ದಸರಾ ದೀಪಾವಳಿ ಬರುತ್ತಲೇ ಮಹಿಳೆಯರಿಗೆ ಶಾಪಿಂಗ್‌ನ ಹುಚ್ಚು ತಲೆಗೇರುತ್ತದೆ. ಆ ಸಂದರ್ಭದಲ್ಲಿ ಹೊಸ ಹೊಸ ವಸ್ತುಗಳನ್ನು ಮನೆಗೆ ತರುವುದು, ಹಳೆಯ ವಸ್ತುಗಳನ್ನು ವಿಲೇವಾರಿ ಮಾಡುವುದು ನಡೆದಿರುತ್ತದೆ. ಆದರೆ ಹಬ್ಬದ ಶಾಪಿಂಗ್ ಯಾವುದಾದರೂ ಚಿನ್ನದ ಒಡವೆ ಖರೀದಿಸದಿದ್ದರೆ ಅಪೂರ್ಣವಾಗಿಯೇ ಉಳಿಯುತ್ತದೆ. ಅಂದಹಾಗೆ ಭಾರತದಲ್ಲಿ ಗೋಲ್ಡನ್ನು ಲಗ್ಝುರಿಗಿಂತ ಹೆಚ್ಚಾಗಿ ಇನ್ವೆಸ್ಟ್ ಮೆಂಟ್ ರೂಪದಲ್ಲಿ ನೋಡಲಾಗುತ್ತದೆ. ಜೊತೆಗೆ ನಿರಂತರವಾಗಿ ಹೆಚ್ಚುತ್ತಿರುವ ಚಿನ್ನದ ಬೆಲೆ ನೋಡುವಾಗ ಅದರ ಮೇಲೆ ಹೂಡಿಕೆ ಒಳ್ಳೆಯ ಆಯ್ಕೆ ಎನಿಸುತ್ತದೆ.
ಫೈನಾನ್ಸ್ ಸಲಹೆಗಾರ ಶ್ರೀನಾಥ್ ಹೀಗೆ ಹೇಳುತ್ತಾರೆ, “ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದರಿಂದ ಮಹಿಳೆಯರ 2 ಆಸೆಗಳು ಪೂರೈಸುತ್ತವೆ. ಮೊದಲನೆಯದಾಗಿ ಅವರ ಗೋಲ್ಡ್ ಕಲೆಕ್ಷನ್‌ನಲ್ಲಿ ಹೆಚ್ಚಳ, ಎರಡನೆಯದು ಅವರ ಇನ್ವೆಸ್ಟ್ ಮೆಂಟ್ ಆಸೆಯೂ ಪೂರೈಸುತ್ತದೆ.”
ಚಿನ್ನದಲ್ಲಿ ಹೂಡಿಕೆಗೆ ಹಲವಾರು ಆಯ್ಕೆಗಳಿವೆ. ಆಭರಣಗಳ ರೂಪದಲ್ಲಿ ಅಥವಾ ನಾಣ್ಯಗಳ ರೂಪದಲ್ಲಿ ಚಿನ್ನ ಖರೀದಿಸುವುದಲ್ಲದೆ, ಚಿನ್ನದಲ್ಲಿ ಇನ್ನೂ ಹಲವಾರು ವಿಧಾನಗಳಲ್ಲಿ ಹಣ ಹೂಡಬಹುದು. ಇದಲ್ಲದೆ, ಚಿನ್ನದಲ್ಲಿ ಹೂಡಿಕೆಗಾಗಿ ಮ್ಯೂಚುವಲ್ ಫಂಡ್ ಡ್ರ್ಯಾಫ್ಟ್ ಕೂಡ ಲಭ್ಯವಿದೆ. ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಫಂಡ್ ಕೂಡ ಒಳ್ಳೆಯ ಆಯ್ಕೆ. ಹೂಡಿಕೆದಾರ ತನ್ನ ಸೌಕರ್ಯಕ್ಕೆ ತಕ್ಕಂತೆ ಅವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಬನ್ನಿ, ಈ ಆಯ್ಕೆಗಳ ಬಗ್ಗೆ ದೃಷ್ಟಿ ಹರಿಸೋಣ.
ಗೋಲ್ಡ್ ಎಂಐ ಸ್ಕೀಂ
ಗೋಲ್ಡ್ ನಲ್ಲಿ ಹೂಡಿಕೆಗೆ ಇದು ಅತ್ಯಂತ ಸುಲಭದ ವಿಧಾನ. ಈಗ ಎಲ್ಲ ಜ್ಯೂವೆಲರಿಗಳೂ ಬ್ರ್ಯಾಂಡ್ ಗೋಲ್ಡ್ ಮೇಲೆ ವಿಧವಿಧವಾದ ಸ್ಕೀಮ್ ಗಳನ್ನು ತರುತ್ತಿದ್ದಾರೆ. 12 ತಿಂಗಳುಗಳಲ್ಲಿ 11 ಕಂತುಗಳನ್ನು ಗ್ರಾಹಕ ಕಟ್ಟಬೇಕು. 12ನೇ ಕಂತನ್ನು ಜ್ಯೂವೆಲರಿ ಬ್ರ್ಯಾಂಡ್ ಸ್ವತಃ ಭರಿಸುತ್ತದೆ. ನೀವು ಪ್ರತಿ ತಿಂಗಳೂ ಸಾವಿರ ರೂ.ಗಳನ್ನು ಕಟ್ಟಿದರೆ 12ನೇ ತಿಂಗಳು ಒಂದು ನಿಶ್ಚಿತ ದಿನದಂದು 12,000 ರೂ.ಗಳ ಯಾವುದಾದರೂ ಗೋಲ್ಡ್ ಜ್ಯೂವೆಲರಿ ಪಡೆಯಬಹುದು. ಆದರೆ ಶ್ರೀನಾಥ್‌ರ ಪ್ರಕಾರ, ಇದು ಹೆಚ್ಚಿನ ಲಾಭದ ವ್ಯವಹಾರವಲ್ಲ. ಅವರು ಹೀಗೆ ಹೇಳುತ್ತಾರೆ, “ಇಂತಹ ಸ್ಕೀಮ್ ಯಾವಾಗ ಲಾಭಕಾರಿಯಾಗುತ್ತದೆಂದರೆ ನಿಮ್ಮ ಜ್ಯೂವೆಲರಿ ಕಲೆಕ್ಷನ್ ಹೆಚ್ಚಿಸಬೇಕಾಗಿದ್ದಾಗ. ಏಕೆಂದರೆ ಈ ಸ್ಕೀಮಿನಿಂದ ನೀವು ಜಮೆ ಮಾಡಿದ ಕಂತುಗಳ ಒಟ್ಟು ಮೌಲ್ಯದ ಜ್ಯೂವೆಲರಿ ಸಿಗುತ್ತದೆ. ಇದನ್ನು ಹಣವಾಗಿ ಕನ್ವರ್ಟ್ ಮಾಡಲು ಸಾಧ್ಯವಿಲ್ಲ.”
ಗೋಲ್ಡ್ ಫ್ಯೂಚರ್
ಗೋಲ್ಡ್ ಫ್ಯೂಚರ್ ಮೂಲಕ ಖರೀದಿಸಲು ಸಂಪೂರ್ಣ ಮೊತ್ತದ ಅಗತ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಮಾರ್ಜಿನ್ ಮನಿಯಿಂದ ಕೆಲಸ ನಡೆಯುತ್ತದೆ. ಯಾವುದೇ ಸಮಯದಲ್ಲಿ ವ್ಯವಹಾರ ಮಾಡಲಾಗುತ್ತದೆ ಮತ್ತು ಸಮಾಪ್ತಿ ಮಾಡಲಾಗುತ್ತದೆ. ಇದರಲ್ಲಿ ಲಿಕ್ವಿಡಿಟಿಯ ಸಮಸ್ಯೆ ಇರುವುದಿಲ್ಲ. ನೀವು ಬಯಸಿದರೆ ಕ್ಯಾಶ್ ಕೊಟ್ಟು ವ್ಯವಹರಿಸಬಹುದು ಅಥವಾ ಅದರ ಫಿಸಿಕಲ್ ಡೆಲಿವರಿ ಪಡೆಯಬಹುದು. ನೀವು ಮುಂದಿನ ಎಕ್ಸ್ ಪೈರಿಯಲ್ಲಿ ವ್ಯವಹಾರವನ್ನು ರೋಲ್ ಓವರ್ ಮಾಡುವ ಸೌಲಭ್ಯ ಇರುತ್ತದೆ. ಆದರೆ ಇದರಲ್ಲಿ ಕೆಲವು ತೊಂದರೆಗಳೂ ಇವೆ. ಫ್ಯೂಚರ್‌ಗಳಲ್ಲಿ ತೊಂದರೆ ಹೆಚ್ಚು. ವ್ಯವಹಾರದ ಎಕ್ಸ್ ಪೈರಿಯ ಮುಂಚೆ ನೀವು ನಿರ್ಧಾರ ತೆಗೆದುಕೊಳ್ಳಲೇಬೇಕು. ಗೋಲ್ಡ್ ಫ್ಯೂಚರ್ಸ್ ನಲ್ಲಿ ಕೊಳ್ಳುವಿಕೆ ಮತ್ತು ಮಾರಾಟ ಎರಡೂ ಸಮಯದಲ್ಲಿ ಬ್ರೋಕರೇಜ್‌ಕೊಡಬೇಕಾಗುತ್ತದೆ. ಆದ್ದರಿಂದ ಈ ಪ್ಲ್ಯಾನ್‌ನಲ್ಲಿ ಇನ್ವೆಸ್ಟ್ ಮಾಡುವ ಮೊದಲು ಒಟ್ಟು ಒಳ್ಳೆಯ ಇನ್ವೆಸ್ಟ್ ಮೆಂಟ್ ಸಲಹೆಗಾರರ ಸಲಹೆಯನ್ನು ಅಗತ್ಯವಾಗಿ ಕೇಳಿ.
ಗೋಲ್ಡ್ ಫಂಡ್
ಗೋಲ್ಡ್ ಫಂಡ್, ಮ್ಯೂಚುವಲ್ ಫಂಡ್‌ನದೇ ಒಂದು ರೂಪವಾಗಿದ್ದು ಅದರಲ್ಲಿ ಅಂತಾರಾಷ್ಟ್ರೀಯ ಫಂಡ್‌ಗಳ ಮೂಲಕ ಚಿನ್ನದ ಮೈನಿಂಗ್‌ಗೆ ಸಂಬಂಧಿಸಿದ ಕಂಪನಿಗಳಲ್ಲಿ ಹೂಡಲಾಗುತ್ತದೆ. ಇದನ್ನು ಎಲೆಕ್ಟ್ರಾನಿಕ್ ಫಾರ್ಮ್ ನಲ್ಲಿ ಇಡಲಾಗಿದ್ದು, ಅದರ ರಕ್ಷಣೆಯ ಚಿಂತೆ ಇರುವುದಿಲ್ಲ. ಇಂತಹ ಯೋಜನೆಗಳಲ್ಲಿ ಹೂಡುವುದರಿಂದ ಹೂಡಿಕೆದಾರರಿಗೆ ಫಂಡ್ ಮ್ಯಾನೇಜರ್‌ರ ಕೌಶಲ್ಯ ಮತ್ತು ಸಕ್ರಿಯ ಫಂಡ್ ವ್ಯವಸ್ಥೆಯ ಲಾಭ ಸಿಗುತ್ತದೆ.
ಶ್ರೀನಾಥ್ ಹೇಳುತ್ತಾರೆ, “ಗೋಲ್ಡ್ ಫಂಡ್‌ನ ಅತ್ಯಂತ ದೊಡ್ಡ ಅನುಕೂಲವೆಂದರೆ ಅದನ್ನು ಡಿಮ್ಯಾಟ್ ಅಕೌಂಟ್ ಇಲ್ಲದೆ, ಆಪರೇಟ್ ಮೂಲಕ ಸಣ್ಣ ಮೊತ್ತವನ್ನು ಹೂಡಬಹುದು. ಈ ಗೋಲ್ಡ್ ಫಂಡ್‌ನಲ್ಲಿ ಸಿಪ್‌ನಿಂದ ಸಿಗುವ ರಿಟರ್ನ್ಸ್ ಮೇಲೆ ಯಾವುದೇ ಆಸ್ತಿ ತೆರಿಗೆ ಇರುವುದಿಲ್ಲ. ಆದರೆ ಅದಕ್ಕೂ ಕೆಲವು ಮಿತಿಗಳಿವೆ. ಕಾಸ್ಟ್ ಆಫ್ ಹೋಲ್ಡಿಂಗ್‌ನ ಲೆಕ್ಕದಲ್ಲಿ ಗೋಲ್ಡ್ ಫಂಡ್ ಇಟಿಎಫ್‌ಗಿಂತ ಕೊಂಚ ದುಬಾರಿಯಾಗಿರುತ್ತದೆ.”
ಗೋಲ್ಡ್ ಇಟಿಎಫ್
ಗೋಲ್ಡ್ ಇಟಿಎಫ್ ಎಂತಹ ಮ್ಯೂಚುವಲ್ ಫಂಡ್ ಎಂದರೆ ಯಾರು ಚಿನ್ನದಲ್ಲಿ ಹೂಡಿಕೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗುತ್ತಾರೋ ಅಂದರೆ ಅವುಗಳ ಮೂಲಕ ಚಿನ್ನದಲ್ಲಿ ಹೂಡಲು ಅವರ ಬಳಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಇರಬೇಕು. ಆದಾಗ್ಯೂ ಗೃಹಿಣಿಯರಿಗೆ ಇದು ಕಷ್ಟ. ಆದರೆ ಉದ್ಯೋಗಸ್ತೆಯರಿಗೆ ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಸುವುದು ಕಷ್ಟವೇನಲ್ಲ. ಆದರೆ ಶ್ರೀನಾಥ್ ಹೇಳುವಂತೆ ಗೋಲ್ಡ್ ಇಟಿಎಫ್‌ನಲ್ಲಿ ಹೂಡುವುದು ಬಹಳ ಸುಲಭ. ಆದರೆ ಇದಕ್ಕೂ ತನ್ನದೇ ಆದ ಮಿತಿಗಳಿವೆ. ಅವರು ಹೀಗೆ ಹೇಳುತ್ತಾರೆ, “ಇದಕ್ಕೆ ನೀವು ಬ್ರೋಕರೇಜ್ ಚಾರ್ಜ್, ಫಂಡ್ ಮ್ಯಾನೇಜ್‌ಮೆಂಟ್‌ಚಾರ್ಜ್ ಕೊಡಬೇಕಾಗುತ್ತದೆ. ಗೋಲ್ಡ್ ಇಟಿಎಫ್‌ನಲ್ಲಿ ಹೂಡುವವರಿಗೆ ಫಂಡ್ ಮ್ಯಾನೇಜರ್‌ನ ಕೌಶಲ್ಯ ಮತ್ತು ಸಕ್ರಿಯ ಫಂಡ್ ವ್ಯವಸ್ಥೆಯ ಯಾವುದೇ ಲಾಭ ಸಿಗುವುದಿಲ್ಲ.”
ಇಡೀ ಭಾರತದಲ್ಲಿ ಜನ ದೀಪಾವಳಿಯಲ್ಲಿ ಚಿನ್ನದ ಖರೀದಿ ಮಾಡುತ್ತಾರೆ. ಒಂದು ವೇಳೆ ನೀವು ಸಹ ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೂಡ್ ಹೊಂದಿದ್ದರೆ ಕೆಲವು ವಿಷಯಗಳನ್ನು ಅಗತ್ಯವಾಗಿ ಗಮನಿಸಿ. ವಿಶೇಷವಾಗಿ ಗೋಲ್ಡ್ ಕ್ವಾಲಿಟಿ ಮತ್ತು ಪ್ಯೂರಿಟಿ ಬಗ್ಗೆ.ಕ್ಯಾರಟ್ ರೇಟಿಂಗ್ ಚೆಕ್ ಮಾಡಿ ಗೋಲ್ಡ್ ನ ಪ್ಯೂರಿಟಿ ಕ್ಯಾರಟ್‌ನಿಂದ ಅಳೆಯಲಾಗುತ್ತದೆಂದು ಎಲ್ಲರಿಗೂ ಗೊತ್ತು. ಕ್ಯಾರಟ್‌ಗೆ ಅನುಸಾರವಾಗಿಯೇ ಗೋಲ್ಡ್ ನ ಬೆಲೆ ನಿರ್ಧರಿಸಲಾಗುತ್ತದೆ. ಪ್ಯೂರ್ ಗೋಲ್ಡ್ 24 ಕ್ಯಾರಟ್‌ನಲ್ಲಿ ಬರುತ್ತದೆ. ಆದರೆ ಇದು ಬಹಳ ಸಾಫ್ಟ್ ಆಗಿರುತ್ತದೆ. ಆದ್ದರಿಂದ ಜ್ಯೂವೆಲರಿ ತಯಾರಿಸಲು ಇದರಲ್ಲಿ ಕೊಂಚ ತಾಮ್ರ ಮಿಶ್ರ ಮಾಡಲಾಗುತ್ತದೆ. 24 ಕ್ಯಾರಟ್ ಬದಲು 22 ಕ್ಯಾರಟ್ ಗೋಲ್ಡ್ ನಿಂದ ಜ್ಯೂವೆಲರಿ ತಯಾರಿಸುತ್ತಾರೆ. ಜ್ಯೂವೆಲರಿ ಖರೀದಿಸುವಾಗ ಅನೇಕ ಬಾರಿ ಅಂಗಡಿಯವರು 24 ಕ್ಯಾರಟ್ ಗೋಲ್ಡ್ ಎಂದು ಹೇಳಿ ಗ್ರಾಹಕನಿಂದ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಜ್ಯೂವೆಲರಿ ಯಾವಾಗಲೂ 22 ಕ್ಯಾರಟ್ ಅಥವಾ 18 ಕ್ಯಾರಟ್ ಗೋಲ್ಡ್ ನಿಂದಲೇ ತಯಾರಾಗುತ್ತದೆ. ಗೋಲ್ಡ್ ನಲ್ಲಿ ಕ್ಯಾರಟ್‌ನ ಲೆಕ್ಕದಲ್ಲೇ ಜ್ಯೂವೆಲರಿಯ ಬೆಲೆ ಹಾಕಿರುತ್ತಾರೆ. ಆದ್ದರಿಂದ ಜ್ಯೂವೆಲರಿ ಖರೀದಿಸುವಾಗ ನೀವು ಎಷ್ಟು ಕ್ಯಾರಟ್‌ನ ಗೋಲ್ಡ್ ಜ್ಯೂವೆಲರಿ ಖರೀದಿಸುತ್ತೀರೆಂದು ಗಮನಿಸಿ ಅದಕ್ಕೆ ತಕ್ಕಂತೆ ಪೇಮೆಂಟ್ ಮಾಡಿ.
ಹಾಲ್ ಮಾರ್ಕ್ ಚಾರ್ಜ್
ಹಾಲ್ ಮಾರ್ಕ್‌ನ ಆಭರಣಗಳನ್ನು ಖರೀದಿಸುವಾಗ ನೀವು ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಅದರಲ್ಲಿ ಇನ್‌ಸ್ಪೆಕ್ಷನ್ ಚಾರ್ಜ್ ಕೂಡ ಸೇರಿಸುತ್ತಾರೆ. ಅನೇಕ ಬಾರಿ ಹಾಲ್ ಮಾಕ್ಸ್ ನ ಆಭರಣಗಳ ಬೆಲೆಯೂ ಸಹ ಬೇರೆ ಬೇರೆ ಅಂಗಡಿಗಳಲ್ಲಿ ಬೇರೆ ಬೇರೆ ಆಗಿರುತ್ತದೆ. ಆದ್ದರಿಂದ ಹಲವಾರು ಕಡೆ ವಿಚಾರಿಸಿ ಸರಿಯಾದ ಜಾಗದಲ್ಲಿ ಹಾಲ್ ಮಾರ್ಕ್ ಜ್ಯೂವೆಲರಿ ಖರೀದಿಸಿ.
ಗೋಲ್ಡ್ ರೇಟ್ ಅಗತ್ಯವಾಗಿ ಪರೀಕ್ಷಿಸಿ
ನೀವು ಚಿನ್ನ ಖರೀದಿಸುವಾಗ ಅಂದಿನ ರೇಟ್ ಎಷ್ಟು ಎಂದು ಅಗತ್ಯವಾಗಿ ತಿಳಿದುಕೊಳ್ಳಿ. ನಂತರ ಪೇಮೆಂಟ್ ಮಾಡುವಾಗಲೂ ಗೋಲ್ಡ್ ನ ಬೆಲೆ ಅಗತ್ಯವಾಗಿ ತಿಳಿದುಕೊಳ್ಳಿ. ಏಕೆಂದರೆ ಗೋಲ್ಡ್ ರೇಟ್ ಹೆಚ್ಚು ಕಡಿಮೆ ಆಗುತ್ತಿರುತ್ತದೆ.
ಮೇಕಿಂಗ್ ಚಾರ್ಜ್
ಮೇಕಿಂಗ್ ಚಾರ್ಜ್ ಬೇರೆ ಬೇರೆ ಒಡವೆಗಳಿಗೆ ಬೇರೆ ಬೇರೆ ಇರುತ್ತದೆ. ಅದನ್ನು ಜ್ಯೂವೆಲರ್ಸ್ ಚಿನ್ನದ ಒಡವೆಗಳ ತಯಾರಿಕೆಯ ಶ್ರಮದ ರೂಪದಲ್ಲಿ ಪಡೆಯುತ್ತಾರೆ. ಹೀಗಿರುವಾಗ ಜ್ಯೂವೆಲರಿ ಖರೀದಿಸುವಾಗ ಬೇರೆ ಬೇರೆ ಜಾಗಗಳಲ್ಲಿ ಮೇಕಿಂಗ್ ಚಾರ್ಜ್ ಮೊತ್ತದ ಬಗ್ಗೆ ಮಾಹಿತಿ ಪಡೆಯಿರಿ. ಏಕೆಂದರೆ ನಿಮ್ಮ ಒಡವೆಗಳ ಬೆಲೆಯಲ್ಲಿ ಕನಿಷ್ಠ ಮೇಕಿಂಗ್ ಚಾರ್ಜ್ ಇರಲಿ. ನೀವು ಒಡವೆ ಮಾರುವಾಗ ಮೇಕಿಂಗ್ ಚಾರ್ಜ್‌ನ ಬೆಲೆಯನ್ನು ತೆರಲೇಬೇಕಾಗುತ್ತದೆ. ಹೀಗಿರುವಾಗ ಕಡಿಮೆ ಮೇಕಿಂಗ್ ಚಾರ್ಜ್‌ನ ಒಡವೆ ಖರೀದಿಯೇ ಲಾಭಕಾರಿ. ನೀವು ಚಿನ್ನದಲ್ಲಿ ಎಷ್ಟು ಹೆಚ್ಚು ಒಡವೆಗಳು ಮತ್ತು ಡಿಸೈನ್‌ಗಳ ಬೇಡಿಕೆ ಇಡುತ್ತಿರೋ, ಅವುಗಳ ಮೇಕಿಂಗ್ ಚಾರ್ಜ್ ಕೂಡ ಅಷ್ಟೇ ಹೆಚ್ಚಾಗುತ್ತದೆ. ಚಿನ್ನದ ಶುದ್ಧತೆಯೂ ಸಹ ಅಷ್ಟೇ ಕಡಿಮೆಯಾಗಿರುತ್ತದೆ.
ರಿಟರ್ನ್ ಪಾಲಿಸಿ ತಿಳಿದುಕೊಳ್ಳಿ
ಜ್ಯೂವೆಲರ್ ಅಥವಾ ಸೇಲ್ಸ್ ಮನ್ ರಿಂದ ರಿಟರ್ನ್ ಪಾಲಿಸಿ ಮತ್ತು ಪ್ರಾಮಾಣಿಕತೆಯ ಸರ್ಟಿಫಿಕೇಟ್ ಬಗ್ಗೆ ಮಾಹಿತಿಯನ್ನು ಅಗತ್ಯವಾಗಿ ಪಡೆಯಿರಿ. ಮುಂದೆ ನಿಮ್ಮ ಜ್ಯೂವೆಲರಿ ಮಾರಲು ಮನಸ್ಸು ಮಾಡಿದರೆ ಆಗ ಈ ಸರ್ಟಿಫಿಕೇಟ್ ಕೆಲಸಕ್ಕೆ ಬರುತ್ತದೆ. ಆ ಸರ್ಟಿಫಿಕೇಟ್‌ನಿಂದ ನೀವು ಖರೀದಿಸಿರುವ ಗೋಲ್ಡ್ ಅಸಲಿ ಎಂದು ತಿಳಿಯುತ್ತದೆ. ಪ್ಯೂರ್ ಗೋಲ್ಡ್ ರಿಟರ್ನ್ ಮಾಡಿದಾಗ ಲೇಬರ್ ಚಾರ್ಜಸ್ ಬಿಟ್ಟು ಬೇರೆ ಯಾವ ಚಾರ್ಜಸ್ ಕಡಿಮೆ ಮಾಡುವುದಿಲ್ಲ.
– ಪ್ರತಿನಿಧಿ
ಹಾಲ್ ಮಾರ್ಕ್ ಗಮನಿಸುವುದು ಅಗತ್ಯ
ನೀವು ಖರೀದಿಸಿದ ಜ್ಯೂವೆಲರಿಯ ಕ್ಯಾರಟ್‌ನ ಪಕ್ಕಾ ಗ್ಯಾರಂಟಿಗಾಗಿ ಜ್ಯೂವೆಲರಿಯ ಮೇಲೆ ಹಾಲ್ ಮಾರ್ಕ್‌ನ ಸ್ಟ್ಯಾಂಪ್‌ಅಗತ್ಯವಾಗಿ ಪರೀಕ್ಷಿಸಿ. ಗೋಲ್ಡ್ ಬೆಲೆಗೂ ಕ್ವಾಲಿಟಿಯಲ್ಲಿ ಯೂನಿಫಾರ್ಮಿಟಿ ಇಟ್ಟುಕೊಳ್ಳಲು ಗೋಲ್ಡ್ ಟ್ರೇಡಿಂಗ್‌ನಲ್ಲಿ ಹಾಲ್ ಮಾರ್ಕ್ ಸಿಸ್ಟಮ್ ಶುರುವಾಗಿದೆ. ಬೇರೆ ಬೇರೆ ಕ್ಯಾರಟ್‌ಗಳಿಗಾಗಿ ಹಾಲ್ ಮಾರ್ಕ್‌ನ ಅರ್ಥ ಗೋಲ್ಡ್ ಅಸಲಿಯಾಗಿದೆ ಹಾಗೂ ಅದನ್ನು ಸರಿಯಾದ ಬೆಲೆ ಕೊಟ್ಟು ಖರೀದಿಸಲಾಗುತ್ತದೆ. ನೀವು ಹಾಲ್ ಮಾರ್ಕ್‌ನ ಗೋಲ್ಡ್ ಜ್ಯೂವೆಲರಿ ಖರೀದಿಸಲು ಹೋದಾಗೆಲ್ಲ ಜ್ಯೂವೆಲರಿಯಲ್ಲಿ ಹಾಕಿರುವ ಹಾಲ್ ಮಾರ್ಕ್‌ನ ಸ್ಟ್ಯಾಂಪ್ ನೋಡಲು ಮರೆಯದಿರಿ.