ಸಾಮಗ್ರಿ : 2 ಕಪ್‌ ಆಶೀರ್ವಾದ್‌ ಮಲ್ಟಿಗ್ರೇನ್‌ ಆಟಾದಿಂದ ತಯಾರಿಸಿದ ಮೃದುವಾದ 8-10 ಚಪಾತಿಗಳು, 1-1 ಕಪ್‌ ಬೇಯಿಸಿದ ಕಡಲೆಕಾಳು, ಹಸಿ ಬಟಾಣಿ, ಹೆಸರುಕಾಳು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ 1 ಕಪ್‌), ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಚಾಟ್‌ ಮಸಾಲ, ಇಂಗು, ಗರಂಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಶುಂಠಿ, ಹಸಿ ಮೆಣಸು,  1 ಗಿಟುಕು ತೆಂಗಿನ ತುರಿ,  ಚಿಟಿಕಿ ಅರಿಶಿನ, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಬೇರೆಯಾಗಿಡಿ. ಅದೇ ಬಾಣಲೆಗೆ 5-6 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಹಸಿಮೆಣಸು, ಶಂಠಿ ಹಾಕಿ ಬಾಡಿಸಿ. ನಂತರ ಬೆಂದ ಕಾಳು ಹಾಕಿ ಬೇಗ ಬೇಗ ಕೈಯಾಡಿಸಿ. ಆಮೇಲೆ ಉಪ್ಪು, ಅರಿಶಿನ, ಉಳಿದ ಮಸಾಲೆ, ತೆಂಗಿನ ತುರಿ ಹಾಕಿ ಕೆದಕಬೇಕು. ಕೆಳಗಿಳಿಸುವ ಮುನ್ನ ಗೋಡಂಬಿ, ದ್ರಾಕ್ಷಿ ಸೇರಿಸಿ. ಚಪಾತಿಗಳನ್ನು ಅರ್ಧಚಂದ್ರಾಕಾರ ಮಾಡಿ, ಅದನ್ನು ಶಂಖುವಿನಂತೆ ಮಡಿಸಬೇಕು. ಅದಕ್ಕೆ 2-3 ಚಮಚ ಕಾಳಿನ ಮಿಶ್ರಿಣ ತುಂಬಿಸಿ, ಅಂಚು ಬಿಡದಂತೆ ಆಶೀರ್ವಾದ್‌ ಮಲ್ಟಿಗ್ರೇನ್‌ ಆಟಾ ಪೇಸ್ಟ್ ಮೆತ್ತಿ ಸಮೋಸಾ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಕರಿದು, ಆದಷ್ಟು ಬೇಗ ಹೊರಗೆ ತೆಗೆದುಬಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ