ನೀವು ನಿಮ್ಮ ಸಂಗಾತಿಗೆ ಮೋಸ ಮಾಡಿರುವಿರಿ. ಅದಕ್ಕೆ ಕಾರಣ ಒನ್‌ ನೈಟ್‌ ಸ್ಟ್ಯಾಂಡ್‌ ಆಗಬಹುದು ಅಥವಾ ಹೆಚ್ಚು ಡ್ರಿಂಕ್ಸ್ ಮಾಡಿದ ಬಳಿಕ ತೆಗೆದುಕೊಂಡ ನಿರ್ಧಾರ ಆಗಿರಬಹುದು ಅಥವಾ ಯಾರಾದರೂ ಸಹೋದ್ಯೋಗಿ ಜೊತೆ ಅಫೇರ್‌ನ ಸುಳಿಗೆ ಸಿಲುಕಿ ಸಂಗಾತಿಗೆ ಮೋಸ ಮಾಡಿರಬಹುದು, ಮೋಸವನ್ನೇನೊ ಮಾಡಿಬಿಟ್ಟಿರಿ. ಈಗ ಏಳುವ ಪ್ರಶ್ನೆಯೆಂದರೆ, ನಿಮಗೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ಆಸಕ್ತಿ ಇದೆಯಾ? ಆಸಕ್ತಿ ಇದೆ ಎಂದಾದಲ್ಲಿ ಏನು ಮಾಡಬೇಕು?

ಸತ್ಯದ ಮುಖಾಮುಖಿ

ಹೆಚ್ಚಿನ ಜನ ನೀಡುವ ಸಲಹೆ ಏನೆಂದರೆ, ನೀವು ನಿಮ್ಮ ತಪ್ಪಿನ ಬಗ್ಗೆ ಸಂಗಾತಿಗೆ ಸತ್ಯ ಹೇಳುವುದರ ಮೂಲಕ ಮನವರಿಕೆ ಮಾಡಿಕೊಡಿ ಎನ್ನುವುದಾಗಿರುತ್ತದೆ. ಆದರೆ ಕೆಲವು ಮ್ಯಾರೇಜ್‌ ಕೌನ್ಸೆಲರ್‌ಗಳು ಹಾಗೂ ಸೆಕ್ಸ್ ಥೆರಪಿಸ್ಟ್ ಗಳು ಹೇಳುವುದೇ ಬೇರೆ. `ಆನೆಸ್ಟಿ ಈಸ್‌ ದಿ ಬೆಸ್ಟ್ ಪಾಲಿಸಿ'ಯ ನೀತಿ ರಿಲೇಶನ್‌ಶಿಪ್‌ ಬಾಬತ್ತಿನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸುವುದಿಲ್ಲ.

ನ್ಯೂಯಾರ್ಕ್‌ನ ಸೆಕ್ಸ್ ಥೆರಪಿಸ್ಟ್ ಅಂಡ್‌ ಮ್ಯಾರೇಜ್‌ ಕೌನ್ಸೆಲರ್‌ ಮೆಗನ್‌ ಫ್ಲೆಮಿರ್‌ ಪ್ರಕಾರ, ``ನನ್ನ ಸಲಹೆ ನಿಮಗೆ ವಿವಾದಾತ್ಮಕ ಎನಿಸಬಹುದು. ಆದರೆ ನನ್ನ ಪ್ರಾಮಾಣಿಕ ಸಲಹೆ ಏನೆಂದರೆ, ನೀವು ನಿಮ್ಮ ಮೋಸದ ಬಗ್ಗೆ ಸಂಗಾತಿಯ ಮುಂದೆ ಹೇಳದೇ ಇರುವುದೇ ಒಳ್ಳೆಯದು.''

ದುಬಾರಿಯಾಗುವ ಕನ್ಛೆಶನ್

ಮೆಗನ್‌ ಹೇಳುತ್ತಾರೆ, ``ನೀವು ಪ್ರಾಮಾಣಿಕತೆಯಿಂದ ಸತ್ಯವನ್ನೇ ಹೇಳಿ ಅಪರಾಧ ಪ್ರಜ್ಞೆಯಿಂದ ಪಾರಾಗಬಹುದು. ಸತ್ಯ ಹೇಳುವುದರಿಂದ ಸಂಗಾತಿ ನಿಮ್ಮನ್ನು ಕ್ಷಮಿಸಿ ಬಿಡುತ್ತಾಳೆ/ನೆ ಎಂದು ಭಾವಿಸಬಹುದು. ಆದರೆ ನಿಮ್ಮ ಈ ಸತ್ಯ ನುಡಿಗಳು ಆಕೆಯ/ಆತನ ಮುಂದೆ ನಕಾರಾತ್ಮಕ ಭಾವನೆಗಳ ಬೆಟ್ಟವನ್ನು ಮುಂದೆ ತಂದು ನಿಲ್ಲಿಸಬಹುದು. ``ಸಿಡಿಮಿಡಿತನ, ಸಂದೇಹ, ಕ್ರೋಧ, ತಿರಸ್ಕಾರದಂತಹ ಭಾವನೆ ಅವರನ್ನು ಸುತ್ತುವರಿಯುತ್ತದೆ. ಇವೆಲ್ಲ ಸೇರಿ ನಿಮ್ಮಿಬ್ಬರ ನಡುವಿನ ಸಂಬಂಧದ ಅಡಿಪಾಯವನ್ನೇ ಅಲ್ಲಾಡಿಸಿಬಿಡುತ್ತದೆ. ಕನ್ಛೆಶನ್‌ ಬಳಿಕ ನಿಮ್ಮ ಸಂಗಾತಿ ನಿಮ್ಮ ಮೇಲೆ ನಂಬಿಕೆ ಇಡುವುದಿಲ್ಲ ಎನ್ನುವುದು ನಿಜ.''

ರಿಲೇಶನ್ಶಿಪ್ಕ್ರೈಸಿಸ್

ನೀವು ನಿಜವಾಗಿಯೂ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುತ್ತಿದ್ದಲ್ಲಿ, ಎಲ್ಲಕ್ಕೂ ಮುಂಚೆ ನೀವು ಅವರಿಗೆ ಏಕೆ ಮೋಸ ಮಾಡಿದಿರಿ ಎನ್ನುವುದನ್ನು ಯೋಚಿಸಿ. ಅಂದರೆ ಅಂತಹ ಸ್ಥಿತಿ ಏಕೆ ಬಂತು? ಈ ಪ್ರಶ್ನೆಗೆ ಉತ್ತರ ಹುಡುಕಲು ನಿಮ್ಮ ಸಂಬಂಧದ ಹಲವು ಕ್ಲಿಷ್ಟಕರ ಘಟ್ಟಗಳನ್ನು ತಡಕಾಡಬೇಕಾಗುತ್ತದೆ. ಆದರೆ ಸಮಸ್ಯೆಯ ಮೂಲ ತಲುಪಲು ಇದು ಅತ್ಯವಶ್ಯ. ಈ ಕುರಿತಂತೆ ಡಾ. ಫ್ಲೆಮಿಂಗೊ ತಮ್ಮ ವಿಚಾರ ತಿಳಿಸುತ್ತಾರೆ. ಈ ತೆರನಾದ ಪ್ರಶ್ನೆ ಹೊತ್ತು ಅವರ ಬಳಿ ಅನೇಕರು ಬರುತ್ತಾರೆ. ಅವರ ಮೋಸದ ಹಿಂದೆ ಸಾಮಾನ್ಯವಾಗಿ ಸಂಗಾತಿಯಿಂದ ತಮ್ಮ ಅವಶ್ಯಕತೆ ಈಡೇರುತ್ತಿರುವುದಿಲ್ಲ ಎಂಬುದೇ ಆಗಿರುತ್ತದೆ. ಅದು ಲೈಂಗಿಕ ಅವಶ್ಯಕತೆ ಅಥವಾ ಭಾವನಾತ್ಮಕ ಆಗಿರಬಹುದು. ಅವರು ತಮ್ಮ ಆಪ್ತರಿಂದ ನಿಕಟವರ್ತಿ ಸ್ನೇಹಿತರಿಂದ ಸಲಹೆ ಪಡೆದು ಅದನ್ನು ಬಗೆಹರಿಸಿಕೊಳ್ಳಬಹುದು. ಅದರ ಬದಲು ಅವರು ಮೋಸದ ಆಪ್ಶನ್‌ಆಯ್ಕೆ ಮಾಡಿಕೊಂಡರು.

ಅಂದಹಾಗೆ ಇದು ರಿಲೇಶನ್‌ಶಿಪ್‌ ಕ್ರೈಸಿಸ್‌ನ ಸ್ಥಿತಿ. ಇಲ್ಲಿ ದಂಪತಿಗಳ ದಾಂಪತ್ಯ ಸಂಕಷ್ಟಕ್ಕೆ ಸಿಲುಕಿರುತ್ತದೆ. ಅವರು ಈ ಸಂಕಷ್ಟವನ್ನು ಬಗೆಹರಿಸಿಕೊಳ್ಳುವ ಬದಲು ಇನ್ನೊಬ್ಬ ಸಂಗಾತಿಯ ಬಾಹುಗಳಲ್ಲಿ ಸೇರಿಕೊಳ್ಳಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ತಮ್ಮ ಸಂಬಂಧದ ಅಡಿಪಾಯ ಗಟ್ಟಿಗೊಳಿಸುವ ಅವಕಾಶವನ್ನು ಕಳೆದುಕೊಂಡುಬಿಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ