ಮನೆ ಖರೀದಿ ಪ್ರತಿಯೊಬ್ಬರ ಕನಸಾಗಿದೆ. ಅಂದಹಾಗೆ ನಮ್ಮ ದೇಶದಲ್ಲಿ ಸಾಲ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಆದರೆ ನಿಮ್ಮ ಪೋರ್ಟ್‌ ಫೋಲಿಯೋದಲ್ಲಿ ಹೋಮ್ ಲೋನ್‌ ಸೇರಿದ್ದರೆ ಅದು ಒಳ್ಳೆಯ ಸೂಚನೆ.

ಹೋಮ್ ಲೋನ್‌, ಇತರೆ ಸಾಲಗಳಿಗಿಂತ ವಿಭಿನ್ನವಾಗಿದೆ. ಏಕೆಂದರೆ ಹೋಮ್ ಲೋನ್‌ ಪಡೆಯುವುದೆಂದರೆ ನಿಮ್ಮ ಬಳಿ ಒಂದು ಆಸ್ತಿ ಇದೆ. ಅದರ ಬೆಲೆ ಯಾವಾಗಲೂ ಹೆಚ್ಚುತ್ತಿರುತ್ತದೆ. ನೀವು ಹೋಮ್ ಲೋನ್‌ ತೆಗೆದುಕೊಂಡು ಮನೆ ಖರೀದಿಸುತ್ತಿದ್ದರೆ ಅದು ತಿಳಿವಳಿಕೆಯ ವಿಷಯವಾಗಿದೆ. ಆದರೆ ಅದರ ಸೂಕ್ಷ್ಮತೆಗಳ ಬಗ್ಗೆ ತಿಳಿದಿರಬೇಕು.

ಹೋಮ್ ಲೋನ್ ಸಾಮರ್ಥ್ಯದ ಬಗ್ಗೆ ತೀರ್ಮಾನ

ಬ್ಯಾಂಕುಗಳಿಗೆ ಕೆಲವು ಮಾನದಂಡಗಳಿವೆ. ಅದಕ್ಕೆ ಹೊಂದುವ ವ್ಯಕ್ತಿಗಳಿಗೆ ಮಾತ್ರ ಒಂದು ನಿಶ್ಚಿತ ಮಿತಿಯವರೆಗೆ ಹೋಮ್ ಲೋನ್‌ ಕೊಡಲಾಗುತ್ತದೆ. ಸರ್ಟಿಫೈಡ್‌ ಫೈನಾನ್ಶಿಯಲ್ ಪ್ಲ್ಯಾನರ್‌ ಅಮಿತ್‌ರ ಪ್ರಕಾರ, ಯಾರಿಗೆ ಎಷ್ಟು ಲೋನ್‌ ಸಿಗುತ್ತದೆಂದು ಅವರ ಗ್ರಾಸ್‌ ಸ್ಯಾಲರಿಯಿಂದ ನಿರ್ಧರಿಸಲಾಗುತ್ತದೆ.

ಉದಾಹರಣೆಗೆ ಸಂಬಳದ ವರ್ಗದವರ ವಾರ್ಷಿಕ ಆದಾಯದ 4 ಪಟ್ಟು  ಹೋಮ್ ಲೋನ್‌ ಕೊಡಲಾಗುತ್ತದೆ. ಆದರೆ ಚಾರ್ಟರ್ಡ್ ಅಕೌಂಟೆಂಟ್‌, ಡಾಕ್ಟರ್‌ರಂತಹ ಉದ್ಯೋಗಿಗಳಿಗೆ ಅವರ ವಾರ್ಷಿಕ ವರಮಾನದ 7 ಪಟ್ಟು ಲೋನ್‌ ಕೊಡಲಾಗುತ್ತದೆ. ಆದಾಗ್ಯೂ ಲೋನ್‌ ಕೊಡುವಾಗ ಬ್ಯಾಂಕ್‌ ಗಮನಿಸಬೇಕಾದ ವಿಷಯವೇನೆಂದರೆ ವ್ಯಕ್ತಿಯ ಟೇಕ್‌ ಹೋಮ್ ಸ್ಯಾಲರಿ ಅಥವಾ ನೆಟ್‌ ಸ್ಯಾಲರಿ, ಗ್ರಾಸ್‌ ಸ್ಯಾಲರಿಯ 40%ಕ್ಕಿಂತ ಕಡಿಮೆಯಾಗಬಾರದು.

ಅದಲ್ಲದೆ ಹೋಮ್ ಲೋನ್‌ಗೆ ಮನವಿ ಮಾಡುವವರಿಗೂ ಕ್ರೆಡಿಟ್‌ ರಿಪೋರ್ಟ್‌ ಬಗ್ಗೆಯೂ ಗಮನಿಸಲಾಗುತ್ತದೆ. ಒಂದು ವೇಳೆ ಸಾಲ ತೀರಿಸುವ ಹಳೆಯ ರೆಕಾರ್ಡ್‌ ಕಳಂಕಿತವಾಗಿದ್ದರೆ ಅಂತಹ ವ್ಯಕ್ತಿಗೆ ಲೋನ್‌ ಸಿಕ್ಕುವುದೇ ಇಲ್ಲ. ಒಂದು ವೇಳೆ ಸಿಕ್ಕರೂ ಹೆಚ್ಚಿನ ಬಡ್ಡಿಗೆ ಸಿಗುತ್ತದೆ.

ಹೋಮ್ ಲೋನ್ನಿಂದ ಆದಾಯ ತೆರಿಗೆಯಲ್ಲಿ ಲಾಭ

ಹೋಮ್ ಲೋನ್‌ ಪಡೆದು ಮನೆ ಖರೀದಿಸಿದರೆ 2 ಲಾಭಗಳಿವೆ. ಮೊದಲನೆಯದು, ನಮ್ಮ ಮನೆಯ ಖುಷಿ ಮತ್ತು ಎರಡನೆಯದು ಆದಾಯ ತೆರಿಗೆಯಲ್ಲಿ ಉಳಿತಾಯ. ಆದಾಯ ತೆರಿಗೆ ಅಧಿನಿಯಮದ ಸೆಕ್ಷನ್‌ 80ಸಿ ಆಧಾರದಲ್ಲಿ ಹೋಮ್ ಲೋನ್‌ನ ಮೂಲಧನ ತೀರಿಕೆಯ ಆಧಾರದಲ್ಲಿ ಬಜೆಟ್‌ಗೆ ಅನುಸಾರವಾಗಿ 1.5 ಲಕ್ಷಕ್ಕೆ ಮಾತ್ರ ರಿಯಾಯಿತಿ ಸಿಗುತ್ತದೆ. ಅದನ್ನು ಪಡೆಯಲು ಸಾಲ ಕೊಡುವವರಿಂದ ಒಂದು ಸ್ಟೇಟ್‌ಮೆಂಟ್‌ ಪಡೆಯುವುದು ಅಗತ್ಯ. ಆದಾಯ ತೆರಿಗೆ ಅಧಿನಿಯಮದ ಸೆಕ್ಷನ್‌ 24(ಬಿ) ಆಧಾರದಲ್ಲಿ ಹೌಸಿಂಗ್‌ ಲೋನ್‌ನ ಬಡ್ಡಿಯನ್ನು ಮತ್ತೆ ಪಾತಿಸುವುದರಿಂದ ರೂ. 1.50 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ. ಆದಾಗ್ಯೂ ಒಂದು ಷರತ್ತೆಂದರೆ ಮನೆಯ ನಿರ್ಮಾಣ ಅಥವಾ ಆ ಮನೆಯ ಮೇಲೆ ಸಾಲ ಪಡೆದಿರುವವರಿಗೆ, ಲೋನ್‌ ಪಡೆದ 3 ವರ್ಷಗಳ ಒಳಗೆ ಮನೆಯನ್ನು ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಬಡ್ಡಿಗೆ ಕೊಟ್ಟ 1.50 ಲಕ್ಷ ರೂ.ಗಳ ರಿಯಾಯಿತಿ ಕಡಿತಗೊಂಡು 30 ಸಾವಿರ ರೂ. ಉಳಿಯುತ್ತದೆ.

ಒಂದು ವೇಳೆ ನೀವು ಮನೆಯ ರಿಪೇರಿ, ಪುನರ್‌ ನಿರ್ಮಾಣ ಅಥವಾ ವಿಸ್ತರಣೆಗೆ ಲೋನ್‌ ಪಡೆದಿದ್ದರೆ ನೀವು ಸೆಕ್ಷನ್‌ 24(ಸಿ) ಆಧಾರದಲ್ಲಿ ಬಡ್ಡಿಯಲ್ಲಿ ಕಡಿತ ಪಡೆಯಬಹುದು. ಇದರ ಅಡಿಯಲ್ಲಿ ರಿಯಾಯಿತಿಯ ಮಿತಿ ಹೊಸ ಬಜೆಟ್‌ಗೆ ತಕ್ಕಂತೆ 2 ಲಕ್ಷ ರೂ.ಗಳಾಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ