ಬೆಂಗಳೂರು ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ನಗರದಲ್ಲಿ ಹೋಳಿ ಆಚರಣೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತಿವೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬವು ರೂಪುಗೊಂಡಿದೆ.
'ಟಿಕೆಟ್ ಟು ಹಾಲಿವುಡ್' ಮೂಲಕ, ಭಾರತದ ಪ್ರಮುಖ ಮನರಂಜನಾ ವೇದಿಕೆಯಾದ BookMyShow ನಗರದ ಅತ್ಯಂತ ರೋಚಕ ಹೋಳಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸಿ, ಪ್ರತಿಯೊಂದು ಪಾರ್ಟಿಯನ್ನೂ ಒಂದು ಬ್ಲಾಕ್‌ಬಸ್ಟರ್ ಕ್ಷಣವಾಗಿ ರೂಪಾಂತರಿಸುತ್ತದೆ.
ಬೆಂಗಳೂರಿನ ಪ್ರಮುಖ ಹೋಳಿ ಕಾರ್ಯಕ್ರಮಗಳ ಪಟ್ಟಿ:
- Sunburn Holi ft. KSHMR – ಬೆಂಗಳೂರು
Sunburn Festival ಮತ್ತೆ ಬೆಂಗಳೂರಿಗೆ ಮರಳುತ್ತಿದ್ದು, ಜಾಗತಿಕ EDM ಕಲಾವಿದ KSHMR ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದ್ಭುತ ಲೈಟಿಂಗ್ ಮತ್ತು ಎಲೆಕ್ಟ್ರಾನಿಕ್ ಮ್ಯೂಸಿಕ್ ನೊಂದಿಗೆ ಈ ಹೋಳಿ ಹಬ್ಬವು ಮರೆಯಲಾಗದ ಅನುಭವ ನೀಡಲಿದೆ. -ಸ್ಥಳ: ಸನ್‌ಬರ್ನ್ ಯೂನಿಯನ್, ಬೆಂಗಳೂರು. -ಸಮಯ: ಶುಕ್ರವಾರ, ಮಾರ್ಚ್ 6, 2026 ಸಂಜೆ 7:00 ಗಂಟೆಗೆ
- Maha Holi – India’s Biggest Holi Celebration
Maha Holi 2026 ಬೆಂಗಳೂರಿನ ಅತಿದೊಡ್ಡ ಹೋಳಿ ಹಬ್ಬವಾಗಿ ಗುರುತಿಸಿಕೊಂಡಿದೆ. ಈ ಸಂಭ್ರಮದದಲ್ಲಿ ಲೈವ್ DJs ಮತ್ತು ಕಲಾವಿದರು, ರೇನ್ ಡ್ಯಾನ್ಸ್ ಅರೆನಾ, ಫೋಮ್ ಜೋನ್‌ಗಳು, ವಿಶೇಷ VIP ವಲಯಗಳು ಹಾಗೂ ಪೂಲ್ ಲೌಂಜ್ ಸೇರಿವೆ. ಆರ್ಗ್ಯಾನಿಕ್ ಬಣ್ಣಗಳು, ಲೈವ್ ಆರ್ಟ್ ಅನುಭವಗಳು ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿಸುತ್ತವೆ. ಸ್ಥಳ: ಭೋರುಕಾ ಟೆಕ್ನಾಲಜಿ ಪಾರ್ಕ್, ಬೆಂಗಳೂರು. -ಸಮಯ: ಮಂಗಳವಾರ, ಮಾರ್ಚ್ 3 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:00 ಗಂಟೆಗೆ
- Rang Vansh
ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮದಲ್ಲಿ ನಟ ಹರ್ಷವರ್ಧನ್ ರಾಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ನಿವಲ್ ಮಾದರಿಯ ಈ ಆಚರಣೆ ಕುಟುಂಬ ಮತ್ತು ಸ್ನೇಹಿತರಿಗೆ ಸೂಕ್ತವಾಗಿದೆ. -ಸ್ಥಳ: ಈಡನ್ ಇವೆಂಟ್ ಏರಿಯಾ, ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಬೆಂಗಳೂರು. -ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ
- Whitefield Biggest Holi Festival – Gulaaal Season 9
ನಾಲ್ಕು ದಿನಗಳ ಕಾಲ ನಡೆಯುವ ಈ ಹೋಳಿ ಉತ್ಸವವು ಬೆಂಗಳೂರಿನ ದೀರ್ಘಾವಧಿಯ ಸಂಭ್ರಮಗಳಲ್ಲಿ ಒಂದಾಗಿದೆ. ಓಪನ್-ಏರ್ ಬಣ್ಣಗಳ ಆಟ, ರೇನ್ ಡ್ಯಾನ್ಸ್ , DJ ಸಂಗೀತ, ಆರ್ಗ್ಯಾನಿಕ್ ಬಣ್ಣಗಳು, ದೋಲ್ ವಾದ್ಯ ಪ್ರದರ್ಶನಗಳು ಮತ್ತು ಆಹಾರ ಮಳಿಗೆಗಳು ಇರಲಿದೆ. ಸ್ಥಳ: ರಾಧಾ ಹೋಮ್‌ಟೆಲ್, ಬೆಂಗಳೂರು. -ಸಮಯ: ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:30 ಗಂಟೆಗೆ
- Gabbar Holi – Bangalore’s Best Holi ಫೆಸ್ಟಿವಲ್
ಗಬ್ಬರ್ ಹೋಳಿ ಓಪನ್-ಏರ್ ಸಂಭ್ರಮವಾಗಿದ್ದು, ಲೈವ್ DJs, ಬಾಲಿವುಡ್, EDM ಮತ್ತು ಪಂಜಾಬಿ ಬೀಟ್ಸ್, ಪೂಲ್ ಪಾರ್ಟಿ ಹಾಗೂ ರೇನ್ ಡ್ಯಾನ್ಸ್ ಜೋನ್ ಇರಲಿದೆ. ಸ್ಥಳ: ಐವಿ ರೋಸಾ ರೆಸಾರ್ಟ್, ಸರ್ಜಾಪುರ, ಬೆಂಗಳೂರು. ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ





