ನಮ್ಮ ಬಡಾವಣೆಯಲ್ಲಿ ವಾಸಿಸುತ್ತಿದ್ದ ಶಶಿಧರ್‌ಒಂದು ದಿನ ದೂರದ ಕಾಲೋನಿಯಲ್ಲಿ ಆಕಸ್ಮಿಕವಾಗಿ ಭೇಟಿಯಾದರು. ``ನೀವು ಇಲ್ಲಿ ಹೇಗೆ?'' ಎಂದು ಅವರನ್ನು ಕೇಳಿದಾಗ, ``ನಾನು ಈಗ ಮನೆಯನ್ನು ಇಲ್ಲಿಯೇ ಶಿಫ್ಟ್ ಮಾಡಿದ್ದೇನೆ,'' ಎಂದು ಹೇಳಿದರು. ನಾನು ಅವರ ಮನೆಗೆ ಭೇಟಿ ನೀಡಿದಾಗ ಹಳೆಯ ಮನೆಯನ್ನು ಮಾರುವುದರ ಹಿಂದಿನ ಕಾರಣಗಳನ್ನು ಒಂದೊಂದಾಗಿ ಹೇಳತೊಡಗಿದರು.

``ಹಳೆಯ ಮನೆಯಲ್ಲಿ ನಾನು 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೆ. ಮಗಳ ಮದುವೆ 5 ಸಲ ನಿಶ್ಚಿತಾರ್ಥದ ಹಂತಕ್ಕೆ ಬಂದು ಮುರಿದು ಬಿತ್ತು. ಮನೆಯಲ್ಲಿ ಸದಾ ಜಗಳಗಳಾಗುತ್ತಿದ್ದವು. ತಲೆಯ ಮೇಲೆ ಸಾಲದ ಹೊರೆ ಹೆಚ್ಚುತ್ತ ಹೊರಟಿತ್ತು. ಆಗ ನನಗೆ ಅನೇಕ ಜನರು ಇದೆಲ್ಲ ಆಗ್ತಿರೋದು ಮನೆಯ ವಾಸ್ತು ದೋಷದ ಕಾರಣದಿಂದ ಎಂದು ಹೇಳಿದರು. ಹಾಗಾಗಿ ನಾನು ಹಳೆಯ ಮನೆಯನ್ನು ಮಾರಿ ಹೊಸ ಮನೆಯನ್ನು ಕೊಂಡುಕೊಂಡೆ,'' ಎಂದು ಹೇಳಿದರು.

``ಈ ಮನೆಯನ್ನು ಮೊದಲೇ ಖರೀದಿಸಿ ಇಡಲಾಗಿತ್ತೆ?'' ಎಂಬ ನನ್ನ ಪ್ರಶ್ನೆಗೆ ಅವರು, ``ಇಲ್ಲ ಇಲ್ಲ. ಈ ಮನೆಯನ್ನು ಮೊದಲು ಬಾಡಿಗೆಗೆ ಕೊಡಲಾಗಿತ್ತು. ಅವರನ್ನು ಖಾಲಿ ಮಾಡಿಸಿ ನನ್ನ ಅಧೀನಕ್ಕೆ ಒಪ್ಪಿಸಿದರು. ಆ ಬಳಿಕ ನಾನು ವಾಸ್ತು ರೀತಿಯಲ್ಲಿ ಇದನ್ನು ಬಹಳಷ್ಟು ಬದಲಾಯಿಸಿದೆ. ಅದಕ್ಕೆ 8 ಲಕ್ಷ ರೂ. ಖರ್ಚು ಬಂತು,'' ಎಂದರು.

ಈಗ ಮಾತನಾಡುವ ಸರದಿ ನನ್ನದಾಗಿತ್ತು. ``ಹಳೆಯ ಮನೆಯಲ್ಲಿದ್ದಾಗ ನಿಮ್ಮ ತಮ್ಮ ಐಎಎಸ್‌ ಅಧಿಕಾರಿಯಾದ. ನೀವು ಫ್ಯಾಕ್ಟರಿಗಳ ಸಂಖ್ಯೆಯನ್ನು 1 ರಿಂದ 6 ಮಾಡಿದಿರಿ. ಬಳಿಕ ಈ ಮನೆಯನ್ನು ಕೊಂಡುಕೊಂಡಿರಿ. ಮನೆಯಲ್ಲಿ ಕುಳಿತುಕೊಂಡೇ ಸಾಕಷ್ಟು ಬಾಡಿಗೆ ಹಣ ಬರುತ್ತಲಿತ್ತು. ಈಗ ಒಮ್ಮೆಲೆ ಆ ಮನೆ ನಿಮಗೆ ವಾಸ್ತು ಕಾರಣದಿಂದ ಶಾಪವಾಗಿ ಪರಿಣಮಿಸಿದೆ ಎಂದರೆ ನನಗೆ ಏಕೊ ನಂಬೋಕೆ ಆಗಿಲ್ಲ,'' ಎಂದೆ. ನನ್ನ ಮಾತಿಗೆ ಅವರು ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ.

ಇಂದು ಎಲ್ಲೆಲ್ಲೂ ಇದೇ ಸ್ಥಿತಿ ಇದೆ. ಒಂದಿಷ್ಟು ಸಮಸ್ಯೆಯಾದರೂ ಸಾಕು, ಜನ ವಾಸ್ತು ಕಡೆಗೆ ಹೆಜ್ಜೆ ಹಾಕತೊಡಗುತ್ತಾರೆ.

ವಾಸ್ತುವಿನ ಪ್ರಚಾರ ಪ್ರಸಾರದ ಕಾರಣದಿಂದ ದೊಡ್ಡ ದೊಡ್ಡ ಬಂಗ್ಲೆಗಳು ಭಾರಿ ಭಾರಿ ಬದಲಾವಣೆ ಕಾಣುತ್ತಿವೆ.

ಇಂದು ಮನೆಯ ಹಿರಿಯರಲ್ಲಿ ಯಾರನ್ನಾದರೂ ಮಾತನಾಡಿಸಿದಲ್ಲಿ ತಮ್ಮ ಕಾಲದಲ್ಲಿ ಇಂಥದೇನೂ ಇರಲಿಲ್ಲ ಎಂದು ಹೇಳುತ್ತಾರೆ. ಅಬಕಾರಿ ಕಮೀಷನರ್‌ ಆಗಿ ಈಚೆಗಷ್ಟೇ ನಿವೃತ್ತರಾದ ಹರಿಪ್ರಸಾದ್‌ ಹೀಗೆ ಹೇಳುತ್ತಾರೆ, ``ಧಾರವಾಡದಲ್ಲಿರುವ ನಮ್ಮ ಮನೆ ಇಬ್ಬರು ಐಪಿಎಸ್‌ ಮತ್ತು ಒಬ್ಬ ಐಎಎಸ್‌ ಅಧಿಕಾರಿಯನ್ನು ಕೊಟ್ಟಿದೆ. ಅಂತಹ ದಕ್ಷಿಣಾಭಿಮುಖಿ ಮನೆಯನ್ನು ನಾವು ಎಂದೂ ಅಶುಭ ಎಂದು ಭಾವಿಸಿಲ್ಲ. ತಮ್ಮ ಮನಸ್ಸಿನಲ್ಲಿ ವಾಸ್ತುವಿನ ಬಗ್ಗೆ ಯಾವುದೇ ವಿಚಾರಗಳು ಬಂದಿಲ್ಲ,'' ಎಂದು ಹೇಳಿದರು.

ವಾಸ್ತವ ಏನು?

ಮೂಢನಂಬಿಕೆಯಿಂದ ಪ್ರೇರಿತ ಕೆಲವು ವಾಸ್ತು ತಜ್ಞರನ್ನು ಮಾತನಾಡಿಸಿದಾಗ, ಈ ಉದ್ಯೋಗ ಅವರ ಆದಾಯದ ಮೂಲವೇ ಹೊರತು ಬೇರೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೊಂದು ಆಧುನಿಕ ಭಾರತೀಯ ವಿಚಾರಧಾರೆ. ಇದರ ಹಿಂದೆ ಚೀನಾದ ಫಿಂಗ್‌ ಶೂಯಿಯ ಪ್ರಭಾವ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ