾರುಕಟ್ಟೆಯಲ್ಲಿ ಫೋಮ್ ಅಂಡ್‌ ಲ್ಯಾಕ್ಟಸ್‌ ಮತ್ತು ಸ್ಪ್ರಿಂಗ್‌ ಇರುವ ದಿಂಬುಗಳು ಸುಂದರ ವೆರೈಟಿಗಳಲ್ಲಿ ಸಿಗುತ್ತವೆ. ಅವು ಸ್ಪೈನ್‌ ಸ್ಪೆಶಲಿಸ್ಟ್ ಕೂಡ ಆಗಿದ್ದು ನಿಮ್ಮ ಸೊಂಟದ ನೋವಿಗೂ ಒಳ್ಳೆಯದು. 3, 4, 5, 6, 8, 10 ಇಂಚಿನ ಎತ್ತರದ ಫರ್ಮ್ ಹಾಗೂ ಮೀಡಿಯಮ್ ಫರ್ಮ್ ನ ದಿಂಬುಗಳು ಮಾರುಕಟ್ಟೆಯಲ್ಲಿ  ಲಭ್ಯವಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವನ್ನು ಖರೀದಿಸಬಹುದು. ಇಡೀ ರಾತ್ರಿ ಮಗ್ಗಲು ಬದಲಿಸುತ್ತಾ ಕಳೆಯುವ ಬದಲು ನಿಮ್ಮ ಬೆಡ್‌ ಮ್ಯಾಟ್ರೆಸ್‌ ಬದಲಿಸಿ ಮತ್ತು ಬೆಳಗ್ಗೆ ಫ್ರೆಶ್ ಆಗಿ ಎದ್ದು ಇಡೀ ದಿನವನ್ನು ಉತ್ತಮವಾಗಿ ಕಳೆಯಿರಿ. ನೀವು ಕಂಫರ್ಟೆಬಲ್ ಆಗಿ ನಿದ್ದೆ ಮಾಡಿದರೆ ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

ಮಲ್ಟಿಪರ್ಪಸ್ಫರ್ನೀಚರ್

ಮಲ್ಟಿಪರ್ಪಸ್‌ ಫರ್ನೀಚರ್‌ ಇಂದು ಪ್ರತಿ ಮನೆಯ ಅಗತ್ಯವಾಗಿದೆ. ಅದು ಮನೆಯ ಸಂಪೂರ್ಣ ಜಾಗವನ್ನು ಉಪಯೋಗಿಸುವ ಅವಕಾಶ ಕೊಡುತ್ತದೆಯಲ್ಲದೆ ಹಣದ ಉಳಿತಾಯವನ್ನೂ ಮಾಡುತ್ತದೆ. ಮಲ್ಟಿಪರ್ಪಸ್‌ ಫರ್ನೀಚರ್‌ ಹೆಸರಿನಂತೆಯೇ ಒಂದು ಫರ್ನೀಚರ್‌ನಲ್ಲಿ ಹಲವಾರು ಉಪಯೋಗಗಳಿವೆ. ಮಾರುಕಟ್ಟೆಯಲ್ಲಿ ಮಲ್ಟಿಪರ್ಪಸ್‌ ಫರ್ನೀಚರ್‌ನ ದೊಡ್ಡ ರೇಂಜ್‌ ಅಂದರೆ ಶೋಕೇಸ್‌, ಕ್ಯಾಬಿನೆಟ್‌, ಮಾಡ್ಯುಲರ್‌ ಶೋಕೇಸ್‌, ವಾಲ್ ‌ಶೆಲ್ಫ್ ಗಳು, ಬುಕ್‌ ಶೆಲ್ಫ್, ಸ್ಟೋರೇಜ್‌ ಟೂಲ್‌, ಚೆಸ್ಟ್ ಡ್ರಾಯರ್ಸ್‌, ಸೋಫಾ ಕಂ ಬೆಡ್‌, ಕನ್ವರ್ಟೆಬಲ್ ಕಾಫಿ ಟೇಬಲ್, ಮಲ್ಟಿ ಪರ್ಪಸ್‌ ವಾಲ್ ‌ಯೂನಿಟ್‌, ಡ್ರ್ಯಾಗಿಂಗ್‌ ರಾಕ್ಸ್ ಇತ್ಯಾದಿ ಲಭ್ಯವಿವೆ.

ಮಲ್ಟಿಪರ್ಪಸ್‌ ವಾಲ್‌ ಯೂನಿಟ್‌ನಲ್ಲಿ ನೀವು ಮಕ್ಕಳಿಗೆ ಗೊಂಬೆಗಳು, ಪುಸ್ತಕಗಳು, ಶೋಪೀಸ್‌ಗಳನ್ನು ಇಡಬಹುದು. ಅದರಿಂದ ಮನೆ ಸುಂದರವಾಗಿ ಕಾಣುತ್ತದೆ. ಜೊತೆಗೆ ಎಲ್ಲ ವಸ್ತುಗಳೂ ಒಂದೇ ಯೂನಿಟ್‌ನಲ್ಲಿ ಒಟ್ಟುಗೂಡುತ್ತವೆ. ಸೋಫಾ ಕಂ ಬೆಡ್‌ನಿಂದ ನಿಮಗೆ ಒಂದೇ ಫರ್ನೀಚರ್‌ನಿಂದ ಕೋಣೆಯನ್ನು ಹಗಲಿನಲ್ಲಿ ಲಿವಿಂಗ್‌ ರೂಮ್ ಮತ್ತು ರಾತ್ರಿಯಲ್ಲಿ ಬೆಡ್‌ ರೂಮ್ ಆಗಿ ಕನ್ವರ್ಟ್ ಮಾಡಬಹುದು. ಈ ಬೆಡ್‌ಗಳಲ್ಲಿ ಸ್ಟೋರ್‌ಮಾಡಲು ಸಾಕಷ್ಟು ಜಾಗ ಇರುತ್ತದೆ.

ಈ ಮಲ್ಟಿಪರ್ಪಸ್‌ ಫರ್ನೀಚರ್‌ ಖರೀದಿಸಿ ಮನೆಯ ಡೆಕೋರೇಶನ್‌ಗೆ ಹೊಸ ಲುಕ್‌ ಕೊಡಿ.

ಇಂದುಮತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ