ಆ ದಿನ ಸೋಮಶೇಖರ್‌ ನಿಧಾನವಾಗಿ ಸ್ನೇಹಾ ರಾವ್ ಹಿಂದೆ ಬಂದು ಪಿಸುಗುಟ್ಟಿದ, ``ಇಂದು ಲಂಚ್‌ಗೆ ನನ್ನ ಕ್ಯಾಬಿನ್‌ಗೇ ಬಂದುಬಿಡು.''

ಸ್ನೇಹಾ ಒಮ್ಮೆ ಅವನನ್ನೇ ದುರುಗುಟ್ಟಿ ನೋಡಿದಳು. ಮತ್ತೊಂದು ಕ್ಷಣದಲ್ಲಿ ಇಡೀ ಸ್ಟಾಫ್‌ ಮುಂದೆ ಹೀನಾಮಾನವಾಗಿ ಕೂಗಾಡಿದಳು, ``ನಿನಗೆಷ್ಟು ಧೈರ್ಯ..... ನೀನು ನನ್ನನ್ನು ಏನೆಂದು ತಿಳಿದಿರುವೆ.... ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಂಡಿದ್ದೀಯಾ? ನಾನು ಈ ಆಫೀಸಿಗೆ ಸೇರಿದಾಗಿನಿಂದ ಸದಾ ನನ್ನನ್ನೇ ಗೂಬೆ ತರಹ ನೋಡ್ತಾ ಇರ್ತೀಯಲ್ಲ...... ಹಿಂದೆಂದೂ ಹುಡುಗಿಯನ್ನು ನೋಡಿದ್ದೇ ಇಲ್ಲವೇ? ಲೈಂಗಿಕ ಕಿರುಕುಳದ ಕೇಸ್‌ ಬುಕ್‌ ಮಾಡಿ ನಿನ್ನ ಒಳಗಡೆ ಹಾಕಿಸಿಬಿಡ್ತೀನಿ..... ಏನಂದುಕೊಂಡಿದ್ದೀಯಾ ನನ್ನನ್ನು?''

ಆ ದಿನ ಎಲ್ಲರ ಮುಂದಾದ ಅವಮಾನದಿಂದ ಸೋಮಶೇಖರ್‌ ಆಫೀಸಿಗೆ 4 ದಿನ ರಜಾ ಹಾಕಿ ಯಾರಿಗೂ ಮುಖ ತೋರಿಸದೆ ಉಳಿದುಬಿಟ್ಟ. ಅಂತೂ ಬಂದ ಮೇಲೆ ಸದಾ ತನ್ನ ಕ್ಯಾಬಿನ್‌ನಲ್ಲೇ ಇರುತ್ತಿದ್ದ. ಅವಮಾನ, ತಿರಸ್ಕಾರ, ನಾಚಿಕೆ, ಸಂಕೋಚದ ಕಾರಣ ಅವನ ಮನದಲ್ಲಿ ಮೂಡಿದ್ದ ಪ್ರೇಮದ ಬಳ್ಳಿ ಅಲ್ಲಿಯೇ ಒಣಗಿಹೋಯಿತು.

ತಾನು ಮಾಡಿದ್ದರಲ್ಲಿ ಏನು ತಪ್ಪಾಯಿತು? ಬಹುಶಃ ಅವಸರಪಟ್ಟು ಹಾಗೆ ಹೇಳಬಾರದಿತ್ತೇನೋ...? ಹೀಗೆ ಅನೇಕ ಪ್ರಶ್ನೆಗಳು ಅವನ ತಲೆ ತಿನ್ನುತ್ತಿದ್ದ. ಕೆಲಸದಲ್ಲಿ ಹಿಂದಿನ ಶ್ರದ್ಧೆ, ತಲ್ಲೀನತೆ ಇಲ್ಲದೆ ಹೋಯಿತು. ಅತ್ತ ಬಾಸ್‌ಗೂ ವಿಷಯ ಗೊತ್ತಾದ ಮೇಲೆ ಕೆಲಸಕ್ಕೆ ಕುತ್ತು ಬರುವುದೊಂದೇ ಬಾಕಿ ಆಗಿತ್ತು.

ಹಿಂದೆಲ್ಲ 3-4 ಗೆಳೆಯರು ಅವನ ಕ್ಯಾಬಿನ್‌ಗೆ ಬಂದು ಒಟ್ಟಿಗೆ ಊಟ ಮಾಡುತ್ತಿದ್ದರು ಈಗ ಯಾರೂ ಬರುತ್ತಿಲ್ಲ. ಅವರಿಗೆ ಇವನು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಯಾರೂ ಕಿವಿಗೆ ಹಾಕಿಕೊಳ್ಳಲು ಸಿದ್ಧರಿಲ್ಲ. ಹಿಂದೆಲ್ಲ ಅವನು ಆಗಾಗ ಕದ್ದುಮುಚ್ಚಿ ಸ್ನೇಹಾಳನ್ನು ನೋಡುತ್ತಿದ್ದ, ಈಗ ಇಡೀ ಆಫೀಸ್‌ ಅವನತ್ತ ಕೆಕ್ಕರಿಸಿಕೊಂಡು ನೋಡುತ್ತದೆ.

ಅಸಲಿನ ಸಂಗತಿ ಎಂದರೆ ಸ್ನೇಹಾ ಆ ಆಫೀಸಿಗೆ ಬಂದ ಮೊದಲ ದಿನದಿಂದಲೇ ಸೋಮಶೇಖರ್‌ ಅವಳ ಪ್ರೇಮದ ಬಲೆಯಲ್ಲಿ ಬಿದ್ದು, ಸದಾ ಅವಳನ್ನು ಆರಾಧನಾ ಭಾವದಿಂದ ಕದ್ದುಮುಚ್ಚಿ ದಿಟ್ಟಿಸುತ್ತಿದ್ದ. ಸ್ನೇಹಾ ಆ ಆಫೀಸ್‌ ಸೇರಿ ಆಗಷ್ಟೇ ತಿಂಗಳಾಗಿತ್ತು. ಅವಳು ನೋಡಲು ಬಹಳ ಸುಂದರವಾಗಿದ್ದಳು. ಕೆಲಸದಲ್ಲೂ ಬಲು ಚೂಟಿ. ಸೋಮುವಿಗೆ ಅವಳನ್ನು ದಿನಾ ನೋಡಿ ನೋಡಿ ಮನಸ್ಸು ಸೋತಿತ್ತು. ತಾನು ಮದುವೆ ಅಂತ ಆದರೆ ಅದು ಸ್ನೇಹಾಳನ್ನು ಮಾತ್ರ ಎಂದು ಮನದಲ್ಲೇ ನಿರ್ಧರಿಸಿದ. ಹಗಲೂ ರಾತ್ರಿ ಅವಳನ್ನೇ ನೆನೆಯುತ್ತಾ ಹಪಹಪಿಸುತ್ತಿದ್ದ. ಆದರೆ ಅವಳೂ ಸಹ ತನ್ನನ್ನು ಇಷ್ಟಪಡುತ್ತಾಳೋ ಇಲ್ಲವೋ ಎಂದು ತಿಳಿಯಲು ಯತ್ನಿಸಲೇ ಇಲ್ಲ.

ಸ್ನೇಹಾ ಯಾರೊಂದಿಗೂ ಹೆಚ್ಚು ಮಾತನಾಡದ ಮಿತಭಾಷಿ. ಯಾವಾಗಲೂ ತನ್ನ ಕೆಲಸದಲ್ಲೇ ಬಿಝಿ ಇರುತ್ತಿದ್ದಳು. ಆದರೆ ಸೋಮು ತನ್ನನ್ನೇ ಕದ್ದುಮುಚ್ಚಿ ನೋಡುತ್ತಿರುತ್ತಾನೆ ಎಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅಕಸ್ಮಾತ್‌ ಅವನು ಎದುರಿಗೆ ಸಿಕ್ಕಾಗ ದೃಷ್ಟಿ ತಪ್ಪಿಸುತ್ತಿದ್ದಳು. ಇದನ್ನು ಸೋಮು ಅವಳ ನಾಚಿಕೆಯ ಗುಣ ಎಂದು ತಿಳಿಯುತ್ತಿದ್ದ. ಎಷ್ಟೋ ಸಲ ಅವನು ಕಾರಣ ಇರಲಿ ಬಿಡಲಿ, ತನ್ನ ಕ್ಯಾಬಿನ್‌ನಿಂದ ಹೊರಬಂದು ಕೆಲಸ ಇರಲಿ ಬಿಡಲಿ, ಅವಳ ಟೇಬಲ್‌ವರೆಗೂ ಬಂದು ಫೈಲ್ ‌ಹಿಡಿದುಕೊಂಡು ಹೋಗಿ ಅಡ್ಡಾಡುತ್ತಿದ್ದ. ಆ ದಿನ ಅವಕಾಶ ಸಿಕ್ಕಿದ ತಕ್ಷಣ ಲಂಚ್‌ಗೆ ಆಫರ್‌ ಮಾಡಿದ. ಆಗಲೇ ಅವನಿಗೆ ಸ್ನೇಹಾಳ ಅಸಲಿ ರೂಪ ಗೊತ್ತಾಗಿದ್ದು. ತನ್ನ ಬಗ್ಗೆ ಅವಳು ಎಷ್ಟು ಕೋಪಗೊಂಡಿದ್ದಾಳೆ ಎಂದು ತಿಳಿಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ