ದೀಪಾವಳಿಯಂದು ಹೊರಗಿನ ಕೊಳೆಯ ಸ್ವಚ್ಛತೆಯ ಜೊತೆಗೆ ಮನಸ್ಸಿನ ಕೊಳೆ ಹಾಗೂ ಕತ್ತಲೆಯನ್ನೂ ದೂರ ಮಾಡುವುದು ಬಹಳ ಅಗತ್ಯ. ಬೆಳಗ್ಗೆ ಇಬ್ಬನಿಯ ಹನಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ನಮ್ಮ ಮನಸ್ಥಿತಿಯೂ ನಮ್ಮ ಮುಖದಲ್ಲಿ ಹೊಳೆಯುತ್ತದೆ. ಮನಸ್ಸನ್ನು ಸಕಾರಾತ್ಮಕ ಭಾವನೆಗಳಿಂದ ಪ್ರಕಾಶಿತಗೊಳಿಸಿದರೆ ಅದರ ಸೌಂದರ್ಯ ಮುಖದಲ್ಲಿ ಹೊಳೆಯತೊಡಗುತ್ತದೆ ಮತ್ತು ದೀಪಾವಳಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರುತ್ತದೆ.

ಮನಸ್ಸಿನಲ್ಲಿ ಕತ್ತಲು ಮತ್ತು ಕೊಳೆಯನ್ನು ಹರಡುವ ಕೆಲವು ಪ್ರಮುಖ ಭಾವನೆಗಳು ಈ ಪ್ರಕಾರವಾಗಿವೆ.

ಸಂಶಯ

ನಾವೆಲ್ಲರೂ ಸಂಶಯ ಅಂದರೆ ಅನುಮಾನದ ಶಿಕಾರಿಗಳಾಗಿದ್ದೇವೆ. ವಿಶೇಷವಾಗಿ ಮಹಿಳೆಯರು ಹೆಚ್ಚು ಅನುಮಾನ ಪ್ರಕೃತಿಯವರಾಗಿರುತ್ತಾರೆ. ವಿಲಿಯಂ ಶೇಕ್ಸ್ ಪಿಯರ್‌, ನಮ್ಮ ಸಂಶಯವೇ ನಮಗೆ ಹೆಚ್ಚು ಮೋಸ ಮಾಡುತ್ತದೆ ಎಂದು ಹೇಳುತ್ತಾನೆ. ನಾವು ಯಶಸ್ಸು ಪಡೆಯಬಹುದಾಗಿದ್ದರೂ ಸಹ ಅದರಿಂದಾಗಿ ನಮ್ಮ ಕೈಗಳಿಂದ ಯಶಸ್ಸು ಜಾರಿಹೋಗುತ್ತದೆ. ಆದ್ದರಿಂದ ಈ ದೀಪಾವಳಿಯಲ್ಲಿ ನಮ್ಮ ಮನಸ್ಸಿನಿಂದ ಎಲ್ಲ ರೀತಿಯ ಅನುಮಾನಗಳನ್ನೂ ದೂರ ಮಾಡಿ ಸಂಪೂರ್ಣ ವಿಶ್ವಾಸದೊಂದಿಗೆ ಬದುಕಿನ ಪಯಣದಲ್ಲಿ ಮುಂದೆ ಸಾಗಬೇಕು.

ಭಯವನ್ನು ಓಡಿಸಿ : ಫಾರ್ಮುಲಾ ಒನ್‌ ಕಾರ್‌ ರೇಸರ್‌ ನಾರಾಯಣ ಕಾರ್ತಿಕ್‌ ಹೀಗೆ ಹೇಳುತ್ತಾರೆ, “ಜೀವನದಲ್ಲಿ ಭಯಕ್ಕೆ  ಯಾವುದೇ ಜಾಗವಿಲ್ಲ. ನಾನು ಭಯದೊಂದಿಗೆ ಗೆಳೆತನ ಮಾಡಿಕೊಂಡಿದ್ದೇನೆ. ಭಯದ ಜಾಗವನ್ನು ವಿಶ್ವಾಸ ತೆಗೆದುಕೊಂಡಿದೆ.”

ಅಂದಹಾಗೆ ಬದುಕಿನಲ್ಲಿ ನಮ್ಮ ಶಕ್ತಿಯ ಅರಿವಾಗದಿದ್ದರೆ, ನಮ್ಮ ಮನಸ್ಸಿನಲ್ಲಿ ಭಯ ಮೂಡುತ್ತದೆ. ನಾವು ಕಾರಣವಿಲ್ಲದೆ ಹೆದರತೊಡಗುತ್ತೇವೆ. ನಮ್ಮ ಕಣ್ಣುಗಳ ಮುಂದೆ ಅಜ್ಞಾನ ಮತ್ತು ಮೂಢನಂಬಿಕೆಯ ಹೊಗೆ ಮುಚ್ಚಿಕೊಳ್ಳುತ್ತದೆ. ನಾವು ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಬದುಕನ್ನು ಹಾಳು ಮಾಡಿಕೊಳ್ಳುತ್ತೇವೆ. ಆದ್ದರಿಂದ ನಾವು ನಮ್ಮ ಬದುಕಿನಿಂದ ಅಸಂಭವ ಹಾಗೂ ಭಯವನ್ನು ತೆಗೆದು ಎಸೆಯಬೇಕು. ಭಯ ಅಜ್ಞಾನದಿಂದ ಹುಟ್ಟುತ್ತದೆ. ಅಜ್ಞಾನ ಮೂಢನಂಬಿಕೆಗೆ ಜನ್ಮ ಕೊಡುತ್ತದೆ. ಹೀಗಾಗಿ ಬಿಟ್ಟರೆ? ಹಾಗಾಗಿ ಬಿಟ್ಟರೆ? ಎಂದು ನಾವು ಭಯಪಡುತ್ತೇವೆ. ಆದ್ದರಿಂದ ನಾವು ಭಯವನ್ನು ನಮ್ಮ ಬದುಕಿನಿಂದ ಹೊರಹಾಕಿ ಮನಸ್ಸಿನಲ್ಲಿ ವಿಶ್ವಾಸದ ದೀಪ ಹಚ್ಚಬೇಕು.

ಕ್ರೋಧ : ಮನುಷ್ಯನ ಅತ್ಯಂತ ದೊಡ್ಡ ಶತ್ರು ಕ್ರೋಧ. ಅದು ಅಹಂಕಾರದಿಂದ ಹುಟ್ಟುತ್ತದೆ. ಕೋಪದಲ್ಲಿ ವ್ಯಕ್ತಿ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಅದರಿಂದ ತನ್ನ ಶರೀರಕ್ಕೆ ಹಾನಿ ತಂದುಕೊಳ್ಳುತ್ತಾನೆ. ಸಂಬಂಧಗಳಲ್ಲೂ ಬಿರುಕು ಮೂಡುತ್ತದೆ. ಕೋಪಗೊಂಡ ವ್ಯಕ್ತಿಯಿಂದ ಜನರ ಜೊತೆಗೆ ಸಂತಸಗಳೂ ದೂರ ಓಡುತ್ತವೆ. ಊಹಿಸಿಕೊಳ್ಳಿ, ಯಾವಾಗಲೂ ಕಿರುಚುತ್ತಿರುವ ಮಹಿಳೆ ಎಂದಿಗೂ ಗಂಡನಿಗೆ ಪ್ರಿಯಳಾಗಿರುವುದಿಲ್ಲ.

ಅಸೂಯೆ, ದ್ವೇಷ : ನಾವು ಆಗಾಗ್ಗೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ಇತರರನ್ನು ದ್ವೇಷಿಸಲು, ಅಸೂಯೆಪಡಲು ಕಳೆಯುತ್ತೇವೆ. ನಮ್ಮ ಮೆದುಳನ್ನು ಕಲುಷಿತಗೊಳಿಸುತ್ತೇವೆ. ಇನ್ನೊಬ್ಬರಿಗೆ ಬೇಸರ ಉಂಟು ಮಾಡುತ್ತೇವೆ. ಟಿ.ವಿ. ಸೀರಿಯಲ್ ಗಳನ್ನೇ ತೆಗೆದುಕೊಳ್ಳಿ ಹೆಚ್ಚಿನ ಸೀರಿಯಲ್ ಗಳಲ್ಲಿ ಒಬ್ಬಾಕೆ ಅಸೂಯೆಯಿಂದ ಇನ್ನೊಬ್ಬಾಕೆಯ ವಿರುದ್ಧ ಷಡ್ಯಂತ್ರಗಳನ್ನು ರಚಿಸುತ್ತಿರುತ್ತಾಳೆ. ಅಂತಹ ಭಾವನೆಗಳು ನಮ್ಮನ್ನು ಕೆರಳಿಸುತ್ತವೆ. ದೀಪಾವಳಿಯಂದು ನಮ್ಮ ಮನಸ್ಸಿನಿಂದ ಇಂತಹ ಕಲುಷಿತ ಭಾವನೆಗಳನ್ನು ದೂರ ಮಾಡಿ ಒಳ್ಳೆಯ ಹಾಗೂ ಸಕಾರಾತ್ಮಕ ವಿಚಾರಗಳಿಗಾಗಿ ಜಾಗ ಉಂಟುಮಾಡಬೇಕು.

ನಿರಾಶೆ : ಡಾ. ವಿಲಿಯಂ ಎಂ. ಎಡ್ಲರ್‌ ಹೀಗೆ ಹೇಳುತ್ತಾರೆ, “ಮನಸ್ಸಿನ ಪರಿಸ್ಥಿತಿ ನೇರವಾಗಿ ಶರೀರವನ್ನು ಪ್ರಭಾವಿತಗೊಳಿಸುತ್ತದೆ.” ನಿಮ್ಮನ್ನು ನಿರಾಶೆಯ ಕತ್ತಲಿನಿಂದ ತೆಗೆಯುವ ಸಮಯ ದೀಪಾವಳಿ. ನಕಾರಾತ್ಮಕ ವಿಚಾರಗಳು ನಿಮ್ಮನ್ನು ಪ್ರಭಾವಿತಗೊಳಿಸದಿರಲಿ. ಅಮೆರಿಕಾ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ‌ರ ಎರಡೂ ಕಾಲುಗಳು ನಿಷ್ಕ್ರಿಯಾಗಿದ್ದವು. ಅವರು ನಿರಾಶರಾಗಿ ಕೂಡುವ ಬದಲು ಮುಂದೆ ಸಾಗಲು ನಿರ್ಧರಿಸಿದರು.

ಚಿಂತೆ : ಅಮೆರಿಕಾದ ಮೆದುಳು ಚಿಕಿತ್ಸಕ ಡಾ. ಜೈಕೋಬಿ, “ಚಿಂತೆ ಶರೀರದ ಮೇಲೆ ಗುಂಡುಗಳು ಅಥವಾ ಕತ್ತಲೆ ಉಂಟು ಮಾಡುವಷ್ಟೇ ಪ್ರಭಾವ ಉಂಟು ಮಾಡುತ್ತದೆ. ವಾಸ್ತವವಾಗಿ ಚಿಂತೆ ಮನುಷ್ಯನನ್ನು ಒಳಗೊಳಗೇ ಟೊಳ್ಳು ಮಾಡುತ್ತದೆ. ವಿಶೇಷವಾಗಿ ಮಹಿಳೆಯರು ಹೆಚ್ಚು ಭಾವುಕರಾದ್ದರಿಂದ ಸಣ್ಣಪುಟ್ಟ ವಿಷಯಗಳಿಗೆಲ್ಲಾ ಚಿಂತಿತರಾಗುತ್ತಾರೆ,” ಎನ್ನುತ್ತಾರೆ.

ಚಿಂತೆಯ ಯಾಂತ್ರೀಕೃತ ಪ್ರಭಾವ ಹೇಗಿರುತ್ತದೆಂದರೆ ಮೆದುಳನ್ನು ಬಿಚ್ಚಿ ಅದರ ಮೇಲೊಂದು ಸುತ್ತಿಗೆಯಿಂದ ಸತತವಾಗಿ ಗಾಯ ಮಾಡಿದಂತಿರುತ್ತದೆ. ಅದರಿಂದ ಮೆದುಳಿನ ನರ ಕತ್ತರಿಸಿ ಅದು ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ಆದ್ದರಿಂದ ದೀಪಾವಳಿಯಂದು ಮೊದಲ ಕೆಲಸವಾಗಿ ತಲೆಯಿಂದ ಎಲ್ಲ ಚಿಂತೆಗಳನ್ನು ದೂರ ಮಾಡಿ ಬೆಳಕು ತುಂಬಲು ಜಾಗ ನೀಡಿ.

ಹೀನಭಾವನೆ : ಹೀನಭಾವನೆಯಿಂದ ಗ್ರಸ್ತನಾದ ವ್ಯಕ್ತಿ ತಾನೂ ಸಂತೋಷವಾಗಿ ಇರುವುದಿಲ್ಲ, ಬೇರೆಯವರಿಗೂ ಸಂತೋಷ ಕೊಡುವುದಿಲ್ಲ. ತನ್ನನ್ನು ಕಡೆಗಣಿಸಿಕೊಳ್ಳುವುದರಿಂದ ಅದರ ಒತ್ತಡ ಅವರ ಮುಖದಲ್ಲಿ ಕಂಡುಬರುತ್ತದೆ. ಅದು ನಮ್ಮ ಬಲಹೀನತೆಯ ಕಥೆಯನ್ನು ಹೇಳುತ್ತದೆ. ಹೀಗಿರುವಾಗ ನಮ್ಮ ಬಗ್ಗೆ ಜನರ ವರ್ತನೆಯೂ ಸರಿ ಇರುವುದಿಲ್ಲ.

ಡೇವಿಡ್‌ ಟಿ ಜಾನ್‌ ಹೀಗೆ ಹೇಳುತ್ತಾರೆ, “ತಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸುವುದು ಪ್ರಪಂಚದ ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಅದರಿಂದ ಶರೀರದಲ್ಲಿ ನೆಗೆಟಿವ್ ‌ಎನರ್ಜಿ ಉಂಟಾಗುತ್ತದೆ.”

ಇವೆಲ್ಲ ಕಲುಷಿತ ಭಾವನೆಗಳು ಮತ್ತು ಕೊಳೆಗಳನ್ನು ದೂರ ಮಾಡಿ ನಮ್ಮ ಮನಸ್ಸಿನ ಅಂಗಳನ್ನು ಹೀಗೆ ಬೆಳಕು ಮಾಡಿಕೊಳ್ಳಬೇಕು.

ಹಾಸ್ಯದ ಪಟಾಕಿಗಳನ್ನು ಹಚ್ಚಿ

ನಾವು ನಗುವಾಗ ಹೊಟ್ಟೆಯಲ್ಲಿ ನೃತ್ಯದಂತಹ ಹಾರುವಿಕೆ, ಜಿಗಿಯುವಿಕೆ ಇರುತ್ತದೆ. ಅದರಿಂದ ಪಚನಕ್ರಿಯೆ ವೇಗವಾಗುತ್ತದೆ. ಹೃದಯದ ಬಡಿತ ವೇಗವಾಗುತ್ತದೆ. ನಾಡಿಗಳಲ್ಲಿ ರಕ್ತಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಕಣ್ಣುಗಳಲ್ಲಿ ಕಾಂತಿ ಬರುತ್ತದೆ. ಶರೀರದ ಪ್ರತಿಯೊಂದು ಅಂಗ ಉತ್ತಮವಾಗಿ ಕೆಲಸ ಮಾಡತೊಡಗುತ್ತದೆ. ನಿಜ ಹೇಳಬೇಕೆಂದರೆ ಪ್ರಸನ್ನತೆ ಒಂದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಪ್ರಸನ್ನತೆ ಮತ್ತು ಮುಗುಳ್ನಗೆಯೇ ಅವರಿಗೊಂದು ಆಭೂಷಣವಿದ್ದಂತೆ. ಪ್ರಸನ್ನ ವದನಳಾದ ಮಹಿಳೆ ತನ್ನ ಗಂಡ ಹಾಗೂ ಮನೆಯವರೆಲ್ಲರಿಗೂ ಶೋಭೆಯಿದ್ದಂತೆ. ದೀಪಾವಳಿಯಂದು ಮುಗುಳ್ನಗೆಯ ಸರಗಳನ್ನು ಹಚ್ಚಿ ಮತ್ತು ಜೋರು ನಗೆಯ ಪಟಾಕಿಗಳನ್ನು ಸಿಡಿಸಿ. ಆಗಲೇ ದೀಪಾವಳಿಯ ಸಂತಸ ಇಡೀ ವರ್ಷ ನಿಮ್ಮ ಜೀವನವನ್ನು ಬೆಳಗಿಸುತ್ತದೆ.

ಸಿಡ್ನಿ ಸ್ಮಿಥ್‌ ಹೀಗೆ ಹೇಳುತ್ತಾರೆ, “ಪ್ರತಿದಿನ ಕನಿಷ್ಠ ಒಬ್ಬರನ್ನಾದರೂ ಸಂತೋಷಪಡಿಸಿ. ಹೀಗೆ ಮಾಡುತ್ತಾ 10 ವರ್ಷಗಳಲ್ಲಿ ನೀವು 3650 ಜನರನ್ನು ಸಂತೋಷಪಡಿಸಿದಂತಾಗುತ್ತದೆ. ಇನ್ನೊಬ್ಬರ ಮುಖದಲ್ಲಿ ಬಂದ ಈ ಪ್ರಸನ್ನತೆ ತಾನಾಗಿ ನಿಮ್ಮ ಮುಖದಲ್ಲೂ ಮಂದಹಾಸ ಮೂಡಿಸುತ್ತದೆ.”

ಸಕಾರಾತ್ಮಕ ಆಲೋಚನೆಯ ಬೆಳಕು

ಜೀವನವನ್ನು ನೋಡುವ ದೃಷ್ಟಿ ಬಹಳ ಮುಖ್ಯ. ನೀವು ಅರ್ಧ ತುಂಬಿದ ಗ್ಲಾಸನ್ನು ಅರ್ಧ ಖಾಲಿ ಎಂದಾದರೂ ಹೇಳಬಹುದು, ಅರ್ಧ ತುಂಬಿದೆ ಎಂದಾದರೂ ಹೇಳಬಹುದು. ಅದನ್ನು ಖಾಲಿ ಅಥವಾ ತುಂಬಿದೆ ಎಂಬುದು ಹೇಳುವವರ ದೃಷ್ಟಿಯಲ್ಲಿದೆ. ನಿಮ್ಮ ಆಲೋಚನೆಯನ್ನು ಬದಲಾಯಿಸಿ. ಪ್ರಸಿದ್ಧ ಮನೋವಿಜ್ಞಾನಿ ಪ್ರೊ. ರಿಚರ್ಡ್‌ ಫಾಕ್ಸ್ ಹೀಗೆ ಹೇಳುತ್ತಾರೆ, “ಸಕಾರಾತ್ಮಕ ಬದಲಾವಣೆ ಒಳ್ಳೆಯ ತರಂಗಗಳನ್ನು ಉಂಟು ಮಾಡುತ್ತದೆ. ಅದು ನಿಮ್ಮ ಬದುಕನ್ನು ಹಾಗೂ ಸುತ್ತಮುತ್ತಲಿರುವವರನ್ನು ಪ್ರಭಾವಿತಗೊಳಿಸುತ್ತದೆ. ನಂತರ ಒಂದು ಬದಲಾವಣೆ ಇನ್ನೊಂದಕ್ಕೆ ಜನ್ಮ ನೀಡುತ್ತದೆ. ಹೀಗೆ ಒಂದರ ನಂತರ ಇನ್ನೊಂದು ಬದಲಾವಣೆಗಳು ಉಂಟಾಗಿ ನಿಮ್ಮ ಜೀವನದಲ್ಲಿ ಸಂತಸದ ರಾಗಗಳು ಗುಂಯ್‌ ಗುಡುತ್ತವೆ.”

ಆತ್ಮವಿಶ್ವಾಸದ ದೀಪ

ನಿಮ್ಮನ್ನು ಎಂದಿಗೂ ಯಾರಿಗಾದರೂ ಕಡಿಮೆಯೆಂದು ಭಾವಿಸಬೇಡಿ. ಯಾವಾಗಲೂ ಆತ್ಮವಿಶ್ವಾಸದಿಂದ ತುಂಬಿತುಳುಕಿರಿ. ಲೇಖಕ ಜೇಮ್ಸ್ ಈಲಿಯೆಟ್‌ ಹೀಗೆ ಹೇಳುತ್ತಾರೆ, “ನೀವು ಆತ್ಮವಿಶ್ವಾಸದಿಂದ ತುಂಬಿದ್ದಾಗ ಎಂತಹ ಸ್ಥಿತಿಯಲ್ಲೂ ಖುಷಿಯಾಗಿರುತ್ತೀರಿ. ಖುಷಿಯಿಂದಿರುವ ವ್ಯಕ್ತಿ ಹೆಚ್ಚು ಕ್ರಿಯೇಟಿವ್ ‌ಆಗಿರುತ್ತಾನೆ.

ಎಮರ್ಸನ್‌ ಹೇಳುತ್ತಾರೆ, “ಯಾರಿಗೆ ತಮ್ಮ ಮೇಲೆ ನಂಬಿಕೆಯಿಲ್ಲವೋ ಅವರು ಗೆಲ್ಲುವ ಪಂದ್ಯವನ್ನೂ ಸೋಲುತ್ತಾರೆ. ತಮ್ಮ ಮೇಲೆ ನಂಬಿಕೆ ಇರುವವರು ಸೋಲುವ ಪಂದ್ಯವನ್ನೂ ಗೆಲ್ಲುತ್ತಾರೆ. ಸೋಲುವ ಪಂದ್ಯವನ್ನು ಗೆಲ್ಲಬೇಕೆಂದರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.”

ಈ ಸಂದರ್ಭದಲ್ಲಿ ಸುಧಾ ಚಂದ್ರನ್‌ರ ಉದಾಹರಣೆ ನೋಡಬಹುದು. ಆ್ಯಕ್ಸಿಡೆಂಟ್‌ನಲ್ಲಿ ಕಾಲು ಕಳೆದುಕೊಂಡ ಮೇಲೂ ಅವರ ಆತ್ಮವಿಶ್ವಾಸ ಕುಗ್ಗಲಿಲ್ಲ. ಆರ್ಟಿಫಿಶಿಯ್‌ ಕಾಲುಗಳೊಂದಿಗೆ ನೃತ್ಯದ ಕ್ಷೇತ್ರದಲ್ಲಿ ಸಾಧನೆ ಮಾಡಿದರು.

ದಿವಂಗತ ರಾಷ್ಟ್ರಪತಿ ಅಬ್ದುಲ್ ‌ಕಲಾಂ, ನೀವು ಎಷ್ಟು ದೊಡ್ಡ ಕನಸನ್ನಾದರೂ ಕಾಣಿ. ಆದರೆ ಅದನ್ನು ನನಸಾಗಿಸಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ ಕನಸನ್ನು ಕಾಣಬೇಡಿ. ಎಂತಹ ಕನಸನ್ನು ಕಾಣಬೇಕೆಂದರೆ ಅದನ್ನು ನನಸಾಗಿಸಿಕೊಳ್ಳಲು ನಿಮ್ಮ ಕಣ್ಣಿಗೆ ನಿದ್ದೆ ಬರಬಾರದು ಎನ್ನುತ್ತಿದ್ದರು.

ಪ್ರೇಮದ ಜ್ಯೋತಿ ಬೆಳಗಿಸಿ

ದೀಪಾವಳಿ ಬೆಳಕಿನಲ್ಲಿ ನಿಮ್ಮ ಜೀವನಕ್ಕೆ ಪ್ರೇಮದ ಕಾಣಿಕೆ ನೀಡಿ. ವೈಮನಸ್ಸು ತಿಳಿಗೊಳಿಸಿ. ನಿಮ್ಮವರೊಂದಿಗೆ ಪ್ರೇಮದ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಿ. ಉಡುಗೊರೆ ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸಿ. ಅವರು ನಿಮಗಾಗಿ ಎಷ್ಟು ಮಹತ್ವಪೂರ್ಣವೆಂದು ಮನವರಿಕೆ ಮಾಡಿಕೊಡಿ.

ನಿಮ್ಮ ಬದುಕಿನಲ್ಲಿ ಮೊದಲ ಸ್ಥಾನ ನಿಮ್ಮ ಜೀವನ ಸಂಗಾತಿ ಸಂಬಂಧಿಕರು ಹಾಗೂ ನೀವು ಪ್ರೀತಿಸುವವರು. ನೀವು ಅವರಿಗೆ ಕೊಡಲು ಇಚ್ಛಿಸುತ್ತಿದ್ದ ಅಥವಾ ಅವರು ಬಹಳ ದಿನಗಳಿಂದ ಪಡೆಯಲು ಇಚ್ಛಿಸುತ್ತಿದ್ದ ಉಡುಗೊರೆಯನ್ನು ಈ ಬಾರಿಯ ದೀಪಾವಳಿಯಂದು ಕೊಡಿ.

ಪತ್ನಿಯನ್ನು ಖುಷಿಪಡಿಸಲು ಅವರಿಗೆ ಜ್ಯೂವೆಲರಿ, ಬಟ್ಟೆ, ಕಿಚನ್‌ ವಸ್ತುಗಳು ಅಥವಾ ಇತರ ಆ್ಯಕ್ಸೆಸರೀಸ್‌ ತಂದು ಕೊಡಬಹುದು. ಈ ಬಟ್ಟೆಗಳ ಮೇಲೆ ಡಿಸ್ಕೌಂಟ್‌ ಇದ್ದು ವೆರೈಟಿಗಳಲ್ಲಿ ಸಿಗುತ್ತದೆ. ಕಾಸಾ ಬ್ರ್ಯಾಂಡ್‌ನ ಬ್ರ್ಯಾಂಡ್‌ ನಿರ್ದೇಶಕಿ ವಿನೀತಾ ಮಿತ್ತಲ್ ಹೀಗೆ ಹೇಳುತ್ತಾರೆ, “ಹಬ್ಬಗಳ ಸೀಸನ್‌ನಲ್ಲಿ ವಿಧ ವಿಧವಾದ ಡಿಸ್ಕೌಂಟ್‌ ಸಿಗುತ್ತದೆ. ಕ್ಯಾಶ್‌ ಡಿಸ್ಕೌಂಟ್‌ನಲ್ಲಿ ಮಾರಾಟ ದರ ಕಡಿಮೆ ಇಟ್ಟಿರುತ್ತಾರೆ. ಕೆಲವು ಕಡೆ ಅಂಗಡಿಯವರು ಲೋನ್‌ ಮತ್ತು ಸುಲಭ ಇಎಂಐನಲ್ಲಿ ಸರಕುಗಳನ್ನು ಮಾರುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಇಂಟರೆಸ್ಟ್ ರೇಟ್‌ ಝೀರೋ ಆಗಿರುತ್ತದೆ.”

ಆಭರಣಗಳು ಮಹಿಳೆಯರ ಪ್ರಥಮ ಆದ್ಯತೆಯಾಗಿರುತ್ತವೆ. ಈ ಸೀಸನ್‌ನಲ್ಲಿ ಕೆಲವು ದೊಡ್ಡ ಜ್ಯೂವೆಲರ್ಸ್ ಆಭರಣಗಳ ಒಟ್ಟು ಮೊತ್ತ ಕೊಡಲಾಗದ ಗ್ರಾಹಕರಿಗೆ ಇಎಂಐ ಸೌಲಭ್ಯ ನೀಡುತ್ತಾರೆ. ಅನೇಕ ಬಾರಿ ಕೊನೆಯ ಕಂತು ಅವರಿಂದಲೇ ಕಟ್ಟಲ್ಪಡುತ್ತದೆ. ಇಎಂಐನಿಂದ ಚಿನ್ನ ಪಡೆದಾಗ ನಿಮ್ಮ ಬಜೆಟ್‌ ಕೂಡ ವ್ಯತ್ಯಯವಾಗುವುದಿಲ್ಲ. ನೀವು ಚಿನ್ನದ ನಾಣ್ಯವನ್ನು ಖರೀದಿಸಬಹುದು.

ನಿಮ್ಮ ಮನೆಯವರ ಮುಖದಲ್ಲಿ ಕಾಂತಿ ತುಂಬಿರಲಿ

ಎಲೆಕ್ಟ್ರಾನಿಕ್‌ ಐಟಂ, ಫ್ರಿಜ್‌, ಎಲ್‌ಸಿಡಿ ಇತ್ಯಾದಿಗಳನ್ನು ಬೇಕೆಂದಾಗ ಖರೀದಿಸಬಹುದು. ಈ ದೀಪಾವಳಿಯಲ್ಲಿ ಅವನ್ನು ಖರೀದಿಸಿದರೆ ಮನೆಯವರ ಸಂತಸ ದ್ವಿಗುಣವಾಗುವುದು.

ನಿಮ್ಮ ಮನೆಯಲ್ಲಿ ಸಿಂಗಲ್ ಡೋರ್‌ನ ಹಳೆಯ ಫ್ರಿಜ್‌ ಇದ್ದು ಅದರಲ್ಲಿ ಸಾಕಷ್ಟು ಕೂಲಿಂಗ್‌ ಎಫೆಕ್ಟ್ ಇಲ್ಲದಿದ್ದು ನಿಮ್ಮ ಪತ್ನಿ ಅದರ ಬಗ್ಗೆ ಆಗಾಗ್ಗೆ ಗೊಣಗುತ್ತಿರಬಹುದು. ಈ ಬಾರಿ ಹೊಸ ಟೆಕ್ನಿಕ್‌ ಇರುವ ಡಬಲ್ ಡೋರ್‌ನ, ಎನರ್ಜಿ ಎಫಿಶಿಯೆಂಟ್‌, ಹೆಚ್ಚು ಕೆಪಾಸಿಟಿಯುಳ್ಳ ಫ್ರಿಜ್‌ ತನ್ನಿ. ಮನೆಯಲ್ಲಿ ಸೆಮಿ ಆಟೋಮ್ಯಾಟಿಕ್‌ ವಾಶಿಂಗ್‌ ಮೆಶಿನ್‌ ಇದ್ದಲ್ಲಿ ಈ ಬಾರಿ ಫುಲ್ ಆಟೋಮ್ಯಾಟಿಕ್‌, ಫ್ರಂಟ್‌ ಲೋಡೆಡ್‌ ವಾಶಿಂಗ್‌ ಮೆಶಿನ್‌ ಖರೀದಿಸಬಹುದು. ಹೀಗೆಯೇ ದೀಪಾವಳಿಯಂದು ನಿಮ್ಮ ಬಜೆಟ್‌ಗೆ ತಕ್ಕಂತೆ ಗಾಡಿ ಖರೀದಿಸಬಹುದು. ನಿಮ್ಮ ಮಗಳು ಅಥವಾ ಪತ್ನಿಗೆ ಸ್ಕೂಟಿ ಕೊಡಿಸಬಹುದು ಅಥವಾ ಇಡೀ ಕುಟುಂಬಕ್ಕಾಗಿ ಒಂದು ಕಾರು ಖರೀದಿಸಿ ಎಲ್ಲರೂ ಒಟ್ಟಿಗೆ ಸುತ್ತಾಡಬಹುದು.

ಪತ್ನಿ ಬಯಸಿದರೆ ಗಂಡನಿಗೆ ರಿಸ್ಚ್ ವಾಚ್‌, ಲೇಟೆಸ್ಟ್ ಮೊಬೈಲ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ನಂತಹ ಗಿಫ್ಟ್ ಕೊಡಬಹುದು. ಹೊಸ ಸ್ಟೈಲಿಶ್‌ ಫರ್ನೀಚರ್‌, ಮ್ಯಾಟ್ರೆಸ್‌, ಬೆಡ್‌ ಕವರ್‌, ಕರ್ಟನ್‌ ಇತ್ಯಾದಿ ಖರೀದಿಸಿ ಇಡೀ ಮನೆಯಲ್ಲಿ ಹೊಸ ಬಣ್ಣ ಹಾಗೂ ಹೊಸ ಉತ್ಸಾಹ ತುಂಬಿಸಬಹುದು.

ಜ್ಯೋತಿ ಪ್ರಕಾಶ್

ಮನದಲ್ಲಿ ಭಯಕ್ಕೆ ಯಾವುದೇ ಜಾಗವಿಲ್ಲ. ನಾನು ಭಯದೊಂದಿಗೆ ಗೆಳೆತನ ಮಾಡಿದೆ. ಭಯದ ಜಾಗದಲ್ಲಿ ವಿಶ್ವಾಸ ನೆಲೆಸಿತು.

ನಾರಾಯಣ್ಕಾರ್ತಿಕ್‌, ಫಾರ್ಮುಲಾ ಒನ್ಕಾರ್ರೇಸರ್

ದೀಪಾವಳಿ ಅಂದು ನಮ್ಮ ಮನದಿಂದ ಎಲ್ಲ ರೀತಿಯ ಕಲ್ಮಶಗಳನ್ನೂ ದೂರವಿರಿಸಬೇಕಲ್ಲದೆ, ನಮ್ಮೊಳಗಿನ ಭಯ ಹಾಗೂ ಮೂಢನಂಬಿಕೆಗಳನ್ನು ತ್ಯಜಿಸಬೇಕು. ದೀಪಾವಳಿ ನಮಗಾಗಿ ಹೊಸ ಬೆಳಕಿನ ಸಾಧನವಾಗಿರುತ್ತದೆ.

ನೀವು ಎಷ್ಟು ಎತ್ತರದ ಕನಸನ್ನಾದರೂ ಕಾಣಿ. ಆದರೆ ಕಣ್ಣುಗಳನ್ನು ಮುಚ್ಚಿ ಕನಸನ್ನು ಕಾಣಬೇಡಿ. ನೀವು ಎಂತಹ ಕನಸನ್ನು ಕಾಣಬೇಕೆಂದರೆ ಅದನ್ನು  ನನಸಾಗಿಸಲು ನಿಮ್ಮ ಕಣ್ಣುಗಳಿಂದ ನಿದ್ದೆ ಮಾಯಾಗಬೇಕು.

ದಿ. ಅಬ್ದುಲ್ ಕಲಾಂಕಾಂಮಾಜಿ ರಾಷ್ಟ್ರಪತಿ

ದೀಪಗಳ ಈ ಹಬ್ಬ ನಮ್ಮೊಳಗೆ ನಾವು ಇಣುಕಿ ನೋಡಿ ನಮ್ಮ ಅಂತರಂಗದ ಕತ್ತಲಲ್ಲಿ ತಿಳಿದೋ ತಿಳಿಯದೋ ಯಾರಾದರೂ ರಾಕ್ಷಸ ಅಡಗಿರುವನೇ ಎಂದು ನೋಡುವ ಅವಕಾಶ ಕೊಡುತ್ತದೆ. ಅವನನ್ನು ಹುಡುಕಿ ಅಲ್ಲಿಂದ ತೆಗೆಯಿರಿ ಮತ್ತು ಮನಸ್ಸನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡಿ. ನಿಮ್ಮ ಮನಸ್ಸಿನೊಳಗೆ ಭರವಸೆಯ ದೀಪ ಬೆಳಗಿಸಿ.

ನಿಮ್ಮ ಜೀವನದಲ್ಲಿ ಮೊದಲ ಸ್ಥಾನ ನಿಮ್ಮ ಜೀವನ ಸಂಗಾತಿ, ಸಂಬಂಧಿಕರು ಹಾಗೂ ನೀವು ಪ್ರೀತಿಸುವವರು. ನೀವು ಅವರಿಗೆ ಕೊಡಲು ಇಚ್ಛಿಸುತ್ತಿದ್ದ ಅಥವಾ ಅವರು ಬಹಳ ದಿನಗಳಿಂದ ಪಡೆಯಲು ಇಚ್ಛಿಸುತ್ತಿದ್ದ ಉಡುಗೊರೆಯನ್ನು ಈ ಬಾರಿಯ ದೀಪಾವಳಿಯಂದು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ