ವೇಗನ್ ಅಂದ್ರೆ ಪ್ಯೂರ್ ವೆಜ್. ಪ್ರಾಣಿಜನ್ಯ ಪದಾರ್ಥಗಳನ್ನು ಸೇವಿಸದವರು ಎಂದರ್ಥ. ಅಂದರೆ ಪ್ರಾಣಿಜನ್ಯ ಮೂಲದ ಮಾಂಸ, ಹಾಲು, ಅದರ ಉತ್ಪನ್ನಗಳು, ಮೊಟ್ಟೆ, ಜೇನು, ಚರ್ಮದ ವಸ್ತುಗಳು ಇತ್ಯಾದಿ ಯಾವುದನ್ನೂ ಮುಟ್ಟುವುದಿಲ್ಲ, ಕಾಸ್ಟೆಟಿಕ್ಸ್ ಖರೀದಿಸುವಾಗ ಸಹ ಅದರಲ್ಲಿ ಪ್ರಾಣಿಜನ್ಯ ಕೊಬ್ಬು ಅಥವಾ ಇನ್ನಾವ ಅಂಶ ಇಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಸ್ವೀಡನ್ನಿನ ರಾಯಭಾರಿ ನನಗೆ ಹೇಳಿದ್ದೆಂದರೆ, ಸ್ಟಾಕ್ ಹೋಮ್ ನಗರದಲ್ಲಿ ಪಾರ್ಟಿಗಳಿಗೆ 60+ ಮಂದಿ ಬಂದಾಗ ಅವರಿಗೆ ವೇಗನ್ ಫುಡ್ ಅತ್ಯಗತ್ಯ ಬೇಕಂತೆ. 40+ನವರು ಸಹ ಟೇಸ್ಟಿಗೆ ಮಾಂಸಾಹಾರ ಸೇವಿಸಿದರೂ ಇದನ್ನೇ ಬಯಸುತ್ತಾರಂತೆ!
ನಮ್ಮ ಸಚಿವಾಲಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸಾವಯವ ಮೇಳ ನಡೆಸಿದರು. ಇದರಲ್ಲಿ 450 ಸ್ಟಾಲ್ ಹಾಕಲಾಗಿತ್ತು. ಸಾವಿರಾರು ಜನ ಈ ಆಹಾರ ಮೇಳಕ್ಕೆ ಬಂದಿದ್ದರು. ಬಲು ಸ್ವಾದಿಷ್ಟ ವ್ಯಂಜನಗಳನ್ನು ಸವಿದರು. ಒಬ್ಬ ವ್ಯಕ್ತಿ ಆನ್‌ಲೈನ್ ವೇಗನ್ ಶಾಪಿಂಗ್ ಮಾಲ್ ತೆರೆದರು, ಅದರಲ್ಲಿ ಸುಮಾರು 100ಕ್ಕೂ ಹೆಚ್ಚಿನ ವ್ಯಂಜನಗಳು ಲಭ್ಯವಿವೆ. ಹೀಗೆ ಬಂದು ಆಹಾರ ಸೇವಿಸುವವರಿಗೇನೂ ಕೊರತೆ ಇಲ್ಲ, ಆದರೆ ಇದರ ಪ್ರಚಾರದ್ದೇ ದೊಡ್ಡ ಕೊರತೆ. ನಾಗಪುರದ ಇಬ್ಬರು ಯುವಕರು ಬಾದಾಮಿ ಹಾಲು ಸಿದ್ಧಪಡಿಸಿ ಮಾರುಕಟ್ಟೆಗೆ ತಂದಿದ್ದಾರೆ. ಇದೀಗ ಇದರ ಡೀಲರ್ಸ್ ದೊರಕುವುದೇ ತುಸು ಕಷ್ಟ.
ಹರಡುತ್ತಿರುವ ಕಾರುಬಾರು
ವಿಶ್ವವಿಡೀ ವೇಗನ್ ಉದ್ಯಮ ಹರಡುತ್ತಿದೆ. ಅದಕ್ಕೆ ಹೆಚ್ಚಿನ ಬೇಡಿಕೆಯೂ ಇದೆ. ಆದರೆ ಸಪ್ಲೈ ಮಾತ್ರ ಕಡಿಮೆ. ಯುವ ಉದ್ಯಮಿಗಳಿಗೆ ಬಂದಿರುವ ಚಿಂತೆ ಎಂದರೆ ಯಾವ ತರಹ ಈ ಉದ್ಯಮ ನಡೆಸುವುದು ಅಂತ. ಮೈಕಲ್ ಓಫಿ ಎಂಬ ಉತ್ಸಾಹಿ ವೇಗನ್ ಮಿನಿಮಲಿಸ್ಟ್ ಸೈಟ್ ನಡೆಸುತ್ತಿದ್ದಾನೆ. ಅದರಲ್ಲಿ ಆತ ಬಹಳಷ್ಟು ಸಲಹೆ ನೀಡುತ್ತಾನೆ. ಇದು ಉದ್ಯಮಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ. ಇದರಲ್ಲಿ ಮುಖ್ಯವಾದವು ಎಂದರೆ :
ವೇಗನ್ ರೆಸ್ಟೋರೆಂಟ್ ಯಾ ಕೆಫೆ.
ವೇಗನ್ ಪಿಜ್ಜಾ ಡೆಲಿವರಿ ವ್ಯವಸ್ಥೆ.
ವೇಗನ್ ಚೀಸ್ ಸಪ್ಲೈ.
ಫುಡ್ ಟ್ರಕ್‌ಇದರಲ್ಲಿ ಕೇವಲ ವೇಗನ್ ಬರ್ಗರ್, ಕಚೋರಿ, ಸವೋಸ ಇರಬೇಕು.
ವೇಗನ್ ಬೇಕರಿ ಇದರಲ್ಲಿ ಹಾಲು, ಮೊಟ್ಟೆ ಬೆರೆಸಿದ ತಿಂಡಿಗಳು ಇರಬಾರದು.
ವೇಗನ್ ಉದ್ಯಮಿಗಳಿಗೆಂದೇ ವಿಶೇಷ ಬಗೆಯ ಕಾಪಿರೈಟಿಂಗ್, ಇಲಸ್ಟ್ರೇಶನ್ ವರ್ಕ್.
ವೇಗನ್ ಪ್ಲೇ ಹೌಸ್. ಇಲ್ಲಿ ವೇಗನ್ ಪೋಷಕರು ತಮ್ಮ ಮಕ್ಕಳನ್ನು ಬಿಟ್ಟು ಹೋಗುವರು.
ವೇಗನ್ ಲೋಡಿಂಗ್ ಈವೆಂಟ್ ಮ್ಯಾನೇಜರ್.
ವೇಗನ್ ಕುಕಿಂಗ್ ಕ್ಲಾಸಸ್ : ಇಲ್ಲಿ ಹಾಲು, ಮೊಟ್ಟೆಗಳಿಲ್ಲದ ವೇಗನ್ ವ್ಯಂಜನ ತಯಾರಿಕೆ ಕಲಿಸಲಾಗುತ್ತದೆ.
ವೇಗನ್ ಡೇಟಿಂಗ್ ಆ್ಯಪ್ : ಇಲ್ಲಿ ಕೇವಲ ವೇಗನ್ ಮಂದಿ ಮಾತ್ರ ಪರಸ್ಪರ ಭೇಟಿ ಆಗಬಹುದು.
ವೇಗನ್ ಫುಟ್ವೇರ್: ಇಲ್ಲಿ ಪ್ರಾಣಿಜನ್ಯ ವೆದರ್ ಬದಲಿಗೆ ಕ್ಯಾನ್‌ವಾಸ್, ಜೂಟ್, ಸಿಂಥೆಟಿಕ್ ಮೆಟೀರಿಯಲ್ ನ ಫುಟ್‌ವೇರ್‌ಮಾತ್ರ ಮಾರಾಟ.
ವೇಗನ್ ಕಾಸ್ಮೆಟಿಕ್ ಉತ್ಪನ್ನಗಳು : ಇದರಲ್ಲಿ ಪ್ರಾಣಿಜನ್ಯ ಘಟಕಗಳ ಸೇರ್ಪಡೆ ನಿಷಿದ್ಧ.
ವೇಗನ್ ಫ್ಯಾಟ್ ಫುಡ್ ಗ್ರಾಸರಿ ಸ್ಟೋರ್ : ಇದರಲ್ಲಿ ಕೇವಲ ವೇಗನ್ ಪ್ರಾಡಕ್ಟ್ ಮಾತ್ರ ಇರುತ್ತದೆ.