ಸಮಾನತೆಯ ಯುಗದಲ್ಲಿ ಇಂದಿನ ಮಹಿಳೆ ಅಡುಗೆಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಸಂಭಾಳಿಸುವುದಲ್ಲದೆ, ಬದಲಾವಣೆ ಹಾಗೂ ಮನರಂಜನೆಗಾಗಿ ಫೆಸ್ಟಿವ್ ‌ಪಾರ್ಟಿ ಕ್ಲಬ್‌ನ ಸದಸ್ಯರಾಗುತ್ತಿದ್ದಾರೆ. ಪಾರ್ಟಿ ಅಥವಾ ಕ್ಲಬ್‌ಗಳಿಗೆ ಮಹಿಳೆಯರು ಅಲಂಕರಿಸಿಕೊಂಡು ಫ್ಯಾಷನ್‌ ಪೆರೇಡ್‌ನಲ್ಲಿ ಭಾಗವಹಿಸಲು, ಮಾತುಕಥೆಯಾಡಲು, ಚಾಡಿ ಹೇಳಲು, ಹೊಸ ರುಚಿಗಳನ್ನು ಸವಿಯಲು ತಂಬೋಲಗಳಲ್ಲಿ ಗೆಲ್ಲುವ ಉಪಾಯ ಮಾಡಲು ಮತ್ತು ತಮ್ಮ ಹೊಸ ಸ್ಟೈಲಿಶ್ ಡ್ರೆಸ್‌ ಮತ್ತು ದುಬಾರಿ ಒಡವೆಗಳನ್ನು ಡಿಸ್‌ ಪ್ಲೇ ಮಾಡುವ ಅವಕಾಶ ಸಿಗುತ್ತದೆ.

ನಗರದ ಫೆಸ್ಟಿವ್ ‌ಪಾರ್ಟಿಗಳ ಈ ರೂಪ ಸಾಮಾನ್ಯವಾಗಿ ಎಲ್ಲ ಸಣ್ಣ, ದೊಡ್ಡ ಕಾಲೋನಿಗಳಲ್ಲಿ ಪ್ರತಿ ತಿಂಗಳೂ ಕಂಡುಬರುತ್ತದೆ. ಈ ಪಾರ್ಟಿಗಳು ಆಧುನಿಕತೆ ಪರಿಚಯಿಸುವ ಜೊತೆ ಜೊತೆಗೆ ಸ್ಟೇಟಸ್‌ ಸಿಂಬಲ್ ಮತ್ತು ಹಣ ಸೇರಿಸುವ ಶಾರ್ಟ್‌ ಕಟ್‌ ದಾರಿ ಕೂಡ ಆಗಿದೆ. ಇದರಲ್ಲಿ ಪ್ರತಿ ತಿಂಗಳೂ ಒಂದು ನಿಶ್ಚಿತ ಮೊಬಲಗನ್ನು ಕಟ್ಟಿದರೆ ವರ್ಷದ ಕೊನೆಯಲ್ಲಿ ಏಕ ಕಂತಿನಲ್ಲಿ ದೊಡ್ಡ ಮೊತ್ತ ಕೈಗೆ ಸಿಗುತ್ತದೆ. ಊಟ ತಿಂಡಿ, ಹರಟೆ ಮತ್ತು ಮೋಜು ಈ ಪಾರ್ಟಿಗಳ ಪ್ರಮುಖ ಥೀಮ್ ಆಗಿದೆ. ರೊಟೀನ್‌ ಮತ್ತು ಬೋರ್‌ಯುಕ್ತ ಲೈಫ್‌ನಲ್ಲಿ ಹೊಸತನ ತರಲು ಈ ಪಾರ್ಟಿಗಳು ಉತ್ತಮ ಮಾಧ್ಯಮಗಳಾಗಿವೆ. ಇವುಗಳಲ್ಲಿ ಪಾಲ್ಗೊಂಡು ಮಹಿಳೆಯರು ರಿಫ್ರೆಶ್‌ ಆಗುತ್ತಾರೆ. ಆದರೆ ಒಂದು ಮಿತಿಯಲ್ಲಿರುವ ಈ ಪಾರ್ಟಿಗಳಿಗೆ ಒಂದು ಹೊಸ ರೂಪ ಕೊಟ್ಟರೆ ಅದರಿಂದ ಪ್ರತೀ ಬಾರಿ ಏನಾದರೊಂದು ಹೊಸದು ಕಲಿಯಬಹುದು.

ಮಹಿಳೆಯರು ಫೆಸ್ಟಿವ್ ‌ಪಾರ್ಟಿಗಳಲ್ಲಿ ಕೆಲವು ವಿಧಾನಗಳನ್ನು ತಮ್ಮದಾಗಿಸಿಕೊಂಡು ಪಾರ್ಟಿಗೆ ಅದ್ಭುತ ರೂಪ ಕೊಟ್ಟು ಅದನ್ನು ರಚನಾತ್ಮಕವಾಗಿಸಬಹುದು.

ಸ್ಪರ್ಧೆಗಳನ್ನು ಆಯೋಜಿಸುವುದು

ಊಟ ತಿಂಡಿ, ಮೋಜು ಇತ್ಯಾದಿ ಎಲ್ಲ ಪಾರ್ಟಿಗಳಲ್ಲೂ ಇರುತ್ತದೆ. ಈ ಬಾರಿ ನಿಮ್ಮ ಪಾರ್ಟಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ. ಯಾವುದಾದರೂ ಸ್ವಾದಿಷ್ಟ ಡಿಶ್‌ ತಯಾರಿಸುವುದು, ಫ್ಲವರ್‌ ಡೆಕೋರೇಶನ್‌, ಸೀರೆ ಡೆಕೋರೇಶನ್‌ ಅಥವಾ ಮೇಕಪ್‌ ಕೂಡ ಆಗಬಹುದು. ಅವುಗಳಲ್ಲಿ ಪ್ರತಿ ಸ್ಪರ್ಧಿಯೂ ತಮ್ಮ ಟ್ಯಾಲೆಂಟ್‌ಗೆ ಅನುಸಾರ ಪ್ರದರ್ಶನ ತೋರುತ್ತಾರೆ ಮತ್ತು ವಿಜೇತರಿಗೆ ಬಹುಮಾನ ಕೊಡಲಾಗುತ್ತದೆ. ಅವರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ಇದರಿಂದ ಪ್ರತಿ ಬಾರಿ ಏನಾದರೂ ಹೊಸದನ್ನು ಕಲಿಯಬಹುದು ಹಾಗೂ ಸ್ಪರ್ಧಿಗಳಿಗೆ ತಮ್ಮ ಕೌಶಲ್ಯ ತೋರಲು ಅವಕಾಶ ಸಿಗುತ್ತದೆ.

ಟೆಕ್ನಿಕ್ ಕೊಡುಕೊಳ್ಳುವಿಕೆ

ಫೆಸ್ಟಿವ್ ಪಾರ್ಟಿಗಳಲ್ಲಿ ನೀವು ಹೊಸ ಟೆಕ್ನಿಕ್‌ಗಳನ್ನು ಪರಸ್ಪರರಿಂದ ಕಲಿಯಬಹುದು. ನಿಮ್ಮ ಬಳಿ ಸ್ಮಾರ್ಟ್‌ ಫೋನ್‌ ಇದ್ದು ಅದನ್ನು ಆಪರೇಟ್‌ ಮಾಡುವುದನ್ನು ಚೆನ್ನಾಗಿ ತಿಳಿದಿದ್ದರೆ ಅದರ ಹೊಸ ಫೀಚರ್ಸ್‌ ಮತ್ತು ಅದರ ಅಪ್ಲಿಕೇಶನ್‌ಗಳ ಕುರಿತು ಅವುಗಳ ಬಗ್ಗೆ ಏನೂ ತಿಳಿಯದ ಗೆಳತಿಯರಿಗೆ ಮಾಹಿತಿ ಕೊಡಿ. ಇದರಿಂದ ಮನೆಯಲ್ಲೇ ಕುಳಿತು ಬ್ಯೂಟಿ, ಹೆಲ್ತ್ ಮತ್ತು ಫಿಟ್ನೆಸ್‌ ಬಗ್ಗೆ ಅವರಿಗೆ ಮಾಹಿತಿ ಸಿಗುತ್ತದೆ. ನಿಮ್ಮ ಮನೆಗೆ ಯಾವುದಾದರೂ ಹೊಸ ಕಿಚನ್‌ ಸ್ಯಾಚೆಟ್‌ ತಂದಿದ್ದರೆ ಅದರ ಬಗ್ಗೆಯೂ ನಿಮ್ಮ ಗೆಳತಿಯರಿಗೆ ತಿಳಿಸಬಹುದು. ಆಗ ನೀವು ಸ್ಮಾರ್ಟ್‌ ಅನ್ನಿಸಿಕೊಂಡು ನಿಮ್ಮ ಗೆಳತಿಯರನ್ನೂ ಸ್ಮಾರ್ಟ್‌ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ