ವೆನಿಲಾ ಸ್ಪಾಂಜ್ಕೇಕ್

ಸಾಮಗ್ರಿ : 200 ಗ್ರಾಂ ಮೈದಾ, 30 ಗ್ರಾಂ ಬೆಣ್ಣೆ, 3 ಮೊಟ್ಟೆ, 100 ಗ್ರಾಂ ಕ್ಲೆಸ್ಟರ್‌ ಶುಗರ್‌, ಅಗತ್ಯವಿದ್ದಷ್ಟು ಬೇಕಿಂಗ್‌ ಪೌಡರ್‌, ವೆನಿಲಾ ಎಸೆನ್ಸ್.

ವಿಧಾನ : ಮೈದಾಗೆ ಬೇಕಿಂಗ್‌ ಪೌಡರ್‌ ಸೇರಿಸಿ. ಮೊಟ್ಟೆ ಬೀಟ್‌ ಮಾಡಿ ಬಟ್ಟಲಿಗೆ ಹಾಕಿ. ಇದಕ್ಕೆ ಬೆಣ್ಣೆ, ಕ್ಲೆಸ್ಟರ್‌ ಶುಗರ್‌ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಅದನ್ನು ಮೈದಾ ಮಿಶ್ರಣಕ್ಕೆ ರವಾನಿಸಿ. ಆಮೇಲೆ ವೆನಿಲಾ ಎಸೆನ್ಸ್ ಬೆರೆಸಿ ಮತ್ತೊಮ್ಮೆ ಕಲಸಬೇಕು. ಆಮೇಲೆ ಬೆಣ್ಣೆ ಸವರಿದ ಬೇಕಿಂಗ್‌ ಡಿಶ್‌ನಲ್ಲಿ ಈ ಮಿಶ್ರಣ ಹರಡಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್‌ಮಾಡಿ.

ಅನಾನಸ್ಕಪ್ಕೇಕ್

ಮೂಲ ಸಾಮಗ್ರಿ : 2 ಸಣ್ಣ ಚಮಚ ಅನಾನಸ್‌ ಎಸೆನ್ಸ್, 2-3 ಹನಿ ಹಳದಿ ಬಣ್ಣ, ಅಗತ್ಯವಿದ್ದಷ್ಟು ಅನಾನಸ್‌ ಹೋಳು, ಕ್ರೀಂ, ಕಲರ್ಡ್‌ ಚಾಕಲೇಟ್‌ ಸ್ಪ್ರಿಂಕ್ಸ್‌.

ವೆನಿಲಾ ಸ್ಪಾಂಜ್ ಸಾಮಗ್ರಿ : 100 ಗ್ರಾಂ ಮೈದಾ, 30 ಗ್ರಾಂ ಬೆಣ್ಣೆ, 3 ಮೊಟ್ಟೆ, 100 ಗ್ರಾಂ ಕ್ಲೆಸ್ಟರ್‌ ಶುಗರ್‌, 1 ಸಣ್ಣ ಚಮಚ ಬೇಕಿಂಗ್‌ ಪೌಡರ್‌.

ವಿಧಾನ : ವೆನಿಲಾ ಸ್ಪಾಂಜ್‌ ಮಿಶ್ರಣ ಮಾಡಿಕೊಂಡು, ಇದಕ್ಕೆ 1 ಸಣ್ಣ ಚಮಚ ಅನಾನಸ್‌ ಎಸೆನ್ಸ್ ನ್ನು ಚೆನ್ನಾಗಿ ಬೆರೆಸಿಡಿ. ನಂತರ ಪೇಪರ್‌ ಕಪ್ಸ್ ನಲ್ಲಿ ಅರ್ಧರ್ಧದಷ್ಟು ಇದನ್ನು ಹಾಕಿ ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ  10 ನಿಮಿಷ ಬೇಕ್‌ ಮಾಡಿ. ಇದನ್ನು ಚೆನ್ನಾಗಿ ಆರಲು ಬಿಡಿ. ನಂತರ ಹಳದಿ ಬಣ್ಣ, ಅನಾನಸ್‌ ಎಸೆನ್ಸ್ ಮತ್ತು ಕ್ರೀಮನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಪ್ರತ್ಯೇಕ ಕಪ್‌ ಕೇಕ್‌ನ ಮೇಲೆ ಕ್ರೀಂ ಮಿಶ್ರಣ ಹರಡಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

choclate-muffins-cakes-cookery

ಚಾಕಲೇಟ್ಮಫಿನ್ಸ್

ಸಾಮಗ್ರಿ : 2 ಕಪ್‌ ಮೈದಾ, 1 ಕಪ್‌ ಬೂರಾ ಸಕ್ಕರೆ, 1 ಸಣ್ಣ ಚಮಚ ಬೇಕಿಂಗ್‌ ಪೌಡರ್‌, 100 ಗ್ರಾಂ ಬೆಣ್ಣೆ, 100 ಗ್ರಾಂ ಡಾರ್ಕ್ ಚಾಕಲೇಟ್‌, 1 ಕಪ್‌ ಹಾಲು, 1 ಸಣ್ಣ ಚಮಚ ವೆನಿಲಾ ಎಸೆನ್ಸ್, 2-3 ಚಮಚ ವಿನಿಗರ್‌, 4-5 ಚಮಚ ಕೋಕೋ ಪೌಡರ್‌.

ವಿಧಾನ : ಒಂದು ಬಟ್ಟಲಿನಲ್ಲಿ ಮೈದಾ, ಬೇಕಿಂಗ್‌ ಪೌಡರ್‌, ಬೂರಾ ಸಕ್ಕರೆ ಬೆರೆಸಿಕೊಳ್ಳಿ. ಆಮೇಲೆ ಇದಕ್ಕೆ ಹಾಲು, ವಿನಿಗರ್‌ಬೆರೆಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಡಾರ್ಕ್‌ ಚಾಕಲೇಟ್‌ನ್ನು ಮೈಕ್ರೋವೇವ್‌ನಲ್ಲಿ 2 ನಿಮಿಷ ಬಿಸಿ ಮಾಡಿ ಕರಗಿಸಿಕೊಂಡು ಮೈದಾ ಮಿಶ್ರಣದಲ್ಲಿ ಕಲಸಿಕೊಳ್ಳಿ. ಜೊತೆಗೆ ವೆನಿಲಾ ಎಸೆನ್ಸ್ ಸಹ ಬೆರೆಸಿಕೊಳ್ಳಿ. ಆಮೇಲೆ ಈ ಮಿಶ್ರಣವನ್ನು 1 ಕಪ್‌ನಲ್ಲಿ ಮುಕ್ಕಾಲು ಭಾಗ ತುಂಬಿಸಿಕೊಂಡು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್‌ಮಾಡಿ.

ಚಾಕಲೇಟ್ಮೂಸ್ಕೇಕ್

ಸಾಮಗ್ರಿ : 15-20 ಮಾರಿ ಬಿಸ್ಕತ್ತು, 1 ಚಮಚ ಬೆಣ್ಣೆ, 500 ಗ್ರಾಂ ಚಾಕಲೇಟ್‌, 500 ಗ್ರಾಂ ತಾಜಾ ಕ್ರೀಂ, ಅಲಂಕರಿಸಲು ಚಾಕಲೇಟ್‌ ಫ್ಲೇಕ್ಸ್.

ವಿಧಾನ : ಬೆಣ್ಣೆ ಕರಗಿಸಿ. ಅದನ್ನು ಮಿಕ್ಸಿಯಲ್ಲಿ ಬಿಸ್ಕತ್ತಿನ ಜೊತೆ ಗ್ರೈಂಡ್‌ ಮಾಡಿ. ಮೋಲ್ಡ್ ‌ಗೆ ಬೆಣ್ಣೆ ಸವರಿ ಅದಕ್ಕೆ ಈ ಮಿಶ್ರಣ ತುಂಬಿಸಿ ಹಾಗೂ ಫ್ರಿಜ್‌ನಲ್ಲಿ 15 ನಿಮಿಷ ಇರಿಸಿಬಿಡಿ. ನಂತರ ಓವನ್‌ನಲ್ಲಿ ಚಾಕಲೇಟ್‌ನ್ನು 12 ನಿಮಿಷ ಬಿಸಿ ಮಾಡಿ. ಕರಗಿದಾಗ ಕ್ರೀಂ ಜೊತೆ ಬೆರೆಸಿಕೊಳ್ಳಿ. ಈಗ ಫ್ರಿಜ್‌ನಿಂದ ಮೋಲ್ಡ್ ‌ಹೊರತೆಗೆದು, ಅದರ ಮೇಲೆ ಚಾಕಲೇಟ್‌ ಮಿಶ್ರಣ ಹರಡಿ, ಮತ್ತೆ ಫ್ರಿಜ್‌ನಲ್ಲಿ 12 ಗಂಟೆ ಹಾಗೇ ಬಿಡಿ. 1 ಗಂಟೆ ನಂತರ ಫ್ರಿಜ್‌ನಿಂದ ಹೊರತೆಗೆದು, ಚಾಕಲೇಟ್‌ ಮಿಶ್ರಣವನ್ನು ಅದರ ಮೇಲೆ ಹಾಕಿ, ಮತ್ತೆ ಫ್ರಿಜ್‌ನಲ್ಲಿ 1 ಗಂಟೆ ಕಾಲ ಇರಿಸಬೇಕು. ಅದಾದ ಮೇಲೆ ಕೇಕನ್ನು ಫ್ರಿಜ್‌ನಿಂದ ಹೊರತೆಗೆದು, ಚಿತ್ರದಲ್ಲಿರುವಂತೆ ಚಾಕಲೇಟ್‌ ಪ್ಲೇಕ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

cherry-berry-cakes-cookery

ಚೆರ್ರಿ ಬೆರ್ರಿ

ಸಾಮಗ್ರಿ : 4-5 ಚಮಚ ಕ್ರಶ್ಡ್ ಸ್ಟ್ರಾಬೆರಿ, 2 ಕಪ್‌ ತಾಜಾ ಕ್ರೀಂ, ಅಲಂಕರಿಸಲು ಬೇಕಾದಷ್ಟು ಚೆರ್ರಿ, 1 ರೆಡಿಮೇಡ್‌ ಸ್ಪಾಂಜ್‌ ಕೇಕ್‌.

ವಿಧಾನ : ಹಿಂದೆ ತಿಳಿಸಿದಂತೆ ಮೊದಲು ವೆನಿಲಾ ಸ್ಪಾಂಜ್‌ ಕೇಕ್‌ ತಯಾರಿಸಿ, 3 ಪದರಗಳಲ್ಲಿ ಕತ್ತರಿಸಿ. 1 ದೊಡ್ಡ ಚಮಚದಷ್ಟು ಕ್ರಶ್ಡ್ ಸ್ಟ್ರಾಬೆರಿಯನ್ನು 1 ಕಪ್‌ ನೀರಿನಲ್ಲಿ ಕದಡಿಕೊಂಡು ಸ್ಟ್ರಾಬೆರಿ ಸಿರಪ್‌ ತಯಾರಿಸಿಕೊಳ್ಳಿ. ಬಾಕಿ ಉಳಿದ ಸ್ಟ್ರಾಬೆರಿಗೆ ಕ್ರೀಂ ಬೆರೆಸಿ ಸ್ಮೂತ್‌ ಮಿಶ್ರಣ ತಯಾರಿಸಿ. ವೆನಿಲಾ ಸ್ಪಾಂಜ್‌ ಕೇಕ್‌ನ ಪ್ರತಿ ಪದರವನ್ನೂ ಸ್ಟ್ರಾಬೆರಿ ಸಿರಪ್‌ನಲ್ಲಿ ನೆನೆಸಿ ತೆಗೆಯಿರಿ. ಪ್ರತಿಯೊಂದರ ಮೇಲೂ ಸ್ಟ್ರಾಬೆರಿ ಮಿಶ್ರಣ ಹರಡಿರಿ. ಒಂದರ ಮೇಲೆ ಒಂದು ಪದರ ಇರಿಸಿ, ಸ್ಟ್ರಾಬೆರಿ ಮಿಶ್ರಣದಿಂದ ಅಲಂಕರಿಸಿ. ನಂತರ ಚಿತ್ರದಲ್ಲಿರುವಂತೆ ಕ್ರೀಂನಿಂದ ಐಸಿಂಗ್‌ ಮಾಡಿ, ಚೆರ್ರಿ ಇರಿಸಿ ಸವಿಯಲು ಕೊಡಿ.

ಕಾಫಿ ಗ್ಲೇರ್

ಮೂಲ ಸಾಮಗ್ರಿ : 2 ಸಣ್ಣ ಚಮಚ ಇನ್‌ಸ್ಟೆಂಟ್‌ ಕಾಫಿಪುಡಿ, 1 ಕಪ್‌ ಕ್ರೀಂ, ಅರ್ಧ ಕಪ್‌ ಸಕ್ಕರೆ, 2 ಕಪ್‌ನೀರು, ಅಲಂಕರಿಸಲು ಸ್ಟ್ರಾಬೆರಿ.

ಚಾಕಲೇಟ್ಸ್ಪಾಂಜ್ ಸಾಮಗ್ರಿ : 100 ಗ್ರಾಂ ಮೈದಾ, 50 ಗ್ರಾಂ ಬೆಣ್ಣೆ, 3 ಮೊಟ್ಟೆ, 100 ಗ್ರಾಂ ಕ್ಲೆಸ್ಟರ್‌ ಶುಗರ್‌, 1 ಸಣ್ಣ ಚಮಚ ಬೇಕಿಂಗ್‌ ಪೌಡರ್‌, 75 ಗ್ರಾಂ ಚಾಕಲೇಟ್‌.

ವಿಧಾನ : ಮೈದಾಗೆ ಬೇಕಿಂಗ್‌ ಪೌಡರ್‌ ಬೆರೆಸಿಕೊಳ್ಳಿ. ಮೊಟ್ಟೆ ಒಡೆದು ಬೀಟ್‌ ಮಾಡಿ. ಇದಕ್ಕೆ ಕ್ಲೆಸ್ಟರ್‌ ಶುಗರ್‌, ಬೆಣ್ಣೆ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಎಲ್ಲವನ್ನೂ ಮೈದಾ ಮಿಶ್ರಣಕ್ಕೆ ಬೆರೆಸಬೇಕು. ನಂತರ ಇದಕ್ಕೆ ಚಾಕಲೇಟ್‌ನ್ನು ಕರಗಿಸಿ ಬೆರೆಸಬೇಕು. ಈ ಮಿಶ್ರಣವನ್ನು ಬೆಣ್ಣೆ ಸವರಿದ ಬೇಕಿಂಗ್‌ ಡಿಶ್‌ಗೆ ಹಾಕಿಟ್ಟು, ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್ ಮಾಡಿ, ಹೊರ ತೆಗೆಯಿರಿ.

ಈ ರೀತಿ ಸಿದ್ಧಗೊಂಡ ಚಾಕಲೇಟ್‌ ಸ್ಪಾಂಜ್‌ ಕೇಕ್‌ ಚೆನ್ನಾಗಿ ಆರಿ ತಣ್ಣಗಾದಾಗ, 3 ಪದರಗಳಲ್ಲಿ ಕತ್ತರಿಸಿ. ಒಂದು ಬಟ್ಟಲಿಗೆ 1 ಸಣ್ಣ ಚಮಚ ಕಾಫಿಪುಡಿ, ಸಕ್ಕರೆ ಮತ್ತು ನೀರು ಬೆರೆಸಿ ಕಾಫಿ ಸಿರಪ್‌ ಸಿದ್ಧಪಡಿಸಿ. ಇನ್ನೊಂದು ಬಟ್ಟಲಿಗೆ ಉಳಿದ ಕಾಫಿಪುಡಿ ಮತ್ತು ಬೆಣ್ಣೆ ಬೆರೆಸಿ, ಕ್ರೀಂ ಮಿಶ್ರಣ ಸಿದ್ಧಪಡಿಸಿ. ಪ್ರತಿ ಪದರವನ್ನೂ ಕಾಫಿ ಸಿರಪ್‌ನಲ್ಲಿ ನೆನೆಸಿ, ಕ್ರೀಂ ಮಿಶ್ರಣದಿಂದ ಕವರ್‌ ಮಾಡಿ. ಇದನ್ನು ಒಂದರ ಮೇಲೊಂದು ಇರಿಸಿ, ಕ್ರೀಂ ಮಿಶ್ರಣದಿಂದ ಅಲಂಕರಿಸಿ. 10-15 ನಿಮಿಷ ಇದನ್ನು ಫ್ರಿಜ್‌ನಲ್ಲಿರಿಸಿ. ಚಿತ್ರದಲ್ಲಿರುವಂತೆ ಸ್ಟ್ರಾಬೆರಿಯಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ