ಇದೀಗ ನಿಮ್ಮ ಅಡುಗೆಮನೆಯ ರಿಯಲ್ ಅಸಿಸ್ಟೆಂಟ್‌ `ಸೂಪರ್‌ ಸ್ಟಾರ್‌’ ಆಗಿ ಪ್ಯಾನಾಸೋನಿಕ್‌ನ ಮಿಕ್ಸರ್‌ ಗ್ರೈಂಡರ್ಸ್‌ನ ಹೊಸ ರೂಪ ಗೃಹಿಣಿಯರಿಗೆ ವರದಾನವಾಗಿದೆ. ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲ್ಪಟ್ಟ ಸುಲಭ ಬಳಕೆಗೆ ಮೊದಲ ಆದ್ಯತೆ ನೀಡಿದೆ. 10 ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿರುವ ಈ ಮಿಕ್ಸರ್‌ ಗ್ರೈಂಡರ್‌ ಅತಿ ಪವರ್‌ ಫುಲ್ ಫೀಚರ್‌ ರಿಚ್‌ ಎನಿಸಿದೆ. ಇದರ ಸ್ಲೀಕ್ ಸ್ಟೈಲಿಶ್‌ ಡಿಸೈನ್ಸ್ ಈಗಾಗಲೇ ಭಾರತೀಯ ಗೃಹಿಣಿಯರ ಅಚ್ಚುಮೆಚ್ಚೆನಿಸಿದೆ.

ಪ್ಯಾನಾಸೋನಿಕ್‌ ಅಪ್ಲೈಯನ್ಸಸ್‌ ಇಂಡಿಯಾ ಕಂಪನಿ ಲಿ., ಈಗಾಗಲೇ 1 ಕೋಟಿಗೂ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಆಟೋಮೆಟಿಕ್‌ ಕುಕ್ಕರ್‌ ಮಾರಾಟದಲ್ಲಿ ಲೀಡರ್‌ ಆಗಿರುವ ಈ ಸಂಸ್ಥೆ ಇದೀಗ ಮಿಕ್ಸರ್‌ ಗ್ರೈಂಡರ್‌ ಶ್ರೇಣಿಯ ಉತ್ಪಾದನೆಗೆ ದಾಂಗುಡಿ ಇಟ್ಟಿದೆ. ಇದು `ಎಲಿಮೆಂಟ್ಸ್’ ಹೆಸರಿನಲ್ಲಿ ಹೊಸ ಸರಣಿಯ ಮಿಕ್ಸರ್‌ ಗ್ರೈಂಡರ್‌ಗಳನ್ನು ಮಲ್ಟಿಪಲ್ ಫೀಚರ್ಸ್‌ ಜೊತೆ ಇಂದಿನ ಆಧುನಿಕ ಪೀಳಿಗೆಗೆ ಹೊಂದುವಂತೆ ಟಾರ್ಗೆಟ್‌ಗೊಳಿಸಿದೆ.

ಪವರ್‌, ಕನ್‌ವೀನಿಯನ್ಸ್, ಸ್ಟೈಲ್ ‌ಎಲ್ಲವನ್ನೂ ಹದವಾಗಿ ಪ್ರಸ್ತುತಪಡಿಸಿರುವ `ಎಲಿಮೆಂಟ್ಸ್’ನ 7 ವೈಶಿಷ್ಟ್ಯಗಳು ಹೀಗಿವೆ

ಮೋಟರ್‌ : ಹೊಸ `ಎಲಿಮೆಂಟ್ಸ್’ ಸರಣಿಯು ಅತಿ ಪವರ್‌ ಫುಲ್ ಆದ 600ವಿ ಮೋಟರ್‌ ಹೊಂದಿದ್ದು, ಬಳಕೆದಾರರ ಗ್ರೈಂಡಿಂಗ್ ಟೈಂ ಮಿನಿಮೈಸ್‌ಗೊಳಿಸುತ್ತದೆ. ಈ ಮೋಟರ್‌ 100% ಕ್ಲಾಸ್‌ ಕಾಪರ್‌ ರೌಂಡ್‌ ಮೆಟೀರಿಯಲ್ ಹೊಂದಿದ್ದು, ಈ ಉತ್ಪನ್ನದ ಸುದೀರ್ಘ ಬಾಳಿಕೆಗೆ ಪೂರಕವಾಗಿದೆ.

ಪುಷರ್‌ ಅಟ್ಯಾಚ್‌ ಮೆಂಟ್‌ : ಈ ನವನವೀನ ಇನೋವೇಟಿವ್ ಚಟ್ನಿ ಜಾರ್‌ 3600 ರೊಟೇಟಿಂಗ್‌ ಪುಷರ್‌ ಅಟ್ಯಾಚ್‌ಮೆಂಟ್‌ನೊಂದಿಗಿದ್ದು, ಈಝಿ ಹೈಜಿನಿಕ್‌ ರುಬ್ಬುವಿಕೆಗೆ ಮೂಲಾಧಾರ. ಈ ಪುಷರ್‌ ಗ್ರಾಹಕರಿಗೆ ತಮ್ಮ ತೆಂಗು ಮತ್ತಿತರ ಸಾಮಗ್ರಿ ಪೇಸ್ಟ್ ಮಾಡಿಕೊಳ್ಳಲು ಅತಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಮಿಕ್ಸಿ ವಾಲ್‌ಗೆ ಫಿಕ್ಸ್ ಆಗಿದ್ದು, ರುಬ್ಬುವ ಸಾಮಗ್ರಿಯನ್ನು ಮುಚ್ಚಳ ತೆರೆದು ನೋಡದೆಯೇ ಮಧ್ಯಕ್ಕೆ ತಂದು ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ಗುಣಮಟ್ಟ ಮತ್ತು ಅನುಕೂಲಕ್ಕೆ ಒಂದಿಷ್ಟೂ ಲೋಪವಾಗದಂತೆ, ಹೈಜೀನ್‌ ಕಾಂಪ್ರಮೈಸ್‌ ಮಾಡಿಕೊಳ್ಳದೆ ಗ್ರಾಹಕಸ್ನೇಹಿ ಆಗಿದೆ.

ಜಾರ್‌ಗಳು : ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿಯೇ `ಎಲಿಮೆಂಟ್ಸ್’ ಸರಣಿ ವಿನ್ಯಾಸಗೊಳಿಸಲ್ಪಟ್ಟಿದ್ದು, 900 ಕನ್ವೀನಿಯಂಟ್‌ಟಾಪಿಂಗ್‌ ಜಾರ್‌ ಒದಗಿಸುತ್ತದೆ. ಇದರಿಂದಾಗಿ ಅದನ್ನು ಮೋಟರ್‌ಗೆ ಫಿಕ್ಸ್ ಮಾಡಿ ತೆಗೆಯುವಾಗ ಕೈಗೆ ಒಂದಿಷ್ಟು ಪದಾರ್ಥ ಮೆತ್ತಿಕೊಳ್ಳುವುದಿಲ್ಲ. ಬಳಕೆದಾರರ ಸುರಕ್ಷತೆಗೆ ಮೊದಲ ಆದ್ಯತೆ ಕೊಡುವ ಈ ಗ್ರೈಂಡರ್ಸ್‌ ಡಬಲ್ ಸೇಫ್ಟಿ ಲಾಕಿಂಗ್‌ ಸಿಸ್ಟಂ ಹೊಂದಿದೆ. ಜಾರ್‌ ಮತ್ತು ಲಿಡ್‌ ಪರ್ಫೆಕ್ಟ್ ಆಗಿ ಲಾಕ್‌ ಆಗುವವರೆಗೂ ಮೋಟರ್‌ ಸ್ಟಾರ್ಟ್‌ ಆಗುವ ರಿಸ್ಕೇ ಇಲ್ಲ! ಇದು 3, 4, 6 ಸಂಖ್ಯೆಯ ಜಾರ್‌ಗಳಲ್ಲಿ ಲಭ್ಯವಿವೆ. ಇದರ ಬ್ಲೇಡ್‌ 304 ರಸ್ಟ್ ರೆಸಿಸ್ಟೆಂಟ್‌ ಮೆಟೀರಿಯಲ್‌ನಿಂದ ದೀರ್ಘ ಬಾಳಿಕೆಗೆ ಹೇಳಿ ಮಾಡಿಸಿದಂತಿದೆ.

ಲೀಕ್‌ ಪ್ರೂಫ್‌ ಡಿಸೈನ್‌ : ಇದು ಪರ್ಫೆಕ್ಟ್ ಲೀಕ್‌ ಪ್ರೂಫ್‌ ಆಗಿದ್ದು, ಓವರ್‌ಪ್ಲೇ ಟೆನ್ಶನ್‌ ಇಲ್ಲವೇ ಇಲ್ಲ. ಇದು ಬಳಕೆದಾರರಿಗೆ ಅತಿ ಸುಖಕರ ಎನಿಸಿ, ಮಿಕ್ಸಿ ಮತ್ತೆ ಮತ್ತೆ ಬಳಸಲು ಹೆಚ್ಚು ಅನುಕೂಲಕರ ಆಗಿದೆ.

ನೈನ್‌ ಇನ್‌ ಒನ್‌ ಫಂಕ್ಷನ್‌ : ಎಲಿಮೆಂಟ್ಸ್ ತನ್ನ ನವ ವಿಧದ ಕಾರ್ಯ ಚಟುವಟಿಕೆಗೆ ಹೆಸರುವಾಸಿ. ಸ್ಪೈಸ್‌ ಗ್ರೈಂಡಿಂಗ್‌, ಜೂಸರ್‌, ಬ್ಲೆಂಡಿಂಗ್‌, ತೆಂಗಿನ ಹಾಲು ತೆಗೆಯುವಿಕೆ, ಕಾಫಿ ಬೀಜ ಗ್ರೈಂಡಿಂಗ್‌, ಎಗ್‌ ಬೀಟಿಂಗ್‌, ಅರಿಶಿನ ಅರೆಯುವಿಕೆ, ಚಟ್ನಿ ಗ್ರೈಂಡಿಂಗ್‌, ಇಡ್ಲಿ/ದೋಸೆ ರುಬ್ಬುವಿಕೆ….. ಇತ್ಯಾದಿ.

ಆಕಾರ : ಒಂದು ದಶಕಕ್ಕೂ ಹೆಚ್ಚಾಗಿ ಪ್ಯಾನಾಸೋನಿಕ್‌ ಆಕಾರದ ಮಿಕ್ಸರ್‌ ಗ್ರೈಂಡರ್‌ಗಳ ಮಾರ್ಕೆಟಿಂಗ್‌ ಮಾಡುತ್ತಿದೆ. ಇದೀಗ ಮೊದಲ ಸಲ ಅದು ಗೋಪುರದ ಆಕಾರದ ಮಾಡೆಲ್ ‌ತಯಾರಿಸಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತಿದೆ. ಈ ಸ್ಲೀಕ್‌ಸ್ಲಿಮ್ ಸ್ಪೇಸ್ ಸೇವಿಂಗ್‌ ಮಾಡೆಲ್ ‌ನಿಮ್ಮ ಅಡುಗೆಮನೆ ಸ್ಲಾಬ್‌ಗೆ ಪರ್ಫೆಕ್ಟ್ ಆಗಿದೆ. ಇದಕ್ಕೆ ಪರ್ಫೆಕ್ಟ್ ಬೇಸ್‌ ಬ್ಯಾಲೆನ್ಸಿಂಗ್‌ ನೀಡಲಾಗಿದೆ.

ಬಣ್ಣಗಳು : ಪ್ಯಾನಾಸೋನಿಕ್‌ ವೈಡ್‌ ರೇಂಜ್‌ ಬಣ್ಣಗಳಿಗೆ ಎತ್ತಿದ ಕೈ. ಹೀಗಾಗಿ ಇದು 10 ವೈವಿಧ್ಯಮಯ ಬಣ್ಣಗಳಲ್ಲಿ `ಎಲಿಮೆಂಟ್ಸ್’ ಸರಣಿ ಮೂಲಕ ಮಿಕ್ಸರ್‌ ಒದಗಿಸುತ್ತದೆ. ನಿಮ್ಮ ಅಡುಗೆಮನೆ ಗೋಡೆಗೆ ಪೂರಕವಾಗುವಂತೆ ಆರಿಸಿಕೊಳ್ಳಬೇಕಾದುದು ನಿಮಗೆ ಬಿಟ್ಟದ್ದು.

ಇದು ತನ್ನ ಹಿಂದಿನ  ಸರಣಿಯಂತೆಯೇ `ಎಲಿಮೆಂಟ್ಸ್’ ಸಹ 5 ವರ್ಷಗಳ ವಾರಂಟಿ ಒದಗಿಸುತ್ತದೆ, ಅದೂ ದೇಶಾದ್ಯಂತ ಲಭ್ಯವಿರುವ 500 ಸರ್ವೀಸ್‌ ಸೆಂಟರ್‌ಗಳ ಮೂಲಕ.

ಇದರ ಲಾಂಚ್‌ನಲ್ಲಿ ಗಣೇಶನ್‌ ತ್ಯಾಗರಾಜನ್‌ ಮಾತನಾಡುತ್ತಾ, “ಗ್ರಾಹಕರ ಸಂತೃಪ್ತಿ, ಉಪಕರಣದ ಗುಣಮಟ್ಟ, ಸುರಕ್ಷತೆ, ಅನುಕೂಲಗಳೇ ನಮ್ಮ ಪ್ಯಾನಾಸೋನಿಕ್‌ನ ಧ್ಯೇಯ. ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಪೂರಕ ಸೇವೆ ಒದಗಿಸುತ್ತೇವೆ. ಸ್ಟ್ರೆಸ್‌ ಫ್ರೀ ಅಡುಗೆಮನೆಯಲ್ಲಿ ನೀವು ನೆಮ್ಮದಿ ಕಾಣುವಿರಿ. ಇದು 90 ಟಫ್‌ ಕ್ವಾಲಿಟಿ ಟೆಸ್ಟ್ ಪಾಸ್‌ ಮಾಡಿದೆ,” ಎಂದರು. ಇದು ಮೂಲತಃ ಚೆನ್ನೈನ ಶೋ ರೂಮ್ ನಲ್ಲಿ ತಯಾರಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಮಿಕ್ಸರ್‌, ಕೋಟ್ಯಂತರ ಕುಕ್ಕರ್‌ ತಯಾರಾಗುತ್ತವೆ. ಅಮೆರಿಕಾ, ಕೆನಡಾ, ಆಫ್ರಿಕಾ, ಆಗ್ನೇಯ ದೇಶಗಳಿಗೆ ಇದು ರಫ್ತಾಗುತ್ತದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಕಂಪನಿ ಉತ್ಪಾದನೆಯನ್ನು ಸತತ ಹೆಚ್ಚಿಸುತ್ತಿದೆ.

ಹೆಚ್ಚಿನ ವಿವರಗಳಿಗೆಗಾಗಿ ಸಂಪರ್ಕಿಸಿ :  ಫೋನ್‌ : 09964279606, 09900226689. 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ