ಮನೆ ಖರೀದಿ ಪ್ರತಿಯೊಬ್ಬರ ಕನಸಾಗಿದೆ. ಅಂದಹಾಗೆ ನಮ್ಮ ದೇಶದಲ್ಲಿ ಸಾಲ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಆದರೆ ನಿಮ್ಮ ಪೋರ್ಟ್ ಫೋಲಿಯೋದಲ್ಲಿ ಹೋಮ್ ಲೋನ್ ಸೇರಿದ್ದರೆ ಅದು ಒಳ್ಳೆಯ ಸೂಚನೆ.
ಹೋಮ್ ಲೋನ್, ಇತರೆ ಸಾಲಗಳಿಗಿಂತ ವಿಭಿನ್ನವಾಗಿದೆ. ಏಕೆಂದರೆ ಹೋಮ್ ಲೋನ್ ಪಡೆಯುವುದೆಂದರೆ ನಿಮ್ಮ ಬಳಿ ಒಂದು ಆಸ್ತಿ ಇದೆ. ಅದರ ಬೆಲೆ ಯಾವಾಗಲೂ ಹೆಚ್ಚುತ್ತಿರುತ್ತದೆ. ನೀವು ಹೋಮ್ ಲೋನ್ ತೆಗೆದುಕೊಂಡು ಮನೆ ಖರೀದಿಸುತ್ತಿದ್ದರೆ ಅದು ತಿಳಿವಳಿಕೆಯ ವಿಷಯವಾಗಿದೆ. ಆದರೆ ಅದರ ಸೂಕ್ಷ್ಮತೆಗಳ ಬಗ್ಗೆ ತಿಳಿದಿರಬೇಕು.
ಹೋಮ್ ಲೋನ್‌ನ ಸಾಮರ್ಥ್ಯದ ಬಗ್ಗೆ ತೀರ್ಮಾನ
ಬ್ಯಾಂಕುಗಳಿಗೆ ಕೆಲವು ಮಾನದಂಡಗಳಿವೆ. ಅದಕ್ಕೆ ಹೊಂದುವ ವ್ಯಕ್ತಿಗಳಿಗೆ ಮಾತ್ರ ಒಂದು ನಿಶ್ಚಿತ ಮಿತಿಯವರೆಗೆ ಹೋಮ್ ಲೋನ್ ಕೊಡಲಾಗುತ್ತದೆ. ಸರ್ಟಿಫೈಡ್ ಫೈನಾನ್ಶಿಯಲ್ ಪ್ಲ್ಯಾನರ್ ಅಮಿತ್‌ರ ಪ್ರಕಾರ, ಯಾರಿಗೆ ಎಷ್ಟು ಲೋನ್ ಸಿಗುತ್ತದೆಂದು ಅವರ ಗ್ರಾಸ್ ಸ್ಯಾಲರಿಯಿಂದ ನಿರ್ಧರಿಸಲಾಗುತ್ತದೆ.
ಉದಾಹರಣೆಗೆ ಸಂಬಳದ ವರ್ಗದವರ ವಾರ್ಷಿಕ ಆದಾಯದ 4 ಪಟ್ಟು ಹೋಮ್ ಲೋನ್ ಕೊಡಲಾಗುತ್ತದೆ. ಆದರೆ ಚಾರ್ಟರ್ಡ್ ಅಕೌಂಟೆಂಟ್, ಡಾಕ್ಟರ್‌ರಂತಹ ಉದ್ಯೋಗಿಗಳಿಗೆ ಅವರ ವಾರ್ಷಿಕ ವರಮಾನದ 7 ಪಟ್ಟು ಲೋನ್ ಕೊಡಲಾಗುತ್ತದೆ. ಆದಾಗ್ಯೂ ಲೋನ್ ಕೊಡುವಾಗ ಬ್ಯಾಂಕ್ ಗಮನಿಸಬೇಕಾದ ವಿಷಯವೇನೆಂದರೆ ವ್ಯಕ್ತಿಯ ಟೇಕ್ ಹೋಮ್ ಸ್ಯಾಲರಿ ಅಥವಾ ನೆಟ್ ಸ್ಯಾಲರಿ, ಗ್ರಾಸ್ ಸ್ಯಾಲರಿಯ 40%ಕ್ಕಿಂತ ಕಡಿಮೆಯಾಗಬಾರದು.
ಅದಲ್ಲದೆ ಹೋಮ್ ಲೋನ್‌ಗೆ ಮನವಿ ಮಾಡುವವರಿಗೂ ಕ್ರೆಡಿಟ್ ರಿಪೋರ್ಟ್ ಬಗ್ಗೆಯೂ ಗಮನಿಸಲಾಗುತ್ತದೆ. ಒಂದು ವೇಳೆ ಸಾಲ ತೀರಿಸುವ ಹಳೆಯ ರೆಕಾರ್ಡ್ ಕಳಂಕಿತವಾಗಿದ್ದರೆ ಅಂತಹ ವ್ಯಕ್ತಿಗೆ ಲೋನ್ ಸಿಕ್ಕುವುದೇ ಇಲ್ಲ. ಒಂದು ವೇಳೆ ಸಿಕ್ಕರೂ ಹೆಚ್ಚಿನ ಬಡ್ಡಿಗೆ ಸಿಗುತ್ತದೆ.
ಹೋಮ್ ಲೋನ್ನಿಂದ ಆದಾಯ ತೆರಿಗೆಯಲ್ಲಿ ಲಾಭ
ಹೋಮ್ ಲೋನ್ ಪಡೆದು ಮನೆ ಖರೀದಿಸಿದರೆ 2 ಲಾಭಗಳಿವೆ. ಮೊದಲನೆಯದು, ನಮ್ಮ ಮನೆಯ ಖುಷಿ ಮತ್ತು ಎರಡನೆಯದು ಆದಾಯ ತೆರಿಗೆಯಲ್ಲಿ ಉಳಿತಾಯ. ಆದಾಯ ತೆರಿಗೆ ಅಧಿನಿಯಮದ ಸೆಕ್ಷನ್ 80ಸಿ ಆಧಾರದಲ್ಲಿ ಹೋಮ್ ಲೋನ್‌ನ ಮೂಲಧನ ತೀರಿಕೆಯ ಆಧಾರದಲ್ಲಿ ಬಜೆಟ್‌ಗೆ ಅನುಸಾರವಾಗಿ 1.5 ಲಕ್ಷಕ್ಕೆ ಮಾತ್ರ ರಿಯಾಯಿತಿ ಸಿಗುತ್ತದೆ. ಅದನ್ನು ಪಡೆಯಲು ಸಾಲ ಕೊಡುವವರಿಂದ ಒಂದು ಸ್ಟೇಟ್‌ಮೆಂಟ್ ಪಡೆಯುವುದು ಅಗತ್ಯ. ಆದಾಯ ತೆರಿಗೆ ಅಧಿನಿಯಮದ ಸೆಕ್ಷನ್ 24(ಬಿ) ಆಧಾರದಲ್ಲಿ ಹೌಸಿಂಗ್ ಲೋನ್‌ನ ಬಡ್ಡಿಯನ್ನು ಮತ್ತೆ ಪಾತಿಸುವುದರಿಂದ ರೂ. 1.50 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ. ಆದಾಗ್ಯೂ ಒಂದು ಷರತ್ತೆಂದರೆ ಮನೆಯ ನಿರ್ಮಾಣ ಅಥವಾ ಆ ಮನೆಯ ಮೇಲೆ ಸಾಲ ಪಡೆದಿರುವವರಿಗೆ, ಲೋನ್ ಪಡೆದ 3 ವರ್ಷಗಳ ಒಳಗೆ ಮನೆಯನ್ನು ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಬಡ್ಡಿಗೆ ಕೊಟ್ಟ 1.50 ಲಕ್ಷ ರೂ.ಗಳ ರಿಯಾಯಿತಿ ಕಡಿತಗೊಂಡು 30 ಸಾವಿರ ರೂ. ಉಳಿಯುತ್ತದೆ.
ಒಂದು ವೇಳೆ ನೀವು ಮನೆಯ ರಿಪೇರಿ, ಪುನರ್ ನಿರ್ಮಾಣ ಅಥವಾ ವಿಸ್ತರಣೆಗೆ ಲೋನ್ ಪಡೆದಿದ್ದರೆ ನೀವು ಸೆಕ್ಷನ್ 24(ಸಿ) ಆಧಾರದಲ್ಲಿ ಬಡ್ಡಿಯಲ್ಲಿ ಕಡಿತ ಪಡೆಯಬಹುದು. ಇದರ ಅಡಿಯಲ್ಲಿ ರಿಯಾಯಿತಿಯ ಮಿತಿ ಹೊಸ ಬಜೆಟ್‌ಗೆ ತಕ್ಕಂತೆ 2 ಲಕ್ಷ ರೂ.ಗಳಾಗುತ್ತವೆ.
ಹೋಮ್ ಲೋನ್‌ನ ಸಾಮರ್ಥ್ಯ ಹೆಚ್ಚಿಸಬಹುದು
ನಿಮ್ಮ ಲೋನ್‌ನ ಅವಧಿ ಹೆಚ್ಚಾದಷ್ಟು ಅಷ್ಟೇ ಹೆಚ್ಚಿನ ಲೋನ್ ಸಿಗುತ್ತದೆ. ಪ್ರತಿ ಲಕ್ಷ ರೂ.ಗಳಿಗೆ ಮಾಸಿಕ ಕಂತು ಹೆಚ್ಚಿನ ಅವಧಿಯ ಲೋನ್‌ಗೆ ಸಾಕಷ್ಟು ಕಡಿಮೆ ಬೀಳುತ್ತದೆ. ಅಂತಹ ಸ್ಥಿತಿಯಲ್ಲಿ ಬ್ಯಾಂಕ್ ಅದೇ ಆದಾಯಕ್ಕೆ ಹೆಚ್ಚಿನ ಲೋನ್ ಕೊಡುತ್ತದೆ. ನಿಮ್ಮ ಲೋನ್‌ನ ಸಾಮರ್ಥ್ಯ ಹೆಚ್ಚಿಸುವ ಇನ್ನೊಂದು ವಿಧಾನವೆಂದರೆ ಬ್ಯಾಂಕ್ ಅನುಮತಿ ಕೊಡುವ ಸಂಬಂಧಿಕರನ್ನು ಅವರ ಹಾಗೂ ನಿಮ್ಮ ಆದಾಯ ಸೇರಿಸಿ ಜಾಯಿಂಟ್ ಲೋನ್ ಪಡೆಯಬಹುದು. ಇದರಲ್ಲಿ ನಿಮ್ಮ ಜೀವನ ಸಂಗಾತಿ, ಮಕ್ಕಳು, ತಂದೆ ತಾಯಿ ಅಥವಾ ಅಣ್ಣ ತಂಗಿ ಸೇರಿಸಬಹುದು. ವಿವಾಹಿತೆಯರೂ ಸಹ ತಮ್ಮ ಅತ್ತೆ ಮಾವ ಅಥವಾ ತಮ್ಮ ಗಂಡನ ಆದಾಯ ಸೇರಿಸಿ ಜಾಯಿಂಟ್ ಲೋನ್ ಪಡೆಯಬಹುದು. ಆದರೆ ಅವರು ತಮ್ಮ ಅಪ್ಪ ಅಮ್ಮನ ಜೊತೆ ಜಾಯಿಂಟ್ ಲೋನ್ ಪಡೆಯಲು ಸಾಧ್ಯವಿಲ್ಲ. ನಿಮ್ಮ ಬಳಿ ಡೌನ್ ಪೇಮೆಂಟ್ ಕೊಡಲು ಸಾಕಷ್ಟು ಮೊತ್ತವಿದ್ದರೆ ಆಗ ದೊಡ್ಡ ಲೋನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದರಿಂದ ನಿಮಗೆ ಸಾಲದ ಹೊರೆ ಹೆಚ್ಚುವುದಿಲ್ಲ. ಲೋನ್ ಕೊಡುವಾಗ ಬ್ಯಾಂಕ್ ನಿಮ್ಮಿಂದ ಯಾವುದಾದರೂ ಹಳೆಯ ರೀಪೇಮೆಂಟ್ ಬಗ್ಗೆ ಮಾಹಿತಿ ಪಡೆಯಬಹುದು. ಅದಕ್ಕಾಗಿ ನೀವು ಯಾವುದಾದರೂ ಹಳೆಯ ಲೋನ್‌ನ (ಕಾರ್ ಲೋನ್ ಅಥವಾ ಬೇರೆ ಲೋನ್) ರೀಪೇಮೆಂಟ್ ಪ್ರೂಫ್ ಕೊಡಬಹುದು. ಒಂದು ವೇಳೆ ಅದಕ್ಕೆ ಮೊದಲು ನೀವು ಯಾವುದೇ ಲೋನ್‌ತೆಗೆದುಕೊಂಡಿರದಿದ್ದಲ್ಲಿ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಅದರ ರೀಪೇಮೆಂಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅವರಿಗೆ ಕೊಡಬಹುದು.
ಒಂದು ವೇಳೆ ಬ್ಯಾಂಕಿಗೆ ನಿಮ್ಮ ರೀಪೇಮೆಂಟ್ ಸಾಮರ್ಥ್ಯದ ಬಗ್ಗೆ ಭರವಸೆಯಿದ್ದರೆ ಲೋನ್ ಪಡೆಯುವ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ನಿಮ್ಮ ಸೇವಿಂಗ್ಸ್ ಅಕೌಂಟ್ ಇರುವ ಬ್ಯಾಂಕ್ ವಿಶೇಷವಾಗಿ ಪ್ರೈವೇಟ್ ಬ್ಯಾಂಕ್ ನಿಮಗೆ ಇತರೆ ಬ್ಯಾಂಕ್‌ಗಳು ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ ಹೋಲಿಸಿದರೆ ನಿಮ್ಮ ಹಳೆಯ ರೆಕಾರ್ಡ್ ನೋಡಿ ಹೆಚ್ಚಿನ ಲೋನ್ ಕೊಡಬಹುದು.
ಹಿರಿಯ ನಾಗರಿಕರಿಗೆ ಲಾಭ
ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ದೀರ್ಘಾವಧಿಯ ಲೋನ್ ಕೊಡುವುದಿಲ್ಲ. ಉದಾಹರಣೆಗೆ 60 ವರ್ಷದವರೆಗೆ ಗರಿಷ್ಠ 5 ವರ್ಷದ ಅವಧಿಯ ಹೋಮ್ ಲೋನ್ ಸಿಗಬಹುದು. ಈ ಸಮಸ್ಯೆ ಸಹ ಜಾಯಿಂಟ್ ಹೋಮ್ ಲೋನ್ ಪಡೆಯುವುದರಿಂದ ದೂರವಾಗುತ್ತದೆ. ಯಾರಾದರೂ ಹಿರಿಯ ನಾಗರಿಕರು ಕಡಿಮೆ ವಯಸ್ಸಿನ ಕೋ ಬಾರೋಯರ್‌ನೊಂದಿಗೆ ಸೇರಿ ಲೋನ್‌ಗೆ ಅರ್ಜಿ ಸಲ್ಲಿಸಿದರೆ ಅವರಿಗೆ ದೀರ್ಘಾವಧಿಯ ಲೋನ್ ಸಿಗಬಹುದು.
ಅಗ್ಗದ ಹೋಮ್ ಲೋನ್ ಹೇಗೆ ಸಿಗುತ್ತದೆ?
ಹೋಮ್ ಲೋನ್ ಪಡೆಯುವ ಮೊದಲು ಕೆಲವು ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ ದರಗಳು ಹಾಗೂ ಷರತ್ತುಗಳ ಬಗ್ಗೆ ಮಾಹಿತಿ ಪಡೆಯಿರಿ. ಅಂದಹಾಗೆ ಹೆಚ್ಚಿನ ಬ್ಯಾಂಕುಗಳು ನಿಮ್ಮ ಪ್ರೊಫೈಲ್‌ನ ಅನುಸಾರವಾಗಿ ಒಳ್ಳೆಯ ದರಗಳಲ್ಲಿ ಲೋನ್ ಪ್ರಸ್ತುತಪಡಿಸುತ್ತವೆ.
ವಿಶೇಷವಾಗಿ ಯಾರಿಗೆ ಕೂಡಲೇ ಲೋನ್ ಆಗತ್ಯವಿದೆಯೋ ಅವರಿಗೆ ಬ್ಯಾಂಕ್‌ಗಳು ಉತ್ತಮ ದರಗಳಲ್ಲಿ ಲೋನ್ ಕೊಡುತ್ತವೆ. ಒಂದು ವೇಳೆ ನಿಮ್ಮೊಂದಿಗೆ ನಿಮ್ಮ ಮಿತ್ರರು ಅಥವಾ ಬಂಧುಗಳು ಹೋಮ್ ಲೋನ್‌ಗೆ ಅರ್ಜಿ ಹಾಕಿದರೆ ಬ್ಯಾಂಕಿಗೆ ಒಂದು ದೊಡ್ಡ ಲೋನ್ ಪೋರ್ಟ್ ಫೋಲಿಯೋ ಸಿಗುತ್ತದೆ. ಒಂದು ಬಿಲ್ಡಿಂಗ್‌ನಲ್ಲಿ ಫ್ಲ್ಯಾಟ್ ಅಥವಾ ಅಪಾರ್ಟ್‌ಮೆಂಟ್ ಖರೀದಿಸಲು ಎಲ್ಲರೂ ಲೋನ್ ಬಯಸಿದಾಗ ಈ ವಿಧಾನ ಇನ್ನಷ್ಟು ಕಾರ್ಯಗತವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳ ಕಾನೂನು ಹಾಗೂ ಟೆಕ್ನಿಕ್‌ಗಳ ಮೇಲಿನ ಖರ್ಚು ಕಡಿಮೆಯಾಗುತ್ತದೆ ಮತ್ತು ಅದರ ಲಾಭ ಹೋಮ್ ಲೋನ್ ತೆಗೆದುಕೊಳ್ಳುವವರಿಗೆ ಸಿಗುತ್ತದೆ.
ಉದಾಹರಣೆಗೆ ಬ್ಯಾಂಕ್ ನಿಮ್ಮ ಪ್ರೊಸೆಸಿಂಗ್ ಫೀಸ್ ಹಾಗೂ ಇತರ ಶುಲ್ಕಗಳನ್ನು ವಜಾ ಮಾಡಬಹುದು. ನೀವು ಯಾರಾದರೂ ಪ್ರಸಿದ್ಧ ಬಿಲ್ಡರ್‌ರಿಂದ ಮನೆ ಖರೀದಿಸುತ್ತಿದ್ದರೆ ನಿಮ್ಮ ಮಂತ್ಲಿ ಎಂಡ್‌ಟ್ರಿಕ್ ಮೂಲಕ ಉಳಿತಾಯದ ಬಡ್ಡಿ ದರದಲ್ಲಿ ಲೋನ್‌ಪಡೆಯಬಹುದು.
ಅರ್ಜಿ ಹಾಕುವ ಮೊದಲು ಕ್ರೆಡಿಟ್ ಇನ್‌ಫರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್‌ನಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್‌ತರಿಸಿ ನಿಮ್ಮ ರೆಕಾರ್ಡ್ ಮತ್ತು ಸ್ಕೋರ್ ಏನೆಂದು ತಿಳಿಯಬಹುದು. ವರ್ಷದಲ್ಲಿ ಒಂದು ಬಾರಿ 470 ರೂ. ಖರ್ಚು ಮಾಡಿ ಅಲ್ಲಿಂದ ಕ್ರೆಡಿಟ್ ಸ್ಕೋರ್ ಪಡೆದ ನಂತರ ನಿಮಗೆ ಸಾಲ ಕೊಡುವವರು ನಿಮ್ಮ ಅರ್ಜಿಯನ್ನು ಹೇಗೆ ನೋಡುತ್ತಾರೆಂದು ಗಮನಿಸಬಹುದು. ಒಂದು ವೇಳೆ ಕ್ರೆಡಿಟ್ ರಿಪೋರ್ಟ್‌ನಲ್ಲಿ ಏನಾದರೂ ಅಸಂಬಧ್ಧತೆ ಕಂಡುಬಂದರೆ ಉದಾಹರಣೆಗೆ ನೀವು ಕ್ರೆಡಿಟ್ ಕಾರ್ಡ್‌ನ ಬಿಲ್‌ಗಳನ್ನೆಲ್ಲಾ ಸಂದಾಯ ಮಾಡಿದ್ದೀರಿ. ಆದರೆ ರಿಪೋರ್ಟ್‌ನಲ್ಲಿ ಬಿಲ್ ಸಂದಾಯವಾಗಿಲ್ಲ ಎಂದು ತೋರಿಸಿದ್ದರೆ ನೀವು ಸಂದಾಯ ಮಾಡಿದ ರಸೀತಿಗಳೊಂದಿಗೆ ಸಂಬಂಧಿಸಿದ ಬ್ಯಾಂಕ್‌ಗಳೊಡನೆ ಮಾತನಾಡಬಹುದು. ಇಂತಹ ಸಾಕ್ಷಿಗಳೊಂದಿಗೆ ನೀವು ನೇರವಾಗಿ ಕ್ರೆಡಿಟ್ ಇನ್‌ಫರ್ಮೇಶನ್ ಬ್ಯೂರೋನೊಂದಿಗೂ ಸಂಪರ್ಕಿಸಿ ನಿಮ್ಮ ಸೂಚನೆಯನ್ನು ಸರಿಪಡಿಸಿಕೊಳ್ಳಬಹುದು.ರೀಪೇಮೆಂಟ್‌ನ ಕೆಟ್ಟ ರಿಪೋರ್ಟ್‌ನಿಮ್ಮ ಬಳಿ ಕ್ರೆಡಿಟ್‌ಕಾರ್ಡ್‌ಇದ್ದು ಬಹಳ ಸಮಯದರೆಗೆ ನಿಮ್ಮ ಸಾಲದ ಬಾಕಿಯನ್ನು ಕಟ್ಟದಿದ್ದರೆ ಅದು ನೀವು ಸಾಲ ಪಡೆಯಲು ಬಾಧಕವಾಗುತ್ತದೆ. ಅದಲ್ಲದೆ ನೀವು ಯಾವುದಾದರೂ ಪರ್ಸನಲ್ ಲೋನ್, ಆಟೋ ಲೋನ್ ಇತ್ಯಾದಿ ತೆಗೆದುಕೊಂಡಿದ್ದು ಅದರ ಕೆಲವು ಮಾಸಿಕ ಕಂತುಗಳನ್ನು ಕಟ್ಟಿಲ್ಲದಿದ್ದರೆ ನಿಮಗೆ ಲೋನ್ ಸಿಗುವುದು ಕಷ್ಟವಾಗುತ್ತದೆ.
ಅಂದಹಾಗೆ ಕ್ರೆಡಿಟ್ ಇನ್‌ಫರ್ಮೇಶನ್ ಬ್ಯೂರೋಗೆ ಇಂತಹ ಎಲ್ಲ ಸೂಚನೆಗಳು ಸಿಗುತ್ತವೆ. ಅವನ್ನು ಬ್ಯಾಂಕ್ ಲೋನ್‌ಗೆ ಅರ್ಜಿ ಹಾಕಿರುವವರ ಟ್ರ್ಯಾಕ್ ರೆಕಾರ್ಡ್ ನೋಡಲು ಉಪಯೋಗಿಸುತ್ತಾರೆ. ಒಂದು ವೇಳೆ ಬ್ಯಾಂಕ್‌ಗೆ ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಹಳೆಯ ಲೋನ್ ಪಾವತಿಯ ಬಗ್ಗೆ ಏನಾದರೂ ದೋಷ ಕಂಡುಬಂದರೆ ನಿಮ್ಮ ಲೋನ್ ಅರ್ಜಿ ನಿರಾಕರಿಸಬಹುದು. ಆದ್ದರಿಂದ ಲೋನ್ ಪಡೆಯುನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕ್ರೆಡಿಟ್ ಕಾರ್ಡ್, ಟೆಲಿಫೋನ್ ಬಿಲ್, ಲೋನ್‌ನ ಮಾಸಿಕ ಕಂತು ಇತ್ಯಾದಿಗಳನ್ನು ಸಕಾಲದಲ್ಲಿ ಸಂದಾಯ ಮಾಡಬೇಕು.
ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸಿ
ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳಿಗೆ ತಿಂಗಳ ಆಧಾರದ ಮೇರೆಗೆ ಟಾರ್ಗೆಟ್ ಇರುತ್ತದೆ. ಒಂದು ವೇಳೆ ನೀವು 24ನೇ ತಾರೀಕಿನ ನಂತರ ಲೋನ್‌ಗೆ ಅರ್ಜಿ ಹಾಕುತ್ತಿದ್ದರೆ ನಿಮಗೆ ಡಿಸ್ಕೌಂಟ್ ಸಿಗುನ ಸಾಧ್ಯತೆ ಹೆಚ್ಚುತ್ತದೆ. ಅಂದರೆ ಬ್ಯಾಂಕ್‌ಗಳು ತಮ್ಮ ಪ್ರತಿ ತಿಂಗಳ ಲೋನ್ ಟಾರ್ಗೆಟ್ ಪೂರ್ತಿ ಮಾಡಿದರೆ ಆ ಅವಧಿಯಲ್ಲಿ ಬ್ಯಾಂಕ್ ನಿಮಗೆ ಮಿತವ್ಯಯದ ದರದಲ್ಲಿ ಹೋಮ್ ಲೋನ್ ಕೊಡುತ್ತದೆ.
ನಿಮ್ಮ ಕ್ರೆಡಿಟ್ ರೇಟಿಂಗ್ನ್ನು ಸುಸ್ಥಿತಿಯಲ್ಲಿಡಿ
ಬ್ಯಾಂಕ್ ತನ್ನ ಹಳೆಯ ವಿಶ್ವಾಸಪಾತ್ರ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹೋಮ್ ಲೋನ್ ಕೊಡಲು ಪ್ರಯತ್ನಿಸುತ್ತದೆ. ನೀವು ಬ್ಯಾಂಕಿನ ಹಳೆಯ ಗ್ರಾಹಕರಾಗಿದ್ದು ನಿಮ್ಮ ರೀಪೇಮೆಂಟ್ ರೆಕಾರ್ಡ್ ಚೆನ್ನಾಗಿದ್ದರೆ ಇತರ ಗ್ರಾಹಕರಿಗಿಂತ ಕಡಿಮೆ ದರದಲ್ಲಿ ಲೋನ್ ಸಿಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಇತರ ಬಾಕಿಯನ್ನು ಸಕಾಲದಲ್ಲಿ ತೀರಿಸಿ. ಇದರಿಂದ ನಿಮ್ಮ ಕ್ರೆಡಿಟ್ ರೇಟಿಂಗ್ ಸುಸ್ಥಿತಿಯಲ್ಲಿದ್ದು ಅಗ್ಗದ ಹೋಮ್ ಲೋನ್ ಸಿಗಬಹುದು.
– ಪ್ರತಿಭಾ ರಾವ್
ಗಮನಿಸಿ
ಹೊಸದಾದ ಹಾಗೂ ಹೆಚ್ಚು ಮಾಹಿತಿಯಿಲ್ಲದ ಸಾಲ ಕೊಡುವವರ ಬಳಿ ಲೋನ್ ಪಡೆಯಬೇಡಿ.
ಲೋನ್ ಪಡೆಯುವಾಗ ಕನಿಷ್ಠ 4 ರಿಂದ 5 ಬೇರೆ ಬೇರೆ ಸಾಲ ಕೊಡುವವರ ಬಡ್ಡಿ ದರ, ವೆಚ್ಚ, ಮನವಿ ಪ್ರಕ್ರಿಯೆಯಲ್ಲಿ ಸರಳತೆ, ಸಂದಾಯದಲ್ಲಿ ಸರಳತೆ ಮತ್ತು ಹಳೆಯ ಸಾಲಗಾರರ ಅನುಭವಗಳ ಬಗ್ಗೆ ಅಗತ್ಯವಾಗಿ ಮಾಹಿತಿ ಪಡೆಯಿರಿ.
ಬಡ್ಡಿ ದರ ಹಾಗೂ ಇತರ ಶುಲ್ಕಗಳನ್ನು ಹೋಲಿಸಲು ನೀವು ಆನ್‌ಲೈನ್ ಪೋರ್ಟ್‌ನ ಆಸರೆಯನ್ನೂ ಪಡೆಯಬಹುದು.
ಸಾಲ ಕೊಡುವವರ ರೇಟ್ ರೀಸೆಟ್, ಪೇವರ್ ಕ್ಲೋಝರ್‌ನ ಷರತ್ತುಗಳ ಬಗ್ಗೆ ಅಧ್ಯಯನ ಮಾಡುವುದು ಬಹಳ ಅಗತ್ಯ.
ಪ್ರೀ ಪೇಮೆಂಟ್‌ನ ನಿಯಮಗಳು ಹಾಗೂ ಷರತ್ತುಗಳು ಸುಲಭವಾಗಿರುವಂತಹ ಸಾಲ ಕೊಡುವವರನ್ನೇ ಆಯ್ದುಕೊಳ್ಳಿ.
ಪ್ರತಿ ಸ್ಪರ್ಧೆ ಮತ್ತು ಬೇಸ್ ರೇಟ್‌ನ ನಿಯಮದಲ್ಲಿ ನೀವು ಲೋನ್‌ನಲ್ಲಿ ಗರಿಷ್ಠ ಶೇ.0.25 ರಿಂದ 0.5 ರಷ್ಟು ದರವನ್ನು ನಿಗದಿ ಮಾಡಬಹುದು. ಮುಂದೆ ಇದು ಇನ್ನಷ್ಟು ಕಡಿಮೆಯಾಗಬಹುದು. ರೇಟ್ ರೀಸೆಟ್ ಪ್ಲೇಟಿಂಗ್ ಮತ್ತು ಫಿಕ್ಸೆಡ್ ಎರಡೂ ರೀತಿಯ ಲೋನ್‌ಗೆ ಅನ್ವಯವಾಗುತ್ತದೆ.