ಕೆಲವು ತಿಂಗಳ ಹಿಂದೆ ಮದರಾಸ್‌ ಮಹಾನಗರದ ಒಂದು ಪರಿವಾರದ ಮೂವರು ಏಸಿಯ ಗ್ಯಾಸ್‌ ಲೀಕ್‌ ಆದಕಾರಣ ತೀರಿಕೊಂಡರು. ದೊರೆತ ಮಾಹಿತಿ ಪ್ರಕಾರ, ಈ ಜನ ರಾತ್ರಿ ಏಸಿ ಆನ್‌ ಮಾಡಿ ಮಲಗಿದ್ದಾರೆ. ತಡರಾತ್ರಿಯಲ್ಲಿ ಯಾವಾಗಲೋ ಏಸಿಯಿಂದ ಗ್ಯಾಸ್‌ ಸೋರಿ ಹೋಗಿ, ಈ ಮೂವರೂ ಉಸಿರುಗಟ್ಟಿ ಬೆಳಗಿನ ಹೊತ್ತಿಗೆ ತೀರಿಕೊಂಡಿದ್ದಾರೆ.

ಏಸಿ ಕಾರಣ ಜನರು ಪ್ರಾಣಘಾತಕ ಆಪತ್ತಿಗೆ ಸಿಲುಕುವುದು ಹೊಸದೇನಲ್ಲ. ಇದಕ್ಕೆ ಮೊದಲೂ ಸಹ ಏಸಿಯ ಕಂಪ್ರೆಶರ್‌ ಒಡೆದು ಹೋದುದರಿಂದ ಜನರ ಪ್ರಾಣಕ್ಕೇ ಕುತ್ತು ಬರುವ ಹಾಗಾಗಿತ್ತು. ಏಸಿ ಕಾರಣ ಜನರಲ್ಲಿ ಅನಗತ್ಯ ತಲೆ ನೋವು, ಉಸಿರಾಟದಲ್ಲಿ ತೊಂದರೆ ಇತ್ಯಾದಿ ಅನೇಕ ಕಷ್ಟಗಳು ಕಾಣಿಸಿಕೊಂಡಿವೆ. ಹೀಗಿರುವಾಗ ಕೂಲ್ ‌ಕೂಲ್ ‌ಆಗಿರಬೇಕಾದ ಏಸಿ ಹೀಗೆ ಪ್ರಾಣಘಾತಕವಾಗಲು ಕಾರಣವೇನು ಎಂದು ಪ್ರಶ್ನೆಗಳೇಳುತ್ತವೆ.

ನಿಮ್ಮ ಬೆಡ್‌ ರೂಮಿನಲ್ಲಿ ಅಳವಡಿಸಿರುವ ಏಸಿಯಿಂದಲೂ ವಿಷಾನಿಲ ಸೋರಿಹೋಗಬಹುದಾದ ಸಂಭವವಿದೆ. ಹೀಗಾಗಿ ಏಸಿಯಿಂದ ಆಗಬಹುದಾದ ದುರ್ಘಟನೆಗಳಿಂದ ಪಾರಾಗಲು ಇವನ್ನು ನೆನಪಿಡಿ :

ಏಸಿಯನ್ನು ಎಂದೂ ಎಕ್ಸ್ ಟೆನ್ಶನ್‌ ಕಾರ್ಡ್‌ ಮೂಲಕ ಕನೆಕ್ಟ್ ಮಾಡಲೇಬೇಡಿ. ಇದಕ್ಕಾಗಿ ಕನಿಷ್ಠ 900-1200ರವರೆಗಿನ ವೆಂಟಿಲೇಜ್‌ ಬೇಕಾಗುತ್ತದೆ. ಇದು ಮೊಬೈಲ್‌, ಲ್ಯಾಪ್‌ಟಾಪ್‌ಗಳಲ್ಲಿ ಬಳಕೆಯಾಗುವ ಪವರ್‌ ಯಾ ಎಕ್ಸ್ ಟೆನ್ಶನ್‌ ಕಾರ್ಡ್‌ಗಿಂತಲೂ ಹೆಚ್ಚಿರುತ್ತದೆ. ಹೆಚ್ಚಿನ ಲೋಡ್‌ ಹೊರೆ ಇದ್ದರೆ ಬೇಗ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಂಭವ ಹೆಚ್ಚು.

ಏಸಿಗಾಗಿ ಬಳಸಲ್ಪಡುವ ಸ್ವಿಚ್‌ ಸದಾ ನಿಮ್ಮ ಕೈಗೆಟುಕುವಂತಿರಲಿ. ಏಕೆಂದರೆ ಯಾವುದೇ ಅಪಾಯದ ಸ್ಥಿತಿಯಲ್ಲಿ ತಕ್ಷಣ ಅದನ್ನು ಆರಿಸುವಂತಿರಬೇಕು.

ಏಸಿ ವೈರನ್ನು ಸದಾ ಬಿಸಿಯಾದ ಜಾಗದಿಂದ ದೂರವಿರಿಸಿ.

ಏಸಿಯ ಎಲೆಕ್ಟ್ರಿಕ್‌ ಸಾಕೆಟ್‌ನ್ನು ಸದಾ ಚೆಕ್‌ ಮಾಡಿಸುತ್ತಿರಿ. ಆಗ ಅದರಿಂದ ಯಾವುದೇ ಬಗೆಯ ಎಲೆಕ್ಟ್ರಿಕ್‌ ಶಾಕ್‌ ತಗುಲುವುದಿಲ್ಲ ಎಂಬ ಖಾತ್ರಿ ಇರುತ್ತದೆ.

ಮನೆಯಲ್ಲಿ ಏಸಿ ಫಿಟ್‌ ಮಾಡಿಸಲು ಯಾರಾದರೂ ಪ್ರೊಫೆಶನಲ್ ಅಥವಾ ಕಂಪನಿಯ ಅಧಿಕಾರ ವರ್ಗದ ಎಂಜಿನಿಯರ್‌ನ್ನೇ ಕರೆಸಬೇಕು, ಅಗ್ಗದ ಆಸೆಗೆ ಬಿದ್ದು ಲೋಕಲ್ ಮೆಕ್ಯಾನಿಕ್‌ನ ಮೊರೆ ಹೋಗದಿರಿ.

ಪ್ರತಿ ವರ್ಷ ತಪ್ಪದೆ ಏಸಿಯ ಸರ್ವೀಸಿಂಗ್‌ ಮಾಡಿಸಿ.

ಪ್ರತಿ ದಿನ ತಪ್ಪದೆ 1-2 ಸಲ ಏಸಿ ಇರುವ ಕೋಣೆಯ ಕಿಟಕಿ, ಬಾಗಿಲುಗಳನ್ನು ತೆರೆದಿಡಿ, ಆಗ ಕೋಣೆ ಒಳಗೇ ಅಡಗಿರುವ ಮಾಲಿನ್ಯದ ಹವೆ ಹೊರಗೆ ಹೋಗಲು ದಾರಿಯಾಗುತ್ತದೆ.

ಏಸಿಯ ಗ್ಯಾಸ್‌ನ ಗುಣಮಟ್ಟದ ಬಗ್ಗೆ ಡಬ್ಬಲ್ ಗ್ಯಾರಂಟಿ ಇರಲಿ.

ಮತ್ತೊಂದು ವಿಷಯ ನೆನಪಿಡಿ, ಏಸಿ ಸ್ವಿಚ್‌ ಬಳಿ ಯಾವುದೇ ತರಹದ ವಾಟರ್‌ ಸೋರ್ಸ್‌ ಇರಲೇಬಾರದು. ಜೊತೆಗೆ ಯಾವುದೇ ಅಲಂಕಾರಿಕ ಸಾಧನ ಅದರ ಬಳಿ ಬೇಡ.

ನಿಮ್ಮ ಏಸಿಯನ್ನು ಇನ್‌ವರ್ಟರ್‌/ ಜನರೇಟರ್‌ ನೆರವಿನಿಂದ ಓಡಿಸುತ್ತಿದ್ದರೆ, ಕರೆಂಟ್‌ ಸಪ್ಲೈ ಬಂದ ತಕ್ಷಣ, ಅದನ್ನು ಇನ್‌ವರ್ಟರ್‌ನಿಂದ ಬೇರ್ಪಡಿಸಿ.

ಏಸಿಯ ಹೊರಭಾಗ ಕೆಟ್ಟು ಹೋದರೆ ಅಥವಾ ಅದರಿಂದ ಯಾವುದೇ ತರಹದ ಸದ್ದು ಬಂದರೆ, ತಕ್ಷಣ ಸಂಬಂಧಪಟ್ಟ ಎಂಜನಿಯರ್‌ನ್ನು ಕರೆಸಿ.

ಏಸಿಯ ಏರ್‌ ಫಿಲ್ಟರ್‌ನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತಿರಿ.

ಬೇಸಿಗೆಯ ಆರಂಭದ ದಿನಗಳಲ್ಲೇ ನಿಮ್ಮ ಏಸಿಯನ್ನು ಚೆನ್ನಾಗಿ ಪರೀಕ್ಷಿಸಿ, ತೊಂದರೆ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅಗತ್ಯವೆನಿಸಿದರೆ ತಕ್ಷಣ ಸರ್ವೀಸ್‌ ಮಾಡಿಸಿ, ಆಗ ಏಸಿ ಸಮರ್ಪಕವಾಗಿದೆ ಎಂದು ನೀವು ನಿಶ್ಚಿಂತರಾಗಿರಬಹುದು.

ಏಸಿಯಿಂದ ಗ್ಯಾಸ್ಲೀಕ್ಆಗುತ್ತಿದೆಯೇ ಎಂದು ತಿಳಿಯುದು ಹೇಗೆ?

ನಿಮ್ಮ  ಏಸಿಯಿಂದ ಗ್ಯಾಸ್‌ ಲೀಕ್‌ ಆಗುತ್ತಿದೆಯೇ ಎಂದು ತಿಳಿದುಕೊಳ್ಳುವುದು ತುಸು ಕಷ್ಟದ ಕೆಲಸವೇ ಸರಿ. ಏಸಿ ಗ್ಯಾಸ್‌ಗೆ (ಅಡುಗೆ ಸಿಲಿಂಡರ್‌ನ ಗ್ಯಾಸ್‌ ಹಾಗೆ) ಯಾವುದೇ ದುರ್ಗಂಧ ಇರುವುದಿಲ್ಲ. ಈ ಕೆಲವು ಕಾರಣಗಳಿಂದ ಗ್ಯಾಸ್‌ ಲೀಕ್‌ಆಗುತ್ತಿರಬಹುದು, ಆದ್ದರಿಂದ ಇವನ್ನು ಎಚ್ಚರಿಕೆಯಿಂದ ಗಮನಿಸಿಕೊಳ್ಳಿ :

ನಿಮ್ಮ ಏಸಿ ಸರಿಯಾಗಿ ಫಿಟ್‌ ಆಗಿರದಿದ್ದರೆ…

ಯಾವ ಪೈಪ್‌ನಿಂದ ಗ್ಯಾಸ್‌ ಪ್ರವಹಿಸುತ್ತದೋ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ…

ಹಳೆಯ ಏಸಿ ಟ್ಯೂಬ್‌ ಸವೆದಿದ್ದರೆ…

ನಿಮ್ಮ ಏಸಿ ಸರಿಯಾಗಿ ಕೂಲಿಂಗ್‌ ಎಫೆಕ್ಟ್ ಕೊಡದಿದ್ದರೆ…

ಏಸಿ ತಾಪಮಾನ ಎಷ್ಟಿರಬೇಕು?

ಮಂಚ ಅಥವಾ ಸೋಫಾ ಮೇಲೆ ಒರಗಿ ಟಿವಿ ನೋಡುತ್ತಾ ಏಸಿಯ ತಾಪಮಾನ 160-180 ವರೆಗೂ ಕೊಂಡೊಯ್ಯಬಹುದು. ಆದರೆ ಹೀಗೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕರ. ಮನೆ ಅಥವಾ ಆಫೀಸಿನಲ್ಲಿ ಏಸಿ ತಾಪಮಾನ 250-260 ಸೆಲ್ಶಿಯಸ್ ಅಷ್ಟೇ ಇರಬೇಕು. ಇದಕ್ಕೆ ಹೋಲಿಸಿದಾಗ ರಾತ್ರಿ ತಾಪಮಾನ ಇನ್ನೂ ಕಡಿಮೆ ಇರಬೇಕು. ಹಾಗೆ ಮಾಡುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ, ಕರೆಂಟ್‌ ಬಿಲ್ ‌ಸಹ ಕಡಿಮೆ ಬರುತ್ತದೆ.

ಇಂಧನ ಸಚಿವಾಲಯದ ಸಲಹೆ ಎಂದರೆ, ಏಸಿಯ ಡಿಫಾಲ್ಟ್ ಸೆಟಿಂಗ್‌ 240 ಸೆ. ಇಟ್ಟುಕೊಂಡರೆ, ಕರೆಂಟ್‌ ಎಷ್ಟೋ ಬಚಾವಾಗುತ್ತದೆ. ಇಂಧನ ಸಚಿವಾಲಯದ ಪ್ರಕಾರ, ಹೀಗೆ ಮಾಡುವುದರಿಂದ 1 ವರ್ಷದಲ್ಲಿ 20 ಮಿಲಿಯನ್‌ ಯೂನಿಟ್‌ ವಿದ್ಯುತ್‌ಉಳಿತಾಯವಾಗುತ್ತದೆ.

ಪರಿಸರ ತಜ್ಞರ ಪ್ರಕಾರ ಭಾರತದಲ್ಲಿ ಏಸಿಯ ತಾಪಮಾನ 260 ಸೆ. ಇರಿಸಿಕೊಳ್ಳಬೇಕು.

ವೈಶಾಲಿ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ