ತಾಕತ್ತಿದ್ದರೆ ತಡೆಯಿರಿ :  ಚೀನಾದಲ್ಲಿ ಆಡಳಿತ ಸರ್ಕಾರದ ಮರ್ಜಿ ಇಲ್ಲದೆ ಏನೂ ನಡೆಯುವುದಿಲ್ಲ. ಆದರೂ ಅದನ್ನು ವಿರೋಧಿಸ ಬಯಸುವವರು ಏನಾದರೊಂದು ನೆಪ ಹುಡುಕುತ್ತಿರುತ್ತಾರೆ. ಇತ್ತೀಚೆಗೆ ಗುಆಂಗ್‌ಜೀ ರಾಜ್ಯದ ರಾಜಧಾನಿಯಲ್ಲಿ ನಾಯಿ ತಿನ್ನುವವರು ಹಾಗೂ ನಾಯಿ ಸಾಕುವವರ ನಡುವೆ ಮಾರಾಮಾರಿ ನಡೆಯಿತು.

ಎಲ್ಲಕ್ಕೂ ಅಮೂಲ್ಯವಾದುದು ಸಮಯ : ಆ್ಯಕ್ಟ್ರೆಸ್‌ ಬ್ರಿಟ್ನೀ ವಾಗ್ನರ್‌ ಜಪಾನಿನ ತ್ರೋವೆಕ ಸುಂದರಿಯಾಗಿ ಆಯ್ಕೆಗೊಂಡು ಸೌಂದರ್ಯದ ಅಪೂರ್ವ ಕಿರೀಟ ಮುಡಿಗೇರಿಸಿದಳು. ಅಲ್ಲಿನ ಒಂದು ಖಾಸಗಿ ಸಂಸ್ಥೆ ಮಧುಮೇಹದ ಕುರಿತು ಜಾಗೃತಿ ಮೂಡಿಸಲು ಈಕೆಯನ್ನು ರಾಯಭಾರಿಯಾಗಿ ನೇಮಿಸಿದಾಗ, ಕ್ಯಾಲಿಫೋರ್ನಿಯಾದಲ್ಲಿ ಪ್ರಚಾರಕ್ಕೆಂದು ಆಕೆ ತಯಾರಾದದ್ದು ಹೀಗೆ.

ತುಸು ತೆಪ್ಪಗೆ ಕಡೆ ಕೂರು! :  ಇದು ನಾಟಕದ ಒಂದು ದೃಶ್ಯವೇ ಇರಬಹುದು, ಆದರೆ ಪ್ರತಿಯೊಬ್ಬ ಗಂಡನೂ ತನ್ನ ಹೆಂಡತಿಯ ಬಾಯಿಬಡುಕತನದ ಮುಂದೆ ಹೀಗೆ ಬಾಲ ಮುದುರಿ ಸುಮ್ಮನೆ ಕೂರಬೇಕಾಗುತ್ತದೆ. ನಿರಂತರ ಶೋಷಣೆಗೆ ಒಳಗಾಗುತ್ತಿರುವ ಆಧುನಿಕ ಪತಿರಾಯ ಬಾಯಿ ತೆರೆದು ಅದನ್ನು ವಿರೋಧಿಸಿದರೆ ಅದು ದೊಡ್ಡ ಕ್ರಾಂತಿಯಾದೀತು!

ಧರ್ಮದಿಂದ ಕಂಗೆಟ್ಟ ತಸ್ಲೀಮಾ : ಕಂದಾಚಾರಿ ಮುಸ್ಲಿಂ ಸಮಾಜವನ್ನು ಧಿಕ್ಕರಿಸಿ ಅದರ ಪೊಳ್ಳುತನ ಬಯಲಿಗೆಳೆವ ಈಕೆಗೆ ಮಾಲ ಯೂಸುಫ್‌ ಜಯೀರ ತರಹ ಬೆದರಿಕೆಗಳು ಬರುತ್ತಲಿವೆಯಂತೆ! ತವರೂರು ಬಾಂಗ್ಲಾ ದೇಶದಲ್ಲಿ ಬದುಕಲಾಗದೆ ಕೋಲ್ಕತಾಗೆ ಬಂದು ನೆಲೆಸಿದ್ದ ತಸ್ಲೀಮಾ, ಅಲ್ಲೂ ಸುರಕ್ಷತೆ ಇಲ್ಲ ಎಂದು ಖಾತ್ರಿಯಾದಾಗ ಅಮೆರಿಕಾಗೆ ಹಾರಿದರು.

samachar-darshan-5

ಛೇ ಛೇ.... ಇದು ನನ್ನದಾಗಬಾರದಿತ್ತೇ! :  ಪ್ಲಾಟಿನಂ ಹಾಗೂ ವಜ್ರಗಳಿಂದ ರೂಪುಗೊಂಡ ಈ ಕಿರೀಟ ಅಂತಿಂಥದ್ದಲ್ಲ. ಇದರ ಬೆಲೆ 15 ಕೋಟಿಗೂ ಹೆಚ್ಚು. ಜಪಾನಿನ ಒಂದು. ಖಾಸಗಿ ಕಂಪನಿ ಇದನ್ನು ಯಾರಿಗಾಗಿ ರೂಪಿಸಿದೆಯೋ ಗೊತ್ತಿಲ್ಲ, ಆದರೆ ಜಪಾನಿನ ಪ್ರತಿಯೊಬ್ಬ ಹೆಣ್ಣೂ ಇದು ತನ್ನ ಮುಡಿಗೇರಬಾರದೇ ಎಂದು ಆಸೆಪಡುತ್ತಿರುವುದಂತೂ ನಿಜ.

samachar-darshan-6

ನಮ್ಮನ್ನೂ ಬದುಕಲು ಬಿಡಿ : ವಿಶ್ವದಲ್ಲಿ ಎಲ್ಲೆಡೆ ಹೆಣ್ಣಿನ ಮೇಲೆ ನಿರಂತರ ನಡೆಯುತ್ತಿರುವ ಅತ್ಯಾಚಾರದಿಂದಾಗಿ ಬೇಸತ್ತು, ದ. ಅಮೇರಿಕಾದ ಬ್ಯೂನಸ್‌ ಐರಸ್‌ ನಗರದಲ್ಲಿ ಅದನ್ನು ಬಲವಾಗಿ ವಿರೋಧಿಸಿ ಹೆಂಗಸರು ಹೀಗೆ ಪ್ರತಿಭಟನೆ ನಡೆಸಿದರು. ಆದರೆ ದುಷ್ಕರ್ಮಿಗಳ ವಿಕೃತ ಮನಸ್ಸು ಇಷ್ಟು ಮಾತ್ರದಿಂದ ಬದಲಾದೀತೇ? ನಮ್ಮ ದೇಶದ ಎಲ್ಲಾ ಮಹಾನಗರಗಳಲ್ಲೂ ಇಂಥ ಪ್ರತಿಭಟನೆ ಅಗತ್ಯ ದಿನೇದಿನೇ ನಡೆಯಬೇಕು.

samachar-darshan-7

ಭೇದಭಾವದ ಅಂತರ ತೊಲಗಲಿ : ಅಮೇರಿಕಾದಲ್ಲಿ ಕರಿಯ ಬಿಳಿಯರ ನಡುವೆ ಸಂಘರ್ಷ ಕಡಿಮೆ ಆಗುವ ಬದಲು ದಿನೇದಿನೇ ಹೆಚ್ಚುತ್ತಿದೆ. ಇತ್ತೀಚಿನ ಹೊಸ ಪ್ರಕರಣದಲ್ಲಿ ಚಾರ್ಲ್ಸ್ ಟನ್‌ ಎಂಬ ನಗರದಲ್ಲಿ, ಒಬ್ಬ ಮತಿಗೆಟ್ಟ ಬಿಳಿಯನು, 9 ಮಂದಿ ಕರಿಯರನ್ನು ಅವರ ಚರ್ಚ್‌ನಲ್ಲೇ ಕಾರಣವಿಲ್ಲದೆ ಗುಂಡಿಟ್ಟು ಕೊಂದುಹಾಕಿದ. ಕರಿಯರೆಂದಿದ್ದರೂ ಗುಲಾಮರು, ಅವರು ಹಾಗೇ ಇರಬೇಕು ಎಂಬುದವನ ವಾದ. ಅಲ್ಲಿನ ಚರ್ಚ್‌ ಸತ್ತವರ ಹೆಸರಲ್ಲಿ ಬೊಕೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿತು. ನಮ್ಮಲ್ಲೂ ಜಾತಿ ಹೆಸರಿನಲ್ಲಿ ದಂಗೆಗಳಾಗುತ್ತವೆ, ಆದರೆ ಇಂಥ ಹೀನಾಯ ಮಟ್ಟದಲ್ಲಲ್ಲ ಎಂಬುದೇ ಸಮಾಧಾನ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ