ನೀವು ಎಂದಾದರೂ ಯಾರಾದರೂ ಗೆಳೆಯರ ಅಥವಾ ಸಂಬಂಧಿಗಳ ಮನೆಗೆ ಹೋದಾಗ ಎಲ್ಲಕ್ಕೂ ಮೊದಲು ನಿಮ್ಮ ದೃಷ್ಟಿ ಕೋಣೆಯ ಗೋಡೆಗಳ ಮೇಲೆ ಬೀಳುತ್ತದೆ. ಗೋಡೆಗಳಿಗೆ ಹೊಡೆಸಿರುವ ಬಣ್ಣಗಳು ಚೆನ್ನಾಗಿ ಕಂಡರೆ ಅದನ್ನು ಪ್ರಶಂಸಿಸುತ್ತೀರಿ. ಬಣ್ಣಗಳು ನಮ್ಮ ಕಣ್ಣುಗಳನ್ನು ಪ್ರಭಾವಿತಗೊಳಿಸುತ್ತವೆ. ಆದ್ದರಿಂದ ಮನೆಗೆ ಬಣ್ಣ ಹೊಡೆಸುವಾಗ ಸರಿಯಾದ ಬಣ್ಣಗಳನ್ನು ಆರಿಸುವುದು ಬಹಳ ಮುಖ್ಯ. ಬಣ್ಣಗಳು ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಲ್ಲದೆ, ಮನೆಯಲ್ಲಿ ನೆಮ್ಮದಿಯುಕ್ತ ವಾತಾವರಣವನ್ನು ಉಂಟು ಮಾಡುತ್ತವೆ. ಧಾವಂತದ ಬದುಕಿನಲ್ಲಿ ಒಬ್ಬ ವ್ಯಕ್ತಿ ದಣಿದು ಮನೆಗೆ ಬಂದಾಗ ಅವರಿಗೆ ಸಂಪೂರ್ಣವಾಗಿ ರಿಲ್ಯಾಕ್ಸ ಆಗುವ ಅಗತ್ಯವಿರುತ್ತದೆ. ಅವರು ಮರುದಿನ ತಾವಾಗಿ ಸಿದ್ಧರಾಗುತ್ತಾರೆ. ಮನೆಯ ಗೋಡೆಗಳ ಬಣ್ಣಗಳು ಚೆನ್ನಾಗಿದ್ದು ಶಾಂತಿ ಕೊಡುತ್ತಿದ್ದರೆ ಅವರಿಗೆ ನೆಮ್ಮದಿ ಹಾಗೂ ವಿಶ್ರಾಂತಿ ಸಿಗುತ್ತದೆ.

ಬಿಳಿ ಬಣ್ಣದ ಕ್ರೇಝ್

ಹೆಸರಾಂತ ಇಂಟೀರಿಯರ್‌ ಡಿಸೈನರ್‌ ಮಂಜುಳಾ ಹೀಗೆ ಹೇಳುತ್ತಾರೆ, ನಾನು 24 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಮೊದಲು 90ರ ದಶಕದಲ್ಲಿ ಜನ ಹೆಚ್ಚಾಗಿ ಬಿಳಿಯ ಬಣ್ಣವನ್ನು ಇಷ್ಟಪಡುತ್ತಿದ್ದರು. ಆದರೆ ನಿಧಾನವಾಗಿ ಜನಗಳ ಟೇಸ್ಟ್ ಬದಲಾಯಿತು. ಅವರ ಗಮನ ಬಿಳಿಯಿಂದ ದೂರವಾಗಿ ಬ್ರೈಟ್‌ ಕಲರ್ಸ್ ಕಡೆಗೆ ಹೋಯಿತು.

ಬಣ್ಣಗಳ ಟ್ರೆಂಡ್‌ನಲ್ಲಿ ಬದಲಾವಣೆ ಪೇಂಟ್‌ ಕಂಪನಿಗಳ ಕಾರಣದಿಂದ ಉಂಟಾಗುತ್ತದೆ. ದೊಡ್ಡ ದೊಡ್ಡ ಕಂಪನಿಗಳು ಪ್ರತಿಬಾರಿ ಹೊಸ ಹೊಸ ಬಣ್ಣಗಳು ಹಾಗೂ ಅವನ್ನು ಉಪಯೋಗಿಸುವ ವಿಧಾನವನ್ನು ಮಾರುಕಟ್ಟೆಗೆ ಬಿಡುತ್ತವೆ. ಅವನ್ನು ಕಂಡು ಗ್ರಾಹಕರು ಉತ್ಸಾಹಿತರಾಗಿ ಅಂತಹುದೇ ಬಣ್ಣಗಳನ್ನು ತಮ್ಮ ಕೋಣೆಗಳ ಗೋಡೆಗೆ ಹೊಡೆಸಲು ತರುತ್ತಿದ್ದಾರೆ. ಬಿಳಿಯ ಬಣ್ಣದ ಕ್ರೇಝ್ ಯಾವಾಗಲೂ ಇದ್ದೇ ಇದೆ. ಆಗಾಗ್ಗೆ ಕೊಂಚ ಬದಲಾವಣೆ ಅಗತ್ಯವಾಗಿ ಆಗುತ್ತಿರುತ್ತದೆ. ಆದರೆ ಸೀಲಿಂಗ್‌ನಲ್ಲಿ ಯಾವಾಗಲೂ ಬಿಳಿ ಬಣ್ಣ ಸರಿಯಾಗಿರುತ್ತದೆ. ಬಿಳಿಯ ಬಣ್ಣದಿಂದ ಮನೆ ದೊಡ್ಡದಾಗಿ ಹಾಗೂ ಮುಕ್ತವಾಗಿ ಕಾಣಿಸುತ್ತದೆ. ಏಕೆಂದರೆ ಈ ಬಣ್ಣದಿಂದ ಬೆಳಕು ರಿಫ್ಲೆಕ್ಟ್ ಆಗುತ್ತದೆ. ಗಾಢಬಣ್ಣದಿಂದ ಬೆಳಕಿನೊಂದಿಗೆ ಜಾಗ ಕಡಿಮೆಯಾದಂತೆ ಕಾಣುತ್ತದೆ.

ಎಲ್ಲ ಬಣ್ಣಗಳ ಮಹತ್ವ

ಸಾಮಾನ್ಯವಾಗಿ ಮನೆಗಳಲ್ಲಿ ಅಲ್ಲಿನ ಏರಿಯಾಗೆ ತಕ್ಕಂತೆ ಬಣ್ಣ ಹಾಕಲಾಗುತ್ತದೆ. ಹೆಚ್ಚು ಆರ್ದ್ರತೆ ಇರುವಂತಹ ಜಾಗಗಳಲ್ಲಿ ಕೊಂಚ ಡಾರ್ಕ್‌ ಕಲರ್‌, ಉಳಿದ ಕಡೆಗಳಲ್ಲಿ ತೆಳುವಾದ ಬಣ್ಣಗಳನ್ನು ಇಷ್ಟಪಡಲಾಗುತ್ತದೆ. ಆದರೂ ಎಲ್ಲ ಬಣ್ಣಗಳಿಗೂ ತಮ್ಮದೇ ಆದ ಮಹತ್ವವಿದೆ.

ನಿಮ್ಮ ಮನೆಯಲ್ಲಿ ಬಣ್ಣ ಹೊಡೆಸುವಾಗ ಕೆಳಗಿನ ವಿಷಯಗಳ ಬಗ್ಗೆ ಅಗತ್ಯವಾಗಿ ಗಮನಿಸಿ.

ಗಾಢ ಬಣ್ಣಗಳು ಡಿಪ್ರೆಶನ್‌ತರುತ್ತವೆ. ಆದ್ದರಿಂದ ಯಾವಾಗಲೂ ವೈಟ್‌, ಆರೆಂಜ್‌, ಗ್ರೀನ್‌, ಬಿಳಿ ಇತ್ಯಾದಿ ಬಣ್ಣಗಳನ್ನು ಉಪಯೋಗಿಸಿ.

ಹೊಸ ಟೆಕ್ನಿಕ್‌ನ ಟೆಕ್ಸ್ ಚರ್‌, ವಾಲ್ ‌ಪೇಪರ್‌, ಫ್ಯಾಬ್ರಿಕ್‌ ಪೇಂಟ್‌, ಗ್ಲಾಸಿ ಪೇಂಟ್‌ ಮತ್ತು ಮ್ಯಾಟ್‌ ಫಿನಿಶ್‌ ಇತ್ಯಾದಿಗಳನ್ನು ಉಪಯೋಗಿಸುವುದು ಒಳ್ಳೆಯದು.

ಮಕ್ಕಳ ರೂಮಿನಲ್ಲಿ ಪ್ರೈಮರಿ ರೆಡ್‌, ಗ್ರೀನ್‌, ಯೆಲ್ಲೋ ಮತ್ತು ಬ್ಲ್ಯೂ ಕಲರ್‌ ಚೆನ್ನಾಗಿರುತ್ತದೆ. ಈ ಬಣ್ಣಗಳು ರಿಲ್ಯಾಕ್ಸ್ ಉಂಟು ಮಾಡುತ್ತವೆ. ಯಂಗ್‌ಸ್ಟರ್ಸ್‌ ಮತ್ತು ನವ ವಿವಾಹಿತರಿಗೆ ವೈಬ್ರೆಂಟ್‌ ಕಲರ್‌ ಬಹಳ ಚೆನ್ನಾಗಿರುತ್ತದೆ. ಇವುಗಳಲ್ಲಿ ರೆಡ್‌, ಗ್ರೀನ್‌ಮತ್ತು ಆರೆಂಜ್‌ ಕಲರ್‌ ಬಹಳ ಜನಪ್ರಿಯವಾಗಿವೆ. ಏಕೆಂದರೆ ಅವು ಆ್ಯಕ್ಟಿವ್ ‌ಆಗಿರುವ ಅನುಭವ ನೀಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ