ಸಂಪರ್ಕ ಕ್ರಾಂತಿಯ ಚಮತ್ಕಾರ : ಇಂದಿನ ವಿಶ್ವದೊಂದಿಗೆ ಹೊಂದಿಕೊಂಡಿರಬೇಕು ಎಂದು ಕಂಪ್ಯೂಟರ್‌ ಅಥವಾ ಸಂಪರ್ಕ ಕ್ರಾಂತಿ ಚಮತ್ಕಾರವನ್ನೇ ಮಾಡಿದೆ. ಹೀಗಾಗಿ ಒಬ್ಬಂಟಿ ವೃದ್ಧೆಯರಿಗೆ ಮೊಬೈಲ್ ‌ಅಥವಾ ಟ್ಯಾಬ್ಲೆಟ್‌ ನೀಡಲಾಗುತ್ತದೆ, ಆಗ ಅವರಿಗೆ ಒಂಟಿತನ ಅಷ್ಟು ಕಾಡದು. ಉರುಗ್ವೇಯ ಸರ್ಕಾರ ಇತ್ತೀಚೆಗೆ 30 ಸಾವಿರ ಟ್ಯಾಬ್ಲೆಟ್‌ಗಳನ್ನು ಹೀಗೆ ಹಂಚಿತು. ಅಲ್ಲಿನ ರಿಟೈರ್ಡ್‌ ವೃದ್ಧೆಯರು ಇದಕ್ಕೆ ಸಂಬಂಧಿಸಿದ ತರಬೇತಿಗೂ ಹಾಜರಾದರು.

smd-nov-2

ಯಾವುದನ್ನು ನೋಡುವುದು ಬಿಡುವುದು? : ಪ್ಯಾರಿಸ್‌ನ ಡ್ಯಾನ್ಸ್ ಮಾಲಿನ್‌ ರೂಜ್‌ ಬಲು ದುಬಾರಿ ಶೋ. ಆದರೆ ಅಲ್ಲಿಗೆ ಹೋದವರು ಅದನ್ನು ನೋಡದಿದ್ದರೆ ಪ್ರವಾಸ ಅಪೂರ್ಣ ಎನಿಸುತ್ತದೆ. ಅಲ್ಲಿನ ಹುಡುಗಿಯರು ಈ ಡ್ಯಾನ್ಸ್ ನಲ್ಲಿ ಹೇಗೆ ಕುಣಿಯುತ್ತಾರೆಂದು ಈ ಫೋಟೋ ನೋಡಿ. ಇಂಥದಕ್ಕೆ ಮರುಳಾಗದ ಎಂಟೆದೆಯ ಭಂಟರುಂಟೇ?

smd-nov-3

ಹಾರುತಿರುವ ಹಕ್ಕಿಗಳೇ..... :  ಆಹಾ, ಎಂಥ ರಂಗು ರಂಗಾದ ಚಿತ್ರವಿದು! ಆಕಾಶದ ತುಂಬಾ ಬಣ್ಣದ ಹೂ ಚೆಲ್ಲಿದಂತೆ... ಸ್ಪೇನ್‌ನಲ್ಲಿ ಬಣ್ಣ ಬಣ್ಣದ ಇಂಥ ಸಾವಿರಾರು ಪಾರಿವಾಳಗಳು `ಪಿಜನ್‌ ಫೆಸ್ಟಿವಲ್‌'ನಲ್ಲಿ ಒಮ್ಮೆಲೇ ಹಾರಿದಾಗ ಕಂಡುಬಂದದ್ದೇ ಹೀಗೆ. ಗಗನದಿ ಹರಡಿದ ಇಂಥ ಬಣ್ಣದ ಹೂಗಳನ್ನು ಕಂಡಾಗ ಯಾರಿಗೆ ತಾನೇ ಹಾಡುವ ಲಹರಿ ಮೂಡುವುದಿಲ್ಲ?

ಗಾಂಧಿ ಮನದಲ್ಲಿ ತುಂಬಿದ್ದರೆ ಸಾಕು :  ಒಮ್ಮೆಲೇ ಇಷ್ಟೊಂದು ಗಾಂಧಿಯರನ್ನು ಕಂಡಾಗ ಯಾರಿಗಾದರೂ ಮನಸ್ಸು ತುಂಬಿ ಬರುತ್ತದೆ. ಆದರೆ ಸತ್ಯದ ವಿಚಾರವೆಂದರೆ, ಗಾಂಧಿ ಈಗ ಕೇವಲ ನೋಟುಗಳಲ್ಲಿ ಕಂಡುಬರುತ್ತಾರೆಯೇ ಹೊರತು ನಮ್ಮ ಮನಸ್ಸು, ವಿಚಾರದಲ್ಲಲ್ಲ. ಕಳೆದ ಗಾಂಧಿ ಜಯಂತಿಯಂದು ಬೆಂಗಳೂರಿನ ಒಂದು ಖಾಸಗಿ ಶಾಲೆಯ ಮೈದಾನದಲ್ಲಿ ಒಮ್ಮೆಲೇ 4,605 ವಿದ್ಯಾರ್ಥಿಗಳು ಗಾಂಧಿ ವೇಷಧಾರಿಗಳಾಗಿ ಹೀಗೆ ಕಾಣಿಸಿದರು. ಇದರಿಂದ ಗಾಂಧಿಗಿರಿ ಸಾಧಿಸಲಾಗುತ್ತದೆಯೇ? ಹಾಗೇನೂ ಹೇಳಲಾಗದು.

smd-nov-5

ಯಂತ್ರ ಮಾನವನೊಂದಿಗೆ ಒಂದಿಷ್ಟು ಪ್ರೀತಿ ಪ್ರೇಮ : ಕಳೆದ ಅಕ್ಟೋಬರ್‌ನಲ್ಲಿ ಮ್ಯಾಂಡ್ರಿಡ್‌ನಲ್ಲಿ ನಡೆದ ವಿಡಿಯೋ ಗೇಮ್ ಫೇರ್‌ನಲ್ಲಿ, ಕಂಪ್ಯೂಟರ್‌ ಗೇಮ್ಸ್ ನ ಜೀವವಾದ ಅನೇಕ ಪಾತ್ರಗಳು ನಡೆದಾಡುತ್ತಾ ಮೆರವಣಿಗೆ ಹೊರಟವು. ಪ್ರೇಕ್ಷಕರಿಗೆ ಆಕರ್ಷಣೆ ಒದಗಿಸಲೆಂದೇ ಇವುಗಳ ನಿರ್ಮಾಪಕರು ಮಾಡೆಲ್‌ಗಳಿಗೆ ವಿಶಿಷ್ಟ ಡ್ರೆಸ್‌ ತೊಡಿಸಿ ಹೀಗೆ ಹೊರಡಿಸಿದರು. ಈ ಹುಡುಗಿಯರು ಅದಕ್ಕೆ ಮರುಳಾಗಿ ಫೋಟೋ ತೆಗೆಸಿಕೊಂಡದ್ದು ಹೀಗೆ.

smd-nov-6

ಪ್ರಾಣಿ ಹಿಂಸೆ ನಿಲ್ಲಿಸಿ :  ಇದು ಗೋಮಾಂಸದ ವ್ಯಾಪಾರ ನಿಷೇಧಿಸಿ ಎಂಬ ಗೋರಕ್ಷಕರ ಹೋರಾಟದ ಚಿತ್ರವೇನಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಾಣಿ ಹತ್ಯೆ ಖಂಡಿಸುವ ಪರಿ ಇದು. ಅಲ್ಲಿನ ಪ್ರಾಣಿಪರ ಸಂಘಾದ `ಪೇಟಾ' (ಪೀಪಲ್ ಫಾರ್‌ ಎಥ್ನಿಕ್‌ ಟ್ರೀಟ್‌ಮೆಂಟ್‌ಆಫ್‌ ಅನಿಮಲ್ಸ್) ಸಂಸ್ಥೆಯ ಸದಸ್ಯರು, ಮಾಂಸಾಹಾರ ತ್ಯಜಿಸುವಂತೆ ಪ್ರೇರೇಪಿಸಲು ಹೀಗೆ ಅರೆಬೆತ್ತಲಾಗಿ ಮೈಮೇಲೆಲ್ಲ ಕೆಂಪು ಬಣ್ಣ ಬಳಿದುಕೊಂಡು ಸತ್ತ ಪ್ರಾಣಿಗಳಂತೆ ನಡುರಸ್ತೆಯಲ್ಲಿ ಮಲಗಿ, ಪ್ರಾಣಿ ಹಿಂಸೆ ಖಂಡಿಸಿ ಪ್ರದರ್ಶನ ನಡೆಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ