ಆರೋಗ್ಯ ಹಾಗೂ ಜೀವನದೊಂದಿಗೆ ಆಟ ಅಪಾಯಕಾರಿ

ಆಯುಷ್ಯ ಸಚಿವಾಲಯದ ಸರ್ಕಾರಿ ಸುತ್ತೋಲೆಯನ್ನು ಕೋವಿಡ್‌ ಚಿಕಿತ್ಸೆಯ ಬಾಬತ್ತಿನಲ್ಲಿ ಮೂಢನಂಬಿಕೆ ಹಾಗೂ ಕಂದಾಚಾರದಿಂದ ಕೂಡಿದ ಪ್ರೋಟೊಕಾಲ್‌ನ್ನು ಜಾರಿಗೊಳಿಸಿದೆ. ಆಯುರ್ವೇದಾಚಾರ್ಯರು, ಯೋಗಾಚಾರ್ಯರು ಎಂದು ಕತ್ತಿನಲ್ಲಿ ಡಿಗ್ರಿ ನೇತು ಹಾಕಿಕೊಂಡು ಹೋಗುವವರು ಮಂತ್ರ ತಂತ್ರ ಷಡ್ಯಂತ್ರದ ಮುಖಾಂತರ ಕೋವಿಡ್‌ನ್ನು ನಿಯಂತ್ರಣದಲ್ಲಿಡಲು ಆಗಲಿಲ್ಲ. ಯಜ್ಞಹನ ಕೀರ್ತನೆಗಳ ಮೂಲಕ ಭರವಸೆ ಕೊಡಲಾಗಲಿಲ್ಲ.

ಈಗ ಆಯುಷ್‌ ಸಚಿವಾಲಯ ಕೋವಿಡ್‌ ಗ್ರಸ್ತ ರೋಗಿಗಳು ಗುಣಮುಖರಾದ ಬಳಿಕ ಶಭಾಷ್‌ಗಿರಿ ಪಡೆದುಕೊಳ್ಳಲು ಈ ಆದೇಶವನ್ನು ಜಾರಿಗೊಳಿಸಿದ್ದಾರೆ. ಏಕೆಂದರೆ ಭಗವಾ ಬ್ರಿಗೇಡ್‌ಗೆ ಹಣ ಮಾಡಿಕೊಳ್ಳಲು ದಾರಿ ಆಗಲೆಂದು.

ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಲಾದ ಈ ಆದೇಶದ ರಕ್ಷಣೆಗೆಂಬಂತೆ ಮೊದಲೇ ಹೇಳಲಾಗಿತ್ತು, ಕೋವಿಡ್‌ನಿಂದ ಗುಣಮುಖರಾದವರಿಗೆ ಇದು ಸುಲಭಕ್ಕೆ ಹೊರಟು ಹೋಗದು.

ಆದರೆ ಆರೋಗ್ಯ ಸಚಿವಾಲಯದ ಸಚಿವ ಹರ್ಷವರ್ಧನ್‌ ಈ ಆದೇಶದ ಬಗ್ಗೆ ಏಕೆ ಅಷ್ಟೊಂದು ಬೊಬ್ಬೆ ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಸರ್ಕಾರದ ಪ್ರಕಾರ, ಇದು ಕೆಲವರಿಗೆ ಆದಾಯದ ಮೂಲವಾಗಿದೆ.

ಈ ಆದೇಶದಲ್ಲಿ ರೋಗಿಗಳಿಗೆ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಬೇಕೆಂದು ಹೇಳಲಾಗಿದೆ. ಅವರಿಗೆ ಸಹಜವಾಗಿಯೇ ಗುರುವಿನ ಅಗತ್ಯ ಉಂಟಾಗುತ್ತದೆ. ಭಗವಾ ರೇಷ್ಮೆ ಬಟ್ಟೆ ತೊಟ್ಟವರು ಕಂಡುಬರುತ್ತಾರೆ. ಇತ್ತೀಚೆಗೆ ಹಣ ಕೊಟ್ಟು ಆನ್‌ಲೈನ್‌ ಕ್ಲಾಸ್‌ ಕೂಡ ಜಾಯಿನ್‌ ಆಗಬಹುದು.

ಉಸಿರಾಟ ಪ್ರಕ್ರಿಯೆ ಹಾಗೂ ವ್ಯಾಯಾಮದ ಉಪಾಯಗಳನ್ನು ನಿಮ್ಮ ವೈದ್ಯರನ್ನು ಕೇಳಿ ಪಡೆದುಕೊಳ್ಳಿ ಎಂಬ ಆದೇಶ ಅದರಲ್ಲಿದೆ. ಪ್ರಾಣಾಯಾಮ ಹಾಗೂ ಧ್ಯಾನ ಎರಡೇ ಸಾಕಿದ್ದರೆ, ವೈದ್ಯರ ಸಲಹೆ ಏಕೆ? ನಂತರ ಏನಾದರೂ ಸಮಸ್ಯೆ ಉಂಟಾದರೆ ಅದರ ತಪ್ಪನ್ನು ಡಾಕ್ಟರ್‌ ತಲೆ ಮೇಲೆ ಹಾಕಬೇಕಲ್ಲ.

ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸಿ ಗಿಡಮೂಲಿಕೆಗಳ ಪುಡಿಯನ್ನು ತೆಗೆದುಕೊಳ್ಳಿ ಎಂಬ ಆದೇಶ ಇದೆ. ಅಂದರೆ ಆಯುಷ್‌ತಜ್ಞರಿಗೂ ಹಣ ಕೊಟ್ಟು ಕೇಳಿ ಹಾಗೂ ಡಾಕ್ಟರ್‌ಗೂ ಹೇಳಿ.

ಧರ್ಮಗುರುಗಳ ಒಳ್ಳೊಳ್ಳೆ ಸಲಹೆ ಪಡೆದುಕೊಳ್ಳಿ ಎಂದು ಅದರಲ್ಲಿ ಹೇಳಲಾಗಿದೆ. ಆದರೆ ಈ ಪ್ರವಚನ ಉಚಿತವಾಗಿ ಎಲ್ಲಿ ಸಿಗುತ್ತದೆ? ಏನಾದರೂ ಕಾಣಿಕೆ ಕೊಡಬೇಕು, ಅವರ ಸಲಹೆ ಪಡೆದುಕೊಳ್ಳಿ ಎಂದು ಹೇಳಿರುವುದರಿಂದ ಅವರಿಗೆ ಬೇಡಿಕೆ ಕೂಡ ಹೆಚ್ಚುತ್ತದೆ. ಅವರು ಘೋಷಿಸಿದ ಗುರುಗಳು ಕಳೆದ ಕೆಲವು ದಿನಗಳಿಂದ ಖಾಲಿ ಇದ್ದರು. ಅವರ ಆದಾಯ ಹೆಚ್ಚಿಸುವುದು ಧಾರ್ಮಿಕ ಸರ್ಕಾರದ ಕರ್ತವ್ಯ ಅಲ್ಲವೇ.

ಆಯುಷ್‌ವರ್ಧಾ, ಸಾಮಿನಿಬಟಿ, ಗಿಲೋಯ್‌ ಪೌಡರ್‌, ಅಶ್ವಗಂಧ ಪೌಡರ್‌, ನೆಲ್ಲಿಕಾಯಿ ಚ್ಯವನ್‌ ಪ್ರಾಶ್‌ ಮುಂತಾದ ಔಷಧಿಗಳ ಉಲ್ಲೇಖವಿದ್ದು, ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವ ಆದೇಶವಿದೆ.

ಈ ಎಲ್ಲ ಔಷಧಿಗಳನ್ನು ಕೋವಿಡ್‌ ರೋಗಿಗಳ ಮೇಲೆ ಸಂಶೋಧನೆ ಮಾಡಲಾಗಿದೆಯೇ? ಯಾರು ಇದನ್ನು ಅನುಸರಿಸಿದ್ದಾರೊ ಅವರಿಗೆ ಕೋವಿಡ್‌ ಪುನಃ ಬರುವುದಿಲ್ಲ. ಎಷ್ಟು ಜನರ ಡೇಟಾ ಪಡೆಯಲಾಗಿದೆ? ಅದರ ವರದಿ ಎಲ್ಲಿದೆ? ಅದೇನೂ ಇಲ್ಲ. ಹಾಗಾಗಿಯೇ ಐಎಂಎ ಇದರ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದು, ಸರ್ಕಾರದ ಆದೇಶ ದಾರಿ ತಪ್ಪಿಸುವಂಥದು ಎಂದು ಹೇಳಲಾಗಿದೆ.

ಐಎಂಎ ಪ್ರಕಾರ, ರೋಗಿಗಳು ಕೇವಲ ವೈದ್ಯರ ಸಲಹೆ ಮನ್ನಿಸಬೇಕೇ ಹೊರತು ಸೆಲ್ಫ್ ಮೆಡಿಕೇಶನ್‌ ಮಾಡಬಾರದು.

ನಮ್ಮಲ್ಲಿರುವ ಒಂದು ಪರಂಪರೆಯೆಂದರೆ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರಿಗೆ ನೂರೆಂಟು ಸಲಹೆ ನೀಡಲಾಗುತ್ತದೆ. ಎಷ್ಟೋ ಸಲ, ಅವರು ಕಷಾಯ, ಮಾತ್ರೆ, ಗಿಡಮೂಲಿಕೆಗಳ ಪುಡಿಯನ್ನು ಒತ್ತಾಯಪೂರ್ವಕವಾಗಿ ಕೊಡುತ್ತಾರೆ. ಕೇಂದ್ರ ಸಚಿವ ಹರ್ಷವರ್ಧನ್‌ ಅಂಥವರಿಗೆ ಸಂರಕ್ಷಣೆ ಕೊಡುತ್ತಿದ್ದಾರೆ, ಅದೂ ಕೂಡ ಹಣ ಪಡೆದುಕೊಂಡು.

ಕೇಂದ್ರ ಸರ್ಕಾರ ಕೋವಿಡ್‌ ಬಳಿಕ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳನ್ನು ತೆರೆಯಲಿಲ್ಲ, ಯೋಗಾಚಾರ್ಯರನ್ನು ರೋಗಿಗಳ ಕ್ಯಾಂಪ್‌ಗೆ ಕಳಿಸಿಕೊಡಲಿಲ್ಲ. ಅದಕ್ಕಾಗಿ ಹೋಮ ಹವನ ಕೀರ್ತನೆಗಳ ಏರ್ಪಾಟು ಕೂಡ ಆಗಲಿಲ್ಲ. ಏಕೆಂದರೆ ಅಲ್ಲೆಲ್ಲ ಮೋಸದಾಟಗಳಾಗಿದ್ದು, ವೋಟ್‌ ಬ್ಯಾಂಕ್‌ನ್ನು ಹಿಡಿದಿಟ್ಟುಕೊಳ್ಳಲು ಮನೆಗಳಿಗೆ ದಾಳಿ ಇಡುವಂಥಾಗಿವೆ. ನಿಸ್ಸಹಾಯಕ ತಾಯಂದಿರು ಹಾಗೂ ಹೆಂಡತಿಯರು ಸರಿಯಾದ ಮಾಹಿತಿ ದೊರೆಯದ ಕಾರಣದಿಂದ ಈ ಉಪಾಯಗಳನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ ಹಾಗೂ ಅವರಿಗೆ ಅದೇ ಸರಿಯಾದ ಉಪಾಯ ಎನಿಸುತ್ತದೆ.

ಸರ್ಕಾರ ದಾರಿ ತಪ್ಪಿಸುತ್ತದೆ ಎನ್ನುವುದು ಹಳೆಯ ಮಾತು. ಆದರೆ ಕೋವಿಡ್‌ನ ವಿಷಯದಲ್ಲಿ ಜನರ ಜೀವ ಹಾಗೂ ಆರೋಗ್ಯದೊಂದಿಗೆ ಆಟ ಆಡುವುದು ಅಪಾಯಕರ.

ಇದೇ ಪ್ರಜಾಪ್ರಭುತ್ವವೇ

vihangam2

ಭಾರತದ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಯಾವ ರೀತಿ ರಿಯಾ ಚಕ್ರವರ್ತಿಯನ್ನು ಯಾವುದೇ ಪುರಾವೆಯಿಲ್ಲದೆ 1 ತಿಂಗಳ ಕಾಲ ಜೈಲಿನಲ್ಲಿಡಲಾಯಿತೊ ಅದೇ ರೀತಿ ಹಾಥರಸ್‌ನ ಅತ್ಯಾಚಾರಕ್ಕೊಳಗಾದ ಯುವತಿಯ ಮನೆಯವರನ್ನು ಕೂಡ ಗೃಹಬಂಧನದಲ್ಲಿ ಇಡಲಾಯಿತು. ಅವರ ಸಂಬಂಧಿಕರನ್ನು ದೂರ ಇಡಲಾಯಿತು. ಯಾರಿಗೂ ಅವರ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ಸಪರಾ ಜರ್‌ಗರ್‌ಗೆ ಕೂಡ ಯಾವುದೇ ಪುರಾವೆಯಿಲ್ಲದೆ ಬಂಧನದಲ್ಲಿಡಲಾಯಿತು. ಅವರು ನಾಗರಿಕ ತಿದ್ದುಪಡಿ ಕಾನೂನನ್ನು ವಿರೋಧಿಸಿದ್ದರು. ಬಳಿಕ ಅವರಿಗೆ ಜಾಮೀನು ನೀಡಲಾಯಿತು. ಇದೆಲ್ಲದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಪೊಲೀಸರು ಮಹಿಳೆಯರನ್ನು ಬಂಧಿಸಲು ಹಿಂದೇಟು ಹಾಕುವುದಿಲ್ಲ ಎಂದು. ಖೇದದ ಸಂಗತಿಯೆಂದರೆ, ಪೊಲೀಸರು ಈಗ ರಾಜಕೀಯ ಕಾರಣದಿಂದ ಮಹಿಳೆಯರಿಗೆ ಸಜೆಯ ತೀರ್ಪು ಇಲ್ಲದೆಯೇ ಅವರನ್ನು ಒಳಗೆ ಕೂಡಿ ಹಾಕುತ್ತಿದ್ದಾರೆ. ಈಗಲೂ ಕೆಲವು ಹೈಕೋರ್ಟ್‌ಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಸುಪ್ರಿಂಕೋರ್ಟ್‌ ಮಾತ್ರ ಹೆಚ್ಚಿನ ಪ್ರಕರಣಗಳಲ್ಲಿ ಸರ್ಕಾರ ಮತ್ತು ಪೊಲೀಸರು ಮಾಡಿದ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತಿದೆ.

ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಜೈಲಿನಲ್ಲಿರುವ ಸ್ಥಿತಿ ಮಹಿಳೆಯರ ಭವಿಷ್ಯವನ್ನು ಮತ್ತಷ್ಟು ಅಪಾಯಕಾರಿ ಹಂತಕ್ಕೆ ದೂಡುತ್ತದೆ. ಸರ್ಕಾರವನ್ನು ವಿರೋಧಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಒಂದೆಡೆ ಸರ್ಕಾರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ, ಇನ್ನೊಂದೆಡೆ ಮಹಿಳೆಯರನ್ನು ಸಂಸ್ಕೃತಿ ಸಂಸ್ಕಾರಗಳ ಹೆಸರಿನಲ್ಲಿ ಅವರನ್ನು ಗಂಡ ತಂದೆಯ ಕಾಲು ಕಸ ಎಂಬಂತೆ ಬಿಂಬಿಸುತ್ತಿದ್ದರೆ, ಅದರ ವಿರೋಧ ಸಹಜವೇ ಆಗಿದೆ. ಮೊದಲು ಮಹಿಳೆಯರನ್ನು ಬಂಧಿಸಲಾಗುತ್ತಿರಲಿಲ್ಲ.

ಆದರೆ ಈಗ ಪೊಲೀಸರು ಯಾವುದೇ ಹಿಂದೇಟು ಇಲ್ಲದೆ ಗಂಡಮಕ್ಕಳನ್ನು ಬಂಧಿಸುತ್ತಾರೆ. ಅವರಿಗೆ ಸಹಕರಿಸಿದ ಆರೋಪದ ಮೇರೆಗೆ ಮಹಿಳೆಯರನ್ನು, ಅಕ್ಕತಂಗಿ ಮಕ್ಕಳನ್ನು ಬಂಧಿಸಲಾಗುತ್ತದೆ.

ಆಕೆ ಗರ್ಭಿಣಿ, ವೃದ್ಧೆ ಎನ್ನುವುದನ್ನು ಕೂಡ ನೋಡದೆ, ಎಫ್‌ಐಆರ್‌ ಹಾಕಲಾಗುತ್ತದೆ. ಅದು ಅವರಿಗೆ ಯಾವುದೇ ಮನೆಯೊಳಗೆ ನುಗ್ಗುವ ಅಧಿಕಾರ ಸಿಕ್ಕಂತಾಗಿದೆ. ಪೊಲೀಸರು, ನ್ಯಾಯಾಲಯ ಮನೆ ಮನೆಗೆ ಅಪಾಯದ ಸಂಕೇತದಂತಾಗಿಬಿಟ್ಟಿವೆ.

ಒಬ್ಬ ಮಹಿಳೆ ಜೈಲಿಗೆ ಹೋಗುವುದರ ಅರ್ಥ, ಆಕೆಯ ಮೇಲೆ ಜೀವನವಿಡೀ ಒಂದು ಕಳಂಕದಂತಾಗಿಬಿಡುತ್ತದೆ. ಆಕೆ ಮದುವೆಯಾಗಿರದಿದ್ದರೆ, ಮುಂದೆ ವರ ಸಿಗುವುದೇ ಕಷ್ಟವಾಗುತ್ತದೆ.

ಆಕೆ ತಾಯಿಯಾಗಿದ್ದರೆ ಅದರ ಆರೋಪ ಸಹಜವಾಗಿ ಮಕ್ಕಳ ಮೇಲೆ ಬರುತ್ತದೆ. ಆಕೆ ಎಷ್ಟು ದಿನ ಜೈಲಿನಲ್ಲಿರುತ್ತಾಳೊ ಅಷ್ಟು ದಿನ ಮನೆ ಕೂಡ ಹೀನಾಯ ಸ್ಥಿತಿಯಲ್ಲಿರುತ್ತದೆ. ಮಕ್ಕಳು ಆಕೆಯನ್ನು ಬಿಡಿಸಲು ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ.

ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಮಹಿಳೆಯರ ಸ್ಥಿತಿ ಸುಧಾರಿಸುತ್ತಿದೆ ಎನ್ನುವುದೇ ಒಂದು ಭ್ರಮೆ. ಅಂದಹಾಗೆ ದೇಶ ಈಗ ಅಪಾಯದಲ್ಲಿದೆ.

ಏಕೆಂದರೆ ಮಹಿಳೆಯರು ಅಪಾಯದಲ್ಲಿದ್ದಾರೆ. ರಿಯಾ ಚಕ್ರವರ್ತಿಯನ್ನು ಟಿವಿ ಚಾನೆಲ್ ಗಳ ಜಾಹೀರಾತಿಗಾಗಿ ಹಾಗೂ ಆಡಳಿತಾರೂಢ ಒಕ್ಕೂಟ ಬಿಹಾರದ ಚುನಾವಣೆಗಾಗಿ ಅವಮಾನ ಮಾಡಿತೊ, ಅದು ಪುರುಷ ಮಾನಸಿಕತೆಯ ಸಂಕೇತವಾಗಿದೆ.

ಮಹಿಳೆಯರ ಹಕ್ಕು ಕಿತ್ತುಕೊಳ್ಳಬೇಡಿ

ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿ ಎಂದು ನಾವು ಎಷ್ಟೇ ಹೇಳಿಕೊಂಡರೂ, ನಮ್ಮ ದೇಶದ ಶ್ರೀಮಂತಿಕೆ ಇರುವುದು ಅಧಿಕಾರಸ್ಥರ ಬಳಿ, ದೇವಾಲಯಗಳು ಹಾಗೂ ಕೆಲವು ಶ್ರೀಮಂತರ ಬಳಿ. ನಮ್ಮಲ್ಲಿನ ಸಾಮಾನ್ಯ ವ್ಯಕ್ತಿ ಇನ್ನೂ ಬಹಳ ಬಡವ. ಅಮೆರಿಕಕ್ಕಿಂತ ನಾವು ಇನ್ನೂ 90 ವರ್ಷ ಹಿಂದಿದ್ದೇವೆ. ಇಲ್ಲಿನ ಶೇ.91ರಷ್ಟು ಜನರ ಒಟ್ಟು ಆಸ್ತಿ 10,000 ಡಾಲರ್‌ ಅಂದರೆ 7 ಲಕ್ಷಕ್ಕಿಂತ ಕಡಿಮೆ ಇದೆ. ಇದರಲ್ಲಿ ಮನೆ ಹೊಲ ಹವನ ಇವೆಲ್ಲ ಸೇರಿವೆ.

ಈ ಬಡತನದ ಮತ್ತೊಂದು ವಿಶೇಷತೆ ಎಂದರೆ ನಮ್ಮಲ್ಲಿನ ಸ್ತ್ರೀಯರ ಆಸ್ತಿ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ. ಅಮೆರಿಕ ಹಾಗೂ ಕೆನಡಾದ ಒಟ್ಟು ಆಸ್ತಿಯಲ್ಲಿ ಶೇ.40-50ರಷ್ಟು ಆಸ್ತಿ ಮಹಿಳೆಯರ ಬಳಿ ಇದೆ. ಯೂರೋಪ್‌ನಲ್ಲೂ ಕೂಡ ಇದೇ ಸ್ಥಿತಿ.

ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿ ಶೇ.28-38ರಷ್ಟು ಆಸ್ತಿ ಮಹಿಳೆಯರ ಬಳಿ ಇದೆ. ವಿಶ್ವದ ಸರಾಸರಿ 35%-45% ಇದ್ದರೆ, ಭಾರತದಲ್ಲಿ ಇದರ ಪ್ರಮಾಣ 20-25 ಮಾತ್ರ.

ನಮ್ಮಲ್ಲಿ ಕೋಟ್ಯಧಿಪತಿ ಮಹಿಳೆಯರ ಸಂಖ್ಯೆ ಹೆಚ್ಚು ಇದೆ. ಏಕೆಂದರೆ ಈ ಬಡದೇಶದಲ್ಲಿ ಕೋಟ್ಯಧಿಪತಿ ಪುರುಷರ ಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿದೆ. ನಮ್ಮಲ್ಲಿ ಒಂದಿಷ್ಟು ಶ್ರೀಮಂತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಬಡವರಿದ್ದಾರೆ. ಭಾರತದಲ್ಲಿ ಸುಮಾರು 30-40 ಮನೆಗಳು ಹೇಗಿವೆಯೆಂದರೆ, ಅವರ ಆಸ್ತಿ 300 ಕೋಟಿ ಆಸುಪಾಸಿನಲ್ಲಿವೆ. ತಲಾದಾಯದ 125 ರಿಂದ 145 ದೇಶಗಳ ಪಟ್ಟಿಯಲ್ಲಿ 300 ಕೋಟಿ ಸಂಪತ್ತು ಹೊಂದಿರುವವರ ಸಂಖ್ಯೆಯಲ್ಲಿ ಆರನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ಇಂಗ್ಲೆಂಡ್‌, ಜರ್ಮನಿ ಹಾಗೂ ಜಪಾನ್‌ ಬಳಿಕ ಈ ಮನೆತನಗಳಲ್ಲಿ ಬಹಳಷ್ಟು ಮನೆಗಳ ಮಾಲೀಕರು ಪರಂಪರೆಯ ಕಾರಣದಿಂದ ಮಹಿಳೆಯರಾಗಿದ್ದಾರೆ.

ಸ್ವಿಡ್ಜರ್ಲೆಂಡ್‌ನ ಕ್ರೆಡಿಟ್‌ ಸ್ವಿಸ್‌ ಬ್ಯಾಂಕಿನ ಸರ್ವೆಯ ಪ್ರಕಾರ ಯಾವ ಕಾರಣಗಳಿಂದ ಭಾರತದ ಮಹಿಳೆಯರು ಇಷ್ಟೊಂದು ಬಡವರಾಗಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವುಗಳಲ್ಲಿ ಮುಖ್ಯ ಕಾರಣ ನಮ್ಮ ರೀತಿ ರಿವಾಜು ಆಗಿದೆ.

ಅದರಲ್ಲಿ ಮಹಿಳೆಯರನ್ನು ಜೀವನವಿಡೀ ಸೇವೆ ಮಾಡುವವರು ಎಂದು ಭಾವಿಸಲಾಗುತ್ತದೆ. ಅವರ ದಾರಿಯಲ್ಲಿ ಬಗೆ ಬಗೆಯ ಅಡೆತಡೆಗಳು ಬರುತ್ತಿವೆ.

ಈಗ ಗೃಹ ಬಂಧನ, ಬಲಾತ್ಕಾರದ ಆತಂಕ ಕಾಡುತ್ತದೆ.

ಮಹಿಳೆಯರ ಆಸ್ತಿ ಹೆಚ್ಚಾಗಬೇಕೆಂದು ಸದ್ಯದ ಸರ್ಕಾರಕ್ಕೆ ಆಸಕ್ತಿ ಇಲ್ಲ. ತ್ರಿ ತಲಾಖ್‌ ವ್ಯವಸ್ಥೆಯನ್ನು ಹಿಂದೂ ವೋಟಿಗಾಗಿ ತೆಗೆದುಕೊಳ್ಳಲಾಗಿತ್ತು.

ಈ ಪ್ರಕರಣವನ್ನು ಎತ್ತಿದ ಸಾಯಿರಾಬಾನುರನ್ನು ಈಗ ಬಿಜೆಪಿಗೆ ಸೇರ್ಪಡೆ ಮಾಡಲಾಗಿದೆ. ಹಿಂದೂ ಮಹಿಳೆಯರಿಗೆ ಸರ್ಕಾರದ ಸಂದೇಶವೆಂದರೆ, ಅವರು ಗಂಡ, ಅತ್ತೆ ಮಾವ ಹಾಗೂ ಸ್ವಾಮೀಜಿಗಳ ಸೇವೆಯನ್ನು ತನುಮನದಿಂದ ಮಾಡಬೇಕೆಂಬುದಾಗಿದೆ.

ನಗರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗುತ್ತಿದ್ದಂತೆ ನೂರಾರು ಸಾವಿರಾರು ಮಹಿಳೆಯರನ್ನು ಕರೆತರಲಾಗುತ್ತದೆ. ಈಗಲೂ ಕೊರೋನಾದ ದಿನಗಳಲ್ಲಿ ಮಹಿಳೆಯರು ಮನೆಯಿಂದ ಹೊರಬರುವಂತೆ ಪೂಜೆ ಪುನಸ್ಕಾರಕ್ಕಾಗಿ ಒತ್ತಡ ಹೇರಲಾಗುತ್ತದೆ. ಅವರು ಪರಲೋಕ ಸುಧಾರಣೆಗೆ ಇಷ್ಟೊಂದು ವ್ಯಸ್ತರಾಗಿದ್ದರೆ,

ಇಹಲೋಕದಲ್ಲಿ ತಮ್ಮ ಆಸ್ತಿ ಹಕ್ಕನ್ನು ಹೇಗೆ ತಾನೇ ಕೇಳಿಯಾರು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ