ಹಬ್ಬ ಆಚರಿಸಲು ಮನೆಯ ಸ್ವಚ್ಛತೆಯಿಂದ ಶುರು ಮಾಡಿರಬಹುದು. ಆದರೆ ಹೃದಯ ಶುದ್ಧಿ ಮಾಡುವ ಬಗ್ಗೆ ಏನಾದರೂ ಯೋಚಿಸಿದ್ದೀರಾ? ಮನೆಯ ಒಳ ಹೊರಗಿನ ಗೋಡೆಗಳ ರಂಗನ್ನೇನೊ ಬದಲಿಸಿದಿರಿ, ಆದರೆ ಬೇರೊಬ್ಬರ ಜೀವನದಲ್ಲಿ ರಂಗು ತುಂಬುವ ವಿಚಾರ ನಿಮ್ಮ ಹೃದಯದಲ್ಲಿ ಬಂದಿದೆಯಾ? ಈ ಪ್ರಶ್ನೆಯನ್ನು ಹಬ್ಬದ ಬಳಿಕ ಬಿಡುವಿನ ವೇಳೆಯಲ್ಲಿ ನಿಮಗೆ ನೀವೇ ಕೇಳಿಕೊಳ್ಳಿ.

ಹಬ್ಬವನ್ನು ಕೇವಲ ನಿಮಗಷ್ಟೇ ಸೀಮಿತಗೊಳಿಸಿಕೊಂಡು ಅದರ ಖುಷಿಯ ಆನಂದವನ್ನು ಕಡಿಮೆಗೊಳಿಸಿಕೊಳ್ಳುವುದಕ್ಕಿಂತ ಎಂದಾದರೊಮ್ಮೆ ಸಾಮಾನ್ಯ ಜನರ ಜೊತೆಗೂ ಹಬ್ಬದ ಆನಂದವನ್ನು ಪಡೆದುಕೊಳ್ಳಿ. ಯಾವುದೊ ಕಾರಣದಿಂದ ಅವರ ಜೀವನದಲ್ಲಿ ಕತ್ತಲೆ ಆವರಿಸಿಕೊಂಡಿದೆ. ಯಾರೊ ಏಕಾಂಗಿ ದಂಪತಿಯ ಶೂನ್ಯಭಾವ ಕೊನೆಗೊಳಿಸಿ, ಯಾರದ್ದೊ ಉದಾಸ ಚಹರೆಯಲ್ಲಿ ನಗು ಚಿಮ್ಮಿಸಿ. ನಿಮ್ಮಿಂದ ಮುನಿಸಿಕೊಂಡ ವ್ಯಕ್ತಿಗೆ ಸಿಹಿ ಕೊಟ್ಟು ಸಂಬಂಧಕ್ಕೆ ಹೊಸ ವ್ಯಾಖ್ಯೆ ಕೊಡಿ.

ಇದೆಲ್ಲದಕ್ಕೆ ಆಗುವ ಖರ್ಚು ಕೇವಲ ಆತ್ಮೀಯತೆ ಆಗಿರುತ್ತದೆ. ಅದಕ್ಕೆ ಪ್ರತಿಯಾಗಿ ನಿಮಗೆ ನೆಮ್ಮದಿ ಮತ್ತು ಪ್ರೀತಿ ದೊರಕುತ್ತದೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಆಗುವುದಿಲ್ಲ. ನಿಮ್ಮ ಒಂದು ಪುಟ್ಟ ಹೆಜ್ಜೆ ಯಾರದೋ ಜೀವನವನ್ನು ಬದಲಿಸುವ ಶಕ್ತಿ ಹೊಂದಿರುತ್ತದೆ. ಬನ್ನಿ, ಮುಂಬರುವ ಎಲ್ಲ ಹಬ್ಬಗಳನ್ನು ಹೀಗೆ ಸ್ಮರಣಾರ್ಹಗೊಳಿಸಿ.

ಮನಸ್ತಾಪ ದೂರಗೊಳಿಸಿ

6740a36cc68405013e60f7afde7e4255

 

ಸಂಬಂಧಗಳು ಜೀವನಕ್ಕೆ ಅತ್ಯಂತ ಅವಶ್ಯಕ. ಆದರೆ ಚಿಕ್ಕಪುಟ್ಟ ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇವೆ. ಒಂದು ಕಾಲದಲ್ಲಿ ಅವೇ ಸಂಬಂಧಗಳು ನಮ್ಮ ಜೀವನದ ಒಂದು ಭಾಗವಾಗಿದ್ದವು. ಅವನ್ನು ನಾವು ಕಡೆಗಣಿಸಿ ದೂರ ಮಾಡಿಕೊಳ್ಳುತ್ತೇವೆ. ಸಕಾಲದಲ್ಲಿಯೇ ಮುನಿಸಿಕೊಂಡವರನ್ನು ಮನ್ನಿಸುವುದು ಅತ್ಯವಶ್ಯ. ಹಬ್ಬದ ಸಂದರ್ಭಗಳಲ್ಲೂ ಅವರ ಸಂಬಂಧದಲ್ಲಿ ರಂಗು ತುಂಬುವುದನ್ನು ಮರೆಯಬೇಡಿ.

ಹಬ್ಬದ ಬಳಿಕ ಸರ್‌ಪ್ರೈಸ್‌ ಕೊಡಲು ಆಕಸ್ಮಿಕವಾಗಿ ನಿಮ್ಮವರ ಮನೆ ತಲುಪಿ. ಅವರ ಕುಶಲ ಸಮಾಚಾರ ವಿಚಾರಿಸಿ. ಏನಾದರೂ ಪ್ರೀತಿಯ ಉಡುಗೊರೆ ಕೊಡಿ. ಒಂದೇ ಕ್ಷಣದಲ್ಲಿ ಅವರ ಜೊತೆ ನಿಮ್ಮ ಜೀವನದಲ್ಲೂ ಬೆಳಕು ಚಿಮ್ಮುತ್ತದೆ.

ಸಕಾರಾತ್ಮಕ ವಿಚಾರಗಳ ಬೆಳಕು

ಕೆಲವು ಜನರ ಮಾನಸಿಕತೆ ಹೇಗಿರುತ್ತದೆಂದರೆ, ಅವರು ಪ್ರತಿಯೊಂದು ಸಂಗತಿಯಲ್ಲೂ ಕೆಡುಕನ್ನು ಹುಡುಕುತ್ತಾರೆ. ತಮ್ಮ ಜೀವನದಲ್ಲಿಯೇ ಆಗಿರಬಹುದು. ಬೇರೆಯವರ ಜೀವನದಲ್ಲಿ ಅವರಿಗೆ ಯಾವಾಗಲೂ ತಪ್ಪುಗಳ ಬಗ್ಗೆಯೇ ಗಮನ ಹೋಗುತ್ತದೆ.

ಒಳ್ಳೆಯದನ್ನು ನಿರ್ಲಕ್ಷಿಸಿ, ಕೆಟ್ಟದ್ದನ್ನು ಅಥವಾ ಕೊರತೆಯನ್ನು ಮಾತ್ರ ಬಿಂಬಿಸುವುದು ಸರಿಯಲ್ಲ. ನಿಮ್ಮ ಅಂತರಂಗದಲ್ಲೂ ನಕಾರಾತ್ಮಕತೆಯ ಇಂಥ ಕತ್ತಲು ಇದ್ದರೆ, ಈಗ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯ ದೀಪ ಬೆಳಗಿಸಬೇಕು, ಪ್ರತಿಯೊಂದರಲ್ಲೂ ಬೆಳಕಿನ ಪಕ್ಷ ಗಮನಿಸಲು ಪ್ರಯತ್ನಿಸಿ. ಪ್ರತಿಯೊಂದು ಸಣ್ಣಪುಟ್ಟ ಖುಷಿಗಳನ್ನು ಸೆಲೆಬ್ರೆಟ್‌ ಮಾಡಲು ಕಲಿಯಬೇಕು.

ಬೇರೆಯವರ ಜೀವನ ಬೆಳಗಿಸಿ : ಬೇರೆಯವರ ಜೀವನದಲ್ಲಿ ಖುಷಿ ತುಂಬಲು ಮತ್ತೊಂದು ವಿಧಾನವಿದೆ. ಅದೇನೆಂದರೆ ಅಗತ್ಯವಿದ್ದರ ಮುಖದಲ್ಲಿ ಮುಗುಳ್ನಗು ತುಂಬುವುದು. ನಮ್ಮ ಸಮಾಜದಲ್ಲಿ ಅದೆಷ್ಟೋ ಜನರಿದ್ದು, ಅವರಿಗೆ ಹಬ್ಬದ ಸಂದರ್ಭದಲ್ಲಿ ಹಾಗೂ ಹಬ್ಬದ ಬಳಿಕ ಈ ಕೆಲಸಕ್ಕೆ ಆದ್ಯತೆ ಕೊಡಬಹುದು. ಈ ಕುರಿತಂತೆ ಕೆಲವರ ಅಭಿಪ್ರಾಯಗಳನ್ನು ಇಲ್ಲಿ ತಿಳಿಸಲಾಗಿದೆ.

ಸಂಜನಾ ರೆಡ್ಡಿ : 32 ವರ್ಷದ ಈ ನಿರ್ದೇಶಕಿ 2 ಹಿಟ್‌ ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಕುಟುಂಬದ ಒಂದು ಪದ್ಧತಿ ಏನಾಗಿದೆಯೆಂದರೆ, ಅವರು ತಮ್ಮ ಕುಟುಂಬದ ಶೇ.40ರಷ್ಟು ಭಾಗವನ್ನು ಅಗತ್ಯವಿದ್ದವರಿಗೆ ನೀಡುತ್ತಾರೆ. ಮಕ್ಕಳಿಗೆ ಸಹಾಯ ಮಾಡುವುದು ಅವರ ಆದ್ಯತೆಯಲ್ಲಿ ಸೇರಿದೆ. ದೀಪಾವಳಿಗೂ ಮುನ್ನ ಅವರ ಕೆಲವು ಸ್ನೇಹಿತರು ಬೀದಿ ಮಕ್ಕಳು ಹಾಗೂ ಅನಾಥಾಲಯದ ಮಕ್ಕಳನ್ನು ಭೇಟಿಯಾಗಿ ಅವರಿಗೆ ಯಾವುದರ ಅವಶ್ಯಕತೆಯಿದೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಬಳಿಕ ಒಂದು ಪಟ್ಟಿ ಸಿದ್ಧಪಡಿಸಿ, ವಸ್ತುಗಳನ್ನು ಖರೀದಿಸುತ್ತಾರೆ. ಹಳೆಯ ಬಟ್ಟೆಗಳೇನಾದರೂ ಇದ್ದರೆ, ಅವನ್ನು ಸ್ವಚ್ಛಗೊಳಿಸಿ ಪ್ಯಾಕ್ ಮಾಡುತ್ತಾರೆ. ಅದರ ಜೊತೆಗೆ ಕೆಲವು ಸಿಹಿ ತಿಂಡಿಗಳು ಮತ್ತು ಪಾನೀಯಗಳನ್ನು ಹಂಚುತ್ತಾರೆ. ಇದೆಲ್ಲದರ ಜೊತೆಗೆ ಒಂದಿಷ್ಟು ಹಣವನ್ನು ಸೇರಿಸಿ ಕೊಡುತ್ತಾರೆ. ಅನಾಥಾಶ್ರಮಕ್ಕೆ ಹೋದಾಗ ಅಲ್ಲಿ ಅವರ ಜೊತೆಗೆ ಕುಳಿತು ತಿಂಡಿ ತಿನ್ನುತ್ತಾರೆ. ಆ ಮಕ್ಕಳ ಖುಷಿ ಇರಲ್ಲಿ ಹೊಸ ಉತ್ಸಾಹ ತುಂಬುತ್ತದೆ.

Geetanjali-Chopra

ಡಾ. ಗೀತಾಂಜಲಿ : `ವಿಷಸ್‌ಬ್ಲೆಸಿಂಗ್ಸ್’ ಹೆಸರಿನ ಎನ್‌ಜಿಓದ ಫೌಂಡರ್‌ ಆಗಿರುವ ಡಾ. ಗೀತಾಂಜಲಿ ಹಬ್ಬದ ಸೀಸನ್‌ನಲ್ಲಿ `ಈಟ್‌ ಒನ್‌ ಲೈಟ್‌ ಒನ್‌’ ಹೆಸರಿನಲ್ಲಿ ಒಂದು ಅಭಿಯಾನ ನಡೆಸುತ್ತಾರೆ. ಈ ಅಭಿಯಾನದ ಉದ್ದೇಶ ಪ್ರತಿಯೊಬ್ಬ ವ್ಯಕ್ತಿ  ಒಬ್ಬ ವ್ಯಕ್ತಿಯ ಜೀವನದಲ್ಲಾದರೂ ವ್ಯತ್ಯಾಸ ಉಂಟು ಮಾಡಿದರೆ, ಬಹಳಷ್ಟು ಜನರ ಜೀವನದಲ್ಲಿ ಖುಷಿಯ ಬಣ್ಣ ತುಂಬಬಹುದು.

ಗೀತಾಂಜಲಿ ಹೇಳುವುದು ಹೀಗೆ, ದೀಪಾವಳಿಯ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಮತ್ತು ಎನ್‌ಜಿಓ ಮುಖಾಂತರ ಸಾರ್ವಜನಿಕರಿಗೆ 100 ರೂ. ದೇಣಿಗೆ ನೀಡಲು ಪ್ರೋತ್ಸಾಹಿಸುತ್ತೇವೆ. ಅದರಿಂದ ಸಂಗ್ರಹವಾದ ಮೊತ್ತವನ್ನು ಬಡ ಮಕ್ಕಳ ಅಗತ್ಯಕ್ಕೆ ಪೂರೈಸಲು ಖರ್ಚು ಮಾಡುತ್ತೇವೆ.

anuja

ಅನುಜಾ ಕಪೂರ್‌: `ನಿರ್ಭಯಾ ಏಕ್‌ ಶಕ್ತಿ’ ಹೆಸರಿನ ಎನ್‌ಜಿಓದ ಫೌಂಡರ್‌ ಹಾಗೂ ಸುಪ್ರೀಂ ಕೋರ್ಟ್‌ ವಕೀಲೆಯಾಗಿರುವ ಅನುಜಾ ಕಪೂರ್‌ ಹೀಗೆ ಹೇಳುತ್ತಾರೆ, “ದೀಪಾವಳಿಗೂ ಮುಂಚೆ  ನಾನು ನನ್ನ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಅಗತ್ಯ ವಸ್ತು ಮತ್ತು ಸಿಹಿ ತಿಂಡಿ ಹಾಗೂ ಬೋನಸ್‌ ಕೂಡ ಕೊಡುತ್ತೇನೆ.”

ದೀಪಾವಳಿಯ ಪೂರ್ತಿ ತಿಂಗಳು ಅವರು ತಮ್ಮ ಗಾಡಿಯಲ್ಲಿ ಚಾಕಲೇಟ್ಸ್, ಬಿಸ್ಕತ್ತು, ಪುಸ್ತಕ, ಪೆನ್ಸಿಲ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಹೋಗುವಾಗ ಬರುವಾಗ ಈ ವಸ್ತುಗಳನ್ನು ಅಗತ್ಯವಿದ್ದವರಿಗೆ ವಿತರಿಸುತ್ತಾರೆ.

ಅವರ ಮನೆ ಸಮೀಪ ಒಂದು ದೊಡ್ಡ ಸ್ಲಮ್ ಇದ್ದು, ಅಲ್ಲಿನ ಅಗತ್ಯವಿರುವವರಿಗೆ ಸಾಮಾನುಗಳನ್ನು ವಿತರಿಸುತ್ತಾರೆ. ಎಷ್ಟೋ ಸಲ ಅವರಿಗೆ ಬಡ ಮಕ್ಕಳು, `ಮೇಡಂ, ನಮಗೆ ಮುಂದಿನ ಸಲ ಆ ಸಾಮಾನು ಈ ಸಾಮಾನುಗಳನ್ನು ಕೊಡಿಸಿ ಎಂದು ಕೇಳುವುದು ಉಂಟು.

ಜ್ಞಾನಚಂದ್ರ ಮಿಶ್ರಾ : ಎನ್‌ಸಿಆರ್‌ನಲ್ಲಿ ವಾಸಿಸುವ ಸಿಎ ಜ್ಞಾನಚಂದ್ರ ಮಿಶ್ರ ಹೀಗೆ ಹೇಳುತ್ತಾರೆ, ಮುಂಬೈನ ವೈಶಾಲಿ ಸಮೀಪ ಬಹಳಷ್ಟು ಸ್ಲಮ್ ಗಳಿವೆ. ಅಲ್ಲಿ ಬಹಳಷ್ಟು ಬಡವರಿದ್ದಾರೆ. ದೀಪಾವಳಿಗೂ 2-3 ದಿನ ಮುಂಚೆಯೇ ಆಹಾರ ಪದಾರ್ಥ ಮತ್ತು ಸ್ವೆಟರ್‌ಗಳನ್ನು ಕೊಟ್ಟು ಬರುತ್ತೇನೆ. ಬಹಳಷ್ಟು ಮಕ್ಕಳು ಪ್ರತಿ ವರ್ಷ ನಮಗಾಗಿ ನಿರೀಕ್ಷೆ ಮಾಡುತ್ತಾ ಕುಳಿತಿರುತ್ತಾರೆ.

ನಮಗಾಗಿ ನಾವು ಬಹಳಷ್ಟು ವಸ್ತುಗಳನ್ನು ಖರೀದಿಸುತ್ತಿರುತ್ತೇವೆ. ಆದರೆ ಬೇರೆಯವರಿಗಾಗಿಯೂ ನಾವು ಅವರಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ಕೊಟ್ಟರೆ ಅವರ ಕಣ್ಣಲ್ಲಿ ಕಂಡುಬರುವ ವಿಶೇಷ ಬೆಳಕು ನನಗೆ ಖುಷಿಯ ಅನುಭವ ಕೊಡುತ್ತದೆ.

ರಿತು ಗ್ರೋವರ್‌ : ಟಿ.ಜಿ.ಎಚ್‌ ಲೈಫ್‌ ಸ್ಟೈಲ್ ‌ಸರ್ವೀಸಸ್‌ಲಿಮಿಟೆಡ್‌ನ ಫೌಂಡರ್‌ ರಿತು ಗ್ರೋವರ್‌ ಹೀಗೆ ಹೇಳುತ್ತಾರೆ, “ನಮ್ಮ  ಕಂಪನಿಯ ಸಿಎಸ್‌ಆರ್‌ ಆ್ಯಕ್ಟಿವಿಟೀಸ್‌ಗೆ ಅನುಗುಣವಾಗಿ ವರ್ಷದಲ್ಲಿ 4 ಸಲ ಸಮಾಜದ ಹಿಂದುಳಿದ ಹಾಗೂ ನಿರ್ಗತಿಕರ ನಡುವೆ ಹೋಗಿ ಅವರುಗಳಿಗಾಗಿ ಏನನ್ನಾದರೂ ಮಾಡುವ ಪರಂಪರೆ ಇಟ್ಟುಕೊಂಡಿದ್ದೇವೆ. ದೀಪಾವಳಿಯ ಸಮಯದಲ್ಲಿ ಬೀದಿ ಮಕ್ಕಳಿಗಾಗಿ ಉಡುಗೊರ, ಸಿಹಿ ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತೇವೆ. ಮಕ್ಕಳಿಗೆ ಯಾವ ವಸ್ತುಗಳ ಅವಶ್ಯಕತೆ ಇದೆ ಎನ್ನುವುದರ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡು ಅದನ್ನು ಈಡೇರಿಸಲು ಪ್ರಯತ್ನಿಸುತ್ತೇವೆ.”

gyan

ರಿತು ಗೋಯಲ್ : `ಸೇವಾ ಭಾರತಿ’ ಹೆಸರಿನ ಎನ್‌ಜಿಓ ನಡೆಸುವ ಗುರು ಗ್ರಾಮದ ರಿತು ಗೋಯಲ್ ವಿಶಿಷ್ಟ ಕೆಲಸ ಮಾಡುತ್ತಾರೆ. ದೀಪಾವಳಿ ಸಮಯದಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗೆ ಉದ್ಯೋಗ ಕೊಟ್ಟು ಅವರನ್ನು ಸ್ವಾವಲಂಬಿಯಾಗಿಸಲು ಪ್ರಯತ್ನಿಸುತ್ತಾರೆ. ಆ ಮಕ್ಕಳಿಗೆ ಡಿಸೈನರ್‌ ದೀಪಗಳನ್ನು ತಯಾರಿಸುವುದು, ಕಾಗದದಿಂದ ಕಿವಿಯೋಲೆಗಳನ್ನು ತಯಾರಿಸುವುದು, ಲೇಸ್‌ ಮತ್ತು ಕುಂದಣದಿಂದ ಡೆಕೊರೇಟ್‌ ಮಾಡಲು ಕಲಿಸುತ್ತಾರೆ. ಅದರಿಂದ ಮಕ್ಕಳಿಗೆ ಸಾಕಷ್ಟು ಆದಾಯ ಬರುತ್ತದೆ.

ಈ ಮೂಲಕ ಅವರು ದೀಪಾವಳಿಯಂದು ತಮ್ಮ ಮನೆಯನ್ನು ಬೆಳಗಿಸಲು ಸಾಧ್ಯವಾಗುತ್ತದೆ. ಖುಷಿಯನ್ನು ಹಂಚಿಕೊಳ್ಳುವುದರಿಂದ ಅದು ಹೆಚ್ಚುತ್ತದೆ. ಅದೇ ರೀತಿ ದುಃಖವನ್ನು ಹಂಚಿಕೊಳ್ಳುವುದರಿಂದ ಅದು ಕಡಿಮೆಯಾಗುತ್ತದೆ ಎಂದು ಅಭಿಮಾನಿಗಳು ಹೇಳಿದ್ದು ಸರಿಯಾಗಿಯೇ ಇದೆ. ಕಂದಾಚಾರದ ರೀತಿ ರಿವಾಜುಗಳಿಂದ ಹಬ್ಬಗಳನ್ನು ಮುಕ್ತಿಗೊಳಿಸಿ, ಒಂದು ಹೊಸ ಪರಂಪರೆ ಶುರು ಮಾಡಬೇಕು. ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಜನರ ಜೀವನದಲ್ಲಿ ಖುಷಿಯನ್ನು ತರುವುದೇ ಹಬ್ಬಗಳ ನಿಜವಾದ ಉದ್ದೇಶವಾಗಬೇಕು.

– ಸಂಗೀತಾ

ಉಡುಗೊರೆಯಲ್ಲ ಇದು ಆತ್ಮೀಯತೆಯ ಅನುಭವ

ನಮ್ಮ ಆಸುಪಾಸು ಎಂತಹ ಕೆಲವು ಜನರಿದ್ದಾರೆಂದರೆ, ಅವರಿಗೆ ಖುಷಿಯ ನಿರೀಕ್ಷೆ ಇರುತ್ತದೆ. ಅವರು ಯಾರಿಂದಲೂ ಏನನ್ನು ಬೇಡುವುದಿಲ್ಲ. ಅವರು ನಿಮ್ಮ ಮನೆಯ ಆಸುಪಾಸು, ಅಪಾರ್ಟ್‌ಮೆಂಟ್‌ ಪಕ್ಕ ಅಥವಾ ಅದೇ ಬೀದಿಯಲ್ಲಿ ಇರುತ್ತಾರೆ. ಅವರಿಗೆ ಹೇಳಿಕೊಳ್ಳಲು ತುಂಬಿದ ಕುಟುಂಬವೇನೂ ಇರುವುದಿಲ್ಲ. ಯಾರೊ ಒಬ್ಬರ ಮಗ ಅವರಿಗೆ ತಿಂಗಳು ತಿಂಗಳು ಹಣವನ್ನೇನೊ ಕಳಿಸುತ್ತಿರುತ್ತಾನೆ.

ಆದರೆ ಅವರ ಬಳಿ ತಮ್ಮವರೊಂದಿಗೆ ಮಾತನಾಡಲು ಸಮಯವಿರುವುದಿಲ್ಲ. ಯಾರೊ ಒಬ್ಬ ಮಹಿಳೆಯ ಪತಿ ಕೆಲಸಕ್ಕೆಂದು ದೂರದ ನಗರದಲ್ಲಿ ಇದ್ದಿರಬಹುದು. ಅಂತಹ ಮಹಿಳೆಯನ್ನು ಗುರುತಿಸಿ ಅವರಿಗಾಗಿ ಒಂದಿಷ್ಟು ಸಮಯ ಕೊಡಿ, ಸಿಹಿ ತಿನ್ನಿಸಿ, ಸಿಹಿಸಿಹಿಯಾದ ಮಾತುಗಳನ್ನಾಡಿ.

ಇಂದಿನ ಬದಲಾಗುತ್ತಿರುವ ಸನ್ನಿವೇಶ ನಮಗೆ ಬಹಳಷ್ಟನ್ನು ಕೊಟ್ಟಿದೆ. ಅದರ ಜೊತೆಗೆ ಬಹಳಷ್ಟನ್ನು ಕಿತ್ತುಕೊಂಡಿದೆ ಕೂಡ. ನೀವು ನಿಮ್ಮ ಜೀವನದಲ್ಲಿ ಒಂದಿಷ್ಟು ನೆಮ್ಮದಿ ಕಾಣಬಯಸುತ್ತಿದ್ದರೆ, ಪ್ರತಿಯೊಂದು ಹಬ್ಬವನ್ನು ಅಂಥವರೊಂದಿಗೆ ಆಚರಿಸಿ. ಅದು ಜೀವನ ಪೂರ್ತಿ ನೆನಪಿನಲ್ಲಿ ಉಳಿಯುತ್ತದೆ. ಹತ್ತಿರದ ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿನ ಕೆಲವು ವೃದ್ಧರ ಕಷ್ಟ ಸುಖ ವಿಚಾರಿಸಿ. ಅವರ ಮಾತುಗಳು ಕಹಿ ಅನಿಸಬಹುದು. ಆದರೆ ಅವರ ಮಾತುಗಳಲ್ಲಿನ ವಾಸ್ತವ ನಿಮ್ಮ ಹೃದಯ ಬದಲಿಸಬಹುದು. ಅಂಥವರ ಜೊತೆ ಒಂದಿಷ್ಟು ಸಮಯ ಕಳೆಯಿರಿ. ಜೊತೆಗೊಂದು ಉಡುಗೊರೆ ಕೊಡಿ. ಆಗ ಅವರಿಗೆ ತಮ್ಮ ಬಗ್ಗೆ ಕಾಳಜಿ ವಹಿಸಲು ಯಾರೋ ಒಬ್ಬರು ಇದ್ದಾರೆ ಅನಿಸುತ್ತದೆ.

ಇಂದಿನ ಬದಲಾಗುತ್ತಿರುವ ಸನ್ನಿವೇಶ ನಮಗೆ ಬಹಳಷ್ಟನ್ನು ಕೊಟ್ಟಿದೆ. ಅದರ ಜೊತೆಗೆ ಬಹಳಷ್ಟನ್ನು ಕಿತ್ತುಕೊಂಡಿದೆ ಕೂಡ. ನೀವು ನಿಮ್ಮ ಜೀವನದಲ್ಲಿ ಒಂದಿಷ್ಟು ನೆಮ್ಮದಿ ಕಾಣಬಯಸುತ್ತಿದ್ದರೆ, ಪ್ರತಿಯೊಂದು ಹಬ್ಬವನ್ನು ಅಂಥವರೊಂದಿಗೆ ಆಚರಿಸಿ. ಅದು ಜೀವನ ಪೂರ್ತಿ ನೆನಪಿನಲ್ಲಿ ಉಳಿಯುತ್ತದೆ. ಹತ್ತಿರದ ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿನ ಕೆಲವು ವೃದ್ಧರ ಕಷ್ಟ ಸುಖ ವಿಚಾರಿಸಿ. ಅವರ ಮಾತುಗಳು ಕಹಿ ಅನಿಸಬಹುದು. ಆದರೆ ಅವರ ಮಾತುಗಳಲ್ಲಿನ ವಾಸ್ತವ ನಿಮ್ಮ ಹೃದಯ ಬದಲಿಸಬಹುದು. ಅಂಥವರ ಜೊತೆ ಒಂದಿಷ್ಟು ಸಮಯ ಕಳೆಯಿರಿ. ಜೊತೆಗೊಂದು ಉಡುಗೊರೆ ಕೊಡಿ. ಆಗ ಅವರಿಗೆ ತಮ್ಮ ಬಗ್ಗೆ ಕಾಳಜಿ ವಹಿಸಲು ಯಾರೋ ಒಬ್ಬರು ಇದ್ದಾರೆ ಅನಿಸುತ್ತದೆ.

ಇಲ್ಲಿ ನಾವು ನಿಮಗೆ ಕೆಲವು ಗಿಫ್ಟ್ ಗಳ ಬಗ್ಗೆ ಐಡಿಯಾ ಕೊಡುತ್ತಿದ್ದು, ಅ ಅಪರಿಚಿತ ಜನರಲ್ಲೂ ಮುಗುಳ್ನಗೆ ಮೂಡಿಸಬಹುದು.

777_red_F

ಪೆನ್‌ : ಇದಕ್ಕಿಂತ ಕಡಿಮೆ ಬೆಲೆಯ ಉಡುಗೊರೆ ಮತ್ತಾವುದು ಇರಲು ಸಾಧ್ಯ? ಅದರಲ್ಲೂ ವಯಸ್ಸಾದ ಒಬ್ಬ ವ್ಯಕ್ತಿಗೆ ಕೊಡುವಾಗ, ತಂತ್ರಜ್ಞಾನದ ಇಂದಿನ ಯುಗದಲ್ಲಿ ವಯಸ್ಸಾದ ವ್ಯಕ್ತಿಗಳು ಈಗಲೂ ತಮ್ಮ ಶರ್ಟಿನ ಮೇಲಿನ ಜೇಬಿನಲ್ಲಿ ಪೆನ್ನು ಇಟ್ಟುಕೊಳ್ಳುತ್ತಾರೆ. ಅದರ ಬಗ್ಗೆ ಅವರಿಗೆ ಸಾಕಷ್ಟು ಅಟ್ಯಾಚ್‌ಮೆಂಟ್‌ ಕೂಡ ಇರುತ್ತದೆ. ಇಂತಹದರಲ್ಲಿ ಅವರಿಗೆ ಈ ಉಡುಗೊರೆ ಹೃದಯ ತುಂಬಿಸುತ್ತದೆ.

cullinane-law-favorite-books-for-nonprofits

ಪುಸ್ತಕ : ಪುಸ್ತಕಗಳು ಮನುಷ್ಯನ ಒಳ್ಳೆಯ ಸ್ನೇಹಿತರು. ಪುಸ್ತಕಗಳ ಅಭಿಮಾನಿಗಳಿಗೆ ಪುಸ್ತಕಕ್ಕಿಂತ ಒಳ್ಳೆಯ ಉಡುಗೊರೆ ಮತ್ತೊಂದಿಲ್ಲ. ಏಕಾಂಗಿಯಾಗಿರುವ ವ್ಯಕ್ತಿಗಂತೂ ಅದು ತುಂಬಾ ಬೆಲೆ ಬಾಳುವಂಥದ್ದು ಅನಿಸುತ್ತೆ. ನಮ್ಮ ಮನೆಯ ಹಿರಿಯರು ಪತ್ರಿಕೆಗಳು ಹಾಗೂ ನಿಯತಕಾಲಿಕೆಯ ಒಂದೊಂದು ಪುಟವನ್ನು ಓದುತ್ತಾರೆ. ಅಷ್ಟೇ ಅಲ್ಲ, ಪತ್ರಿಕಾ ಕಾರ್ಯಾಲಯಗಳಿಗೆ ತಮ್ಮ ಅಭಿಪ್ರಾಯವನ್ನೂ ತಿಳಿಸುತ್ತಾರೆ. ಅಂತಹ ವ್ಯಕ್ತಿಗೆ ಒಂದು ಆಸಕ್ತಿದಾಯಕ ಪುಸ್ತಕ ಕೊಟ್ಟರೆ ಅವರ ಮನಸ್ಸಿಗೆ ಅದೆಷ್ಟು ಖುಷಿ ಆಗುತ್ತದೆ ಎನ್ನುವುದನ್ನು ಊಹಿಸಲು ಆಗದು.

ನಿಸರ್ಗದ ಉಡುಗೊರೆ : ನಿಸರ್ಗದ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ ಇರುತ್ತದೆ. ಏಕಾಂಗಿಯಾಗಿರುವ ವ್ಯಕ್ತಿಗೆ ಪರಿಸರದ ಮಧ್ಯೆ ಇರಲು ಇಷ್ಟ. ಏಕೆಂದರೆ ಹಸಿರು ದೃಶ್ಯ ಮನುಷ್ಯನ ಭಾವನೆಯನ್ನೇ ಬದಲಿಸಿಬಿಡುತ್ತದೆ. ನೀವು ಯಾರಿಗಾದರೂ ಅತ್ಯಂತ ಕಡಿಮೆ ಬೆಲೆಯ ಸುಂದರ ಉಡುಗೊರೆ ಕೊಡಲು ಇಚ್ಛಿಸುವಿರಾದರೆ, ಅವರಿಗೆ ಇಂಡೋರ್‌ ಅಥವಾ ಔಟ್‌ಡೋರ್‌ ಪ್ಲಾಂಟ್‌ ಒಂದನ್ನು ಪಾಟ್‌ನಲ್ಲಿ ನೆಟ್ಟು ಕೊಡಬಹುದು. ಅವರು ಬಹು ದೊಡ್ಡ ಮೇಲ್ಛಾವಣಿ ಹೊಂದಿದ್ದು ಅಲ್ಲಿ ಕೈತೋಟ ಇದ್ದರೆ, ಜೈವಿಕ ಕೃಷಿಗಾಗಿ ಒಂದು ಕಿಟ್‌ನ್ನು ಉಡುಗೊರೆಯಾಗಿ ಕೊಡಬಹುದು.

51n03Y1k8tL._SL1500_

ರುಚಿಕರ ವ್ಯಂಜನ : ಯಾರು ಏಕಾಂಗಿಯಾಗಿ ವಾಸಿಸುತ್ತಿದ್ದಾರೊ, ಅವರು ಮನೆಯಲ್ಲಿ ಏನಾದರೂ ವಿಶೇಷ ತಿಂಡಿಗಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅವರಿಗೆ ಇಷ್ಟಾವಾಗುವಂತಹ ಕೆಲವು ವಿಶೇಷ ತಿಂಡಿಗಳನ್ನು ತೆಗೆದುಕೊಂಡು ಹೋಗಿ ಅವರ ಪ್ರತಿಕ್ರಿಯೆ ಹೇಗಿರುತ್ತೆ ನೋಡಿ. ಇದರ ಹೊರತಾಗಿ ಚಾಕ್ಲೆಟ್‌, ಕೇಕ್‌ ಮುಂತಾದವುಗಳನ್ನು ಕೂಡ ಕೊಡಬಹುದು. ಆದರೆ ಕೈಯಾರೆ ತಯಾರಿಸಿದ ತಿಂಡಿಗಳನ್ನು ಕೊಡುವುದು ಹೆಚ್ಚು ಖುಷಿ ಕೊಡುತ್ತದೆ.

ಹೃದಯಕ್ಕೆ ಹತ್ತಿರವಾಗುವ ಉಡುಗೊರೆ : ಏಕಾಂಗಿಯಾಗಿ ವಾಸಿಸುವ ವ್ಯಕ್ತಿಗೆ ಅತ್ಯಂತ ನಿಕಟವಾಗುವುದೆಂದರೆ ಅದು ಸಂಗೀತ. ಅದನ್ನು ನಾವು ಖುಷಿಯ ಗಳಿಗೆ, ವಿಷಾದದ ಸಂದರ್ಭದಲ್ಲೂ ಆಲಿಸಬಹುದು. ಅದು ನಮ್ಮ ದುಃಖವನ್ನಂತೂ ಕಡಿಮೆಗೊಳಿಸದು.

ಆದರೆ ನಮಗೆ ಒಂದಿಷ್ಟು ನಿರಾಳತೆ ನೆಮ್ಮದಿಯನ್ನಂತೂ ಕೊಡುತ್ತದೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಹಾಡುಗಳ ಒಂದು ಕಲೆಕ್ಷನ್‌ನ್ನು ಕೊಡಬಹುದು. ಅವರಿಗೆ ಹಾಡುವ ಬರೆಯುವ ಅಥವಾ ಓದುವ ಹವ್ಯಾಸವಿದ್ದರೆ ಒಂದು ಕಾರ್ಡ್‌ ಮೇಲೆ 2-3 ಕವಿತೆಗಳನ್ನು ಬರೆದು ಅವರಿಗೆ ಫ್ರೇಮ್ ಮಾಡಿ ಡೈರಿಯ ಜೊತೆಗೆ ಕೊಡಬಹುದು.

ಏಕಾಂಗಿ ವ್ಯಕ್ತಿ ಮಹಿಳೆಯಾಗಿದ್ದರೆ : ನಿಮ್ಮ ಮನೆಯ ಆಸುಪಾಸು ಯಾರಾದರೂ ಏಕಾಂಗಿ ಮಹಿಳೆ ವಾಸಿಸುತ್ತಿದ್ದರೆ, ಆಕೆಯ ಪತಿ ಅಥವಾ ಮಗ ಬೇರೆಲ್ಲೋ ವಾಸಿಸುತ್ತಿದ್ದರೆ, ಅಥವಾ ಅವರು ಸಿಂಗಲ್ ಆಗಿದ್ದರೆ ಅವರು ನಿಮಗೆ ಅಮ್ಮ, ಸೋದರಿ ಅಥವಾ ಗೆಳತಿಯಂತೆ ಆಗಿರಬಹುದು. ಅವರಿಗೆ ಖುಷಿಯನ್ನುಂಟು ಮಾಡಲು ಮೇಕಪ್‌ ಪ್ರಾಡಕ್ಟ್, ಫೋನ್‌ ಕವರ್‌, ಹೋಮ್ ಡೆಕೊರೇಶನ್ ಐಟಂ ಕೊಡಬಹುದು.

ಈ ಹಬ್ಬದ ಸಮಯದಲ್ಲಿ ನೀವು ನಿಮಗೆ ನೀವೇ ಒಂದು ಭರವಸೆ ಕೊಟ್ಟುಕೊಳ್ಳಿ ಅದೇನೆಂದರೆ, ನೀವು ಖುಷಿಯಿಂದ ಹಬ್ಬ ಆಚರಿಸುವುದರ ಜೊತೆ ಜೊತೆಗೆ ಇನ್ನೊಬ್ಬರ ಖುಷಿಯ ಬಗ್ಗೆಯೂ ಕಾಳಜಿ ವಹಿಸ್ತೀನಿ ಅಂತ. ಅವರಿಗೆ ನೀವು ಹೆಚ್ಚೇನೂ ಕೊಡಬೇಕಿಲ್ಲ. ಅವರ ಏಕಾಂಗಿತನ ದೂರ ಮಾಡಿಕೊಳ್ಳಲು ಅವರಿಗೆ ಒಂದಿಷ್ಟು ಆಸರೆ ಕೊಟ್ಟರೆ ಸಾಕು.

– ಜ್ಯೋತಿ ರಾಜೇಶ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ