ಸುಂದರ ಪತ್ನಿ ಮತ್ತು ಮುದ್ದಾದ ಮಗಳಿದ್ದರೂ ಆನಂದನಿಗೆ ಎದುರು ಮನೆಯ ಶಾಲಿನಿಯೊಂದಿಗೆ ಯಾವಾಗ ಮತ್ತು ಹೇಗೆ ಸಂಬಂಧ ಬೆಳೆಯಿತೆಂದು ತಿಳಿಯಲೇ ಇಲ್ಲ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಈ ಸಂಬಂಧದ ಬಗ್ಗೆ ಎರಡೂ ಮನೆಯವರಿಗೆ ಅರಿವಿಲ್ಲ. ಎರಡು ಮಕ್ಕಳ ತಾಯಿಯಾದ ಶಾಲಿನಿ ಈಗ ಗರ್ಭಿಣಿಯಾಗಿದ್ದಾಳೆ. ಹುಟ್ಟಲಿರುವ ಮಗು ಅವಳ ಪತಿಯದಲ್ಲ, ಆನಂದನದು. ಆನಂದನಿಗೆ ಈ ವಿಷಯ ತಿಳಿದಾಗಿನಿಂದ ಶಾಲಿನಿಯ ಮೇಲಿನ ಅವನ ಮೋಹ ಮತ್ತೂ ಹೆಚ್ಚಾಗಿದೆ.  ಈಗಂತೂ ಅವನು ಶಾಲಿನಿಗಾಗಿ ಬೆಲೆಬಾಳುವ ಉಡುಗೊರೆಗಳು, ಬರಲಿರುವ ಮಗುವಿಗಾಗಿ ಬಟ್ಟೆ ಮತ್ತು ಆಟಿಕೆಗಳನ್ನೂ ಕೊಂಡು ತರತೊಡಗಿದ್ದಾನೆ.

ನಳಿನಾಳಿಗೆ ತನ್ನ ಪತಿ ಆನಂದನ ಈ ವಿವಾಹೇತರ ಸಂಬಂಧದ ಬಗ್ಗೆ ತಿಳಿದಿಲ್ಲದಿದ್ದರೂ, ಅವನ ವ್ಯವಹಾರದಲ್ಲಿನ ಬದಲಾವಣೆಯನ್ನು ಗಮನಿಸಿದ್ದಳು. ಆ ಬಗ್ಗೆ ಕೇಳಿದಾಗ ಅವನು ನಕ್ಕು ಮಾತು ಮರೆಸುತ್ತಿದ್ದ. ಅಕೌಂಟ್‌ನಿಂದ ತೆಗೆಯಲ್ಪಡುತ್ತಿದ್ದ ಹಣದ ಬಗ್ಗೆ ವಿಚಾರಿಸಿದರೆ ಇತರೆ ಖರ್ಚಿನ ಲೆಕ್ಕ ಹೇಳುತ್ತಿದ್ದ.

ನಳಿನಾ ಡಾಕ್ಟರ್‌. ಹಗಲಿನಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಾಯಂಕಾಲ ಒಂದು ನರ್ಸಿಂಗ್‌ ಹೋಮ್ ನಲ್ಲಿ  ರೋಗಿಗಳಿಗೆ ಸಂದರ್ಶನ ನೀಡುತ್ತಿದ್ದಳು. ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟರೆ ರಾತ್ರಿ 7-8 ಗಂಟೆಗೆ ಮನೆ ಸೇರಲು ಸಾಧ್ಯವಾಗುತ್ತಿತ್ತು. ಹೀಗಾಗಿ ಮನೆಯಲ್ಲಿ ಹೆಚ್ಚು ಸಮಯ ಕಳೆಯಲಾಗುತ್ತಿರಲಿಲ್ಲ. ಪತಿಯ ನಡವಳಿಕೆಯ ಬದಲಾವಣೆಯನ್ನು ಗಮನಿಸಿದರೂ ಅದನ್ನು ಪರೀಕ್ಷಿಸಿಲು ಅವಳಿಗೆ ಸಮಯವಿರಲಿಲ್ಲ. ಅವಳಿಗೆ ಒಳ್ಳೆಯ ಉದ್ಯೋಗವಿದ್ದು, ಅವಳ ಸಂಪಾದನೆಯಿಂದಲೇ ಮನೆ ನಡೆಯುತ್ತಿತ್ತೆಂದು ಹೇಳಬಹುದು. ಆದರೆ ಪತಿ ಮತ್ತು ಮಗಳಿಗೆ ಹೆಚ್ಚು ಸಮಯ ನೀಡಲು ಅವಳಿಂದಾಗುತ್ತಿರಲಿಲ್ಲ.

ಆನಂದ್‌ ಶೇರ್‌ ಮಾರ್ಕೆಟ್‌ಗೆ ಏಜೆಂಟ್‌ ಕೆಲಸ ಮಾಡುತ್ತಿದ್ದ. ಅವನು ಮನೆಯಲ್ಲಿಯೇ ಕುಳಿತು ಮೊಬೈಲ್ ಫೋನ್‌ ಮೂಲಕ ಈ ಕೆಲಸ ನಿರ್ವಹಿಸುತ್ತಿದ್ದ. ಹೀಗಾಗಿ ಅವನ ಹೆಚ್ಚು ಸಮಯವೆಲ್ಲ ಮನೆಯಲ್ಲಿಯೇ ಕಳೆಯುತ್ತಿತ್ತು. ಮನೆ ಮತ್ತು ಮಗಳ ಜವಾಬ್ದಾರಿಯೆಲ್ಲ ಅವನ ಮೇಲೇ ಇತ್ತು. ಮಗಳು ಶಾಲೆಗೆ ಹೋದ ನಂತರ ಅವನು ಮನೆಯಲ್ಲಿ ಒಬ್ಬನೇ ಇರುತ್ತಿದ್ದ. ಇಂತಹ ಒಂಟಿತನದ ಸಮಯವೇ ಅವನಿಗೆ ಶಾಲಿನಿಯ ಪರಿಚಯ ಮಾಡಿಸಿತು. ಪರಿಚಯ ಸ್ನೇಹಕ್ಕೆ ತಿರುಗಿ ಕಡೆಗೆ ದೈಹಿಕ ಸಂಬಂಧದವರೆಗೂ ತಲುಪಿತು.

ಅತ್ತ ಶಾಲಿನಿಯ ಪತಿ ಉದ್ಯೋಗ ನಿಮಿತ್ತ ಹೆಚ್ಚು ಟೂರ್‌ ಮಾಡುತ್ತಿದ್ದುದರಿಂದ ಅವಳೂ ಮನೆಯಲ್ಲಿ ಒಬ್ಬಳೇ ಆಗುತ್ತಿದ್ದಳು. ಅವಳ  8 ಮತ್ತು 6 ವರ್ಷದ ಮಕ್ಕಳಿಬ್ಬರೂ ಶಾಲೆಗೆ ಹೋಗಿ ನಂತರ ಟ್ಯೂಶನ್‌ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು.

ಶಾಲಿನಿ ಮತ್ತು ಆನಂದ್‌ ಮಧ್ಯಾಹ್ನದ ಹೊತ್ತಿನಲ್ಲಿ ಆಗಾಗ ಸೇರುತ್ತಿದ್ದರು. ಒಮ್ಮೊಮ್ಮೆ ಆನಂದನ ಮನೆಯಲ್ಲಿ, ಕೆಲವೊಮ್ಮೆ ಶಾಲಿನಿಯ ಮನೆಯಲ್ಲಿ. ಶಾಲಿನಿ ರೂಪವತಿ, ಮೃದುಭಾಷಿ;. ಜೊತೆಗೆ ರುಚಿಕರವಾಗಿ ಅಡುಗೆ ಮಾಡುತ್ತಿದ್ದಳು. ಈ ಎಲ್ಲ ಗುಣಗಳೂ ಆನಂದನನ್ನು ಅವಳೆಡೆಗೆ ಆಕರ್ಷಿಸಿದವು. ಕಳೆದ ಒಂದೆರಡು ವರ್ಷಗಳಿಂದ ಶಾಲಿನಿ ಆನಂದರ ಸಂಬಂಧ ನಡೆಯುತ್ತಿದ್ದರೂ, ಯಾರಿಗೂ ಅದರ ಸುಳಿವಾಗಲಿಲ್ಲ. ಈಗ ಅವಳು ಆನಂದನ ಮಗುವಿಗೆ ತಾಯಿಯಾಗಲಿರುವುದು ಅವನನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುವಂತಾಯಿತು. ಮುಂದೆ ಸಂಬಂಧ ಹೀಗೇ ಮುಚ್ಚುಮರೆಯಲ್ಲಿ ಮುಂದುವರಿಯುವುದೋ ಅಥವಾ ಎರಡು ಸಂಸಾರಗಳು ಛಿದ್ರವಾಗುವವೋ ಎಂಬುದನ್ನು ಕಾಲವೇ ನಿರ್ಣಯಿಸಬಲ್ಲದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ