ನಾವು ಮನೆಯ ಒಳಾಲಂಕಾರ ಚೆನ್ನಾಗಿರಲಿ ಎಂದು ಏನೇನೋ ಪ್ರತಯತ್ನ ಮಾಡುತ್ತಿರುತ್ತೇವೆ. ಅದರಲ್ಲಿ ಬಹುತೇಕ ಬದಲಾವಣೆಗಳಾದ ಮೇಲೂ ಮನಸ್ಸಿಗೆ ಸಮಾಧಾನ ಎನಿಸುವುದಿಲ್ಲ. ಹಾಗಿರುವಾಗ ಮನೆಯ ಲುಕ್ಸ್ ಎದ್ದು ತೋರಲು ಏನು ಮಾಡಬೇಕು? ರಾಷ್ಟ್ರೀಯ ಖ್ಯಾತಿವೆತ್ತ ಇಂಟೀರಿಯರ್ ಡೆಕೋ ಎಕ್ಸ್ ಪರ್ಟ್‌ಗಳ ಸಲಹೆ ನಿಮಗಾಗಿ ಈ ರೀತಿ ಇವೆ :
ಮನೆಯನ್ನು ಹೀಗೆ ಸುಂದರಗೊಳಿಸಿ
ನೀವು ಹೊಸ ಮನೆ ಕಟ್ಟಿಸುತ್ತಿರಬಹುದು, ಇರುವ ಮನೆಯನ್ನೇ ರೆನೋವೇಟ್ ಮಾಡಿಸುತ್ತಿರಬಹುದು ಅಥವಾ ಬಹಳ ವರ್ಷಗಳಿಂದ ಮನೆಯನ್ನು ಒಂದೇ ರೀತಿ ಇಟ್ಟುಕೊಂಡಿರಬಹುದು, ಆಗ ನಿಮಗೆ ಇದನ್ನೆಲ್ಲ ಬದಲಾಯಿಸಿ ಏನಾದರೂ ಹೊಸ ರೂಪ ಕೊಡಬಹುದೆಂಬ ಐಡಿಯಾ ಬರುತ್ತದೆ. ಅದರಿಂದ ಮನೆಯ ಅಂದ ಖಂಡಿತಾ ಹೆಚ್ಚುತ್ತದೆ. ಇದನ್ನೇ ಹೋಮ್ ಸ್ಟೈಲಿಂಗ್ ಎನ್ನುತ್ತಾರೆ. ಇದಕ್ಕಾಗಿ ನೀವು ರಚನಾತ್ಮಕ ವಿಧಾನಗಳನ್ನು ಬಳಸಿ ಒಂದು ಕಟ್ಟಡಕ್ಕೆ ಮನೆಯ ಜೀವಂತಿಕೆ ತಂದುಕೊಡಬಹುದು. ಒಂದು ಕೋಣೆಯ ಸ್ವರೂಪವನ್ನು ಅರಿಯುವುದರಿಂದ ಇದರ ಆರಂಭವಾಗುತ್ತದೆ. ಆ ಕೋಣೆಯನ್ನು ತದನಂತರ ಇಡೀ ಮನೆಯನ್ನು ಹೇಗೆ ಗೃಹಾಲಂಕಾರದಿಂದ ಇನ್ನಷ್ಟು ಸುಂದರವಾಗಿಸಬಹುದು ಎಂಬುದೇ ಉದ್ದೇಶ.
ಕೆಲವು ಸಲವಂತೂ ನೀವು ಎಷ್ಟೇ ಪ್ರಯಾಸಪಟ್ಟರೂ, ಮನೆ ಅಂದವಾಗಿ ಕಂಗೊಳಿಸದು. ಹೀಗಾದಾಗ ನೀವು ಅದಕ್ಕೆ ಕಾರಣವೇನು ಎಂದು ಹುಡುಕುವುದು ಸೂಕ್ತ. ಕಾರಣವೇನೇ ಇರಲಿ… ಕೆಟ್ಟ ಫರ್ನೀಚರ್, ಅಂದಹೀನ ಲೇಔಟ್, ಸಹಜ ಬೆಳಕಿನ ಕೊರತೆ ಇತ್ಯಾದಿ…
ಉದಾ : ಇತ್ತೀಚೆಗೆ ಸವಿತಾ ತನ್ನ ಮನೆಯ ಗೆಸ್ಟ್ ಬೆಡ್ ರೂಂಗೆ ಮೇಕ್ ಓವರ್‌ನ ಪ್ಲಾನ್ ಮಾಡಿದಳು. ನೋಡಲು ಆ ಕೋಣೆ ಸಾಮಾನ್ಯವಾಗಿಯೇ ಕಂಡುಬರುತ್ತಿತ್ತು, ಆದರೆ ವಾಸ್ತವದಲ್ಲಿ ಅಲ್ಲಿ ಶಕ್ತಿ ಮತ್ತು ಜೀವಂತಿಕೆಯ ಅಭಾವವಿತ್ತು.
ಆಗ ಸವಿತಾ 2 ಮಹತ್ವಪೂರ್ಣ ವಿಷಯ ಗಮನಿಸಿಕೊಂಡಳು. ಆ ಕೋಣೆಗೆ ಸೂರ್ಯನ ಬೆಳಕು ಸಹಜವಾಗಿ ಸಿಗುತ್ತಿರಲಿಲ್ಲ ಹಾಗೂ ಮತ್ತೊಂದು ಎಂದರೆ ಬಹು ಸಾಮಗ್ರಿ ಸೇರಿಕೊಂಡು ಇಡೀ ಕೋಣೆ ಗಿಜಿಗುಟ್ಟುತ್ತಾ ಕಿಷ್ಕಿಂಧೆಯಾಗಿತ್ತು. ಅಲ್ಲಿನ ಅನಗತ್ಯ ಸಾಮಗ್ರಿ ತೊಲಗಿಸಿ, ಸಹಜ ಬೆಳಕು ಒಳಬರುವಂತೆ ಮಾಡಿದರೆ, ಕಿಟಕಿ ತೆರೆದಿಟ್ಟರೆ, ಗಾಢ ಬಣ್ಣಕ್ಕೆ ಬದಲಾಗಿ ತೆಳು ಬಣ್ಣದ ಪರದೆ ಬಳಸಿದರೆ ಅದೇ ಕೋಣೆ ಹೆಚ್ಚು ಬ್ರೈಟ್ ಆಗಿ ಕಾಣುವುದರಲ್ಲಿ ಸಂದೇಹವಿಲ್ಲ ಎಂದು ಮನಗಂಡು ಹಾಗೇ ಮಾಡಿದಳು….. ಅದು ಅಕ್ಷರಶಃ ನಿಜಾಯಿತು!
ನೀವು ಮಲಗಿರುವಾಗ, ಕಿಟಕಿ ಬಾಗಿಲಿಗೆ ದಪ್ಪ ಕಪ್ಪು ತೆರೆಯಿರಲಿ ಎಂದು ಬಯಸಿದರೆ, ನೀವು ಸಣ್ಣ ಪರದೆಯ ಜೊತೆ ಮತ್ತೊಂದು ಬಿಲ್‌ಕುಲ್ ತೆಳು ಇರುವಂಥ ಪರದೆ ಜೋಡಿಸಿಕೊಳ್ಳಿ. ಇದನ್ನು ಹಗಲು ಹೊತ್ತಿನಲ್ಲಿ ಧಾರಾಳವಾಗಿ ಬಳಸಬಹುದು.
ನಿಮ್ಮ ಮನೆಯನ್ನು ಹೆಚ್ಚು ಹೆಚ್ಚು ಸಾಮಗ್ರಿಗಳಿಂದ ತುಂಬಿಸಿ ಡಂಜನ್ ಮಾಡಬೇಡಿ. ಹಾಲ್‌ನಲ್ಲಿ ಟಿವಿ ಯೂನಿಟ್ ನಿಮ್ಮ ಮನೆಯ ಅತ್ಯಧಿಕ ಜಾಗ ಬೇಡುವ ಫರ್ನೀಚರ್ ಆದರೆ, ಅದು ಖಂಡಿತಾ ವಿಶುಯೆಲ್ ಬ್ಲಾಕ್ ಕ್ರಿಯೇಟ್ ಮಾಡುತ್ತದೆ. ಹೀಗಾಗಿ ಟಿವಿಯನ್ನು ತೆಳು ಬಣ್ಣದ ಗೋಡೆಗೆ ಆನಿಸಿಡಿ ಅಥವಾ ಹ್ಯಾಂಗ್ ಮಾಡಿ.
ಒಂದು ಕಲರ್ ಟೋನ್ ಜೊತೆ ಕೆಲಸ ಮಾಡುವುದು ಸುಲಭ, ಆಗ ಬೇರೆ ಬೇರೆ ಘಟಕಗಳನ್ನು ಒಟ್ಟಿಗೆ ಇಡಬಹುದು. ಕಾಂಟ್ರಾಸ್ಟ್ ಕಲರ್ಸ್ ಜೊತೆ ಕೆಲಸ ಮಾಡುವುದು ಚಾಲೆಂಜಿಂಗ್ ಎನಿಸುತ್ತದೆ. ಆದರೆ ನೀವು ಡಿಸೈನರ್ ಕಡೆ ಗಮನಹರಿಸಿದರೆ, ಆಗ ಅದು ಸಾಕಷ್ಟು ಉತ್ತಮ ಪರಿಣಾಮ ನೀಡಬಲ್ಲದು.
ನೀವು ಇದೀಗ ವರ್ಕ್ ಮಾಡುತ್ತಿರುವ ಕಲರ್ ಪ್ಲೇಟ್ಸ್, ನಿಮ್ಮ ಪ್ರಸ್ತುತ ಫ್ಲೋರಿಂಗ್‌ಗೆ ಕಾಂಪ್ಲಿಮೆಂಟ್ ಆಗುತ್ತಿಲ್ಲವಾದರೆ ನೀವು ಕೆಲವು ರತ್ನಗಂಬಳಿ ಬದಲಾಯಿಸಿ ನೋಡಿ, ಇದು ನಿಮ್ಮ ಕೋಣೆಯ ಟೋನ್‌ಗೆ ಮ್ಯಾಚ್ ಆಗುವಂತಿರಲಿ. ಈ ರತ್ನಗಂಬಳಿ ಕೋಣೆಯ ಫರ್ನೀಚರ್‌ನ್ನು ಒಂದೇ ಸಮನಾಗಿ ಸೆಟ್ ಮಾಡಲು ಉತ್ತಮ ಉಪಾಯ. ರತ್ನಗಂಬಳಿ ಬಳಕೆಯಿಂದ ಡಾರ್ಕ್ ರೂಮಿನಲ್ಲೂ ಸಹ ಇಂಟರೆಸ್ಟಿಂಗ್ ಪ್ಯಾಟರ್ನ್‌ಟೆಕ್ಸ್ ಚರ್ಸ್ ಆ್ಯಡ್ ಮಾಡಿಕೊಳ್ಳಬಹುದು.
ಫಂಕ್ಷನಾಲಿಟಿ ಆಧಾರದ ಮೇಲೆ ಫರ್ನೀಚರ್ ರೀಅರೇಂಜ್ ಮಾಡಿಕೊಳ್ಳಬಹುದು, ಅಗತ್ಯ ರೀಫರ್ನಿಶ್ ಮಾಡಿಸಿ. ಕೆಲವರು ಮನೆಯಲ್ಲಿ ಹೆಚ್ಚು ಓದಲು ಬಯಸುತ್ತಾರೆ, ಮತ್ತೆ ಕೆಲವರು ಅಲ್ಲ. ನಿಮಗೆ ಓದುವ ಹವ್ಯಾಸವಿದ್ದು, ಆದರೆ ಒಬ್ಬ ನಿಯಮಿತ ಓದುಗರಲ್ಲದಿದ್ದರೆ, ಆಗ ನೀವು ಮನೆಯ ಒಂದು ಭಾಗವನ್ನು ರೀಲೊಕೇಟ್ ಮಾಡಿ. ಆಗ ನಿಮಗೆ ಮನಸ್ಸಾದಾಗ ನೀವು ಆರಾಮವಾಗಿ ಕುಳಿತು ಓದಿ ಬರೆಯುವ ಕೆಲಸ ಮಾಡಿಕೊಳ್ಳಬಹುದು.
ಡಿಸೈನರ್ ಸೀಕ್ರೆಟ್ಸ್
ಮನೆ ಮತ್ತು ಆಫೀಸ್ ಎಲ್ಲೇ ಇರಲಿ, ಒಂದು ನಿಗದಿತ ಉದ್ದೇಶದಿಂದ ಡಿಸೈನ್ ಮಾಡಬೇಕಾಗುತ್ತದೆ, ಅದು ಬಿಟ್ಟು ಸುಮ್ಮನೆ ಫರ್ನೀಚರ್ ಅಡ್ಜಸ್ಟ್ ಗೊಳಿಸಲು ಏನೋ ಮಾಡಿದರೆ ಆಗದು. ಸಾಮಾನ್ಯವಾಗಿ ಒಂದೇ ಕಡೆ ನಾವು ಬಹಳಷ್ಟು ಸಾಮಾನು ಸೇರಿಸುತ್ತೇವೆ. ಇದರಿಂದಾಗಿ ಆ ಕೋಣೆಯ ಅಂದಚೆಂದ ಅಲ್ಲಿಗೇ ಫುಲ್ ಸ್ಟಾಪ್. ಹೀಗಾಗಿ ತೀರಾ ಅನಿವಾರ್ಯವಾದ ಸಾಮಾನುಗಳನ್ನು ಮಾತ್ರ ಅಗತ್ಯಕ್ಕೆ ತಕ್ಕಂತೆ ಕೋಣೆಗಳ ಬ್ಯೂಟಿ ಹೆಚ್ಚಿಸುವಂತೆ ಜೋಡಿಸಿ.
ಬ್ಯೂಟಿ ಮತ್ತು ಅಗತ್ಯ ಅಂದ್ರೆ ಫಂಕ್ಷನ್ ಜೊತೆ ಜೊತೆಯಲ್ಲೇ ನಡೆಯುತ್ತವೆ. ನಮಗೆ ಒಂದು ಫರ್ನೀಚರ್ ಬಳಸಲೇಬೇಕಿದ್ದರೆ, ಅದರಲ್ಲಿ ರಿಲ್ಯಾಕ್ಸ್ ಮಾಡಿಕೊಳ್ಳುವಂಥದ್ದಾಗಿದ್ದರೆ, ಆ ಸ್ಥಿತಿಯಲ್ಲಿ ಫಂಕ್ಷನ್‌ನ್ನು ನಾವು ಕಾಂಪ್ರಮೈಸ್ ಮಾಡಿಕೊಳ್ಳುವ ಹಾಗಿಲ್ಲ. ಉದಾ : ಒಂದು ಸೋಫಾ. ಅದು ರಿಲ್ಯಾಕ್ಸ್ ಆಗಲು ಕಂಫರ್ಟೆಬಲ್ ಆಗಿರಬೇಕು. ಇದು ಕೋಣೆಗೆ ಆರ್ಟ್‌ಪೀಸ್ ಅಲ್ಲ. ಏಕೆಂದರೆ ಆರ್ಟ್‌ಪೀಸ್‌ಗಾಗಿ ಬಹಳಷ್ಟು ಜಾಗ ಬೇಕೇಬೇಕು. ಅದು ಏಸ್ಥೆಟಿಕ್‌ನ ಕೆಲಸವನ್ನೂ ನಿಭಾಯಿಸುತ್ತದೆ. ಅಂದರೆ ಮೂಡ್ ಎನ್‌ಹ್ಯಾನ್ಸರ್ ಆಗಿರುತ್ತದೆ. ಉದಾ : ವಾಲ್ ಆರ್ಟ್, ಲ್ಯಾಂಪ್ ಶೇಡ್ ಇತ್ಯಾದಿ.
ಬಾಲ್ಕನಿ ಅಥವಾ ಮನೆಯೊಳಗೆ ಪ್ರವೇಶ ಪಡೆಯುವ ಎಂಟ್ರೆನ್ಸ್ ನಲ್ಲಿ ವಾರ್ಮ್ ವೆಲ್ಕಂ ಮಾಡುವ ಹಾಗೆ ಅಣಿಗೊಳಿಸಿರಬೇಕು. ಯಾವುದೇ ವಾಲ್ ಹ್ಯಾಂಗಿಂಗ್ ಆರ್ಟ್ ವರ್ಕ್ ಅಥವಾ ನೀವೇ ತಯಾರಿಸಿದ ಕಲಾಕೃತಿಯ ಬಳಕೆಯಿಂದ ಅಲಂಕಾರ ಫೈನ್ ಎನಿಸುತ್ತದೆ.
ಕನ್ನಡಿಯ ಬಳಕೆ ಕೇವಲ ಮುಖ ನೋಡಿಕೊಳ್ಳಲು ಮಾತ್ರವಲ್ಲ, ಬದಲಿಗೆ ಆಜೂಬಾಜೂ ಒಂದು ಕಣ್ಣಿಡುವುದಕ್ಕೂ ಆಗುತ್ತದೆ. ಫೀಲ್ ಗುಡ್ ಮೊಮೆಂಟ್ಸ್ ಸಹ ಕನ್ನಡಿ ಎದುರು ತಾವೇ ರೆಡಿಯಾಗುತ್ತವೆ. ಬೆಡ್‌ರೂಮಿನಲ್ಲಿರುವ ಯಾವುದೇ ವಾಲ್ ಹ್ಯಾಂಗಿಂಗ್ ಯಾ ಬಾಲ್ಕನಿಯ ಕನ್ನಡಿಯಿಂದ ಆಗಿರುವ ವಾಲ್ ಆರ್ಟ್ ಇತ್ಯಾದಿ ಅಲ್ಲಿ ಆಳದ ಅನುಭೂತಿ ಒದಗಿಸುತ್ತದೆ.
ನಾವು ಕಿಚನ್‌ಡೈನಿಂಗ್ ರೂಮನ್ನು ಒಂದೇ ಕೋಣೆ ಏಕಾಗಿಸಬಾರದು? ಇತ್ತೀಚೆಗೆ ಸ್ಪೇಸ್ ಸೇವಿಂಗ್ ಸಾಕಷ್ಟು ಮಹತ್ವಪೂರ್ಣ ವಿಷಯ ಆಗುತ್ತಿದೆ. ಇದಕ್ಕಾಗಿ ಓಪನ್ ಕಿಚನ್ನಿನ ಆಪ್ಶನ್ ಬಲು ಉತ್ತಮ. ಇದರಲ್ಲಿ ಡೈನಿಂಗ್ ರೂಮನ್ನು ಕಿಚನ್‌ನಲ್ಲೇ ವಿಲೀನಗೊಳಿಸಲಾಗುತ್ತದೆ. ಕಿಚನ್ನಿನಲ್ಲಿ ಬ್ರೇಕ್ ಫಾಸ್ಟ್ ಕೌಂಟರ್ ಆ್ಯಡ್ ಮಾಡುವುದು ಪಾಶ್ಚಿಮಾತ್ಯರ ಕಾನ್‌ಸೆಪ್ಟ್. ಆದರೆ ನಾವು ಕೂಡ ಇದನ್ನೇ ಬೆಟರ್ ಡೈನಿಂಗ್ ಸ್ಪೇಸ್ ರೂಪದಲ್ಲಿ ಬದಲಿಸಲು ಯತ್ನಿಸಿದರೆ ತಪ್ಪಿಲ್ಲ.
ಒಂದು ಸಣ್ಣ ಹಾಲ್ ಸಹ ದೊಡ್ಡ ಅಂತರ ತರಬಲ್ಲದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಾಗಿಲು ಕಿಟಕಿಗಳನ್ನು ಹೊರತುಪಡಿಸಿ ಕ್ರಾಸ್ ವೆಂಟಿಲೇಶನ್‌ಗಾಗಿ ಹೊಸ ದಾರಿ ಹುಡುಕಬಹುದು.
ನಿಮ್ಮ ಮನೆಗೆ ಒಂದು ಪ್ರತ್ಯೇಕ ಐಡೆಂಟಿಟಿ ತಂದುಕೊಡಲು ಇಡೀ ಕೋಣೆಗೆ ಪೇಂಟ್ ಮಾಡಿಸುವ ಅಗತ್ಯವಿಲ್ಲ. ಗೋಡೆಯ ಮೇಲೆ ಒಂದು ಸಣ್ಣ ಆದರೆ ಬ್ಯೂಟಿಫುಲ್ ಆರ್ಟ್ ವರ್ಕ್ ಸಹ ಮೂಡ್ ಫ್ರೆಶ್ ಅಪ್ ಮಾಡಬಲ್ಲದು.
ಸುಖಾನುಭೂತಿಗೆ ಕೇವಲ ಅನುಭವಿಸಿಯೇ ತೀರಬೇಕು ಎಂದೇನಿಲ್ಲ, ಕೇಳಿಸಿಕೊಂಡರೂ ಆದೀತು. ವಾಟರ್ ವಾಲ್ ಯಾ ವಿಂಡ್‌ಶೈವ್‌ನಂಥ ಘಟಕಗಳು ನಿಮ್ಮ ಮನೆಗೆ ಶಾಂತ ವಾತಾವರಣ ನೀಡುತ್ತವೆ.
ಮನೆಯಲ್ಲಿ ಅಧಿಕ ಜಾಗ ಕ್ರಿಯೇಟ್ ಮಾಡಲು ರೋಬ್ ಹುಕ್ಸ್ ಪ್ರಧಾನ ಪಾತ್ರ ವಹಿಸುತ್ತವೆ. ಬಾಗಿಲಿನ ಹಿಂಬದಿ, ವಾರ್ಡ್‌ರೋಬ್‌ಶೆಟರ್‌ನಂಥ ಗಮನಿಸದ ಜಾಗಗಳ ಬಳಿ ಇವನ್ನು ಅಳವಡಿಸಿ.
ಕಿಚನ್‌ನಲ್ಲಿ 3 ಅತ್ಯಗತ್ಯ ವಸ್ತುಗಳುಂಟು ಅಡುಗೆಗಾಗಿ ಹಾಬ್, ತೊಳೆಯಲು ಸಿಂಕ್, ಸ್ಟೋರೇಜ್‌ಗಾಗಿ ಫ್ರಿಜ್. ಈ ಮೂರೂ ವಸ್ತುಗಳೂ ಕಿಚನ್ನಿನಲ್ಲಿ ಸ್ಪೇಸ್ ಸೇವಿಂಗ್ ಪ್ರೋಸೆಸ್‌ನಲ್ಲಿ ನೆರವಾಗುತ್ತವೆ. ಒಂದು ಪಕ್ಷ ಈ ಮೂರೂ ತಂತಮ್ಮ ಪರ್ಫೆಕ್ಟ್ ಜಾಗಗಳಲ್ಲಿ ಇದ್ದುವಾದರೆ, ಕಿಚನ್ ಆ್ಯಕ್ಸೆಸರೀಸ್ ವ್ಯವಸ್ಥಿತವಾಗಿ ಇರುತ್ತದೆ. ಇದರಿಂದ ನಿಮ್ಮ ಅಡುಗೆಮನೆ ಕೆಲಸ ಸುಲಭವಾಗುತ್ತದೆ.
ಪರ್ಪಸನಲ್ ಸ್ಪೇಸ್ ಅಂದ್ರೆ ಮಕ್ಕಳ ರೀಡಿಂಗ್ ರೂಂ, ಮನೆಯಲ್ಲೇ ನಿರ್ಮಿಸಿದ ಆಫೀಸ್ ಏರಿಯಾ ಇತ್ಯಾದಿಗಳ ಬ್ಯೂಟಿ ಹೆಚ್ಚಿಸಲು ಕೆಲವು ಹೆಚ್ಚುವರಿ ಐಟಂ ಸೇರಿಸಬಹುದು. ಉದಾ : ಟಾಯ್ಲೆಟ್ ಗಮನಿಸಿ. ಇದೊಂದು ಪರ್ಸನಲ್ ಜಾಗ. ಆದರೆ ಇದನ್ನು ನಿರ್ಲಕ್ಷಿಸುವುದೇ ಹೆಚ್ಚು, ಏಕೆಂದರೆ ಇದು ಮನೆಯ ಮುಚ್ಚಿಟ್ಟ ಭಾಗ. ಹಾಗಾಗಿ ಯಾರೂ ಅದರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ನಾವು ಇದನ್ನೂ ತುಸು ಹೈಲೈಟ್ ಮಾಡಿ ಮನೆಯ ಅಂದ ಹೆಚ್ಚಿಸಬಹುದು. ನೀವು ಯಾವುದೇ ಪ್ಲಾಂಟ್ ಬೆಳೆಸಿ ಅಥವಾ ಗೋಡೆ ಮೇಲೆ ಕ್ರಿಯೇಟಿವ್ ಇತ್ಯಾದಿ ಮಾಡಿ ಟಾಯ್ಲೆಟ್‌ನ ಚಂದ ಹೆಚ್ಚಿಸಬಹುದು.
ಮನೆಯಲ್ಲಿ ಟಿವಿಯ ಪೊಸಿಷನ್ ಸಹ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಮನೆಗಳಲ್ಲಿ ಈ ವಿಷಯದ ಕುರಿತು ವಾದ ವಿವಾದಗಳು ನಡೆಯುತ್ತವೆ. ಆರಾಮವಾಗಿ ಕುಳಿತು ಟಿವಿ ನೋಡಲು ಅದು ಎಲ್ಲಿರಬೇಕು ಅಂತ. ಉದಾ : ಐ ಲೆವೆಲ್ ಟಿವಿಯ ಸೆಂಟರ್‌ಗೆ ಬಿಲ್‌ಕುಲ್ ಸಮವಾಗಿ ಇರಬೇಕು ಅಂದ್ರೆ ಟಿ.ವಿಯ ಸೆಂಟರ್ ಕಂಗಳಿಗೆ ಬಿಲ್‌ಕುಲ್ ಸಮಾನ ದೂರದಲ್ಲಿರಬೇಕು.
ಫಾಲ್ಸ್ ಸೀಲಿಂಗ್ ಮಾಡಿಸುವಾಗ ಸದಾ ವೆಂಟಿಲೇಶನ್ ಏರ್ ಹೋಲ್ಸ್ ಕಡೆ ಗಮನ ಕೊಡಿ. ಇಲ್ಲದಿದ್ದರೆ ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಾಗಾಗಿ ಫಾಲ್ಸ್ ಸೀಲಿಂಗ್ ಮಾಡುವಾಗ ಅದು ಬಂದ್ ಆಗಿ ಹೋಗಿ ಕೋಣೆಯಲ್ಲಿ ಉಸಿರಾಟ ಕಷ್ಟವಾಗಿ ಸೆಕೆ ಹೆಚ್ಚುತ್ತದೆ, ಏಕೆಂದರೆ ಒಳಗಿನ ಹವೆ ಹೊರಹೋಗಲು ಆಸ್ಪದವೇ ಇರುವುದಿಲ್ಲ.
ಮಿನಿಮಮ್ ಎಕ್ಸ್ ಟೆನ್ಶನ್ ಸ್ಪೇಸ್ ಹತ್ತಿರದಲ್ಲೇ ಇರಬೇಕು. ಇಲ್ಲದಿದ್ದರೆ ನೀವು ಬಳಸಿದ ಸನ್ ಶೇಡ್ ಯಾ ಬ್ಯೂಟಿಗಾಗಿ ನಿರ್ಮಿಸಲಾದ ಯಾವುದೇ ವಸ್ತು ನಿಮ್ಮ ನೆರೆಹೊರೆಯವರ ಬೌಂಡ್ರಿವರೆಗೂ ಹೋಗಬಾರದು. ಮನೆಯ ಹೊರಗೆ ಗ್ರೌಂಡ್ ಏರಿಯಾನ್ನು ತುಸು ಓಪನ್ ಆಗಿಯೇ ಇರಲು ಬಿಡಿ.
– ಗೀತಾ ವಿನೋದ್