ನಿಮಗೆ ಏರೋಬಿಕ್ಸ್, ಬ್ರಿಸ್ಕ್ ವಾಕಿಂಗ್, ಜಾಗಿಂಗ್, ಜುಂಬಾ ಮುಂತಾದ ಫಿಟ್‌ನೆಸ್ ವಿಧಾನಗಳು ಬೇಸರ ಹುಟ್ಟಿಸುತ್ತಿದ್ದರೆ, ನೀವು ವಾಟರ್ ವರ್ಕ್‌ಔಟ್ ಅನುಸರಿಸಿ. ಅಂದರೆ ಈಜುಕೊಳವನ್ನೇ ಜಿಮ್ ಪೂಲ್ ಮಾಡಿಕೊಳ್ಳಿ.
ಅಂದಹಾಗೆ ಫಿಟ್‌ನೆಸ್‌ನ ಯಾವುದೇ ವಿಧಾನಗಳಿಂದ ಬಾಡಿ ಟೋನಿಂಗ್ ಅವಶ್ಯವಾಗಿ ಆಗುತ್ತದೆ. ಆದರೆ ಕ್ಯಾಲೋರಿ ಬರ್ನ್ ಮಾಡುವುದು ಹಾಗೂ ರೋಗಗಳಿಂದ ದೂರ ಇರಲು ನಿಮಗೆ ವಾಟರ್ ವರ್ಕ್‌ಔಟ್ ಪರಿಣಾಮಕಾರಿ ಎನಿಸುತ್ತದೆ. ವಾಟರ್ ವರ್ಕ್‌ಔಟ್‌ನಿಂದ ನೀವು ಹಲವು ಬಗೆಯ ರೋಗಗಳಿಂದ ದೂರ ಇರಬಹುದು. ಇದರಿಂದ ಎಲ್ಲ ಅಂಗಗಳಿಗೂ ಸಾಕಷ್ಟು ಕಸರತ್ತು ಆಗುತ್ತದೆ.
ಏನಿದು ವರ್ಕ್ಔಟ್?
ನೀರಿನಲ್ಲಿ ವ್ಯಾಯಾಮ ಮಾಡುವುದನ್ನೇ `ವಾಟರ್ ವರ್ಕ್‌ಔಟ್’ ಅಥವಾ `ಅಕ್ವಾ ವರ್ಕ್‌ಔಟ್’ ಎಂದು ಕರೆಯಲಾಗುತ್ತದೆ. ಹರಿಯುವ ನೀರಿನಲ್ಲಿ ವಾಟರ್ ವರ್ಕ್‌ಔಟ್ ಮಾಡಲು ಆಗದು. ಸ್ವಿಮ್ಮಿಂಗ್ ಪೂಲ್‌ನಲ್ಲಿಯೇ ವಾಟರ್ ಎಕ್ಸರ್ ಸೈಜ್ ಮಾಡುವುದು ಸೂಕ್ತ. ಅದರಲ್ಲಿ ನೀರಿನ ಆಳ 3 ಅಡಿಗಿಂತ ಅಧಿಕವಾಗಿರಬಾರದು.
ನೀರಿನಿಂದ ಏನೆಲ್ಲ ಅನುಕೂಲ?
ವ್ಯಾಯಾಮ ಮಾಡಲು ಬೊಜ್ಜು ಬಹುದೊಡ್ಡ ತೊಂದರೆ ಅನಿಸುತ್ತದೆ. ಇಂಥ ಸ್ಥಿತಿಯಲ್ಲಿ `ವಾಟರ್ ವರ್ಕ್‌ಔಟ್’ ಅನುಸರಿಸಿ. ತಜ್ಞರ ಪ್ರಕಾರ, ವ್ಯಾಯಾಮ ಮಾಡುವಾಗ ದೇಹದ ತೂಕ ಶೇ.10ರಷ್ಟು ಆಗಿರುತ್ತದೆ. ಈ ರೀತಿಯ ವರ್ಕ್‌ಔಟ್ ಮಾಡುವುದರಿಂದ ಕೀಲುನೋವು, ಬೊಜ್ಜು, ಮಧುಮೇಹ ಮುಂತಾದವುಗಳಲ್ಲಿ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಮುಕ್ತ ವಾತಾವರಣದಲ್ಲಿ ವ್ಯಾಯಾಮ ಮಾಡುವುದರಿಂದ ಕೈ ಹಾಗೂ ಕಾಲುಗಳು ತಪ್ಪು ದಿಸೆಯಲ್ಲಿ ಕ್ರಿಯಾಶೀಲ ಆಗುವುದರಿಂದ ಪೆಟ್ಟು ತಗುಲುವ ಸಾಧ್ಯತೆ ಇರುತ್ತದೆ. ದೇಹ ಅತಿಯಾಗಿ ಭಾರವಾಗಿರುವ ಕಾರಣದಿಂದ ವ್ಯಾಯಾಮವನ್ನು ಸಮರ್ಪಕವಾಗಿ ಮಾಡಲು ಆಗುವುದಿಲ್ಲ.
ವಾಟರ್ ವರ್ಕ್‌ಔಟ್‌ನಿಂದ ಮಾಂಸಖಂಡಗಳಿಗೆ ಬಲ ದೊರೆಯುತ್ತದೆ. ಅದರ ಹೊರತಾಗಿ ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಒತ್ತಡದಿಂದ ಮುಕ್ತಿ ದೊರಕುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ತಾಜಾತನ ಮತ್ತು ಖುಷಿಯವ ಅನುಭವ ದೊರಕುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಲಾಭಕರವಾಗಿದೆ. ಅಂದಹಾಗೆ ಇದು ಎಲ್ಲ ವಯಸ್ಸಿನರಿಗೂ ಉಪಯುಕ್ತ.
ಮೇಲ್ವಿಚಾರಣೆ ಮುಖ್ಯ
ನೀವು ಮೊದಲ ಬಾರಿ ವಾಟರ್ ವರ್ಕ್‌ಔಟ್ ಮಾಡುತ್ತಿರುವಿರಿ ಎಂದರೆ ಅದನ್ನು ತರಬೇತುದಾರರ ಮೇಲ್ವಿಚಾರಣೆಯಲ್ಲಿಯೇ ಮಾಡಿ. 1 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಇರಬೇಡಿ. ಇಲ್ಲದಿದ್ದರೆ ತ್ವಚೆಗೆ ಸನ್‌ಬರ್ನ್‌ನ ಮಾರಕ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಅದರಿಂದ ಪಾರಾಗಲು ವಾಟರ್ ವರ್ಕ್‌ಔಟ್ ಮಾಡುವ 20 ನಿಮಿಷ ಮೊದಲು ದೇಹಕ್ಕೆ 30 SPFನ ಸನ್‌ಸ್ಕ್ರೀನ್ ಲೇಪಿಸಿಕೊಳ್ಳಿ. ಯಾವುದೇ ಬಗೆಯ ವಾಟರ್ ವರ್ಕ್‌ಔಟ್ ಮಾಡಿದ ಬಳಿಕ 10 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಏಕೆಂದರೆ ದೇಹದ ತಾಪಮಾನ ಸಾಮಾನ್ಯಗೊಳ್ಳಲು ಇದು ಅತ್ಯವಶ್ಯ.
ಕ್ಯಾಲೋರಿ ಬರ್ನರ್
ನೀವು ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆ ಮಾಡಲು ಇಚ್ಛಿಸುತ್ತಿದ್ದರೆ ವಾಟರ್ ವರ್ಕ್‌ಔಟ್‌ನ್ನು ಅವಶ್ಯವಾಗಿ ಅನುಸರಿಸಿ. ಏಕೆಂದರೆ ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ಮಾಂಸಖಂಡಗಳಿಗೆ ಒತ್ತಡ ಉಂಟಾಗುವುದಿಲ್ಲ. ನೀವು ದಿನಕ್ಕೆ 1 ಗಂಟೆ ವಾಟರ್ ವರ್ಕ್‌ಔಟ್ ಮಾಡುವುದರಿಂದ 300-600 ಕ್ಯಾಲೋರಿ ಬರ್ನ್ ಆಗುತ್ತದೆ. ಅಂದರೆ ವಾಟರ್ ವರ್ಕ್‌ಔಟ್‌ನಿಂದ ದೇಹದ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ದೇಹವನ್ನು ಸುರಕ್ಷಿತ ರೀತಿಯಲ್ಲಿ ಶೇಪ್‌ನಲ್ಲೂ ತರಬಹುದು.
ಫ್ಲೆಕ್ಸಿಬಿಲಿಟಿಯಲ್ಲಿ ಹೆಚ್ಚಳ : ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ಆಂತರಿಕ ಏಟು ತಗುಲುವುದಿಲ್ಲ. ಅದರಿಂದ ಕೀಲುಗಳು ಹೆಚ್ಚು ಫ್ಲೆಕ್ಸಿಬಿಲಿಟಿ ಪಡೆದುಕೊಳ್ಳುತ್ತವೆ.
ಒತ್ತಡದಿಂದ ಮುಕ್ತಿ : ನೀವು ಹೆಚ್ಚು ಒತ್ತಡದಲ್ಲಿದ್ದರೆ ವಾಟರ್ ವರ್ಕ್‌ಔಟ್ ಮಾಡಿ. ಇದರಿಂದ ನಿಮಗೆ ತಾಜಾತನದ ಅನುಭವ ಬರುತ್ತದೆ. ಒತ್ತಡದಿಂದ ಮುಕ್ತಿ ದೊರಕುತ್ತದೆ. ನೀರಿನಲ್ಲಿದ್ದಾಗ ಮೆದುಳಿನಲ್ಲಿ ಎಂಟಾರ್ಫಿನ್ಸ್ ಹಾರ್ಮೋನ್ ಬಿಡುಗಡೆಗೊಳ್ಳುತ್ತದೆ. ಅದರಿಂದ ಒತ್ತಡ ಕಡಿಮೆಯಾಗುತ್ತದೆ.
ಬಲಗೊಳ್ಳುವ ಮಾಂಸಖಂಡಗಳು : ವಾಟರ್ ವರ್ಕ್‌ಔಟ್‌ನಿಂದ ತೂಕ ಕಡಿಮೆಯಾಗಿ ಮಾಂಸಖಂಡಗಳ ಬಳಕುವಿಕೆ ಹೆಚ್ಚುತ್ತದೆ. ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ.
ರಕ್ತದೊತ್ತಡ ನಿಯಂತ್ರಣ
ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಅದರಿಂದಾಗಿ ರಕ್ತದೊತ್ತಡದ ಸಮಸ್ಯೆ ಇರುವುದಿಲ್ಲ. ಈ ಕಾರಣದಿಂದ ರಕ್ತ ಸಂಚಾರ, ನಾಡಿ ಮಿಡಿತ ಸಮರ್ಪಕವಾಗಿರುತ್ತದೆ.
– ದೀಪಾ ರಾವ್
ಎಂತೆಂಥ ವಾಟರ್ ವರ್ಕ್ಔಟ್
ಅಕ್ವಾಟಿಕ್ ಬೂಟ್ ಕ್ಯಾಂಪ್ : ನೀರಿನಲ್ಲಿ ಅಕ್ವಾಟಿಕ್ ಬೂಟ್ ಕ್ಯಾಂಪ್ ವರ್ಕ್‌ಔಟ್ ಮಾಡುವುದರಿಂದ ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮವಾಗುತ್ತದೆ. ಕನಿಷ್ಠ 4 ಅಡಿ ಅಳತೆ ಪೂಲ್‌ನಲ್ಲಿ 1 ಗಂಟೆ ಕಾಲ ಹೈ ಇಂಟೆನ್ಸಿಟಿ ವರ್ಕ್‌ಔಟ್ ಮಾಡಬಹುದು. ಅದರಲ್ಲಿ ಪುಶ್‌ಪುಲ್, ಹೈ ನೀ ಸ್ಪ್ರೆಂಟ್, ಜಂಪ್ ಅಪ್ ಮತ್ತು ಡಬಲ್ಸ್ ನಿಂದ ಮಾಡಬಹುದಾದ ಎಲ್ಲ ವ್ಯಾಯಾಮಗಳನ್ನೂ ಅಂದರೆ ಬೈಸೆಪ್ಸ್ ವರ್ಕ್ಸ್, ಬೈಸೆಪ್ಸ್ ಹ್ಯಾಮರ್, ಶೋಲ್ಡರ್ ಪ್ರೆಸ್, ಸೈಡ್ ಯಾಟ್ರ್, ಫ್ರಂಟ್ ರೇಜ್, ಸೈಡ್ ಬ್ಯಾಂಡ್, ಬ್ಯಾಕ್ ವರ್ಡ್ ರನ್ನಿಂಗ್ ಈ ವ್ಯಾಯಾಮಗಳನ್ನು ಮಾಡಿದರೆ 1200 ಕ್ಯಾಲೋರಿ ತನಕ ಬರ್ನ್ ಆಗುತ್ತದೆ.
ಅಕ್ವಾಜುಂಬಾ : ನಿಮಗೆ ಡ್ಯಾನ್ಸ್ ಬರುತ್ತದೆಂದರೆ ನೀರಿನಲ್ಲಿನ ಡ್ಯಾನ್ಸ್ ಕೂಡ ನಿಮಗೆ ಬಹಳ ಇಷ್ಟವಾಗುತ್ತದೆ. ನೀರಿನಲ್ಲಿ ಡ್ಯಾನ್ಸ್ ಒಂದು ರೋಮಾಂಚಕ ಅನುಭವ. ಅದರಿಂದ ನೀವು ಫಿಟ್‌ನೆಸ್ ಪಡೆದುಕೊಳ್ಳಬಹುದು. ಅಕ್ವಾ ಏರೋಬಿಕ್ಸ್ ಜುಂಬಾ, ಲ್ಯಾಟಿನ್ ಜುಂಬಾ ಹಾಗೂ ಬಾಲಿವುಡ್ ಡ್ಯಾನ್ಸ್ ಮಾಡಬಹುದು. 45 ನಿಮಿಷಗಳ ಕಾಲ ಜಲ ನರ್ತನದಿಂದ ದೇಹದ ರಕ್ತ ಸಂಚಾರದಲ್ಲಿ ಹೆಚ್ಚಳ ಉಂಟಾಗುತ್ತದೆ. ಹೃದಯ ಬಲಗೊಳ್ಳುವುದರ ಜೊತೆಗೆ ಪ್ರತಿಯೊಂದು ಅಂಗನ್ನೂ ಸ್ಟ್ರೆಚ್ ಹಾಗೂ ಟೋನ್ಡ್ ಮಾಡುತ್ತದೆ. ಅಕ್ವಾ ಜುಂಬಾವನ್ನು `ಬೆಸ್ಟ್ ಕಾರ್ಡಿಯೋ ವ್ಯಾಸ್ಕ್ಯುಲರ್’ ವ್ಯಾಯಾಮ ಎಂದು ಹೇಳಲಾಗುತ್ತದೆ.