ಮನೆಯ ಸ್ವಚ್ಛತೆ, ಅಲಂಕಾರಗಳಿಗೆ ಗಮನ ಕೊಡುವಂತೆ ನಿಮ್ಮ ಇಡೀ ಕುಟುಂಬದ ಆರೋಗ್ಯದ ಜವಾಬ್ದಾರಿಯೂ ಇದೆಯೇ? ಇಲ್ಲದಿದ್ದರೆ ಈಗಲಾದರೂ ನಿಮ್ಮ ಜೊತೆಗೆ ಮನೆಯವರೆಲ್ಲರನ್ನೂ ಆರೋಗ್ಯವಾಗಿಡುವ ಜವಾಬ್ದಾರಿ ಹೊರುವುದಾಗಿ ಪಣ ತೊಡಿ. ಅದಕ್ಕಾಗಿ ನಿಮ್ಮ ಕಿಚನ್‌ ಮೇಕ್‌ ಓವರ್‌ಮಾಡಿ.

ಏಕೆಂದರೆ ಕಿಚನ್‌ ಸ್ವಚ್ಛವಾಗಿ ಆರೋಗ್ಯಕರ ವಾತಾವರಣದಿಂದ ಕೂಡಿದ್ದರೆ ನಿಮ್ಮ ಜೊತೆಗೆ ನಿಮ್ಮ ಮನೆಯವರೆಲ್ಲರ ಆರೋಗ್ಯ ಸರಿಯಾಗಿರುತ್ತದೆ. ಇಂಟೀರಿಯರ್‌ ಡಿಸೈನರ್‌ ಆರತಿಯವರಿಂದ ಕಡಿಮೆ ಬಜೆಟ್‌ನಲ್ಲಿ ಕಿಚನ್‌ನ ಮೇಕ್‌ ಓವರ್‌ ಮಾಡುವ ಬಗ್ಗೆ ತಿಳಿದುಕೊಳ್ಳೋಣ :

ಸ್ಮಾರ್ಟ್ಕಿಚನ್ಮಾಡಿ

ನಿಮ್ಮ ಹಳೆಯ ಕಿಚನ್‌ನಿಂದ ಬೋರ್‌ ಆಗಿದ್ದು ಅದಕ್ಕೆ ಫ್ರೆಶ್‌ ಲುಕ್‌ ಕೊಡಲು ಬಯಸುತ್ತಿರಬಹುದು. ಹಬ್ಬಗಳ ಸಂದರ್ಭಗಳಲ್ಲಿ ಅನೇಕ ಕಂಪನಿಗಳು ಬಹಳಷ್ಟು ಆಫರ್‌ಗಳನ್ನು ಕೊಡುತ್ತವೆ. ಈ ಆಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಎಕ್ಸ್ ಚೇಂಜ್ ಆಫರ್‌ ಮೂಲಕ ಹಳೆಯ ಪಾತ್ರೆಗಳನ್ನು ಬದಲಿಸಿ ಹೊಸ ಪಾತ್ರೆಗಳನ್ನು ತನ್ನಿ. ಪಾತ್ರೆಗಳನ್ನು ಬಹಳ ಕಾಲ ಉಪಯೋಗಿಸುವುದರಿಂದ ಅವು ಹಳೆಯದಾಗುತ್ತವೆ. ಅವುಗಳನ್ನು ಎಷ್ಟು ಸ್ವಚ್ಛಗೊಳಿಸಿದರೂ ಏನಾದರೂ ಕೊಳೆ ಸೇರಿಕೊಳ್ಳುತ್ತದೆ. ಅವು ಅಷ್ಟು ಹೈಜಿನಿಕ್‌ ಆಗಿರುವುದಿಲ್ಲ. ಹೊಸ ಪಾತ್ರೆಗಳಲ್ಲಿ ಹೀಗಾಗುವುದಿಲ್ಲ. ಬಜೆಟ್‌ ಕೂಡ ಹೇಗಿರುತ್ತದೆಂದರೆ ಹಳೆಯ ಪಾತ್ರೆಗಳನ್ನು ಕೊಟ್ಟು ಮೇಲೆ ಕೊಂಚ ಹಣ ಕೊಟ್ಟು ಒಳ್ಳೆಯ ಕ್ವಾಲಿಟಿಯ ಲೇಟೆಸ್ಟ್ ಡಿಸೈನ್‌ನ ಪಾತ್ರೆ ಕೊಳ್ಳಬಹುದು. ಗೃಹಿಣಿಯರಿಗೆ ಬಜೆಟ್‌ ಮತ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅಂಗಡಿಯವರು ನಾನ್‌ಸ್ಟಿಕ್‌ ಕಡಾಯಿ, ತವಾ, ಫ್ರೈಯಿಂಗ್‌ ಪ್ಯಾನ್‌ನಂತಹ ವಿಶೇಷ ರೀತಿಯ ಪಾತ್ರೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅವುಗಳಿಗೆ ಡಿಮ್ಯಾಂಡ್‌ ಕೂಡ ಬಹಳ ಇದೆ. ಇದಲ್ಲದೆ ಇಂಡಕ್ಷನ್‌ ಕುಕ್‌ವೇರ್‌ಗೂ ಸಾಕಷ್ಟು ಡಿಮ್ಯಾಂಡ್‌ ಇದೆ. ಇವು ಫ್ಯಾಷನ್‌ಗೆ ಅನುಸಾರವಾಗಿದ್ದು ನೋಡಿಕೊಳ್ಳುವುದೂ ಸುಲಭ.

ಮಾಡರ್ನ್ಕಿಚನ್ಅಪ್ಲಯೆನ್ಸ್

ಮಾಡರ್ನ್‌ ಕಿಚನ್‌ ಅಪ್ಲಯೆನ್ಸ್ ಅಗ್ಗವಾಗಿ ಇರುವುದಲ್ಲದೆ, ಅವುಗಳ ಲುಕ್‌ ಸಹ ಮಾಡ್ಯುಲರ್‌ ಕಿಚನ್‌ಗೆ ಮ್ಯಾಚ್‌ ಆಗುತ್ತದೆ. ಈಗ ಮನೆಗಳಲ್ಲಿ ಇಂಡಕ್ಷನ್‌ ಕುಕಿಂಗ್‌ನ ಹೆಚ್ಚುತ್ತಿರುವ ಪದ್ಧತಿಗಳಿಂದ ಈ ಅಪ್ಲಯೆನ್ಸ್ ಗಳ ಮಾರುಕಟ್ಟೆಯೂ ಹೆಚ್ಚಾಗಿದೆ.

ನಾನ್ಸ್ಟಿಕ್ಫ್ರೈಯಿಂಗ್ಪ್ಯಾನ್‌ : ಹೊಸ ಪಾತ್ರೆಗಳಲ್ಲಿ ನೀವು ನಾನ್‌ ಸ್ಟಿಕ್‌ ಫ್ರೈಯಿಂಗ್‌ ಪ್ಯಾನ್‌ ಕೊಳ್ಳಬಹುದು. ಇದರಲ್ಲಿ ನೀವು ಕಡಿಮೆ ತುಪ್ಪ ಹಾಗೂ ಎಣ್ಣೆ ಉಪಯೋಗಿಸಿ ಆಹಾರ ಪದಾರ್ಥಗಳ್ನು ಹುರಿಯಬಹುದು. ಇದರಲ್ಲಿ ತಯಾರಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದರಲ್ಲಿ ತಯಾರಿಸಿದ ಆಹಾರದ ಸೇವನೆಯಿಂದ ಹೆಚ್ಚುವರಿ ಕ್ಯಾಲೋರಿ ಮತ್ತು ಕೊಬ್ಬಿನಿಂದ ಪಾರಾಗುತ್ತೀರಿ.

ಇಂಡಕ್ಷನ್ಕುಕರ್‌ : ನಿಮ್ಮ ಮನೆಗೆ ಇಂಡಕ್ಷನ್‌ ಕುಕರ್‌ ತನ್ನಿ. ಇದನ್ನು ಉಪಯೋಗಿಸಿದರೆ ಗ್ಯಾಸ್‌ ಹಾಗೂ ಕರೆಂಟ್‌ ಖರ್ಚು ಕಡಿಮೆಯಾಗುವ ಜೊತೆಗೆ 1 ಗಂಟೆಯಲ್ಲಿ ಅನೇಕ ಜನರಿಗೆ ಅಡುಗೆ ಮಾಡಬಹುದು.

ಟೆಫ್ಲಾನ್ಶೀಟ್‌ : ಟೆಫ್ಲಾನ್‌ ಶೀಟ್‌ ಇರುವ ಪಾತ್ರೆ ಈಗ ಬದುಕಿನ ಒಂದು ಭಾಗವಾಗಿಬಿಟ್ಟದೆ. ಈ ನಾನ್‌ ಸ್ಟಿಕ್‌ ಪ್ಯಾನ್‌ ಟೆಫ್ಲಾನ್‌ಕೋಟಿಂಗ್‌ ಇರುವ ಫಾಸ್ಟ್ ಟು ಕುಕ್‌, ಈಝಿ ಟು ಕ್ಲೀನ್‌ ಆಗಿರುತ್ತದೆ. ಅವು ನೋಡಲಿಕ್ಕೂ ಬಹಳ ಆಕರ್ಷಕವಾಗಿರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ