ಮೇಕಪ್‌ನಲ್ಲಿ ಸ್ಕಿನ್‌ ಟೋನ್‌ ಡ್ರೆಸ್‌ನ ಜೊತೆ ಜೊತೆಯಲ್ಲೇ ಅದು ಡೇ ಟೈಂ ಅಥವಾ ಈವ್ನಿಂಗ್‌ ಫಂಕ್ಷನ್‌ಗೆ ಯಾವಾಗ ಬೇಕಾಗುತ್ತದೆ ಎಂಬುದೂ ಅಷ್ಟೇ ಮುಖ್ಯ. ಅದರಲ್ಲೂ ಬ್ರೈಡಲ್ ಮೇಕಪ್‌ ಎಂದರೆ ಡಬ್ಬಲ್ ಕೇರ್‌ ತೆಗೆದುಕೊಳ್ಳಬೇಕಾಗುತ್ತದೆ.

ಡೇ ಬ್ರೈಡಲ್ ಮೇಕಪ್

ಹಗಲು ಹೊತ್ತಿನ ಬ್ರೈಡಲ್ ಮೇಕಪ್‌ಗಾಗಿ ಎಲ್ಲಕ್ಕೂ ಮುಖ್ಯವಾದುದು ಎಂದರೆ ಮೇಕಪ್‌ನ ಬೇಸ್‌ ರೆಡಿ ಮಾಡುವುದು. ಮೇಕಪ್ ಬೇಸ್‌ ಎಷ್ಟು ಬೆಟರ್‌ ಆಗಿರುತ್ತದೋ, ಟೋಟಲ್ ಮೇಕಪ್‌ ಅಷ್ಟೇ ಬ್ಯೂಟಿಫುಲ್ ನ್ಯಾಚುರಲ್ ಆಗಿ ಕಾಣಿಸುತ್ತದೆ. ಎಷ್ಟೋ ಜನ ಈ ಬ್ರೈಡಲ್ ಬೇಸ್‌ ರೆಡಿ ಮಾಡುವುದರಲ್ಲಿ ತಪ್ಪು ಮಾಡಿಬಿಡುತ್ತಾರೆ. ಇದು ಮೇಕಪ್‌ನ ತಳಹದಿ ಎಂಬುದು ನೆನಪಿರಲಿ.

ಬೇಸ್‌ಗಾಗಿ ಸದಾ ಸ್ಕಿನ್‌ಗೆ ಹೊಂದುವ ಶೇಡ್‌ನ್ನೇ ಆರಿಸಬೇಕು. ಅಂದ್ರೆ ಅತ್ತ ತೀರಾ ಲೈಟ್‌ ಅಲ್ಲ, ಇತ್ತ ತೀರಾ ಡಾರ್ಕ್‌ ಅಲ್ಲ. ಇದನ್ನು ಆರಿಸಲು ಇದನ್ನು ಕೈ ಮೇಲೆ ಸವರಿಕೊಂಡು ಪರೀಕ್ಷಿಸುವ ಬದಲು ಮುಖದ ಮೇಲೆ ಅಥವಾ ಜಾಲೈನ್‌ ಮೇಲೆ ಹಚ್ಚಿ ನೋಡಿ.

ಪ್ರೈಮರ್‌ ಹಚ್ಚುವುದರ ಮೂಲಕ ಮೇಕಪ್‌ ಆರಂಭಿಸಿ. ಇಡೀ ಮುಖಕ್ಕೆ ಚೆನ್ನಾಗಿ ಪ್ರೈಮರ್‌ ಅಪ್ಲೈ ಮಾಡಿ. ಇದರಿಂದ ಮುಖಕ್ಕೆ ಮೇಕಪ್‌ ಮಾಡುವುದು ಸುಲಭವಾಗುತ್ತದೆ ಹಾಗೂ ಚರ್ಮ ಒಂದೇ ತರಹ ನೀಟಾಗಿ ಕಂಡುಬರುತ್ತದೆ. ನಂತರ ಮುಖದ ಸುಕ್ಕು, ಕಲೆಗಳ ಮೇಲೆ ಕನ್ಸೀಲರ್‌ ಹಚ್ಚಿ ಅವನ್ನು ಅಡಗಿಸಬೇಕು. ಕಂಗಳ ಕೆಳಗೆ, ಐ ಬ್ರೋಸ್‌ ನಡುವೆ ಸಹ ಕನ್ಸೀಲರ್‌ ಅಪ್ಲೈ ಮಾಡಿ. ಹೀಗೆ ಮಾಡುವುದರಿಂದ ಮುಖ ಕಲೆರಹಿತಾಗಿ ಕಂಡುಬರುತ್ತದೆ.

ನಂತರ ಫೌಂಡೇಶನ್‌ ಸರದಿ. ಚರ್ಮದ ಮೇಲೆ ಬ್ರಶ್ಶಿನ ಸಹಾಯದಿಂದ ನೀವು ಪೇಂಟ್‌ ಮಾಡುತ್ತಿರುವಂತೆ ಫೌಂಡೇಶನ್‌ ಅಪ್ಲೈ ಮಾಡಿ. ಇದಾದ ನಂತರ ಅಂಡಾಕಾರದ ಸ್ಪಾಂಜ್‌ನಿಂದ ಇದನ್ನು ಬ್ಲೆಂಡ್‌ ಮಾಡಿ. ಬ್ರಶ್ಶಿನ ನೆರವಿನಿಂದ ಹೆಚ್ಚುವರಿ ಫೌಂಡೇಶನ್‌ಕ್ರೀಮನ್ನು ತೊಲಗಿಸಿ, ಲೂಸ್‌ ಫೇಸ್‌ ಪೌಡರ್‌ ಉದುರಿಸಿ ಬೇಸ್‌ನ್ನು ಸೆಟ್‌ ಮಾಡಿ. ಇದರಿಂದ ಮುಖಕ್ಕೆ ಹೊಳೆ ಹೊಳೆಯುವ ನೈಸರ್ಗಿಕ ಕಾಂತಿ ಮೂಡುತ್ತದೆ.

ಆಮೇಲೆ ಕಂಟೂರಿಂಗ್‌ಗಾಗಿ ಚೀಕ್‌ ಬೋನ್ಸ್ ಮೇಲೆ ಲೈಟ್‌ ಶೇಡ್‌ನ ಲೇಯರ್‌, ಮಧ್ಯದಲ್ಲಿ ಅದಕ್ಕಿಂತ ಡಾರ್ಕ್‌ ಹಾಗೂ ಕೊನೆಯಲ್ಲಿ ಗಾಢ ಡಾರ್ಕ್‌ ಲೇಯರ್‌ ಮಾಡಿ ಬ್ಲೆಂಡ್‌ ಮಾಡಿ. ಇದು ಚೆನ್ನಾಗಿ ಬ್ಲೆಂಡ್‌ ಆದರೆ, ನಿಮ್ಮ ಮುಖದ ಫೀಚರ್ಸ್ ಉತ್ತಮವಾಗಿ ಎದ್ದು ಕಾಣುತ್ತವೆ. ಇದಾದ ಮೇಲೆ ಐ ಮೇಕಪ್‌, ಲಿಪ್‌ ಮೇಕಪ್‌ ಹಾಗೂ ಹೇರ್‌ ಸ್ಟೈಲ್‌ ಮಾಡಿ. ನೈಟ್‌ ಬ್ರೈಡಲ್ ಮೇಕಪ್‌ ಸಂಜೆಯ ನಂತರದ ಗೋಧೂಳಿ ಲಗ್ನ ಅಥವಾ ಆರತಕ್ಷತೆಯ ಮೇಕಪ್‌ಗಾಗಿ ಹಗಲಿಗಿಂತ ಹೆಚ್ಚು ಡಾರ್ಕ್‌ ಆಗಿರಬೇಕು. ಇದಕ್ಕಾಗಿ ಮೇಕಪ್‌ ಕಲರ್‌ ಬೋಲ್ಡ್ ಆಗಿರಬೇಕು. ಮದುವೆ ದಿನ ಚೆನ್ನಾಗಿ ಕಂಡುಬರಲು ಕಂಗಳ ಪಾತ್ರ ದೊಡ್ಡದು. ಅದನ್ನು ಸರಿಯಾಗಿ ಗಮನಿಸಿಕೊಳ್ಳದಿದ್ದರೆ, ನಿಮ್ಮ ಇಡೀ ಮೇಕಪ್‌ ಹಾಳಾದೀತು. ಕಂಗಳಿಗಾಗಿ ಸ್ಮೋಕಿಂಗ್‌ ಕಲರ್‌ನ್ನು ಬಳಸಿಕೊಳ್ಳಬಹುದು. ನಿಮ್ಮ ಕಂಗಳ ಕಡೆ ಎಲ್ಲರ ಗಮನಸೆಳೆಯಲು ನೀವು ಬ್ರೌನ್‌, ಗ್ರೇ, ಗ್ರೀನ್‌ ಕಲರ್ಸ್‌ ಐಲೈನರ್ಸ್‌ನ್ನು ಕಂಗಳ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಹಚ್ಚಬಹುದು. ನಿಮ್ಮ ಕಂಗಳು ತುಸು ಕಂದು ಬಣ್ಣಕ್ಕಿದ್ದರೆ, ನೀವು ಪರ್ಪಲ್ ಗ್ರೇ ಕಲರ್‌ನ ಐಲೈನರ್‌ ಬಳಸಿಕೊಳ್ಳಿ. ಅಕಸ್ಮಾತ್‌ ಕಂಗಳು ನೀಲಿ, ಹಸಿರು ಬಣ್ಣಕ್ಕಿದ್ದಲ್ಲಿ ನೀವು ಬ್ರಾಝ್ ಶೇಡ್‌ ಯಾ ಡಾರ್ಕ್‌ ಬ್ರೌನ್ ಬಳಸಿರಿ.

ಚರ್ಮ ಆಯ್ಲಿ ಆಗಿದ್ದರೆ  ನಿಮ್ಮ ಚರ್ಮ ಆಯ್ಲಿ ಆಗಿದ್ದರೆ, ಬೆವರು ಸಹ ಹೆಚ್ಚಿದ್ದರೆ, ಆಗ ಟೂ ವೇ ಕೇಕ್‌ ಬಳಸುವುದೊಂದೇ ದಾರಿ. ಏಕೆಂದರೆ ಇದು ಒಂದು ವಾಟರ್‌ ಪ್ರೂಫ್‌ ಬೇಸ್‌ ಆಗಿದೆ. ಇದನ್ನು ಹೊರತುಪಡಿಸಿ ನೀವು ನಿಮ್ಮ ಚರ್ಮಕ್ಕಾಗಿ ಪ್ಯಾನ್‌ ಸ್ಟಿಕ್‌ಮೂಸ್‌ ಸಹ ಬಳಸಿಕೊಳ್ಳಬಹುದು. ಮೂಸ್‌ ಮುಖದ ಮೇಲೆ ಹಚ್ಚುತ್ತಿದ್ದಂತೆ ಪೌಡರ್‌ ಫಾರ್ಮ್ನಲ್ಲಿ ಮಾರ್ಪಡುತ್ತದೆ. ಆ ಕಾರಣ ಬೆವರು ಬರುವುದಿಲ್ಲ. ಅದು ಹೆಚ್ಚುವರಿ ಆಯಿಲ್ ‌ರಿಮೂವ್ ‌ಮಾಡಿ ಫೇಸ್‌ಗೆ ಮ್ಯಾಟ್‌ ಫಿನಿಶ್‌ ಹಾಗೂ ಲೈಟ್‌ ಲುಕ್‌ ನೀಡುತ್ತದೆ. ಇದನ್ನು ಅಂಗೈಗೆ ಹಾಕಿಕೊಂಡು, ಸ್ಪಾಂಜ್‌ ಯಾ ಬ್ರಶ್‌ ನೆರವಿನಿಂದ, ಮುಖದ ಮೇಲೆ ಒಂದೇ ಸಮನಾಗಿ ಬರುವಂತೆ ಹಚ್ಚಬೇಕು. ನಿಮ್ಮ ಚರ್ಮ ಹೆಚ್ಚು ಆಯ್ಲಿ ಆಗಿದ್ದರೆ ಯಾವ ಬೇಸಿಗೆಯಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿದ್ದರೆ, ಫೌಂಡೇಶನ್‌ಗಿಂತ ಮೊದಲು ಮುಖದ ಮೇಲೆ ಐಸ್‌ ತೀಡಿರಿ. ಆಯ್ಲಿ ಚರ್ಮದ ಮೇಲೆ ಕಲೆಗಳು ಸ್ಪಷ್ಟ ಕಂಡುಬರುತ್ತವೆ. ಇದನ್ನು ಮರೆಮಾಚಲು ಕನ್ಸೀಲರ್ ಬಳಸಿರಿ. ಕನ್ಸೀಲರ್‌ಫೌಂಡೇಶನ್‌ ಬಳಸಿದ ನಂತರ, ಟ್ರಾನ್ಸ್ ಲೂಸೆಂಟ್‌ ಪೌಡರ್‌ನಿಂದ ಮೇಕಪ್‌ ಸೆಟ್‌ ಮಾಡಿ. ಇದರಿಂದ ಮೇಕಪ್‌ ಬಹಳ ಹೊತ್ತು ಉಳಿಯುತ್ತದೆ ಹಾಗೂ ಹರಡಿಕೊಳ್ಳುವುದಿಲ್ಲ.

ಡ್ರೈ ಸ್ಕಿನ್ಆಗಿದ್ದರೆ

ನಿಮ್ಮದು ಡ್ರೈ ಸ್ಕಿನ್‌ ಆಗಿದ್ದರೆ, ನೀವು ಮೇಕಪ್‌ನಲ್ಲಿ ಹೆಚ್ಚು ಪೌಡರ್‌ ಬಳಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮ ಇನ್ನಷ್ಟು ಹೆಚ್ಚು ಡ್ರೈ ಆದೀತು. ಡ್ರೈ ಸ್ಕಿನ್‌ನವರು ರಿಂಟಿಡ್‌ ಮಾಯಿಶ್ಚರೈಸರ್‌, ಕ್ರೀಂ ಬೇಸ್ಡ್ ಫೌಂಡೇಶನ್‌ ಬಳಸಿಕೊಳ್ಳಬಹುದು. ನಿಮ್ಮದು ನಾರ್ಮಲ್ ಸ್ಕಿನ್‌ ಆಗಿದ್ದರೆ, ನಿಮಗೆ ಫೌಂಡೇಶನ್‌ಕಾಂಪ್ಯಾಕ್ಟ್ ಉತ್ತಮ ಆಪ್ಶನ್ಸ್ ಎನ್ನಬಹುದು.

ಸರಿಯಾದ ಪ್ಯಾಕೇಜ್ಆರಿಸಿ

ಪ್ರೊಫೆಶನ್‌ ಮೇಕಪ್‌ ಆರ್ಟಿಸ್ಟ್ ಹುಡುಕುತ್ತಿದ್ದೀರಾ? ನಿಮ್ಮ ಬಜೆಟ್‌ 15 ಸಾವಿರದಿಂದ 2 ಲಕ್ಷದವರೆಗೂ ಹೊಂದಿಕೊಳ್ಳುವಂತೆ ಆರಿಸಿಕೊಳ್ಳಿ.

ಕೆಲವು ಬ್ರೈಡಲ್ ಪ್ಯಾಕೇಜ್‌ಗಳಲ್ಲಿ ವಧು ಜೊತೆ ಅವಳ ಹತ್ತಿರದ ನೆಂಟರಿಗೂ ಮೇಕಪ್‌ ಮಾಡುವ ಅವಕಾಶವಿದೆ. ವೆಡ್ಡಿಂಗ್‌ ಸೀಸನ್‌ ಆರಂಭಗೊಳ್ಳುತ್ತಿದ್ದಂತೆ, ನಿಮಗೆ ಆನ್‌/ಆಫ್‌ ಲೈನ್‌ಗಳಲ್ಲಿ ಹಲವು ಆಯ್ಕೆಗಳು ಲಭ್ಯವಿರುತ್ತವೆ.

ಎಷ್ಟೋ ಪ್ಯಾಕೇಜ್‌ಗಳಲ್ಲಿ ಮದುವೆಯ ಬೇರೆ ಬೇರೆ ಹಂತಗಳಿಗೂ ಸರ್ವೀಸ್‌ ಲಭ್ಯವಿದೆ. ಅಂದ್ರೆ ಮೆಹಂದಿ, ಸಂಗೀತ, ಮದುವೆ ಮುಹೂರ್ತ, ಆರತಕ್ಷತೆ ಇತ್ಯಾದಿ.

ಮದುವೆಗೆ 2 ವಾರಗಳಿಗೆ ಮೊದಲೇ ಅಗತ್ಯವಾಗಿ ಮೇಕಪ್‌ ಟ್ರಯಲ್ ಮಾಡಿಸಿ. ಇದರಿಂದ ನಿಮಗೂ, ಮೇಕಪ್‌ ಆರ್ಟಿಸ್ಟ್ ಇಬ್ಬರಿಗೂ ಹಲವು ಐಡಿಯಾಗಳು ಹೊಳೆಯುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಸ್ಕಿನ್‌ ಟೋನ್‌ಗೆ ಯಾವ ಮೇಕಪ್‌ ಚೆನ್ನಾಗಿ ಹೊಂದುತ್ತದೆ, ಯಾವ ಲುಕ್ಸ್ ಸೆಟ್‌ ಆಗುತ್ತವೆ ಎಂಬುದು ಸ್ಪಷ್ಟವಾಗುತ್ತದೆ.

ಪ್ರಮೀಳಾ ದೇವಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ