ಇಲ್ಲಿನ ನಿಸರ್ಗ (ಚಂದ್ರ), ಪುರಾಣಗಳು, ಜೀವನ ಮೌಲ್ಯಗಳು ಎಲ್ಲ ಸಹ ಇಷ್ಟೊಂದು ಹಬ್ಬಗಳ ಆಚರಣೆಗೆ ಕಾರಣ ಎನ್ನಬಹುದು. ದೆಹಲಿಯ ಸಾಂಸ್ಕೃತಿಕ ಪ್ರಕಾಶಕ ಸಂಸ್ಥೆ `ಇಂಡಿಯಾ ಮ್ಯಾಗಜೀನ್‌'ನ ಸಂಪಾದಕರಾದ ಮಾಳವಿಕಾ ಹೇಳುವಂತೆ, ``ಇದು ಇಲ್ಲಿನ ಜನಜೀವನದಲ್ಲಿ  ಹಾಸು ಹೊಕ್ಕಾಗಿದೆ. ಇಲ್ಲಿನ ಜನರಿಗೆ ಹಬ್ಬಗಳು ಕೇವಲ ಸಂಭ್ರಮಾಚರಣೆ ಮಾತ್ರವೇ ಅಲ್ಲ, ಅವುಗಳೊಡನೆ ಪ್ರಾರ್ಥನೆಗಳ ರೂಪವನ್ನೂ ಪಡೆದಿರುತ್ತದೆ.''

ಶತಶತಮಾನಗಳಿಂದ ಬೆಳೆದು ಬಂದಿರುವ ವೈವಿಧ್ಯಮಯ ಸಂಸ್ಕೃತಿ ಭಾರತವನ್ನು ಬಹುಬಗೆಯ ಹಬ್ಬಗಳ ನೆವೆವೀಡಾಗಿಸಿದೆ. ದಿನನಿತ್ಯದ ಸ್ನಾನ, ಭಜನೆ, ಸಂಗೀತ, ನೃತ್ಯ ಶಿಬಿರಗಳು ಭಕ್ತಿಯನ್ನು ತೋರುವ ವಿವಿಧ ಮಾರ್ಗಗಳಾಗಿರುತ್ತವೆ.

ಮಳೆ, ಬೆಂಕಿ, ಸಿಡಿಲು, ಗುಡುಗು, ವೈವಿಧ್ಯಮಯ ಸಸ್ಯವರ್ಗ, ಪ್ರಾಣಿವರ್ಗ, ಕೊಂಬು ಕಹಳೆ, ಆಯುಧಗಳು, ಇನ್ನಿತರ ಸಜೀವ ನಿರ್ಜೀವ ವಸ್ತುಗಳ ಹೆಸರುಗಳಲ್ಲಿ  ಭಾರತೀಯರು ಹಬ್ಬಗಳನ್ನು ಆಚರಿಸುತ್ತಾರೆ. ನಿಸರ್ಗದತ್ತವಾಗಿ ಸೂರ್ಯ ಪಥ ಬದಲಿಸುತ್ತಾನೆ. ಇದು ಕೋಟ್ಯಂತರ ಭಾರತೀಯರ ಪಾಲಿಗೆ ಪರ್ವಕಾಲವಾಗಿರುತ್ತದೆ. ಚಂದ್ರ ಹುಣ್ಣಿಮೆ ದಿನದಂದು ಪೂರ್ಣರೂಪವನ್ನು ಪಡೆದು ಜನರು ಹಬ್ಬವನ್ನಾಚರಿಸಿ ಸಂಭ್ರಮಿಸಲು ಕಾರಣನಾಗುತ್ತಾನೆ. ಮಳೆ, ಗುಡುಗುಗಳು ಇಂದ್ರನ ಕೊಡುಗೆ ಎಂದು ನಂಬುವ ಭಾರತೀಯರು ಕೃಷಿಗಾಗಿ ಹೆಚ್ಚು ಪ್ರಮಾಣದಲ್ಲಿ ಮಳೆಯನ್ನೇ ಅವಲಂಬಿಸಿರುತ್ತಾರೆ. ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿ ಆಹಾರ ಸಮಸ್ಯೆ ತಲೆದೋರುತ್ತದೆ. ಮಳೆ ಬಂದು ಬೆಳೆ ಸೊಂಪಾಗಿ ಬಂದಾಗ ಸುಗ್ಗಿಯ ಹಬ್ಬವನ್ನಾಚರಿಸುವ ಮೂಲಕ ಸಂಭ್ರಮಿಸುವರು. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ಈ ಸುಗ್ಗಿ ಆಚರಣೆ ನಡೆಯುತ್ತದೆ. ಒಟ್ಟಾರೆ ವರ್ಷದ ಎಲ್ಲಾ ದಿನಗಳಲ್ಲಿಯೂ ಭಾರತೀಯರು ಒಂದಲ್ಲ ಒಂದು ಬಗೆಯ ಸಂಭ್ರಮವನ್ನು ಆಚರಿಸುವರು.

ಪ್ರತಿ ದಿನ ಪ್ರಕೃತಿ ನಿತ್ಯ ನೂತನ ಆಗುತ್ತದೆ. ಪ್ರತಿದಿನ ನಿಸರ್ಗದಲ್ಲಿ ಒಂದಲ್ಲ ಒಂದು ರೀತಿಯ ಬದಲಾವಣೆ ಉಂಟಾಗುತ್ತದೆ ಎನ್ನುವುದು ಭಾರತೀಯರ ನಂಬಿಕೆಯಾಗಿದೆ. ಪ್ರಾಚೀನ ಭಾರತೀಯರ ಕಾಲಮಾನದಲ್ಲಿ ನಿಸರ್ಗವೇ ಪ್ರಮುಖ ಪಾತ್ರ ವಹಿಸಿಕೊಳ್ಳುತ್ತದೆ. ನಿಸರ್ಗ ಜಗತ್ತಿನ ಆದಿಗೆ ನಾಂದಿ. ಅದು ಮಾತೃಸ್ವರೂಪ ಎಂಬುದು ಅವರ ನಂಬಿಕೆ.

ಕೆಲವು ಹಬ್ಬಗಳು ಋತುಗಳ ಬದಲಾವಣೆಗೆ ಅನುಗುಣವಾಗಿ ಬರುತ್ತವೆ. ಇನ್ನು ಕೆಲವು ಸುಗ್ಗಿಯ ಕಾಲಕ್ಕೆ ಸರಿಯಾಗಿ ಬರುತ್ತವೆ. ಇಂದೂ ಸಹ ಭಾರತೀಯ ಸಂಸ್ಕೃತಿಯು ನಿಸರ್ಗದೊಡನೆ ಅತ್ಯಂತ ನಿಕಟ ಸಂಪರ್ಕ ಹೊಂದಿದೆ. ಭಾರತೀಯರು ಹಬ್ಬಗಳನ್ನು ಆಚರಿಸಲು ನಿಸರ್ಗ ಒಂದೇ ಕಾರಣವಲ್ಲ. ಇಲ್ಲಿನ ಎಲ್ಲಾ ಆಚರಣೆಗಳಿಗೂ ಮಾನವ ಹಾಗೂ ನಿಸರ್ಗದ ನಡುವಿನ ಪರಸ್ಪರ ಸಂವಹನಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಹಬ್ಬದ ಆಚರಣೆಗಳು ಕೇವಲ ಸುಗ್ಗಿಯ ಮೇಲಷ್ಟೇ ಅವಲಂಬಿಸದೆ ಮಾನವ ಜೀವನದ ಉನ್ನತಿಗೆ ಸಹ ಸಂಬಂಧಿಸಿರುತ್ತದೆ.

India-Multitude-

ವರ್ಷದ ಎಲ್ಲಾ ದಿನಗಳಲ್ಲೂ ಭಾರತದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದ ಸಂಭ್ರಮಾಚರಣೆ ಜಾರಿಯಲ್ಲಿರುತ್ತದೆ. ಭಾರತದಲ್ಲಿ ವೈವಿಧ್ಯಮಯ ಜನಸಮುದಾಯ ಹಾಗೂ ವಿವಿಧ ಧಾರ್ಮಿಕ ಜನಾಂಗದವರು ನೆಲೆಸಿರುವುದು ಇಂತಹ ಆಚರಣೆಗೆ ಕಾರಣ ಎನ್ನಬಹುದು. ಭಾರತದ ವಿವಿಧ ರಾಜ್ಯಗಳಲ್ಲಿನ ಭಿನ್ನತೆಗಿಂತಲೂ ಈ ಮೇಲಿನ ವೈವಿಧ್ಯತೆ ಸಂಪೂರ್ಣವಾಗಿ ಭಿನ್ನವಾದ ಅರಿವು ಉಂಟು ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ