ನಮ್ಮ ದೇಶದಲ್ಲಿ ಸೆಕ್ಸ್ ಮತ್ತು ಆರ್ಗಸಮ್ ಕುರಿತು ಮಾತನಾಡುವಾಗ ಜನ ಬಹಳ ಸಂಕೋಚಕ್ಕೆ ಒಳಗಾಗುತ್ತಾರೆ. ತಾವೇನೋ ಆಡಬಾರದ್ದನ್ನು ಆಡಿಬಿಟ್ಟೆವೇನೋ ಎಂಬಂತೆ ಅದು ಹರಡದಂತೆ ಎಚ್ಚರ ವಹಿಸುತ್ತಾರೆ.
ಅಷ್ಟೆಲ್ಲ ಏಕೆ, ಜನ ತಮ್ಮ ಸಂಗಾತಿಯ ಬಳಿ ಸಹ ಈ ಬಗ್ಗೆ ಚರ್ಚಿಸುವುದಿಲ್ಲ. ಮತ್ತೊಂದು ವಿಚಾರವೆಂದರೆ ಆರ್ಗಸಮ್ ಗೆ ಭಾರತೀಯ ಭಾಷೆಗಳಲ್ಲಿ ಸಾಮಾನ್ಯವಾಗಿ ಪರಮ ತೃಪ್ತಿ ಎಂದೇ ಹೇಳಿಕೊಳ್ಳುತ್ತೇವೆ, ಅಸಲಿಗೆ ಅದು ಅಷ್ಟು ಪರಿಪೂರ್ಣವಲ್ಲ.
ಹೆಂಗಸರು, ಗಂಡಸರು ದೈಹಿಕ ರಚನೆಯಿಂದ ಸಾಕಷ್ಟು ಭಿನ್ನರಾಗಿದ್ದಾರೆ. ಇಬ್ಬರನ್ನೂ ಧರ್ಮ ನಿಯಂತ್ರಿತ ನಮ್ಮ ಸಮಾಜ ಬೇರೆ ಬೇರೆ ದೃಷ್ಟಿಕೋನದಿಂದಲೇ ಅಳೆಯುತ್ತದೆ. ಗಂಡಸರಿಗೆ ಬಾಲ್ಯದಿಂದಲೇ ಎಲ್ಲಾ ವಿಧದಲ್ಲೂ ಮಾಫಿ ಕೊಟ್ಟು ಅವರು ಕಷ್ಟಕ್ಕೆ ಬೀಳದಂತೆ ಅವಕಾಶ ಕಲ್ಪಿಸಿದರೆ, ಹೆಂಗಸರಿಗೆ ಮಾತ್ರ ಬಾಲ್ಯದಿಂದಲೇ ಸಕಲ ಬಂಧನಗಳನ್ನೂ ಬಿಗಿ ಮಾಡಲಾಗುತ್ತದೆ. ಹೆಂಗಸಿರಿಗೆಂದೇ ಹಲವು ಹನ್ನೊಂದು ನಿಯಮ ಕಟ್ಟಳೆ ರೂಪಿಸಿ, ಬಾಲ್ಯದಿಂದ ಯೌವನದ ಗಡಿ ಮುಟ್ಟವವರೆಗೂ, ತಮ್ಮ ದೈಹಿಕ ಬದಲಾವಣೆಗಳ ಕುರಿತು ಅವರು ಎಲ್ಲೂ ತುಟಿ ಪಿಟಕ್ ಎನ್ನದಂತೆ ಸರ್ಪಗಾಲು ಹಾಕಲಾಗುತ್ತದೆ.
ಗಂಡಸಿಗೆ ಯಾವುದು ಸರಿಯೋ ಹೆಂಗಸರಿಗೆ ಅದೇಕೆ ತಪ್ಪು? : ಒಬ್ಬ ಹೆಂಗಸು ಗಂಡಸಿನ ಸಂಪರ್ಕ ಹೊಂದದೆ, ದೈಹಿಕ ಸುಖ ಪಡೆದುಕೊಳ್ಳುವಲ್ಲಿ ಸಮರ್ಥಳಾದರೆ, ಆ ವಿಷಯವನ್ನು ನಮ್ಮ ಸಮಾಜ ಎಂದೂ ಒಪ್ಪುವುದಿಲ್ಲ. ಇಲ್ಲಿ ನಾವು ಹೇಳುತ್ತಿರುವ ವಿಷಯ ಮಾಸ್ಟರ್ ಬೇಶನ್ ಅಥವಾ ಹಸ್ತಮೈಥುನದ ಕುರಿತಾದುದು. ಸಾಮಾನ್ಯವಾಗಿ ಗಂಡು ಮಕ್ಕಳು 12-15 ವರ್ಷದೊಳಗೆ ಇದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಆದರೆ ಹೆಣ್ಣುಮಕ್ಕಳು ಪುಷ್ಪವತಿಯರಾದ ಎಷ್ಟೋ ಕಾಲದ ನಂತರ ಈ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಗಂಡಸಿನ ನೆರವಿಲ್ಲದೆ ಹೆಣ್ಣು ಈ ರೀತಿ ದೈಹಿಕ ಸುಖ ಪಡೆಯುತ್ತಾಳೆಂದರೆ, ಹಾಗೆ ಹೇಳಿದಳು ತನ್ನ ಗೆಳತಿಯರ ಗುಂಪಿನಿಂದ ದೂರವಾಗುತ್ತಾಳೆ. ಬೇರೆ ಹುಡುಗಿಯರಿಗೇ ಅದು ಇಷ್ಟವಾಗುವುದಿಲ್ಲ. ನಮ್ಮ ಸಮಾಜದಲ್ಲಿ ಗಂಡಸಿಗೆ ಮಾತ್ರ ಹಸ್ತಮೈಥುನ ಸರಿಯೇ ಹೊರತು ಹೆಂಗಸರಿಗೆ ಎಂದೂ ಅಲ್ಲ.
ಅದೇ ರೀತಿ ಹಸ್ತಮೈಥುನದ ಕುರಿತು ಮಾತನಾಡುವುದು ಗಂಡಸರಿಗೆ ಬಲು ಸಾಧಾರಣ ವಿಷಯ. ಆದರೆ ಹೆಣ್ಣು ಆ ಬಗ್ಗೆ ಬಾಯಿ ಬಿಟ್ಟರೆ ಅವಳನ್ನು ಎಲ್ಲರೂ ನುಂಗುವಂತೆ ನೋಡುವವರೇ! ಆದರೆ ಹೆಣ್ಣುಮಕ್ಕಳು ಇಂಥ ವಿಷಯ, ಅದರ ಲಾಭ ಹಾನಿಗಳ ಬಗ್ಗೆ ಮಾತನಾಡಿಕೊಂಡರೆ ತಪ್ಪೇನಿದೆ? ಗಂಡಸರಿಗೆ ಇದು ಎಷ್ಟು ಸುಲಭವಾಗಿ ಓಕೆ ಆಗುತ್ತದೋ ಹೆಂಗಸರಿಗೆ ಏಕಿಲ್ಲ? ಅವರಿಗೂ ಅದು ಓಕೆ ಆಗಲೇಬೇಕು.
ಹೆಣ್ಣುಮಕ್ಕಳು ತಮ್ಮ ಅಂತರಂಗದ ವಿಷಯಾಗಿ ಅಂದರೆ ಬ್ರಾ, ಮುಟ್ಟಿನ ಕುರಿತಾಗಿ ಗೆಳತಿಯರಲ್ಲಿ ಹೇಳಿಕೊಳ್ಳುವಾಗ ಸಾವಿರ ಸಲ ಯೋಚಿಸುತ್ತಾರೆ. ಪಬ್ಲಿಕ್ ಆಗಿ ಇಂಥ ವಿಚಾರಗಳನ್ನು ಯಾರೂ ಮಾತನಾಡುವುದಿಲ್ಲ, ಕೇಳಿಸಿಕೊಂಡರು ಟ್ರೋಲ್ ಮಾಡದೆ ವ್ಯಂಗ್ಯವಾಡದೆ ಇರುವುದಿಲ್ಲ. ಅಂಥದರಲ್ಲಿ……. ಹೆಣ್ಣು ಮಕ್ಕಳ ಆರ್ಗಸಮ್ ಕುರಿತು ಮಾತನಾಡುವ ಧೈರ್ಯ ಯಾರಿಗಿದ್ದೀತು?
ಹಿಂದಿ ಚಿತ್ರಗಳಾದ `ವೀರೆ ದಿ ವೆಡ್ಡಿಂಗ್, ಲಸ್ಟ್ ಸ್ಟೋರೀಸ್’ನಲ್ಲಿ ಈ ಕುರಿತು, ಮುಖ್ಯವಾಗಿ ಹೆಣ್ಣಿನ ದೈಹಿಕ ಸುಖದ ವಿಷಯವಾಗಿ ಒಂದಿಷ್ಟು ಬೆಳಕು ಚೆಲ್ಲಲಾಗಿದೆ. ದಕ್ಷಿಣದ ಚಿತ್ರಗಳಲ್ಲಿ ಮಾತ್ರ ಈ ಕುರಿತಾಗಿ ಮಡಿವಂತಿಕೆ ಇನ್ನೂ ಬಿಟ್ಟಿಲ್ಲ. ಇಲ್ಲಿ ಚರ್ಚಿಸಿರುವ ವಿಷಯವನ್ನು ಭಾರತೀಯ ಗಂಡಸರು ಆರೋಗ್ಯಕರವಾಗಿ, ಪಾಸಿಟಿವ್ ಆಗಿ ತೆಗೆದುಕೊಳ್ಳದೆ ಫೇಸ್‌ಬುಕ್‌ನಲ್ಲಿ ಈ ಚಿತ್ರ, ಇದರ ನಾಯಕಿಯರನ್ನು ಬಾಯಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ. ಇವರೆಂಥ ವಿದ್ಯಾಂತರು?
ಗಂಡಸರಿಗೆ ಇದು ಗೊತ್ತೇ ಇಲ್ಲ : ಬಹುತೇಕ ಭಾರತೀಯ ಗಂಡಸರಿಗೆ, ಆರ್ಗಸಮ್ ತಮಗೆಷ್ಟು ಮುಖ್ಯವೋ ಹೆಂಗಸರಿಗೂ ಅಷ್ಟೇ ಮುಖ್ಯ ಎನ್ನುವ ಅರಿವೇ ಇರುವುದಿಲ್ಲ. ಅಸಲಿಗೆ, ಸಂಭೋಗದ ಸಮಯದಲ್ಲಿ ಗಂಡಸರಿಗೆ ಈ ಬಗ್ಗೆ ಎಳ್ಳಷ್ಟೂ ತಿಳಿವಳಿಕೆ ಆಗದೆ ಇರುವುದು, ಪುರುಷ ಪ್ರಧಾನ ಸಮಾಜದ ಮೌಢ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಕುರಿತಾಗಿ ಡಾ. ವಿಮಲಾ ಜೈನ್ ಹೇಳುತ್ತಾರೆ, “ಭಾರತೀಯ ಗಂಡಸರು ಹುಡುಗಿಯ ಹಸ್ತಮೈಥುನದ ಬಗ್ಗೆ ಜೀರ್ಣಿಸಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಅಧಿಕಾರ ಅಹಂ, ಗಂಡೆಂಬ ಧಿಮಾಕಿಗೆ ಇದು ಮಹಾ ಚಾಲೆಂಜ್ ಎನಿಸುತ್ತದೆ. ಆದರೆ ಈ ಕುರಿತಾಗಿ ನಡೆದ ಎಷ್ಟೋ ಸಮೀಕ್ಷೆಗಳಲ್ಲಿ ಕಂಡುಬಂದಂತೆ ವಿಶ್ವದ 62% ಹೆಂಗಸರಿಗೆ ಹಸ್ತಮೈಥುನದಿಂದ ಮಾತ್ರ ನೈಜ ಆರ್ಗಸಮ್ ದೊರಕಿದೆಯೇ ಹೊರತು ಪಾರ್ಟ್‌ನರ್ ಜೊತೆಗಿನ ಸಾಂಗತ್ಯದಿಂದ ಅಲ್ಲ!
“ಇದೂ ಸಹ ಹಸಿವು, ಬಾಯಾರಿಕೆ ತರಹ ದೇಹದ ಒಂದು ಸಹಜ ಪ್ರಕ್ರಿಯೆ. ಹೆಣ್ಣಿನ ಆರೋಗ್ಯಕ್ಕೆ ಇದರಿಂದ ಹಾನಿ ಇಲ್ಲ. ಆದರೆ ನಮ್ಮ ಗಂಡಸರಿಗೆ ಇದು ಸರಿಯಾಗಿ ಅರ್ಥವಾಗಬೇಕಲ್ಲ…..? ಆರ್ಗಸಮ್ ಎಂಬುದೇನಿದ್ದರೂ ಗಂಡಿನ ಕೈವಶ, ಗಂಡು ತನ್ನ ಗಂಡಸ್ತನ ತೋರಿಸಿದಾಗ ಮಾತ್ರ ಹೆಣ್ಣು ತೃಪ್ತಳಾಗಬೇಕೇ ಹೊರತು, ಅವಳಿಗೇ ಆ ಪೂರ್ಣ ಸ್ವಾತಂತ್ರ್ಯ ಕೊಟ್ಟುಬಿಟ್ಟರೆ ತನ್ನ ಅಗತ್ಯವಾದರೂ ಏನು? ಆದ್ದರಿಂದ ಹೆಣ್ಣು ಈ ಕುರಿತು ಮಾತನಾಡುವ ಹಾಗಿಲ್ಲ, ಇದೊಂದು ಸಾಮಾಜಿಕ ಪಿಡುಗೇ ಸರಿ.”
ಇಂಥ ವಿಷಯಗಳು ಚರ್ಚೆ ಆಗುವಾಗ ಲೈಂಗಿಕ ಶಿಕ್ಷಣದ ಕುರಿತಾಗಿಯೂ ಓಪನ್ ಮೈಂಡೆಡ್ ಆಗಿ ಮಾತನಾಡಬೇಕು. ಆಗ ಮಾತ್ರ ಒಂದು ಸ್ವಸ್ಥ, ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ. ಮನೆಗಳಲ್ಲಿ ಹೆಂಗಸರು ಸದಾ ಖಿನ್ನತೆಗೆ ಒಳಗಾಗಿ ಟೆನ್ಶನ್‌ನಲ್ಲಿ ಇರಬಾರದು. ತಾವು ಸದಾ ಹಿಂದುಳಿದವರು ಹಾಗೂ ಯಾವ ರಿಸ್ಕ್ ತೆಗೆದುಕೊಳ್ಳಲಿಕ್ಕೂ ಆಗದು ಎಂಬುದಕ್ಕಾಗಿ ಇಂಥ ವಿಷಯಗಳನ್ನು, ಕನಿಷ್ಠ ಹೆಣ್ಣುಮಕ್ಕಳು ತಮ್ಮ ತಮ್ಮಲ್ಲೇ ಮುಕ್ತವಾಗಿ ಮಾತನಾಡಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು.
– ಡಾ. ಸ್ನೇಹಾ