ವೆನಿಲಾ ಸ್ಪಾಂಜ್ ಕೇಕ್
ಸಾಮಗ್ರಿ : 200 ಗ್ರಾಂ ಮೈದಾ, 30 ಗ್ರಾಂ ಬೆಣ್ಣೆ, 3 ಮೊಟ್ಟೆ, 100 ಗ್ರಾಂ ಕ್ಲೆಸ್ಟರ್ ಶುಗರ್, ಅಗತ್ಯವಿದ್ದಷ್ಟು ಬೇಕಿಂಗ್ ಪೌಡರ್, ವೆನಿಲಾ ಎಸೆನ್ಸ್.
ವಿಧಾನ : ಮೈದಾಗೆ ಬೇಕಿಂಗ್ ಪೌಡರ್ ಸೇರಿಸಿ. ಮೊಟ್ಟೆ ಬೀಟ್ ಮಾಡಿ ಬಟ್ಟಲಿಗೆ ಹಾಕಿ. ಇದಕ್ಕೆ ಬೆಣ್ಣೆ, ಕ್ಲೆಸ್ಟರ್ ಶುಗರ್ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಅದನ್ನು ಮೈದಾ ಮಿಶ್ರಣಕ್ಕೆ ರವಾನಿಸಿ. ಆಮೇಲೆ ವೆನಿಲಾ ಎಸೆನ್ಸ್ ಬೆರೆಸಿ ಮತ್ತೊಮ್ಮೆ ಕಲಸಬೇಕು. ಆಮೇಲೆ ಬೆಣ್ಣೆ ಸವರಿದ ಬೇಕಿಂಗ್ ಡಿಶ್‌ನಲ್ಲಿ ಈ ಮಿಶ್ರಣ ಹರಡಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್‌ಮಾಡಿ.
ಅನಾನಸ್ ಕಪ್ ಕೇಕ್
ಮೂಲ ಸಾಮಗ್ರಿ : 2 ಸಣ್ಣ ಚಮಚ ಅನಾನಸ್ ಎಸೆನ್ಸ್, 2-3 ಹನಿ ಹಳದಿ ಬಣ್ಣ, ಅಗತ್ಯವಿದ್ದಷ್ಟು ಅನಾನಸ್ ಹೋಳು, ಕ್ರೀಂ, ಕಲರ್ಡ್ ಚಾಕಲೇಟ್ ಸ್ಪ್ರಿಂಕ್ಸ್.
ವೆನಿಲಾ ಸ್ಪಾಂಜ್ನ ಸಾಮಗ್ರಿ : 100 ಗ್ರಾಂ ಮೈದಾ, 30 ಗ್ರಾಂ ಬೆಣ್ಣೆ, 3 ಮೊಟ್ಟೆ, 100 ಗ್ರಾಂ ಕ್ಲೆಸ್ಟರ್ ಶುಗರ್, 1 ಸಣ್ಣ ಚಮಚ ಬೇಕಿಂಗ್ ಪೌಡರ್.
ವಿಧಾನ : ವೆನಿಲಾ ಸ್ಪಾಂಜ್ ಮಿಶ್ರಣ ಮಾಡಿಕೊಂಡು, ಇದಕ್ಕೆ 1 ಸಣ್ಣ ಚಮಚ ಅನಾನಸ್ ಎಸೆನ್ಸ್ ನ್ನು ಚೆನ್ನಾಗಿ ಬೆರೆಸಿಡಿ. ನಂತರ ಪೇಪರ್ ಕಪ್ಸ್ ನಲ್ಲಿ ಅರ್ಧರ್ಧದಷ್ಟು ಇದನ್ನು ಹಾಕಿ ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್ ಮಾಡಿ. ಇದನ್ನು ಚೆನ್ನಾಗಿ ಆರಲು ಬಿಡಿ. ನಂತರ ಹಳದಿ ಬಣ್ಣ, ಅನಾನಸ್ ಎಸೆನ್ಸ್ ಮತ್ತು ಕ್ರೀಮನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಪ್ರತ್ಯೇಕ ಕಪ್ ಕೇಕ್‌ನ ಮೇಲೆ ಕ್ರೀಂ ಮಿಶ್ರಣ ಹರಡಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಚಾಕಲೇಟ್ ಮಫಿನ್ಸ್
ಸಾಮಗ್ರಿ : 2 ಕಪ್ ಮೈದಾ, 1 ಕಪ್ ಬೂರಾ ಸಕ್ಕರೆ, 1 ಸಣ್ಣ ಚಮಚ ಬೇಕಿಂಗ್ ಪೌಡರ್, 100 ಗ್ರಾಂ ಬೆಣ್ಣೆ, 100 ಗ್ರಾಂ ಡಾರ್ಕ್ ಚಾಕಲೇಟ್, 1 ಕಪ್ ಹಾಲು, 1 ಸಣ್ಣ ಚಮಚ ವೆನಿಲಾ ಎಸೆನ್ಸ್, 2-3 ಚಮಚ ವಿನಿಗರ್, 4-5 ಚಮಚ ಕೋಕೋ ಪೌಡರ್.
ವಿಧಾನ : ಒಂದು ಬಟ್ಟಲಿನಲ್ಲಿ ಮೈದಾ, ಬೇಕಿಂಗ್ ಪೌಡರ್, ಬೂರಾ ಸಕ್ಕರೆ ಬೆರೆಸಿಕೊಳ್ಳಿ. ಆಮೇಲೆ ಇದಕ್ಕೆ ಹಾಲು, ವಿನಿಗರ್‌ಬೆರೆಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಡಾರ್ಕ್ ಚಾಕಲೇಟ್‌ನ್ನು ಮೈಕ್ರೋವೇವ್‌ನಲ್ಲಿ 2 ನಿಮಿಷ ಬಿಸಿ ಮಾಡಿ ಕರಗಿಸಿಕೊಂಡು ಮೈದಾ ಮಿಶ್ರಣದಲ್ಲಿ ಕಲಸಿಕೊಳ್ಳಿ. ಜೊತೆಗೆ ವೆನಿಲಾ ಎಸೆನ್ಸ್ ಸಹ ಬೆರೆಸಿಕೊಳ್ಳಿ. ಆಮೇಲೆ ಈ ಮಿಶ್ರಣವನ್ನು 1 ಕಪ್‌ನಲ್ಲಿ ಮುಕ್ಕಾಲು ಭಾಗ ತುಂಬಿಸಿಕೊಂಡು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್‌ಮಾಡಿ.
ಚಾಕಲೇಟ್ ಮೂಸ್ ಕೇಕ್
ಸಾಮಗ್ರಿ : 15-20 ಮಾರಿ ಬಿಸ್ಕತ್ತು, 1 ಚಮಚ ಬೆಣ್ಣೆ, 500 ಗ್ರಾಂ ಚಾಕಲೇಟ್, 500 ಗ್ರಾಂ ತಾಜಾ ಕ್ರೀಂ, ಅಲಂಕರಿಸಲು ಚಾಕಲೇಟ್ ಫ್ಲೇಕ್ಸ್.