ದಸರಾ ದೀಪಾವಳಿ ಬರುತ್ತಲೇ ಮಹಿಳೆಯರಿಗೆ ಶಾಪಿಂಗ್‌ನ ಹುಚ್ಚು ತಲೆಗೇರುತ್ತದೆ. ಆ ಸಂದರ್ಭದಲ್ಲಿ ಹೊಸ ಹೊಸ ವಸ್ತುಗಳನ್ನು ಮನೆಗೆ ತರುವುದು, ಹಳೆಯ ವಸ್ತುಗಳನ್ನು ವಿಲೇವಾರಿ ಮಾಡುವುದು ನಡೆದಿರುತ್ತದೆ. ಆದರೆ ಹಬ್ಬದ ಶಾಪಿಂಗ್‌ ಯಾವುದಾದರೂ ಚಿನ್ನದ ಒಡವೆ ಖರೀದಿಸದಿದ್ದರೆ ಅಪೂರ್ಣವಾಗಿಯೇ ಉಳಿಯುತ್ತದೆ. ಅಂದಹಾಗೆ ಭಾರತದಲ್ಲಿ ಗೋಲ್ಡನ್ನು ಲಗ್ಝುರಿಗಿಂತ ಹೆಚ್ಚಾಗಿ  ಇನ್ವೆಸ್ಟ್ ಮೆಂಟ್‌ ರೂಪದಲ್ಲಿ ನೋಡಲಾಗುತ್ತದೆ. ಜೊತೆಗೆ ನಿರಂತರವಾಗಿ ಹೆಚ್ಚುತ್ತಿರುವ ಚಿನ್ನದ ಬೆಲೆ ನೋಡುವಾಗ ಅದರ ಮೇಲೆ ಹೂಡಿಕೆ ಒಳ್ಳೆಯ ಆಯ್ಕೆ ಎನಿಸುತ್ತದೆ.

ಫೈನಾನ್ಸ್ ಸಲಹೆಗಾರ ಶ್ರೀನಾಥ್‌ ಹೀಗೆ ಹೇಳುತ್ತಾರೆ, ``ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದರಿಂದ ಮಹಿಳೆಯರ 2 ಆಸೆಗಳು ಪೂರೈಸುತ್ತವೆ. ಮೊದಲನೆಯದಾಗಿ ಅವರ ಗೋಲ್ಡ್ ಕಲೆಕ್ಷನ್‌ನಲ್ಲಿ ಹೆಚ್ಚಳ, ಎರಡನೆಯದು ಅವರ ಇನ್ವೆಸ್ಟ್ ಮೆಂಟ್‌ ಆಸೆಯೂ ಪೂರೈಸುತ್ತದೆ.''

ಚಿನ್ನದಲ್ಲಿ ಹೂಡಿಕೆಗೆ ಹಲವಾರು ಆಯ್ಕೆಗಳಿವೆ. ಆಭರಣಗಳ ರೂಪದಲ್ಲಿ ಅಥವಾ ನಾಣ್ಯಗಳ ರೂಪದಲ್ಲಿ ಚಿನ್ನ ಖರೀದಿಸುವುದಲ್ಲದೆ, ಚಿನ್ನದಲ್ಲಿ ಇನ್ನೂ ಹಲವಾರು ವಿಧಾನಗಳಲ್ಲಿ ಹಣ ಹೂಡಬಹುದು. ಇದಲ್ಲದೆ, ಚಿನ್ನದಲ್ಲಿ ಹೂಡಿಕೆಗಾಗಿ ಮ್ಯೂಚುವಲ್ ‌ಫಂಡ್‌ ಡ್ರ್ಯಾಫ್ಟ್ ಕೂಡ ಲಭ್ಯವಿದೆ. ಗೋಲ್ಡ್ ಇಟಿಎಫ್‌ ಮತ್ತು ಗೋಲ್ಡ್ ಫಂಡ್‌ ಕೂಡ ಒಳ್ಳೆಯ ಆಯ್ಕೆ. ಹೂಡಿಕೆದಾರ ತನ್ನ ಸೌಕರ್ಯಕ್ಕೆ ತಕ್ಕಂತೆ ಅವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಬನ್ನಿ, ಈ ಆಯ್ಕೆಗಳ ಬಗ್ಗೆ ದೃಷ್ಟಿ ಹರಿಸೋಣ.

ಗೋಲ್ಡ್ ಎಂಐ ಸ್ಕೀಂ

ಗೋಲ್ಡ್ ನಲ್ಲಿ ಹೂಡಿಕೆಗೆ ಇದು ಅತ್ಯಂತ ಸುಲಭದ ವಿಧಾನ. ಈಗ ಎಲ್ಲ ಜ್ಯೂವೆಲರಿಗಳೂ ಬ್ರ್ಯಾಂಡ್‌ ಗೋಲ್ಡ್ ಮೇಲೆ ವಿಧವಿಧವಾದ ಸ್ಕೀಮ್ ಗಳನ್ನು ತರುತ್ತಿದ್ದಾರೆ. 12 ತಿಂಗಳುಗಳಲ್ಲಿ 11 ಕಂತುಗಳನ್ನು ಗ್ರಾಹಕ ಕಟ್ಟಬೇಕು. 12ನೇ ಕಂತನ್ನು ಜ್ಯೂವೆಲರಿ ಬ್ರ್ಯಾಂಡ್‌ ಸ್ವತಃ ಭರಿಸುತ್ತದೆ. ನೀವು ಪ್ರತಿ ತಿಂಗಳೂ ಸಾವಿರ ರೂ.ಗಳನ್ನು ಕಟ್ಟಿದರೆ 12ನೇ ತಿಂಗಳು ಒಂದು ನಿಶ್ಚಿತ ದಿನದಂದು 12,000 ರೂ.ಗಳ ಯಾವುದಾದರೂ ಗೋಲ್ಡ್ ಜ್ಯೂವೆಲರಿ ಪಡೆಯಬಹುದು. ಆದರೆ ಶ್ರೀನಾಥ್‌ರ ಪ್ರಕಾರ, ಇದು ಹೆಚ್ಚಿನ ಲಾಭದ ವ್ಯವಹಾರವಲ್ಲ. ಅವರು ಹೀಗೆ ಹೇಳುತ್ತಾರೆ, ``ಇಂತಹ ಸ್ಕೀಮ್ ಯಾವಾಗ ಲಾಭಕಾರಿಯಾಗುತ್ತದೆಂದರೆ ನಿಮ್ಮ ಜ್ಯೂವೆಲರಿ ಕಲೆಕ್ಷನ್‌ ಹೆಚ್ಚಿಸಬೇಕಾಗಿದ್ದಾಗ. ಏಕೆಂದರೆ ಈ ಸ್ಕೀಮಿನಿಂದ ನೀವು ಜಮೆ ಮಾಡಿದ ಕಂತುಗಳ ಒಟ್ಟು ಮೌಲ್ಯದ ಜ್ಯೂವೆಲರಿ ಸಿಗುತ್ತದೆ. ಇದನ್ನು ಹಣವಾಗಿ ಕನ್ವರ್ಟ್‌ ಮಾಡಲು ಸಾಧ್ಯವಿಲ್ಲ.''

ಗೋಲ್ಡ್ ಫ್ಯೂಚರ್

ಗೋಲ್ಡ್ ಫ್ಯೂಚರ್‌ ಮೂಲಕ ಖರೀದಿಸಲು ಸಂಪೂರ್ಣ ಮೊತ್ತದ ಅಗತ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಮಾರ್ಜಿನ್‌ ಮನಿಯಿಂದ ಕೆಲಸ ನಡೆಯುತ್ತದೆ. ಯಾವುದೇ ಸಮಯದಲ್ಲಿ ವ್ಯವಹಾರ ಮಾಡಲಾಗುತ್ತದೆ ಮತ್ತು ಸಮಾಪ್ತಿ ಮಾಡಲಾಗುತ್ತದೆ. ಇದರಲ್ಲಿ ಲಿಕ್ವಿಡಿಟಿಯ ಸಮಸ್ಯೆ ಇರುವುದಿಲ್ಲ. ನೀವು ಬಯಸಿದರೆ ಕ್ಯಾಶ್‌ ಕೊಟ್ಟು ವ್ಯವಹರಿಸಬಹುದು ಅಥವಾ ಅದರ ಫಿಸಿಕಲ್ ಡೆಲಿವರಿ ಪಡೆಯಬಹುದು. ನೀವು ಮುಂದಿನ ಎಕ್ಸ್ ಪೈರಿಯಲ್ಲಿ ವ್ಯವಹಾರವನ್ನು ರೋಲ್ ‌ಓವರ್‌ ಮಾಡುವ ಸೌಲಭ್ಯ ಇರುತ್ತದೆ. ಆದರೆ ಇದರಲ್ಲಿ ಕೆಲವು ತೊಂದರೆಗಳೂ ಇವೆ. ಫ್ಯೂಚರ್‌ಗಳಲ್ಲಿ ತೊಂದರೆ ಹೆಚ್ಚು. ವ್ಯವಹಾರದ ಎಕ್ಸ್ ಪೈರಿಯ ಮುಂಚೆ ನೀವು ನಿರ್ಧಾರ ತೆಗೆದುಕೊಳ್ಳಲೇಬೇಕು. ಗೋಲ್ಡ್ ಫ್ಯೂಚರ್ಸ್ ನಲ್ಲಿ ಕೊಳ್ಳುವಿಕೆ ಮತ್ತು ಮಾರಾಟ ಎರಡೂ ಸಮಯದಲ್ಲಿ ಬ್ರೋಕರೇಜ್‌ಕೊಡಬೇಕಾಗುತ್ತದೆ. ಆದ್ದರಿಂದ ಈ ಪ್ಲ್ಯಾನ್‌ನಲ್ಲಿ ಇನ್ವೆಸ್ಟ್ ಮಾಡುವ ಮೊದಲು ಒಟ್ಟು ಒಳ್ಳೆಯ ಇನ್ವೆಸ್ಟ್ ಮೆಂಟ್‌ ಸಲಹೆಗಾರರ ಸಲಹೆಯನ್ನು ಅಗತ್ಯವಾಗಿ ಕೇಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ